ಬೆಂಗಳೂರು : ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ , ಕೊಟ್ಟಿಗೆಯಲ್ಲಿ ಗಂಡುಕರು ಜನಿಸಿದರೆ ಬೇಸರಿಸುತ್ತೇವೆ. ಆದರೆ ಹಾಗಾಗಬಾರದು, ಹೆಣ್ಣುಮಗುವನ್ನು ಪ್ರೀತಿಯಿಂದ ಕಾಣಬೇಕು, ಹಾಗೆಯೇ ಗಂಡುಕರುವನ್ನು ಕಸಾಯಿಖಾನೆಗೆ ಸಾಗಿಸದೇ ಸಹಜವಾಗಿ ಸಾಕಬೇಕು. ನಂದಿ/ಎತ್ತಿನಿಂದ ಅನೇಕ ಪ್ರಯೋಜನಗಳಿದ್ದು, ಎತ್ತನ್ನು ಸರಿಯಾಗಿ ಬಳಸಿಕೊಂಡರೆ ರೈತರು ಸ್ವಾವಲಂಬಿ ಬದುಕನ್ನು ಬಾಳಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ  ವಿವಿಧ ಸಂಶೋಧನೆಗಳನ್ನು ಉದಾಹರಿಸಿ ಮಾತನಾಡಿದ  ಶ್ರೀಗಳು, ಎತ್ತನ್ನು ಬಳಸಿಕೊಂಡು ಮನೆಬಳಕೆಗೆ  ಸಾಕಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸಿಕೊಳ್ಳಬಹುದು, ಗೋಬ್ಬರ್ ಗ್ಯಾಸ್ ಅನ್ನು ಪೆಟ್ರೋಲ್-ಡೀಸೆಲ್ ಮುಂತಾದ ಅನಿಲಗಳಿಗೂ ಪರ್ಯಾಯವಾಗಿ ಬಳಸಬಹುದಾಗಿದೆ, ಟ್ರಾಕ್ಟರ್ ಬದಲು ಎತ್ತನ್ನು ಕೃಷಿಕಾರ್ಯದಲ್ಲಿ ಬಳಸಿದರೆ ಅನೇಕ ಪ್ರಯೋಜನಗಳಿವೆ, ಇಂದಿನ ಆಧುನಿಕ ಯುಗದಲ್ಲೂ ಎತ್ತುಗಳು ಸಾಗಾಣಿಕೆ ಕ್ಷೇತ್ರದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದು, ದೇಶದ ಗೋಸಂಪತ್ತನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ   ಎಂದು ಅಭಿಪ್ರಾಯಪಟ್ಟರು.

ತಳಿಸಂವರ್ಧನೆಗೆ ನಂದಿ ಅತ್ಯಾವಶ್ಯವಾಗಿದ್ದು ಭಾರತೀಯ ತಳಿಗಳನ್ನು ಉಳಿಸಿ ಬೆಳೆಸಲು ಪ್ರಥಮವಾಗಿ ನಂದಿ/ಎತ್ತುಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.

ಕಾವೇರಿ ನದಿ ಹಂಚಿಕೆಯ ಕುರಿತು:

ಕಾವೇರಿ ನದಿ ನೀರಿನ ಹಂಚಿಕೆಯಿಂದ ಬಾಧೆಗೊಳಗಾದ ರೈತರ ಜೊತೆ ಶ್ರೀರಾಮಚಂದ್ರಾಪುರಮಠವಿದ್ದು, ಭಾರತ ದೇಶವನ್ನು ಒಂದಾಗಿ ಭಾವಿಸಬೇಕಾಗಿದೆ, ಯಾವುದೇ ತಾರತಮ್ಯಮಾಡದೇ ಸರ್ವರಿಗೂ ಸಮಪಾಲು ಎಂಬ ತತ್ವದಡಿಯಲ್ಲಿ ನದಿ ನೀರನ್ನು ಹಂಚಿ, ಯಾರಿಗೂ ಅನ್ಯಾಯವಾಗದಂತೆ – ಮಲತಾಯಿ ದೋರಣೆ ಆಗದಂತೆ   ನ್ಯಾಯಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದು, ಎಲ್ಲಾ ಸರ್ಕಾರಗಳು ಹಾಗು ನ್ಯಾಯಸ್ಥಾನಗಳು ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ  ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಹಾಸನದ ಸಮರ್ಥಾಶ್ರಮದ ಶ್ರೀರಾಮ ಅವಧೂತರು ಸಂತಸಂದೇಶ ನೀಡಿ, ಶ್ರೀರಾಮಚಂದ್ರಾಪುರಮಠದ ಗೋಯಾತ್ರೆಗೆ ನಮ್ಮ ಬೆಂಬಲವಿದ್ದು, ಈ ಮಹಾ ಆಂದೋಲನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆನೀಡಿದರು. ಚೆನ್ನಮ್ಮ ಹಳ್ಳಿಕೆರೆ, ವೆಂಕಟಸ್ವಾಮಿ ಹಾಗು ಬಾಲಮುರಳಿಕೃಷ್ಣ ದಂಪತಿಗಳಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ನಿಬಂಧ ಮಂದಾಕಿನಿ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಶ್ರೀರಾಮ ಅವಧೂತರು ಲೋಕಾರ್ಪಣೆ ಮಾಡಿದರು.  ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಕೊಲ್ಕತ್ತಾದ ಸತ್ಯಜಿತ್ ಜೈನ್ ಅವರಿಂದ ಗೋಧುನ್ ಭಜನಾ ಕಾರ್ಯಕ್ರಮ ನಡೆಯಿತು.

ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಚೆನ್ನಮ್ಮ ಹಳ್ಳಿಕೆರೆ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.

ಚೆನ್ನಮ್ಮ ಹಳ್ಳಿಕೆರೆ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು.

ಶ್ರೀಭಾರತೀಪ್ರಕಾಶನವು ಹೊರತಂದ ನಿಬಂಧ ಮಂದಾಕಿನಿ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆ ಮಾಡಿದರು.

ಶ್ರೀಭಾರತೀಪ್ರಕಾಶನವು ಹೊರತಂದ ನಿಬಂಧ ಮಂದಾಕಿನಿ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆ ಮಾಡಿದರು.

ಗೋಸಂದೇಶ ಸಭೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಗೋಸಂದೇಶ ನೀಡಿದರು.

ಗೋಸಂದೇಶ ಸಭೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಗೋಸಂದೇಶ ನೀಡಿದರು.

15.09.2016ರ ಕಾರ್ಯಕ್ರಮ:

  • ಬೆಳಗ್ಗೆ 7.00 : ಕಾಮಧೇನು ಹವನ
  • ಬೆಳಗ್ಗೆ 9.00: ಕುಂಕುಮಾರ್ಚನೆ
  • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
  • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
  • ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
  • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
  • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments