ಗೋರಕ್ಷಣೆಗಾಗಿ ಸೀಮೋಲ್ಲಂಘನ ಮಾಡಿ

ಬೆಂಗಳೂರು : ಕಸಾಯಿಖಾನೆಗೆ ಹೋಗುತ್ತಿದ್ದ ಧವಳಗಿರಿ ನಂದಿಗೆ ಅಭಯವನ್ನು ನೀಡುವುದರ ಮೂಲಕ ಆರಂಭವಾದ ಗೋಚಾತುರ್ಮಾಸ್ಯ ಯಾವುದೇ ವಿಘ್ನಗಳಿಲ್ಲದೇ ನಿರ್ವಿಘ್ನವಾಗಿ ಪರ್ಯವಸಾನವಾಗಿದೆ. ಈ ಬಾರಿ ಚಾತುರ್ಮಾಸ್ಯದಲ್ಲೂ ಮಠದ ಮೇಲೆ ಆಕ್ರಮಣದ ಪ್ರಯತ್ನಗಳಾಗಿವೆ,  ಆದರೆ ಗೋವಿನ ಹೆಸರಿನಲ್ಲೇ ಕಷ್ಟಗಳನ್ನು ನಿವಾರಿಸುವ ಶಕ್ತಿ ಇರುವುದರಿಂದ ಯಾವುದೇ ಕೆಡುಕಿನ ಉದ್ದೇಶದ ಪ್ರಯತ್ನಗಳೂ ಸಫಲವಾಗಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯ ಸಮಾರೋಪದ ಸೀಮೋಲ್ಲಂಘನದ ಗೋಸಂದೇಶ ಸಭೆಯಲ್ಲಿ ಮಾತನಾಡಿದ  ಶ್ರೀಗಳು, ಚಾತುರ್ಮಾಸ್ಯವ್ರತವು ಕೇವಲ ನಮ್ಮ ವ್ರತಾಚರಣೆ ಮಾತ್ರ ಆಗದೇ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿ, ಜನರಲ್ಲಿ ಗೋವಿನ ಕುರಿತಾದ ಜಾಗೃತಿ ಮೂಡಿಸುವ  ಮಹಾ ಆಂದೋಲನವೇ ಆಯಿತು. ಚಾತುರ್ಮಾಸ್ಯದ ಸಮಯದಲ್ಲಿ ಗುರುಪೀಠದ ಬಗ್ಗೆ ಸಮಾಜ ತೋರಿದ ಪ್ರೀತಿ ಅನನ್ಯವಾಗಿದ್ದು, ಈ ಸಂಧರ್ಭದಲ್ಲಿ ಶಿಷ್ಯರು ಸಲ್ಲಿಸಿದ ಎಲ್ಲರೀತಿಯ ಸೇವೆಗಳು ಸಂತಸವನ್ನು ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟರು. 

ಗೋವಿಗಾಗಿ ಸೀಮೆಗಳನ್ನು ದಾಟಿ:

ಗೋವಿನ ಸಂರಕ್ಷಣೆಗಾಗಿ ಎಲ್ಲರೀತಿಯ ಸ್ವಾರ್ಥದ ಸೀಮೆಯನ್ನು ದಾಟಿ, ಗೋಜಾಗೃತಿಯ ಆಂದೋಲನದಲ್ಲಿ ಭಾಗವಹಿಸಬೇಕಿದೆ. ಗೋವನ್ನು ರಾಜಕೀಯದಿಂದ ಮುಕ್ತಗೊಳಿಸಬೇಕಿದ್ದು, ರಾಜಕೀಯ ಕ್ಷೇತ್ರದಲ್ಲಿ ಇರುವವರು ಹಾಗೂ ರಾಜಕೀಯಕ್ಕೆ ಹತ್ತಿರದಲ್ಲಿರುವ ಸಂಘಟನೆಗಳ ಸದಸ್ಯರು ಪಕ್ಷ-ಸಂಘ-ಸಂಸ್ಥೆಗಳ ಪರಿಧಿಯನ್ನು ಮೀರಿ ಕೇವಲ ಗೋಸೇವಕರಾಗಿ ಗೋವಿನ ಕುರಿತಾದ ಮಹಾಂದೋಲನದಲ್ಲಿ ಪಾಲ್ಗೊಳ್ಳುಬೇಕಿದೆ ಎಂದರು.

ಗೋವು ಯಾವುದೋ ಒಂದು ಧರ್ಮಕ್ಕೆ ಸೇರಿದ್ದು ಮಾತ್ರವಲ್ಲ, ಸಾಮಾಜಿಕ- ವೈಜ್ಞಾನಿಕವಾಗಿಯೂ ಗೋವು ಸ್ಥಾನಗಳಿಸಿದೆ. ಯಾವುದೇ ಮತ-ಧರ್ಮಗಳೂ ಗೋವಧೆಯನ್ನು ಸಮ್ಮತಿಸುವುದಿಲ್ಲ, ಮತ- ಧರ್ಮಗಳ ಎಲ್ಲೆಯನ್ನು ಮೀರಿ ಮುಸ್ಲಿಂ ಹಾಗೂ ಕ್ರಿಶ್ಚಯನ್ ಸಮುದಾಯದವರೂ ಗೋ ಸಂರಕ್ಷಣೆಯ ಅಭಿಯಾನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಸಂತಸಂದೇಶ ನೀಡಿ, ಎಂತಹಾ ಸಂದರ್ಭಗಳಲ್ಲಿಯೂ ವಿಚಲಿತರಾಗದೇ ನಿರಂತರ ಸಾಮಾಜಿಕ – ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಘವೇಶ್ವರ ಶ್ರೀಗಳಂತಹ ಗುರುಗಳು ದೊರಕಿರುವುದು ಸಮಾಜದ ಭಾಗ್ಯವಾಗಿದ್ದು, ಶ್ರೀರಾಮಚಂದ್ರಾಪುರ ಮಠದ ಗೋರಕ್ಷಣೆಯ ಮಹಾಂದೋಲನದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದರು.

ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ|| ಗೋಪಿನಾಥ್, ಕಾಂತಜೆ ಈಶರ ಭಟ್, ದೊಂಬೆ ಶಿವರಾಮಯ್ಯನವರು  ಹಾಗೂ ಡಾ. ಎಂ ಪಿ ಕರ್ಕಿ ಅವರುಗಳಿಗೆ ಈ ವರ್ಷದ ಚಾತುರ್ಮಾಸ್ಯದ ಪ್ರಶಸ್ತಿಯನ್ನು ಶ್ರೀಗಳು ಅನುಗ್ರಹಿಸಿದರು. ಗೋಸಂದೇಶ ಸಭೆಯಲ್ಲಿ ಗಂವ್ಹಾರದ ಪೂಜ್ಯ ಪಾಂಡುರಂಗ ಜೋಷಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀಸಂಸ್ಥಾನದ ಶಾಸನತಂತ್ರದ ಸದಸ್ಯರಿಂದ ಸರ್ವಸೇವೆ ನಡೆಯಿತು.

ಲೋಕಾರ್ಪಣೆ :

ಮಂಗಲ ಗೋಯಾತ್ರೆಯ ನೂತನ ಪೋರ್ಟಲ್, ಗ್ರಾಮರಾಜ್ಯದವರು ಹೊರತಂದ ದೇಶೀ ಹಸುವಿನ ತುಪ್ಪ, ಶ್ರೀಭಾರತೀಪ್ರಕಾಶನವು ಹೊರತಂದ ಚಂದ್ರಶೇಖರ ಕೆದಿಲಾಯರು ಹಾಡಿರುವ ಕಥಾಗೀತ ಧ್ವನಿಮುದ್ರಿಕೆ,   ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆ ಹಾಗೂ ಮೂಲಮಠದ ಕುರಿತಾದ ಪ್ರಸ್ತುತಿ  ಲೋಕಾರ್ಪಣೆಗೊಂಡಿತು.

ಇದಕ್ಕೂ ಮೊದಲು ಬೆಳಗ್ಗೆ ಗೋಕಿಂಕರ ಯಾತ್ರೆಗೆ ಚಾಲನೆ ನೀದಿದರು. ಶ್ರೀಕರಾಚಿತ ಪೂಜೆ, ಫಲಸಮರ್ಪಣೆ ನಡೆಯಿತು. ಕೆಂಗೇರಿಯ ಓಂಕಾರಾಶ್ರಮಕ್ಕೆ ತೆರಳುವ ಮೂಲಕ ಸೀಮೋಲ್ಲಂಘನದ ವಿಧಿವಿಧಾನಗಳನ್ನು ಪೂರೈಸಿ, ಓಂಕಾರಾಶ್ರಮದ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಪಡೆದರು. ಈ ಸಂಧರ್ಭದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಶ್ರೀಗಳು ಹಾಗೂ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಉಪಸ್ಥಿತರಿದ್ದರು.

ಸಂಸದರಾದ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಹರತಾಲು ಹಾಲಪ್ಪ, ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಜಿ ಭಟ್, ಶ್ರೀಕೋಶದ ಕಾರ್ಯದರ್ಶಿಗಳಾದ ಮೋಹನಭಾಸ್ಕರ ಹೆಗಡೆ, ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು. 

ಕೆಂಗೇರಿಯ ಓಂಕಾರಾಶ್ರಮಕ್ಕೆ ತೆರಳುವ ಮೂಲಕ ಸೀಮೋಲ್ಲಂಘನದ ವಿಧಿವಿಧಾನಗಳನ್ನು ಪೂರೈಸಿದರು, ಈ ಸಂಧರ್ಭದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಶ್ರೀಗಳು ಹಾಗೂ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಉಪಸ್ಥಿತರಿದ್ದರು.

ಕೆಂಗೇರಿಯ ಓಂಕಾರಾಶ್ರಮಕ್ಕೆ ತೆರಳುವ ಮೂಲಕ ಸೀಮೋಲ್ಲಂಘನದ ವಿಧಿವಿಧಾನಗಳನ್ನು ಪೂರೈಸಿದರು, ಈ ಸಂಧರ್ಭದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಶ್ರೀಗಳು ಹಾಗೂ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಉಪಸ್ಥಿತರಿದ್ದರು.

ಓಂಕಾರಾಶ್ರಮದ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಪಡೆದರು. ಈ ಸಂಧರ್ಭದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಶ್ರೀಗಳು ಹಾಗೂ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಉಪಸ್ಥಿತರಿದ್ದರು.

ಓಂಕಾರಾಶ್ರಮದ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಪಡೆದರು. ಈ ಸಂಧರ್ಭದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಶ್ರೀಗಳು ಹಾಗೂ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು ಉಪಸ್ಥಿತರಿದ್ದರು.

ಡಾ|| ಗೋಪಿನಾಥ್ ಅವರಗೆ ಚಾತುರ್ಮಾಸ್ಯದ ಪ್ರಶಸ್ತಿಯನ್ನು ಶ್ರೀಗಳು ಅನುಗ್ರಹಿಸಿದರು.

ಡಾ|| ಗೋಪಿನಾಥ್ ಅವರಗೆ ಚಾತುರ್ಮಾಸ್ಯದ ಪ್ರಶಸ್ತಿಯನ್ನು ಶ್ರೀಗಳು ಅನುಗ್ರಹಿಸಿದರು.

ಗ್ರಾಮರಾಜ್ಯದವರು ಹೊರತಂದ ದೇಶೀ ಹಸುವಿನ ತುಪ್ಪ ಶ್ರೀಗಳು ಲೋಕಾರ್ಪಣೆ ಮಾಡಿದರು

ಗ್ರಾಮರಾಜ್ಯದವರು ಹೊರತಂದ ದೇಶೀ ಹಸುವಿನ ತುಪ್ಪ ಶ್ರೀಗಳು ಲೋಕಾರ್ಪಣೆ ಮಾಡಿದರು

Facebook Comments