ನಿನ್ನೆ ಕೆಕ್ಕಾರಿನ ರಘೂತ್ತಮ ಮಠದಲ್ಲಿ ಇನ್ನೊಮ್ಮೆ ಚಾತುರ್ಮಾಸದ ಕಳೆ.
ಗುರುವಿನ ಭರವಸೆಯ ನುಡಿಗಳಿಗಾಗಿ
ನಗುಮೊಗದ ದರುಶನಕಾಗಿ
ಪ್ರಭು ಶ್ರೀರಾಮನಿಗಾಗಿ..
ಮಾಸದ್ವಯಗಳಿಂದ ಪ್ರತೀಕ್ಷೆಯಲ್ಲಿದ್ದ ಶಿಷ್ಯ ಭಕ್ತರ ಭಾವಗಳಿಗೊಂದು ಸ್ಪಂದನ ದೊರೆಯಿತು..ಸದಾ ಗುರು ಚರಣಗಳಿಗರ್ಪಿತವಾದ ಸುಮನಗಳ ಸಮ್ಮಿಳನವಾಯಿತು..
ಅಷ್ಟಕ್ಕೂ ಕೆಕ್ಕಾರಿನಲ್ಲಿ ಯಾವುದೇ ವಿಶೇಷ ಕಾರ್ಯಕ್ರಮವಿರಲಿಲ್ಲ..ಎಂದಿನಂತೆ ಗುರುಗಳ ಆಶೀರ್ವಚನ ಮಂತ್ರಾಕ್ಷತೆಯ ಕಾರ್ಯಕ್ರಮವಿದ್ದಿದ್ದು..ಗುರುಗಳು ಬರುತ್ತಾರೆಂಬ ಆಮಂತ್ರಣವನ್ನು ಯಾರಿಗೂ ನೀಡಿರಲಿಲ್ಲ…
ಆದರೆ ಗುರುವಿನ ಆಗಮನದ ಪ್ರತೀಕ್ಷೆಯಲ್ಲಿದ್ದವರು ಅದೆಷ್ಟು ಮಂದಿ..??
ನಮ್ಮ ಗುರುಗಳು ಹೇಗಿರುವರೋ ಎಂದು ಅನುಕ್ಷಣವೂ ಹಂಬಲಿಸಿದ ಜೇವಗಳವೆಷ್ಟು..??
ನಿನ್ನೆ ಶ್ರೀ ಸಂಸ್ಥಾನದವರ ಆಗಮನದ ವಾರ್ತೆಯನ್ನು ಕೇಳುತ್ತಿದ್ದಂತೆ ಜನಸ್ತೋಮ ಧಾವಿಸಿದ್ದು ಕೆಕ್ಕಾರಿಗೆ..
ಶ್ರೀ ಗುರುಗಳ ಆಗಮನದ ವಾರ್ತೆ ಕಿವಿಯಿಂದ ಕಿವಿಗೆ ಹರಡಿ ಪೂಜ್ಯರ ಆಶೀರ್ವಚನದ ಸಂದರ್ಭದಲ್ಲಿ ಮಠದ ಪರಿಸರ ತುಂಬಿ ತುಳುಕುತ್ತಿತ್ತು..ಯಾವ ಆಮಂತ್ರಣ ಇಲ್ಲದೇ ಸೇರಿದ್ದು ಸರಿಸುಮಾರು ಹತ್ತುಸಾವಿರ ಮಂದಿ..
ಇಲ್ಲಿ ಸೇರಿದವರು ಬರೀ ಮಂದಿಯಲ್ಲ ಸ್ವಾಮೀ..
ಜಾತಿಬೇಧವೆಣಿಸದೇ ಗುರುವಿಗಾಗಿ ..ಸತ್ಯಕ್ಕಾಗಿ..ಶ್ರೀ ಪೀಠದೊಟ್ಟಿಗೆ ನಿಂತ ಹತ್ತು ಹಲವಾರು ಸಮಾಜದ ಧೀರರು..
ಅನ್ಯಾಯವನ್ನು ಖಂಡಿಸುವ..ನಿಜವಾದ ಸಮಾಜದ ಹಿತವನ್ನು ಅಪೇಕ್ಷಿಸುವ..ಧರ್ಮದ ಪರ ನಿಂತ ಸಜ್ಜನರು..
ಪೂಜ್ಯರೇ ಅನುಗ್ರಹ ನುಡಿಯಲ್ಲಿ ಹೇಳಿದಂತೆ ಮಠ ಸಾಕಿದ್ದು ಸಮಾಜವೆಂಬ ಮದ್ದಾನೆಯನ್ನು..ಇಂದು ಎಂಥ ಸಂದರ್ಭ ಬಂದರೂ ಸಮಾಜ ಮಠದೊಟ್ಟಿಗೆ ನಿಲ್ಲುತ್ತದೆ..ಗುರುವಿಗಾಗಿ ಇಂದು ಜೀವ ಖೊಸ ಡುವ ಶಿಷ್ಯರಿದ್ದಾರೆ..ಆದರೆ ಆ ಗುರು ಬಯಸಿದ್ದೇನು ಹೇಳಿದ್ದೇನು ಗೊತ್ತೇ..?
ತಾವಿರುವ ಅಗ್ನಿಕುಂಡದ ಅಗ್ನಿ ಫರೀಕ್ಷೆಯ ಬಿಸಿ ತಮ್ಮ ಶಿಷ್ಯರಿಗೆ ತಟ್ಟದಿರಲೆಂದು…ಶಿಷ್ಯರು ಸುಖವಾಗಿರಲೆಂದು..ತಮ್ಮಲ್ಲಿ ಸ್ವಲ್ಪವಾದರೂ ಕಳಂಕವಿದ್ದಿದ್ದರೆ ಫೀಠತ್ಯಾಗವೇನು.
.ದೇಹತ್ಯಾಗವನ್ನೇ ಮಾಡುತ್ತಿದ್ದೆವೆಂದು..”
ಬಹಳ ಖೇದವೆನಿಸಿತು..
ಇಷ್ಟು ದೊಡ್ಡ ಸಂದೇಶವನ್ನು ಸಮಾಜಕ್ಕೆ ಬೇರಾವ ಸಂತರಿಂದಲೂ ಕೊಡಲು ಸಾಧ್ಯವಿಲ್ಲ..
ನಮ್ಮ ಗುರು ಯುಗಕ್ಕೊಬ್ಬರು..!!

ನಮ್ಮ ಗುರುವಿನ ನಿಲುವ ನೋಡಿ..
ಯಾವ ವಿಶೇಷವೂ ಇಲ್ಲದೇ..ಯಾರೂ ಆಹ್ವಾನಿಸದೇ ಕೆಕ್ಕಾರಿನಂಥ ಹಳ್ಳಿಯೊಂದಕ್ಕೆ ಗುರು ನುಡಿಗಾಗಿ..ಗುರು ದರುಶನಕಾಗಿ ಹತ್ತು ಸಹಸ್ರ ಸಂಖ್ಯೆಯ ಜನ ಧಾವಿಸಿ ಬರುತ್ತಾರೆಂದರೆ
ಪರಮಪೂಜ್ಯರು ಅದೆಷ್ಟು ಜೀವಗಳ ಜೀವಾಳವಾಗಿರಬಹುದು..??
ಅದೆಷ್ಟು ಲಕ್ಷ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ಬೆಳಗುತ್ತಿರಬಹುದು..??
ಅದೆಷ್ಟೋ ಚೇತನಗಳಿಗೆ ಗುರುವೇ ಆಸರೆ…ಅವರ ದರುಶನವೇ ಸಮಾಧಾನವನೀಯುವುದು..ಅದಕ್ಕಾಗಿ ಎಲ್ಲಿಂದ ಎಲ್ಲಿಗೂ ಧಾವಿಸಿ ಬರಲು ಸಿದ್ಧ..
ಒಂದಲ್ಲ ಲಕ್ಷ ಲಕ್ಷ ಬಾರಿ ಸಾರಿ ಹೇಳುತ್ತೇವೆ..ಸಮಾಜದ ‘ಸು’ಮನಗಳು ಹಿಂದೂ..ಇಂದೂ..ಎಂದೆಂದೂ..ಗುರುಗಳೊಂದಿಗೆ..ಮಠದೊಂದಿಗೆ ನಿಂತಿವೆ..

ಗುರುವಿಗಾಗಿ ನಮ್ಮ ಹಂಬಲ..
ಗುರುವಿಗೇ ನಮ್ಮ ಬೆಂಬಲ..

Facebook Comments Box