(ವರದಿ: ಮುರಳಿ ವಿ ಎಸ್ |
ಸಾಗರ ಮಂಡಲ ಕಾರ್ಯದರ್ಶಿ)

ಸಾಗರ, 01 ಸೆಪ್ಟಂಬರ್ 2014:

ಇಲ್ಲಿನ ಅಜಿತ್ ಸಭಾ ಭವನದಲ್ಲಿ ಸಾಗರ ಪ್ರಾಂತ ಸಭೆಯು ಇಂದು ನಡೆದಿದ್ದು, ಸುಮಾರು ಇನ್ನೂಕ್ಕೂ ಮಿಕ್ಕಿ ಗುರುಬಂಧುಗಳು ಭಾಗವಹಿಸಿದ್ದರು.
ಪ್ರಾಂತ್ಯದ ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಪುರಸ್ಕರಿಸಿ, ಶ್ರೀಪೀಠದ, ಶ್ರೀಶ್ರೀಗಳವರ ಮೇಲಿನ ತೇಜೋವಧೆಯನ್ನು ಖಂಡಿಸಲಾಗಿದ್ದು, ನೆರೆದ ಎಲ್ಲರೂ “ಹರೇರಾಮ”ಎಂಬ ಒಕ್ಕೊರಲ ಕರೆಯ ಮೂಲಕ ಅನುಮೋದಿಸಿರುತ್ತಾರೆ.

“ನಮ್ಮ ಪ್ರೀತಿಯ ಶ್ರೀ ಸಂಸ್ಥಾನ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ರಾಮಚಂದ್ರಾಪುರಮಠ ಇವರ ಮೇಲೆ ಕೆಲವು ದುಷ್ಟ ಶಕ್ತಿಗಳು ತೇಜೋವಧೆ ನೆಡೆಸುತ್ತಾ, ಶ್ರೀ ಪೀಠದ ಘನತೆಗೆ ಅವಮಾನ ಮಾಡುತ್ತಲಿರುವುದನ್ನು ಶ್ರೀ ಮಠದ ಶಿಷ್ಯ ಸಮುದಾಯ ಪ್ರಬಲವಾಗಿ ಖಂಡಿಸುತ್ತದೆ. ಅಲ್ಲದೆ ಇಡೀ ಶಿಷ್ಯ ಸಮುದಾಯ ಶ್ರೀ ಪೀಠದ ಮತ್ತು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಬೆಂಬಲಕ್ಕೆ ಇರುತ್ತದೆ”- ಎಂದು ಅಧಿಕೃತವಾಗಿ ನಿರ್ಣಯಿಸಲಾಗಿದೆ.

ಧನ್ಯವಾದಗಳು,
ಹರೇರಾಮ

~
ಮುರಳಿ ವಿ ಎಸ್
ಕಾರ್ಯದರ್ಶಿ
ಸಾಗರ ಹವ್ಯಕ ಮಂಡಲ

Facebook Comments