ಏನಿದು..!! ಅಂದ್ಕೊಂಡ್ರ..ವಿಶಾಲತೆ ಎನ್ನುವುದು ಬರೀ ಕೆಲವೇ ಕೆಲವು ಮಾನುಷ ಜೀವಕ್ಕೆ, ಇನ್ನು ಕೆಲವು ಪ್ರಾಣಿಗಳಲ್ಲೂ ,ಜೀವರಾಶಿಗಳ ಲ್ಲಿ ಮಾತ್ರ ಎಂದು ತಿಳಿದರೆ ತಪ್ಪಾಗಬಹುದು..ಅಂದರೆ ಅಚೇತನ,ಅಸ್ಥಿರ ವಸ್ತುಗಳಲ್ಲೂ  ಆ ಭಾವ ಇದೆ ಎಂಬುದು ನಾವು ಕಂಡಂತೆ….ಇಲ್ಲಿ ಓದಿ….
ಹೌದಲ್ವೆ..!!ಮೊನ್ನೆ ಒಂದು ಲೇಖನದಲ್ಲಿ ಬರೆದ ನೆನಪು ಬಂಧುತ್ವದ ಮಹಿಮೆ ಗುರುಮುಖೇನದಲ್ಲಿ ದೊರೆತಾಗ ಹೇಗೆ ಅರಿಯದ ಜೀವಗಳನ್ನು ಗುರು ಬಂಧು,ಗೋಬಂಧು,..ಮಠದ ಬಂಧುಗಳಾಗಿಯೋ ನಾನಾ ತರಹದಲ್ಲಿ..  ಮಾಡುವುದೆಂದು…… ಅದು ಅವರವರ ಭಾಗ್ಯ…ಬಿಡಿ!…..
ನಾನಂದೇ ಹೇಳಿದೆ** ಶ್ರೀ ರಾಮಚಂದ್ರಾಪುರ ಮಠದ ಗಿರಿನಗರ ರಾಮಾಶ್ರಮ**ದ ಮೆಟ್ಟಿಲು ಏರಿದಾಗ ಅಲ್ಲೇ ನಮ್ಮ ದೊಡ್ಡಗುರುಗಳ ಆಶೀರ್ವಾದ ದ ಜೊತೆಗೆ, ಮಹಾದೇವನ ಅನುಗ್ರಹ ವಾಗಿ,ಮುಂದೆ ಹೆಜ್ಜೆ ಇಟ್ಟರೆ  ವಿಶಾಲವಾದ **ಮುಖ್ಯದ್ವಾರ – ಬಾಗಿಲು** ಸದಾ ಕೈ  ಬೀಸಿ  ಕರೆಯುವುದು…**
ಇದು ಏನು ಹೇಳುವುದು ಅಂದರೆ.. ಇಲ್ಲಿಗೆ ಹೊಗ್ಗುವವರ ಮನಸ್ಸು ವಿಶಾಲವಾಗಿರಬೇಕು,..ಇಲ್ಲ ಒಳ ಹೊಕ್ಕ ಮೇಲೆ ಆದರೂ ಅವರಲ್ಲೂ ಆ ಹೃದಯ ವೈಶಾಲ್ಯತೆ ಬರಬೇಕು,,,, ಬರಬಹುದು…!!….
ಹಾಂಗೆ ಈ ಮೂಲಕ ಒಳನಡೆದರೆ ಅದೆಷ್ಟು ಬಹು ವೈಶಾಲ್ಯತೆ   ಮನಸ್ಸಿನ ಹೃದಯಗಳು ಆ ಅಂಗಣದಲ್ಲಿ  ಭಕ್ತರಾಗಿಯೋ,ಶಿಷ್ಯರಾಗಿಯೋ, ಗೋ ಬಂಧು ವಾಗಿ ಯೋ,ಅಲ್ಲ ಗುರುಗಳ ಅಭಿಮಾನಿಗಳಾಗಿಯೋ ನಮಗೆ ಸಿಗುತ್ತಾರೆ…. ನಂತರ ಎದುರಿಗೆ *ಹನೂಮತ್ಸೇವಿತ ಶ್ರೀ ರಾಮನ ದರ್ಶನ*..ಆ  ಸಮಯ  ಅನುಭವಿಸಿ ಪುಳಕಿತರಾಗುವ ಹೊತ್ತು..
ನಂತರ ನಮ್ಮ ದೃಷ್ಟಿ *ಶ್ರೀ ಗುರುಗಳು *ಎಲ್ಲಿದ್ದಾರೆ,ಯಾವಾಗ ಪೀಠಕ್ಕೆ ಬರುವರು ಎಂದು *ಬಕ ಪಕ್ಷಿ*ಗಳಂತೆ  ಕಾದು ಕೂರುವ ಹೊತ್ತು..!!!…   ..ಹೀಗೆ ಮೊದಲ ಮುಖ್ಯ ದ್ವಾರದ ಮೂಲಕ  ಬಂದರೆ ಇಲ್ಲಿಗೆ  ಆರು  ಬಾಗಿಲಿನಂತೆ  ವಿಧವಿಧವಾಗಿ ದಾಟಿ ಬಂದು ಕೊನೆಯಲ್ಲಿ ಶ್ರೀ ಗುರುಗಳ ಶ್ರೀ ಕರಾರ್ಚಿತ ಮಹಾಪೂಜೆಯ ಕಣ್ತುಂಬುವ ಘಳಿಗೆ..ಅಲ್ಲಿಗೆ ಆ ವೈಕುಂಠ ಪತಿ ,ಭಾಗವತ ಪುರಾಣ ಪುರುಷೋತ್ತಮನ  ದರ್ಶನ …. ಈ ಪರಿಯು ಒಂದು ರೀತಿಯಲ್ಲಿ ವೈಕುಂಠ ವರ್ಣನೆಯಂತೆ ಆಯಿತು….ಆಹಾ..ಆಹಾ..!!!.. **ಅದಕ್ಕೆ ವಿಶಾಲ- ವೈಶಾಲ್ಯತೆಯ  -ದ್ವಾರ   ನಮ್ಮ  ಮಠದ್ದು……..**
ಆ ಪ್ರಥಮ ದ್ವಾರವನ್ನು ಒಂದು ಸಲ ಮನಸಾ ನೋಡಿ..!! ಈಗ ಇಲ್ಲಿ..!!! ಆ ಮಠದ ವೈಶಾಲ್ಯತೆ ಯನ್ನು  ಈಗ ಮನಸಾ  ಅರಿಯಬಹುದು… ಇನ್ನೂ ಹೆಚ್ಚಾಗಿ ಅಲ್ಲಿ ಕಾಣುವ ಹಿರಿಯ ಮಾತೆಯರ ಮನಸ್ಸು, ಅವರ ಕಾಳಜಿ,ಪ್ರೀತಿ ಹೇಳತೀರದು..ಇದು ನಮ್ಮ ಮಠದಲ್ಲಿ ಎಂದು  ಹೇಳಲು ನಮಗೂ ಹೆಮ್ಮೆ….!!
ಇಂತಹ ನಮ್ಮ ಮಠದ ದ್ವಾರವು  ವೈಕುಂಠಕೆ ಹೋಲುವ , ಈ ವಿಶಾಲ- ವೈಶಾಲ್ಯತೆ-  ಮುಖ್ಯ ದ್ವಾರಕ್ಕೆ ಕಾಯಾ,ವಾಚಾ,ಮನಸಾ ಪ್ರಣಾಮಗಳನ್ನು ಸಲ್ಲಿಸುವವರಾಗುತ್ತೇವೆ…!!
 ಅದೆಷ್ಟೋ ಜೀವಗಳನ್ನು ,ಭಕ್ತರನ್ನು ಒಳಕರೆದು ತನ್ನಲ್ಲೇ ದೈವ ಬಂಧುವಾಗಿಸಿ,ಗುರು – ಶಿಷ್ಯರ ನ್ನಾಗಿಸಿದ ಇಂತಹ ದ್ವಾರಕ್ಕೆ ಮತ್ತೊಮ್ಮೆ ಶಿರಸಾನಮಿಸುವವರಾಗಿದ್ದೇವೆ..!!!
* ಮೊದಲ ಹೆಜ್ಜೆ- ಮಠದ ಗೇಟ್ ತೆರೆದು ಮೆಟ್ಟಿಲು ಏರಿ ಮೇಲೆ ಬರುವುದು.! ಅಲ್ಲೇ ಗೋಮಾತೆಯ ರ ದರ್ಶನ ಕೂಡಾ…!!!
* ದೊಡ್ಡಗುರುಗಳ ಆಶೀರ್ವಾದ,ಶಿವನ ಸನ್ನಿಧಿ..!
* ಮುಖ್ಯ ದ್ವಾರ ಪ್ರವೇಶ..!
* ಪ್ರಭುವಿನ ದರ್ಶನ ಎದುರಲ್ಲೇ….!
* ನೂರಾರು ದೇವತೆಗಳಂತೆ ಹೋಲುವ **ಭಕ್ತರ- ಶಿಷ್ಯರ** ಭೇಟಿ…!!!!
* “ಸಂಸ್ಥಾನ”ದವರಿಗಾಗಿ ಕಾದು ಕೂರುವುದು.!!

* ಆ ವೈಕುಂಠ ದ ಕೊನೆಯ ಬಾಗಿಲಿನಂತೆ  ಶಿಷ್ಯರು ಮಹಾಪೂಜೆಗಾಗಿ  ಆ ಸನ್ನಿಧಿಯ ಒಳ ಬಾಗಿಲು  ತೆಗೆದಾಗ  ಶ್ರೀ ಕರಾರ್ಚಿತ ಮಹಾಪೂಜೆಯ ನೋಡಿ ಅವನಲ್ಲಿ ನಾವೂ –  **ನಾನು ನಿನ್ನವನು ನಾನು,  ನಾನು  ನಿನ್ನವನು,ನಾನು  ನ%B

Facebook Comments Box