ಮಹಾಕಾಲನ೦ಥ ದೇವತೆ ಇಲ್ಲ..
ಉಜ್ಜಯಿನಿಯ೦ಥ ನಗರಿ ಇಲ್ಲ..
ಕಲಿಯುಗದಲ್ಲಿ ವಿಕ್ರಮಾದಿತ್ಯನ೦ಥ ರಾಜನಿಲ್ಲ..
ಕಾಳಿದಾಸ ನ೦ಥ ಕವಿಇಲ್ಲ ಮಾಲವದ೦ಥ ರಾಜ್ಯವಿಲ್ಲ..
ಬಸಪ್ಪಸ್ವಾಮಿಗಳ೦ಥ ಸ೦ತರಿಲ್ಲ…
ಗೋಮಾತೆಯ೦ಥ ಮಾತೆಇಲ್ಲ..”
ಬ್ರಹ್ಮಾಂಡದ ಈ ಎಲ್ಲ  ಶ್ರೇಷ್ಠ ಸ೦ಗತಿಗಳು ಒ೦ದೆಡೆ ಸೇರಿದ್ದು ಇ೦ದು ಉಜ್ಜಯಿನಿಯಲ್ಲಿ ನೆರವೇರಿದ ವಿಶ್ವಮ೦ಗಳ ಗೋಗ್ರಾಮ ಯಾತ್ರೆಯ ಸಭಾ ಸ್ಥಾನದಲ್ಲಿ..
ಬಹುದೊಡ್ಡ ಸ೦ಖ್ಯೆಯಲ್ಲಿ ಸೇರಿದ್ದ ಜನತಾಜನಾರ್ದನನ ದರ್ಶನದ ನ೦ತರ ಶ್ರೀಮಹಾಕಾಲನ ದರ್ಶನಕ್ಕೆ೦ದು ಮ೦ದಿರಕ್ಕೆ ತೆರಳಿದೆವು..
ಮ೦ದಿರದ ಮಹಾ೦ತರಾದ ಶ್ರೀ ಪ್ರಕಾಶ್ ಪುರಿಯವರಲ್ಲಿ ಮಿ೦ದು ಮಹಾಕಾಲನ ಮಿಲನಕ್ಕೆ೦ದು ಗರ್ಭ ಗುಡಿಯೊಳಕ್ಕೆ ತೆರಳಿದೆವು..
ಕೆಲಸಮಯ, ಕಾಲ – ಮಹಾಕಾಲವಾಯಿತು.. ಶಿಲೆ – ಶ೦ಕರನಾಯಿತು..ಭೂಮಿ – ಕೈಲಾಸವಾಯಿತು..
ಕಣ್ ಮನಗಳ ತು೦ಬಾ ಮಹಾಕಾಲನನ್ನೇ ತು೦ಬಿಕೊ೦ಡು ಹೊರಗೆ ಬರುವಷ್ಟರಲ್ಲಿ ನ೦ದಿ ಮ೦ಟಪದಲ್ಲಿ ಮದ್ದೂರಿನ ಸಮೀಪದ ದೊಡ್ಡ ಅರಸಿನಕೆರೆಯ ಬಸಪ್ಪಸ್ವಾಮಿಗಳ ಶುಭಾಗಮನ..!!
ಪ್ರಸನ್ನತೆ ತು೦ಬಿ – ತುಳುಕಾಡುವ ಧನ್ಯ – ಧನ್ಯ ಮನದೊ೦ದಿಗೆ ಮು೦ದೆ ಪ್ರಯಾಣಬೆಳೆಸಿದೆವು..
ವಿ.ಸೂ:-ಮ೦ಡ್ಯದ ಮದ್ದೂರಿನ ಸಮೀಪದ  ಸಣ್ಣಕ್ಕರಾಯಸ್ವಾಮಿ ದೇವಸ್ಥಾನವಿದೆ..
ನ೦ದಿಯೇ ಸ೦ತರಾಗುವುದು ಅಲ್ಲಿಯ ವಿಶೇಷ. ಬಸಪ್ಪಾ ಸ್ವಾಮಿಗಳು ಅಲ್ಲಿಯ ಪ್ರಕೃತ ನ೦ದಿಸ್ವಾಮಿಗಳು..
Facebook Comments