‘ಧರ್ಮ,ಅರ್ಥ,ಕಾಮ,ಮೋಕ್ಷ’ ದ ಕಾಮವು ಒಳಿತನ್ನುಂಟು ಮಾಡುತ್ತದೆ. ಅದು ಯಾವಾಗ ‘ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರ’ ಗಳ ಸಾಲಿಗೆ ಸೇರಿ ಹೋಗುವುದೋ ನಾನರಿಯೆ. ‘ಉದಾಸೀನ’ ಒಳಿತನ್ನುಂಟು ಮಾಡುತ್ತದೆ. ಅದು ಯಾವಾಗ ‘ಜಾಡ್ಯ’ ವಾಗಿ ಬದಲಾಗುತ್ತದೋ ನಾನರಿಯೆ. ಅಮ್ಮ…………………………. ನಿನ್ನರಿತು ನಡೆಯುವುದು ತುಂಬಾ ಕಷ್ಟ. ನೀನೇ ನನ್ನೊಳಗೆ ಸ್ಥಿರವಾಗಿ ನೆಲೆಸಬಾರದೆ………….
October 16, 2012 at 10:56 AM
JAI MAATA JI…
Praveen, Tiptur
October 16, 2012 at 10:57 AM
||ಶ್ರೀ ಗುರುಭ್ಯೋ ನಮಃ||
ನಾಡಿನ ಸಮಸ್ತ ಜನತೆಗ 9 ರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಡಿಸೈನ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
October 16, 2012 at 1:19 PM
|| ಹರೇರಾಮ ||
ಶರನ್ನವರಾತ್ರಿಯ ಪ್ರಾರ್ಥನೆ
————————-
ಜಗನಾಳುವ ಶಕ್ತಿ ಮೊಗೆದು ತನ್ನನು ತೋರಿ
ಬಗೆಬಗೆಯ ರೂಪದಲಿ ಬರಲು ನಗೆ ಬೀರಿ
ಅಗರು ಕಸ್ತೂರಿ ಸಿರಿಗಂಧ ಪುಷ್ಪಗಳಿಟ್ಟು
ಮುಗುದ ಮನದಲಿ ನಮಿಸಿ ಸ್ವಾಗತವ ಕೋರಿ
ತೆಗೆದು ಮುಗಿಯದ ಗುಪ್ತ ಶಕ್ತಿಯಾಗರ ಗಹನ
ನಗದು ರಾಮನಲೊಮ್ಮೆ ಅಂಬೆ ಕಾಳಿಯಲಿ
ನಗರದೇವತೆಯಾಗಿ ಸಡಗರದಿ ನೆಲೆನಿಂದು
ಖಗವಾಹನನ ಮಡದಿ ಶಿವೆಯು ಸರಸತಿಯು !
ಮೊಗೆಯಲಿಡುವೆವು ಧೂಪ ಚಿನ್ನದಾರತಿ ಬೆಳಗಿ
ಸೊಗದ ಸಿರಿಯದು ಲಭಿಸೆ ನಿನ್ನ ಧ್ಯಾನಿಪೆವು
ನೊಗವ ಹೊತ್ತಿವೆವಿಲ್ಲಿ ನಿನ್ನ ಈ ನೆಲದಲ್ಲಿ
ಜಗದಂಬೆ ಶಕ್ತಿಕೊಡು ಶಕ್ತಿರೂಪಿಣಿಯೇ
ಮೊಗದ ಚೆಲುವನು ಕಂಡು ಮರೆತೆವೀ ಭಾರವನು
ಮಗುದೊಮ್ಮೆ ನವರಾತ್ರಿ ನವದಿನದ ಪೂಜೆ
ಮಿಗಿಲು ಮಾತೆಯ ಪ್ರೀತಿ ಅದನು ಹರಿಸುವ ರೀತಿ
ಮಗುವೆಂಬ ಮಮತೆಯಲಿ ಸಲಹು ಎಲ್ಲರನು
ಸಗರ ಸಂತತಿಗಲ್ಲಿ ಗಂಗೆಯಾಗುತ ಹರಿದೆ
ಚಿಗರೆಕಂಗಳ ಸೊಬಗ ಶಿರಸಿ ಮಾರಿಕೆಯೇ
ಅಗಲವಿಸ್ತಾರಗಳ ಹರಹು ಬಲ್ಲವರಾರು ?
ತೊಗಲುಗೊಂಬೆಗಳಮ್ಮ ನಿನ್ನ ಮಕ್ಕಳಿವು !
ಶ್ರೀಗಳಿಗೆ ಪ್ರಣಾಮಗಳು ಮತ್ತು ಸಕಲ ಗುರುಭಕ್ತರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು.
|| ಹರೇರಾಮ||
October 16, 2012 at 5:52 PM
Hare Ramaa
Gurugalige Namaskaragalu,
With your blessings let me begin the navarathri pooja today.
Hare Raamaa
Soumya
October 17, 2012 at 3:45 PM
ಪೂಜ್ಯರಿಗೆ ಹಾಗೂ ಜಗನ್ಮಾತೆಗೆ ಮನಸಾನಮನಗಳು.
chs
October 27, 2012 at 6:50 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…