ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ನಡೆಯುತ್ತಲೇ ಇದೆ..
ಪ್ರಕೃತಿಯೆಂದರೆ ನಮ್ಮ ತಾಯಿ.

ಜೀವಾಂಕುರವಾದ ಪ್ರಾರಂಭದಲ್ಲಿ ಅಮ್ಮನಿಂದ ‘ಉಸಿರು’ ಪಡೆವ ನಾವು, ಈ ಭುವಿಯ ಮಡಿಲಿಗೆ ಬಂದ ಬಳಿಕ ಅದಕ್ಕಾಗಿ ಆಶ್ರಯಿಸುವುದು ಪ್ರಕೃತಿಮಾತೆಯನ್ನು!
ಅದರ ಮಹತ್ವವನ್ನರಿಯದ ನಾವು ‘ಕೃತಕ’ದತ್ತ ಸಾಗುತ್ತಿದ್ದೇವೆ.
ಇದರಿಂದ ನಮಗಾಗುವ ನಷ್ಟ ಎಷ್ಟರಮಟ್ಟಿಗಿದೆ – ಎಂಬುವುದಕ್ಕೆ ಒಂದು ಪುಟ್ಟ ಉದಾಹರಣೆ ಗಮನಿಸೋಣ:

ಮನುಷ್ಯನೊಬ್ಬನಿಗೆ ಸುಮಾರು 550 ಲೀಟರುಗಳಷ್ಟು ಆಮ್ಲಜನಕದ ಅಗತ್ಯವಿದೆ ಎಂದು ವಿಜ್ಞಾನವು ಹೇಳುತ್ತದೆ.
ಅಂದರೆ ಈಗಿನ ಕೃತಕ ಆಮ್ಲಜನಕ ಸಿಲಿಂಡರುಗಳಲ್ಲಿ ಮೂರು ಸಿಲಿಂಡರುಗಳಷ್ಟು..

ಒಂದು ಸಿಲಿಂಡರಿನ ಬೆಲೆ 700 ರೂ.ಗಳೆಂದಾದರೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ 2100 ರೂ.ಗಳಷ್ಟು ಮೌಲ್ಯದ ಆಮ್ಲಜನಕ ಸೇವಿಸುತ್ತಾನೆ ಎಂದಾಯಿತು!
ಅಂದರೆ ಒಂದು ವರ್ಷಕ್ಕೆ 766500 ರೂ.ಗಳು!

ಹಾಗಿದ್ದಲ್ಲಿ ಆತನ ಇಡೀ ಜೀವಮಾನಕ್ಕೆ ಅಗತ್ಯವಾಗುವ ಆಮ್ಲಜನಕದ ಮೌಲ್ಯವೆಷ್ಟೆಂದು ಊಹಿಸಿ..!!
ಇಷ್ಟೊಂದು ಬೆಲೆಬಾಳುವ ಸಂಪತ್ತನ್ನು ಪ್ರಕೃತಿಮಾತೆ ಏನೇನೂ ಪ್ರತಿಫಲಾಪೇಕ್ಷೆಯಿಲ್ಲದೇ ಈಯುತ್ತಿದ್ದಾಳೆ.
ನಾವು ಮಾತ್ರ ಅವಿವೇಕಿಗಳಂತೆ ನಮ್ಮ ಇಹದಿರವಿನ ಇರುವಿಕೆಗೆ ಮೂಲಾಧಾರವಾದ ವೃಕ್ಷಸಂಪತ್ತನ್ನು ನಾಶಪಡಿಸುತ್ತಲೇ ಇದ್ದೇವೆ…

ಎಂಥ ನಷ್ಟ!
ಎಂಥ ನಷ್ಟವಿದು!

ನಮಗೆ ನಾವೇ ಮಾಡಿಕೊಳ್ಳುತ್ತಿರುವ ನಷ್ಟ!

(ಸಂಪಾದಿತ)

 

Facebook Comments Box