ಕೋಕಾ-ಕೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಒಂದು ಪುಟ್ಟ ಅರ್ಥಪೂರ್ಣ ಭಾಷಣ

ಬದುಕನ್ನು ಒಂದು ಚೆಂಡಾಟವೆಂದು ಭಾವಿಸೋಣ.
ನಿಮ್ಮ ಬಳಿ  ಕೆಲಸ, ಕುಟುಂಬ, ಆರೋಗ್ಯ, ಗೆಳೆಯರು ಮತ್ತು ಉತ್ಸಾಹ ಎಂಬ ೫ ಚೆಂಡುಗಳಿವೆ. ಈ ಎಲ್ಲಾ ಚಂಡುಗಳನ್ನು ಗಾಳಿಯಲ್ಲಿಯೇ ಹಾರಿಸುತ್ತ ಕೆಳಬೀಳದಂತೆ ಆಡುವುದೇ ಬದುಕು.
ಈ ಆಟದಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಕೆಲಸ ಎಂಬುದು ಒಂದು ರಬ್ಬರ್ರಿನ ಚೆಂಡು ಎಂದು. ನೀವು ಆಟದಲ್ಲಿ ಅಕಸ್ಮಾತ್ ಅದನ್ನು ಕೆಳಕೆಡವಿದರೂ ಅದು ಮತ್ತೆ ಪುಟನೆಗೆದು ಬರುತ್ತದೆ. ಆದರೆ, ಉಳಿದ ನಾಲ್ಕು ಚೆಂಡುಗಳು ಹಾಗಲ್ಲ..ಅವು ಗಾಜಿನ ಚೆಂಡುಗಳು! ಒಮ್ಮೆ ಕೈಜಾರಿತೆಂದರೆ ಅವುಗಳು ಮುಂದೆಂದೂ ಮೂಲರೂಪಕ್ಕೆ ಬರಲಾರವು. ಕುಳಿಬಿದ್ದೋ, ಗೀರಾಗಿಯೋ, ಸೀಳಾಗಿಯೋ ತಮ್ಮ ನಾಜೂಕು ಕಳೆದುಕೊಂಡುಬಿಡುತ್ತವೆ. ಕೆಲವೊಮ್ಮೆ ಒಡೆದುಹೋಗಿಯೂ ಬಿಡಬಹುದು. ನೀವಿದನ್ನು ಅರ್ಥಮಾಡಿಕೊಳ್ಳಬೇಕು… ಮತ್ತು ಅವುಗಳನ್ನು ಉಳಿಸಿಕೊಳ್ಳಲೆತ್ನಿಸಬೇಕು.
ಕೆಲಸದ ಸಮಯದಲ್ಲಿ ಶ್ರದ್ಧೆಯಿಂದ ದುಡಿಯಿರಿ. ಆದರೆ ಕೆಲಸದ ನಿಗದಿತ ಸಮಯವನ್ನು ಬಿಟ್ಟು ಉಳಿದ ಸಮಯವನ್ನು ನಿಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ , ಮತ್ತು ನಿಮ್ಮ ವಿರಾಮಕ್ಕೆ ಮೀಸಲಿಡಲು ಮರೆಯದಿರಿ

ಮೌಲ್ಯಕ್ಕೆ ಮೌಲ್ಯವಿರುವುದು ಆ ಮೌಲ್ಯದ ಮೌಲ್ಯಸಂದಾಗ
Source: Sri’s Collection

Facebook Comments