Author Admin@HareRaama.in

ಕೈರಂಗಳದ ಕದನವು ಪರಶುರಾಮನ ಪುನರವತರಣಕ್ಕೆ ಪೀಠಿಕೆಯೇ?

ಕೈರಂಗಳದ ಮಹಾಸಮರವು ಹಸುಗಳ್ಳರಿಗೆ ಮತ್ತು ಅವರ ಎಂಜಲಿನಲ್ಲಿ ಬದುಕುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೊಳಗಿದ ಎಚ್ಚರಿಕೆಯ ಮಹಾಘಂಟೆ! ಎಚ್ಚೆತ್ತುಕೊಳ್ಳದಿದ್ದರೆ, ಮತ್ತೊಮ್ಮೆ ಮರುಕಳಿಸುವ ಕೈರಂಗಳವು ಕಡಲತಡಿಯಲ್ಲಿ ಸಾವಿರಾರು ಭಾರ್ಗವರಾಮರನ್ನು ಸೃಜಿಸೀತು! ಅವರು ಬೀಸುವ ಕೊಡಲಿಗೆ ಮೇಲೇಳುವ ಸುನಾಮಿಯಲ್ಲಿ ದುಷ್ಟ ರಾಜಕಾರಣಿಗಳ ಕುಲವೇ ಕೊಚ್ಚಿಹೋದೀತು!
ಮುಂದೆ ಓದಿ >>

ಅವರನಿಗೆ ಲಭಿಸಿದ ವರ; ಅಮರರ ಸ್ಥಿತಿ ದುರ್ಭರ!

ಕಾಡ್ಗಿಚ್ಚಿನ ಗುಣ ಬೇರೆ; ಅದಕ್ಕೆ ಸುಡುವುದೊಂದೇ ಗೊತ್ತು! ಚಂದನವೂ ಅದಕ್ಕೆ ಇಂಧನವೇ! ಅಂತೆಯೇ ದುರ್ಜನರು; ಸತ್ಪುರುಷರನ್ನು ಕಾಡುವುದು ಅವರಿಗೆ ಜೀವನದ ವ್ರತ! ಚಂದನವನಕ್ಕೆ ಕಾಡ್ಗಿಚ್ಚು ಮಹಾಚಿತೆಯಾದರೆ, ದೇವತೆಗಳೆಂಬ ನಂದನವನಕ್ಕೆ ರಾವಣನೇ ಮಹಾಚಿಂತೆ! ಮುಂದೆ ಓದಿ >>

ಪ್ರಕಟಣೆ : ರಾಮರಶ್ಮಿ, ಲೋಕಲೇಖದ ದಿನಗಳಲ್ಲಿ ಬದಲಾವಣೆ

ಲೋಕಲೇಖ ಹಾಗೂ ರಾಮರಶ್ಮಿ – ಎರಡೂ ಬ್ಲಾಗ್ ಗಳು ಸರತಿಯಂತೆ ಭಾನುವಾರವೇ ಪ್ರಕಟಗೊಳ್ಳಲಿದೆ.
ಈ ಭಾನುವಾರ ರಾಮರಶ್ಮಿ, ಮುಂದಿನ ಭಾನುವಾರ ಲೋಕಲೇಖ – ಈ ರೀತಿ ಪ್ರಕಟಣೆಯು ನಡೆಯಲಿದೆ.

ದಾನದ ದಾರಿಯಲ್ಲಿ ದೇವದೇವನ ತಲುಪಿದನು ದಶರಥ!

ಯಾವ ಲೋಪವೂ ಇಲ್ಲದಂತೆ ಅಶ್ವಮೇಧ ಮಹಾಯಾಗದ – ಕುಟಿಲವಲ್ಲದ, ಆದರೆ ಅತಿಜಟಿಲವಾದ – ಪ್ರಕ್ರಿಯೆಗಳು ನೆರವೇರತೊಡಗಿದವು. ಮುಂದೆ ಓದಿ >>

ಕ್ರತುವಿನ ಕರೆ ಕರೆತಂದಿತು ಜಗವೆಲ್ಲವ ಜವದಿ!

ಓರ್ವ ಸೂರ್ಯನಿಂದ ಸಾಸಿರ ಸಾಸಿರ ಕಿರಣಗಳು ಹೊರಸೂಸುವಂತೆ ಪರಮದೇವನೋರ್ವನಿಂದ ಮೂವತ್ತಮೂರು ಕೋಟಿ ದೇವತೆಗಳು, ಸಂಖ್ಯೆಗೆ ಸಿಗದಷ್ಟು ಜೀವಗಳು ವಿಕಸಿತಗೊಂಡಿವೆ. ಲೋಕವೆಲ್ಲವೂ ಅವನ ಮನೆ; ಲೋಗರೆಲ್ಲರೂ ಅವನ ಮಕ್ಕಳು. ಮಹಾಯಾಗವೆಂದರೆ ಅಲ್ಲಿ ದೇವರೆಲ್ಲರಿಗೂ, ಜೀವರೆಲ್ಲರಿಗೂ ಆಹ್ವಾನವಿದೆ. ಏಕೆಂದರೆ ಅವರು ತೃಪ್ತರಾದರೆ ಅವನು ತೃಪ್ತನಾಗುವನು; ಜೀವರುಗಳು, ದೇವರುಗಳು ತೃಪ್ತರಾದರೆ ದೇವರದೇವನು ತೃಪ್ತನಾಗುವನು. ದೇವರುಗಳಿಗೆ ಯಾಗಮಧ್ಯದಲ್ಲಿ ಹವಿರ್ಭಾಗಕ್ಕಾಗಿ ಆಹ್ವಾನ, ಜೀವರುಗಳಿಗೆ… Continue Reading →

ಭಾರತೀಯರಿಗೆ ಗ್ರಹಣವು ಗೊತ್ತಿರಲಿಲ್ಲ ಎನ್ನುವವರಿಗೆ ಭಾರತೀಯತೆ ಗೊತ್ತಿಲ್ಲ!

1. ರಾಮನು ಸೀತೆಯ ಚಾರಿತ್ರ್ಯವನ್ನು ಶಂಕಿಸಿದ್ದನೇ? 2. ನಮ್ಮ ಪೂರ್ವಜರು ಗ್ರಹಣವನ್ನು “ಸೂರ್ಯ-ಚಂದ್ರರನ್ನು ರಾಹುವೆಂಬ ಹಾವು ನುಂಗುವುದು” ಎಂದು ತಪ್ಪು ತಿಳಿದಿದ್ದರೇ? ಮೇಲಿನ ಎರಡೂ ಪ್ರಶ್ನೆಗಳ ಉತ್ತರವು ಮಹಾಕವಿ ಕಾಳಿದಾಸನ ರಘುವಂಶ ಮಹಾಕಾವ್ಯದ ಒಂದೇ ಶ್ಲೋಕದಲ್ಲಿದೆ. ಸಂದರ್ಭ: ಸೀತೆಯ ಚಾರಿತ್ರ್ಯದ ಕುರಿತು ಜನರು ಅಯೋಧ್ಯೆಯ ಬೀದಿ-ಬೀದಿಗಳಲ್ಲಿ ಆಡಿಕೊಳ್ಳುತ್ತಿದ್ದಾರೆ ಎಂಬ ಅಪ್ರಿಯ ವಾರ್ತೆಯು ಚಾರನ ಮೂಲಕ ರಾಮನಿಗೆ… Continue Reading →

ಅಂಗದಿಂದ ಬಂದವನು ಅಯೋಧ್ಯೆಯ‌ ಅಂತರಂಗದೊಳಹೊಕ್ಕನೇ!?

ನೀಲ ಕೇಶರಾಶಿಯ ನಡುವೆ ಎಲ್ಲಿಯೋ ಮರೆಯಾಗಿ ಮಲಗಿರುವ ಒಂದೇ ಒಂದು ಬೆಳ್ಳಿ ಕೂದಲಿನೆಳೆಯು ದರ್ಪಣದ ಮುಂದೆ ನಿಂತಾಗ ಎದ್ದು ಬಂದಂತೆ, ನಡುನೆತ್ತಿಯನೇರಿ ನೇಸರನೆಸೆಯುವ ಬೆಳಕಿನ ಬಳ್ಳಿಗಳ ಕ್ಷಣ ಮಸುಕಾಗಿಸುವ ಕಿರು-ಕರಿಮೋಡದಂತೆ, ಅಂಗದಿಂದ ಅಯೋಧ್ಯೆಗೆ ಹೊರಟು ನಿಂತ ದಶರಥನಂತರಂಗದಾಳದಲ್ಲಿ ಕಾರ್ಯಸಿದ್ಧಿಯ ಮಹಾನಂದದ ಮಧ್ಯೆಯೂ ಕ್ಷಣ ಹಣಿಕಿತು ಪ್ರಿಯವಿರಹದ ವಿಷಾದದೆಳೆಯೊಂದು. ಬಹುದಿನಗಳ ಬಳಿಕ, ಕೆಲದಿನಗಳಷ್ಟೇ ಲಭಿಸಿದ ಅಂತರಂಗಸಖನಾದ ಅಂಗರಾಜನ… Continue Reading →

ಕೊಡುವಲ್ಲಿ ತಡವಿಲ್ಲ; ಆದರೆ ಕೇಳಲು ಬಾಯಿಯೇ ಇಲ್ಲ!

ಅಮೃತ ಬರುವವರೆಗೆ ಮಥನ ಅನಿವಾರ್ಯ; ಮಥನದ ಕೊನೆಯಲ್ಲಿ ಅಮೃತ ಬರುವುದೂ ಅವಶ್ಯಂಭಾವೀ*! ಮಕ್ಕಳಿಲ್ಲದ ತನಗೆ ಮಕ್ಕಳನ್ನು ಕರುಣಿಸಬಲ್ಲ ಕರುಣಾಳು ಕಣ್ಮುಂದೆಯೇ ಇದ್ದರೂ… ಆ ಕಾರ್ಯಕ್ಕೆ ಮುನಿಯನ್ನು ಒಡಂಬಡಿಸಬಲ್ಲ ರೋಮಪಾದನು ತನಗೆ ಪ್ರಾಣಮಿತ್ರನೇ ಆಗಿದ್ದರೂ… ಕೇಳಬೇಕಾದುದನ್ನು ಕೇಳಲಾರದೆ ತಳಮಳಿಸುತ್ತಿದ್ದ ದಶರಥನಿಗೆ ಕೊನೆಗೂ ಕೇಳಲೇಬೇಕಾದ ಹೊತ್ತು ಬಂದಿತ್ತು. ಅಂಗರಾಜನನ್ನು ಬೀಳ್ಕೊಟ್ಟು ಅಯೋಧ್ಯೆಗೆ ಹೊರಡಲೇಬೇಕಾದ ಸನ್ನಿವೇಶ ಕಣ್ಮುಂದಿತ್ತು. ಕೊನೆಗೂ ಮಥನವು… Continue Reading →

ಹೇ ರಾಮ್! ವರ್ಷಾರಂಭವನ್ನು ಮದ್ಯಪಾನ-ಮಾನಹರಣಗಳ ಮೂಲಕ ಆಚರಿಸುವುದೇ!?

ಭಾರತದಲ್ಲಿಯೇ ಭಾರತೀಯ ಕಾಲಗಣನೆಯ ಅವಗಣನೆಯನ್ನು ಎದುರಿಸಿ, ಭಾರತೀಯರೆಲ್ಲರೂ ಎಚ್ಚೆತ್ತು, ಕೆಚ್ಚೆದೆಯಿಂದ ಹೋರಾಡೋಣ.
ನಮ್ಮ ನವವರ್ಷಾಚರಣೆಯು ಯುಗಾದಿಯಂದು;
ಅಲ್ಲಿರುವುದು ಬೇವು-ಬೆಲ್ಲ; ಮದ್ಯ-ಮಾಂಸ ಇಲ್ಲವೇ ಇಲ್ಲ! ಮುಂದೆ ಓದಿ >>

ಮಾತ್ಸರ್ಯಮುಕ್ತಿಯೇ ಮುಕ್ತಿ!

ಪತಿಯು ಇನ್ನೊಂದು ಮದುವೆಯಾಗುವೆನೆಂದರೆ ಅದಕ್ಕೆ ಧರ್ಮಪತ್ನಿಯ ಪ್ರತಿಕ್ರಿಯೆ ಹೇಗಿದ್ದೀತು? ಶಿಷ್ಯನು ಬೇರೋರ್ವ ಗುರುಗಳನ್ನು ಆಶ್ರಯಿಸುವೆನೆಂದರೆ ಅದಕ್ಕೆ ಬಹ್ವಂಶ ಕುಲಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇದ್ದೀತು! ಆದರೆ ವಸಿಷ್ಠರು ಎಲ್ಲರಂತಲ್ಲವಲ್ಲವೇ! ಮನುಷ್ಯರಲ್ಲಿಯೇ ಗುರುವು ಶ್ರೇಷ್ಠ; ಗುರುಗಳಲ್ಲಿ ವಸಿಷ್ಠರು ಸರ್ವಶ್ರೇಷ್ಠ! ಮಾನವತೆಯ ಮಹಾಮೇರು ಅವರು; ನಿಜವಾದ ಗುರು ಅವರು. ಕೋ ಗುರುಃ? ಯಾರು ನಿಜವಾದ ಗುರು? =ಅಧಿಗತತತ್ತ್ವಃ!  ತತ್ತ್ವವನ್ನು- ತಥ್ಯವನ್ನು ಚೆನ್ನಾಗಿ… Continue Reading →

« Older posts

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑