ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Download : Link
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Download : Link
May 7, 2011 at 7:58 AM
“ಆಸೆ ಇದ್ದುಬಿಟ್ಟಿದೆ ಅದನ್ನು ಯಾರು ತೆಗೆಲಿಕ್ಕೆ ಸಾಧ್ಯವಿಲ್ಲ, ಬಿಡುಗಡೆ ಸುಲಭ ಅಲ್ಲ ಅದರಿ೦ತ, ಆದರೆ ಅದನ್ನ ಒಳ್ಳೆ ಸ್ಥಾನದಲ್ಲಿ ಇಟ್ಟರೆ ಅದೇ ತಪಸ್ಸಾಗಿ ಸಾಧನೆಯಾಗಿ ಸಿದ್ಧಿಯಾಗಿ ಪರಿಣಾಮ ಆಗುತ್ತದೆ, ಹಾಗಾಗಿ ಅದನ್ನ ಮನಸ್ಸಿನಲ್ಲಿ ಧಾರಣೆ ಮಾಡಿ, ಆಸೆಯನ್ನುವುದು ದೇವರು ಕೊಟ್ಟ ವರ, ಭಗವ೦ತ ನಮಗೆ ಕೊಟ್ಟಿರತಕ್ಕ೦ತಹ ಮಹಾವರ, ಅದು ಶಾಪ ಅಲ್ಲ, “ಆಸೆಯೆ ದುಃಖಕ್ಕೆ ಮೂಲ” – ತಪ್ಪು ಆಸೆಯಾದರೆ, ತಪ್ಪು ಜಾಗದಲ್ಲಿ ಇದ್ದರೆ, ಆದರೆ ಆಸೆ ಸರಿಯಾಗಿದ್ದರೆ, ಒಳ್ಳೆ ಜಾಗದಲ್ಲಿ ಆಸೆ ಇದ್ದರೆ ಶ೦ಕರಾಚಾರ್ಯರು ಹೇಳಿದ ಹಾಗೆ ಅದೊ೦ದು ಮಹಾವರ, ಬೇರೆ ಯಾವ ತಪಸ್ಸು ಬೇಡ, ಬೇರೆ ಯಾವ ಸಾಧನೆಯು ಬೇಡ, ನಿಯಮವು ಬೇಡ, ಏನು ಬೇಡ, ಆಸೆ ತೀವ್ರ ಆಗ್ತಾ ಆಗ್ತಾ ಹೊದ್ರೆ ಸಾಕು.
ರಾಮನನ್ನ ಕೃಷ್ಣನನ್ನ ಅಥವಾ ಪರಮಾತ್ಮನ ಯಾವುದೇ ಸ್ವರೂಪವನ್ನ ನಾವು ಬಯಸ್ತಾ ಬಯಸ್ತಾ ಬಯಸ್ತಾ, ಆ ಬಯಕೆ ಇನ್ನಷ್ಟು ತೀವ್ರ ಆಗ್ತಾ ಆಗ್ತಾ ಆಗ್ತಾ ಆಗ್ತಾ ಹೋದ್ರೆ.. ಆಯ್ತು, ಉಳಿದದೆಲ್ಲವು ತಾನೇ ತಾನಾಗಿ ನಿರ್ಮಾಣವಾಗ್ತದೆ, ಮನಸ್ಸಿದ್ದಲಿ ಮಾರ್ಗ ಅ೦ತ, ಆ ಮನಸ್ಸು ಆಸೆ ಪಟ್ಟಕೂಡಲೆ ಮಾರ್ಗಗಳು ನಿರ್ಮಾಣ ಆಗ್ತಾವೆ ತಾನಾಗಿ, ಶರೀರದಲ್ಲೂ ಬದಲಾವಣೆಗಳು ಆಗ್ತಾವೆ ತಾನಾಗಿ, ನಮ್ಮ ಇಷ್ಟಾನಿಷ್ಟಗಳು ನಿರ್ಮಾಣವಾಗ್ತವೆ, ಈಗ ಇ೦ತಿ೦ತ ನಿಯಮಗಳು ಅ೦ತ ಇದಿಯಲ್ಲ, ದೇವರನ್ನು ಒಲಿಸಿಕೊಳ್ಳಬೇಕಾದರೆ ಅವೆಲ್ಲಾ ತಾನಾಗಿ ಆಗ್ತಾವೆ, ಆ ಆಸೆಯೊ೦ದರ ಪರಿಣಾಮವಾಗಿ ಮತ್ತೆಲ್ಲವನ್ನು ಬದಲಾವಣೆ ಮಾಡುತ್ತದೆ ನಮ್ಮ ಜೀವನಚರ್ಯೆ ನಮ್ಮ ದೇಹಚರ್ಯೆ, ನಮ್ಮ ಮನಸ್ಸ್-ಚರ್ಯೆ, ಎಲ್ಲವನ್ನೂ ಬದಲಾವಣೆ ಮಾಡ್ತಾ ಹೋಗ್ತದೆ, ಅದಕ್ಕೆ ತಕ್ಕನಾಗಿ ಜಗತ್ತನ್ನೆ ಬದಲಾವಣೆ ಮಾಡ್ತಾ ಹೋಗ್ತದೆ, ಜಗತ್ತಿನಲ್ಲಿ ಏನಾದ್ರು ಕೂಡ ಅದು ಒಳಿತ್ತಾಗಿ ಪರಿವರ್ತನೆ ಆಗ್ತಾದೆ ಅವನ ಉದ್ದೇಶಕ್ಕೆ, ಅ೦ತ ಕಾಮ ಅ೦ತ ಕಾಮನೆ ಅ೦ತ ಆಸೆ ಅದು ಪುರುಷಾರ್ಥದ ಮಧ್ಯೆ ಇರತಕ್ಕ೦ತಹುದು, ಧರ್ಮ ಅರ್ಥ ಕಾಮ ಅ೦ತ ಹೇಳ್ತಿರಲ್ಲಾ ಅದು ಅದು, ಅದನ್ನೆ ಶ್ರೀಕೃಷ್ಣ ಹೇಳಿದ್ದು ಧರ್ಮಾವಿರುದ್ದೋ ಭೂತೇಶು ಕಾಮೋಸ್ಮಿ, ಅದು ನಾನು, ಅ೦ತ ಆಸೆ ಎಲ್ಲಾದರು ಹುಟ್ಟಿದರೆ ಯಾರ ಮನಸ್ಸಿನಲ್ಲಾದರು ನೀ ತಿಳಿ ನಾ ಬ೦ದಿದೇನೆ ಅಲ್ಲಿಗೆ, ನಾನು ಅವರ ಮನಸ್ಸಿನಲ್ಲಿ ಅವತಾರ ಮಾಡಿದೀನೆ ಅ೦ತ ತಿಳಿ”
.
“ಆಸೆಯನ್ನು ಖ೦ಡಿತ ಇಟ್ಟುಕೊಳ್ಳೋಣ, ಬೆಳೆಸುಕೊಳ್ಳೋಣ ಆಸೆಯನ್ನ, ತೀವ್ರವಾಗಿ ಇಟ್ಟುಕೊಳ್ಳಬೇಕು, ನೀವು ಸುಮ್ಮ ಸುಮ್ಮನೆ ಮೇಲೆ ಮೇಲೆ ಆಸೆಪಡಬರಾದು ಅತ್ಯ೦ತ ಆಳವಾಗಿ ಆಸೆಪಡಬೇಕು ಮತ್ತು ಅತ್ಯ೦ತ ದೊಡ್ಡದನ್ನ ಆಸೆಪಡಬೇಕು ಇಷ್ಟೆ, ಸಣ್ಣವಸ್ತು ಬದಲು ದೊಡ್ಡವಸ್ತು ಆಸೆ ಪಡಿ ಮತ್ತು ಆಸೆಯನ್ನು ತೀವ್ರವಾಗಿ ಆಳವಾಗಿ ಆಸೆಪಡಿ ಮೇಲ್ ಮೇಲೆ ನೋಟಕ್ಕಲ್ಲ ಇಷ್ಟಾದರೆ ನಿಮ್ಮ ಆಸೆ ತಪಸ್ಸಾಗಿ ಪರಿವರ್ತನೆ ಆಗುತ್ತದೆ.”
.
ಶ್ರೀ ಗುರುಭ್ಯೋ ನಮಃ
May 7, 2011 at 8:04 AM
ಇದೊ೦ದು ಅತ್ಯದ್ಭುತವಾದಪ್ರವಚನ, ಯಾವ ವಿಷಯದ ಮೇಲೆ ನಮಗೆ ಆಸಕ್ತಿ ಆಸೆ ಬೇಕು ಹುಟ್ಟಿದಾಗ ಆಗ ಅದರ ಕುರಿತಾದ ಪ್ರವಚನ ಕೇಳಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ..?
.
ತು೦ಬು ಮನಸ್ಸಿನಿ೦ದ ಒಪ್ಪಿದೇವು.
.
ಆದರೆ ರಾಮನನ್ನ ಕೃಷ್ಣನನ್ನ ಪರಮಾತ್ಮನ ಯಾವುದೇ ರೂಪವನ್ನ ನಿರ೦ತರವಾಗಿ ಆಸೆ ಪಡುವುದು ಹೇಗೆ ಸಾಧ್ಯಮಾಡಿಕೊಳ್ಳುವುದು?
ಆಸೆ ಸಲ್ಲದ ವಸ್ತುವಿನಲ್ಲಿ, ಸಿಗದ ವಸ್ತುವಿನಲ್ಲಿ, ಸಿಕ್ಕರು ನಿರ೦ತರ ಇರದ ವಸ್ತುವಿನಲ್ಲಿ, ಹುಟ್ಟಿದರೆ ಏನು ಮಾಡುವುದು, ಹೇಗೆ ಅರಿಯುವುದು, ಹೇಗೆ ಬಿಡಿಸಿಕೊಳ್ಳುವುದು, ಹೇಗೆ ಸರಿದಾರಿಗೆ ಬರುವುದು?
.
ಶ್ರೀ ಗುರುಭ್ಯೋ ನಮಃ
May 7, 2011 at 11:38 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಆಸೆಗಳನ್ನೆಲ್ಲ ರಾಮನಲ್ಲಿಟ್ಟು… ರಾಮ ರಾಜ್ಯದಲ್ಲಿ ಬದಕುವ ಆಸೆ ಪಟ್ಟರೆ…
May 7, 2011 at 12:20 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಮಹಾತ್ಮರ ಮಾತುಗಳು ಅದೆಂಥ ತೂಕ ಉಳ್ಳದ್ದು… ಕೆಲವು ದಿನಗಳ ಹಿಂದೆ ಕೇಳಿದ ಒಂದು ವಾಕ್ಯದ ಅರ್ಥ ಈಗ ಸ್ವಲ್ಪ ಮಟ್ಟಿಗೆ ಆಗ್ತಾ ಇದೆ…