Album: Bhaja Govindam । ಭಜ ಗೋವಿಂದಂ
Composer: Sri Adi Shankaracharya । ಶ್ರೀ ಆದಿ ಶಂಕರಾಚಾರ್ಯರು
Bhajan By: Shri Chandrashekhara Kedilaya and Others
Play:
~*~
Bhaja Govindam – Text:
ಭಜ ಗೋವಿಂದಮ್
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||
ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ಈ ‘ಡುಕುರುಞ್ ಕರಣೇ’ ನಿನ್ನನ್ನು ಎಂದಿಗೂ ರಕ್ಷಿಸುವುದಿಲ್ಲ.
ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||
ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.
ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ.
ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.
ನಾರೀ ಸ್ತನಭರನಾಭೀದೇಶಂ
ದೃಷ್ಟ್ವಾಮಾ ಗಾ ಮೋಹಾವೇಶಮ್|
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||3||
ಸ್ತೀಯರ ಸ್ತನಗಳನ್ನು ನಾಭಿ ಪ್ರದೇಶವನ್ನು ನೋಡಿ ಮೋಹಾವಿಷ್ಟನಾಗಬೇಡ.
ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ಗುಣಿಸಿ ನೋಡು.
ನಲಿನೀದಲಗತಜಲಮತಿತರಲಂ
ತದ್ವಜ್ಜೀವಿತಮತಿಶಯಚಪಲಮ್|
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||4||
ತಾವರೆಗಿಡದ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹುಬೇಗನೆ ಜಾರುತ್ತದೆ.
ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ.ಯಾವ ಕ್ಷಣದಲ್ಲಾದರೂ ಜಾರಿ ಹೋಗಬಹುದು.
ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.
ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ|
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||
ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ.
ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.
ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ|
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||
ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸಬಹುದು.
ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ.
ಬಾಲಸ್ತಾವತ್ಕ್ರೀಡಾಸಕ್ತ-
ಸ್ತರುಣಸ್ತಾವತ್ತರುಣೀಸಕ್ತಃ|
ವೃದ್ಧಸ್ತಾವತ್ಚಿಂತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||
ಹುಡುಗನಿಗಾದರೋ ಆಟದಲ್ಲಿ ಆಸಕ್ತಿ.
ಯುವಕನಿಗೆ ತರುಣಿಯರಲ್ಲಿ ಆಸಕ್ತಿ.ಮುದುಕನು ಯಾವುದೋ ಒಂದು ಚಿಂತೆಯಲ್ಲಿ ಮುಳುಗಿರುತ್ತಾನೆ.
ಏವಂಚ ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ!
ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ|
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||
ಈ ಸಂಸಾರವು ಅತೀವ ವಿಚಿತ್ರವಾದದ್ದು.ನಿನ್ನ ಕಾಂತೆ ಎಂದುಕೊಳ್ಳುವೆಯಲ್ಲ, ಅವಳು ಯಾರು?
ನನ್ನ ಪುತ್ರ ಎಂದುಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ?
ಎಲೈ ಸೋದರನೇ. ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.
ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||
ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ.
ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ.
ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತವಾಯಿತೆಂದು ತಿಳಿಯಬೇಕು.
ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ|
ಕ್ಷೀಣೇ ವಿತ್ತೇ ಕಃ ಪರಿವಾರೋ
ಜ್ಞಾತೇ ತತ್ತ್ವೇ ಕಃ ಸಂಸಾರಃ ||10||
ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರವೆಲ್ಲಿರುತ್ತದೆ?
ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು?
ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರವೆಲ್ಲಿರುತ್ತದೆ?
ತತ್ತ್ವಜ್ಞಾನವಾದಾಗ ಈ ಸಂಸಾರ ಎಲ್ಲಿದ್ದೀತು?
ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್|
ಮಾಯಾಮಯಮಿದಮಖಿಲಂ ಮತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||
ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವಪಡಬೇಡ.
ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡಬಲ್ಲದು.
ಇದೆಲ್ಲವೂ ಮಾಯಾ ಕಲ್ಪಿತವಾದದ್ದು (ವಸ್ತುತಃ ಇಲ್ಲ) ಎಂದು ನಿಶ್ಚಯಿಸಿ, (ಶಾಶ್ವತವಾದ) ಬ್ರಹ್ಮವೆಂದರೇನೆಂಬುದನ್ನರಿತು ಅದರಲ್ಲಿ ಸೇರಿಕೋ.
ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ|
ಕಾಲಃಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮುಂಚತ್ಯಾಶಾವಯುಃ ||12||
ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತದೆ, ಹೋಗುತ್ತವೆ, ಇದು ಕಾಲಪುರುಷನ ಒಂದು ಆಟ.
ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ.
ಇದೆಲ್ಲ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.
ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ|
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||13||
ಎಲೈ ವಾತರೋಗಿ! ನಿನಗೆ ಪ್ರಿಯಳಾದ ಮಡದಿ ಯಾರು? ಏನು ಮಾಡಿಯಾಳು? ಇನ್ನೂ ಹಣದ ಆಸೆ ಏಕೆ?
ನಿನಗೆ ಬುದ್ದಿ ಹೇಳು ದಾರಿ ತೋರಿಸತಕ್ಕವರಿಲ್ಲವೇನು?
ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗವೆಂಬುದೊಂದೇ ಸಂಸಾರಸಾಗರವನ್ನುದಾಟಿಸಬಲ್ಲ ದೋಣಿಯಾಗಿರುತ್ತದೆ.
ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ|
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||14||
ಒಬ್ಬನು ಜಟೆಬಿಟ್ಟವನು, ಇನ್ನೊಬ್ಬನು ತಲೆಬೋಳಿಸಿಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತುಹಾಕಿಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿಕೊಂಡವನು.
ಕಣ್ಣಿಂದ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.
ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಮ್|
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾಪಿಂಡಮ್||15||
ವಯಸ್ಸಾದ ಮೇಲೆ ಅವಯವವು ಬಲಹೀನವಾಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗಿರುತ್ತವೆ.ಇಷ್ಟಾದರೂ ಮುದುಕನು ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ.
ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.
ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ|
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ ||16||
ಛಳಿಯನ್ನು ತಡೆಯಲಾರದೆ ಎದುರಿಗೆ ಬೆಂಕಿಯನ್ನು ಹಾಕಿಕೊಂಡು ಮೈಯನ್ನು ಕಾಯಿಸುತ್ತಾನೆ.
ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷಾಪಾತ್ರೆಯೂ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ.
ಮರದ ಬುಡದಲ್ಲಿ ಮಲಗುತ್ತಾನೆ.ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲವಲ್ಲ!
ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್|
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮಶತೇನ||17||
ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ!
ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ.
ಆದರೆ ಆತ್ಮಜ್ಞಾನವಿಲ್ಲದ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷವು ಸಿಗುವುದಿಲ್ಲ.
ಜ್ಞಾನ ಒಂದೇ ಮೋಕ್ಷಕ್ಕೆ ಸಾಧನ.ಇದು ಎಲ್ಲ ಉಪನಿಷತ್ತುಗಳ ಸಿದ್ಧಾಂತ.
ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ|
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ ||18||
ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಕೃಷ್ಣಾಜಿನವನ್ನು ಹೊದ್ದುಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ.
ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||19||
ಒಬ್ಬನು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗರಹಿತನಾಗಿರಲಿ.
ಯಾವಾತನ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆತನು ಆನಂದದಲ್ಲಿ ಮುಳುಗುತ್ತಾನೆ.
ಆನಂದದಲ್ಲಿರುತ್ತಾನೆ, ಆನಂದಿಸುತ್ತಲೇ ಇರುತ್ತಾನೆ, ಇದು ನಿಶ್ಚಿತ.
ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ|
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||
ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು.
ಶ್ರೀಮನ್ನಾರಾಯಣನನ್ನು ಒಂದು ಸಲ ಪೂಜಿಸಿದರೂ ಸಾಕು, ಆತನ ವಿಷಯದಲ್ಲಿ ಯಮನು ಯಾವ ಚರ್ಚೆಯನ್ನೂ ಮಾಡುವುದಿಲ್ಲ. (ಯಮನಿಂದ ಅವನಿಗೆ ಯಾವ ಬಾಧೆಯೂ ಇರುವುದಿಲ್ಲ).
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||
ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ.
ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.
ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||
ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು.
ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನದ ವಿಚಾರವೇ ಎಂದು ತಿಳಿದು ದೂರವಿಟ್ಟು ಪರ್ಯಾಲೋಚಿಸು.
ರಥ್ಯಾಕರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ|
ಯೋಗೀ ಯೋಗನಿಯೋಜಿತ ಚಿತ್ತೋ
ರಮತೇ ಬಾಲೋನ್ಮತ್ತವದೇವ ||23||
ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿಕೊಳ್ಳುತ್ತಾನೆ.
ಪಾಪ-ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ.
ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದುಕೊಳ್ಳುತ್ತಾನೆ.
ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||
ನಿನ್ನಲ್ಲಿ ನನ್ನಲ್ಲಿ ಅನ್ಯತ್ರ ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ.
ಸಹನೆಯನ್ನು ಕಳೆದಕೊಂಡು ವ್ಯರ್ಥವಾಗಿ ನನ್ನ ಮೇಲೇಕೆ ಕೋಪಿಸಿಕೊಳ್ಳುತ್ತೀಯೆ.
ಎಲೈ ಮಾನವ, ಶೀಘ್ರವಾಗಿ ನೀನೇ ವಿಷ್ಣುವಾಗಬೇಕೆಂಬ ಬಯಕೆ ಇದ್ದರೆ, ಸರ್ವತ್ರ ವಿಷ್ಣು ಒಬ್ಬನೇ ಇದ್ದಾನೆಂದು ತಿಳಿದು ಸಮಚಿತ್ತನಾಗು.
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ|
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||25||
ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸಬೇಡ.
ಎಲ್ಲದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ.
ಸರ್ವ ವಸ್ತುಗಳಲ್ಲಿಯೂ ಭೇದ ಬುದ್ಧಿಯನ್ನು ತೊಡೆದು ಹಾಕು.
ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||26||
ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ.
ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.
ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿರೂಪಮಜಸ್ರಮ್|
ನೇಯಂ ಸಜ್ಜನಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ ||27||
ಭಗವದ್ಗೀತೆಯನ್ನು, ಭಗವಂತನ ಸಹಸ್ರನಾಮಗಳನ್ನು ಹಾಡಿ ಪಾರಾಯಣ ಮಾಡುತ್ತಿರಬೇಕು.
ಶ್ರೀಹರಿಯ ದಿವ್ಯರೂಪವನ್ನು ಸತತವೂ ಧ್ಯಾನಿಸುತ್ತಿರಬೇಕು.
ಸಜ್ಜನರ ಸಹವಾಸದಲ್ಲಿರುವಂತೆ ಮನಸ್ಸನ್ನು ಪ್ರೇರಿಸಬೇಕು.ದೀನ ಜನರಿಗೆ ಹಣದ ಸಹಾಯವನ್ನು ಮಾಡಬೇಕು.
ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖಲೇಶಃ ಸತ್ಯಮ್|
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||28||
ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ.
ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.
ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.
ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಮ್|
ಜಾಪ್ಯಸಮೇತ ಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||29||
ಪ್ರಾಣಾಯಾಮ, ಪ್ರತ್ಯಾಹಾರ, ಜಪ, ಸಮಾಧಿ ಇವುಗಳನ್ನು ಮಾಡು.
ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸು.
ಮಹಾತ್ಮರು ಆದರಿಸಿದ ಪೂರ್ವಚರಿತೆ ಇದು.
ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ|
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ ||30||
ಜನರು ಸುಖಕ್ಕಾಗಿ ವೇಶ್ಯಾ ಸಹವಾಸವನ್ನೂ ಮಾಡುತ್ತಾರೆ.
ಅಯ್ಯೋ! ಆಮೇಲೆ ಶರೀರ ರೋಗದ ಗೂಡಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಮರಣವೇ ಗತಿ.
ಆದರೂ ಪಾಪಾಚರಣೆಯನ್ನು ಬಿಡುವುದಿಲ್ಲ.
ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ|
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್ ||31||
ಶ್ರೀಗುರುಚರಣಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು.
ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು.
ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತೀಯೆ.
ಭಜಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ ||
||ಇತಿ ಶ್ರೀಮಜ್ಜಗದ್ಗುರುಶಂಕರಾಚಾರ್ಯವಿರಚಿತಂ ಭಜಗೋವಿಂದಸ್ತೋತ್ರಂ ಸಂಪೂರ್ಣಮ್||
ಅನುವಾದ ಕೃಪೆ: ಶ್ರೀಭಾರತೀಪ್ರಕಾಶನ
January 7, 2014 at 4:03 PM
very good audio. hare raama
please upload “devi aparadha kshamapana sthotra”.
January 7, 2014 at 9:54 PM
ರಾಗ ಚನ್ನಾಗಿ ಬ೦ದಿದೆ.. ಇದರ ಗನ್ನಡ ಭಾವಾನುವಾದ ಕೊಟ್ಟಿದ್ದರೆ ಅರ್ಥ ಆಗುತ್ತಿತು.. ದಯಮಾಡಿ ಶ್ಳೋಕ ಹಾಗು ಕನ್ನಡ ಅನುವಾದ ಹಾಕಿ.. ನಾವು download ಮಾಡಿ print out ತೆಗಿಯುವ೦ತಿದ್ದರೆ ನಮ್ಮ ವಲಯದ ಸದಸ್ಯರಿಗೆ ಹ೦ಚಲು ಅನುಕೂಲ ಆಗುತ್ತಿತು..ಹರೇರಾಮ..
January 8, 2014 at 8:01 PM
Srimad Adi Shankaracharya Bhagavadpada has composed the Bhaja Govindam during his famous pilgrimage to Kashi (Benares). The fourteen disciples are said to have accompanied him. The story goes that when he was walking along the streets of Kashi, he was pained to observe an elderly man trying hard to learn Sanskrit grammar. At his advanced age, the remaining valuable little time of his life should have been used for worshipping the God, instead of wasting on learning a language. This prompted Sri Sankara to burst out this composition, a sort of rebuke to foolish way of living.
The Acharya urges the man to turn towards God and sing His glory instead of wasting on mundane things. A censure is implied when the Acharya calls the man a fool (Moodhamathe). It may be added here that the tone of Bhajagovindam is somewhat striking, in spite of its exotic poetic beauty and perfection of composition. This is no wonder, because such a treatment is required to wake up man from his slumber. A milder approach would delay the matter. The matter is urgent, as the Acharya explains in the next verse, for, when the hour of death approaches without any forewarning, the hard-learned verses of grammar are not going to save the poor soul.
Gopala Krishna M N
Vijanagar,Bangalore.
January 8, 2014 at 8:23 PM
The Bhajagovinam bhajan, it contains the essence of vedanta and implores the man to think, “Why am I here in this life ? Why am I amassing wealth, family, but have no peace ? What is the Truth ? What is the purpose of life ? The person thus awakened gets set on a path to the inner road of Self realisation.
Anyone who listens to the music of Bhaja govindam is attracted to it . However, the significance of the text goes much deeper and contains a well defined philosophy of attaining salvation (Moksha) by taking shelter of Govinda / Krishna.
May the acharaya guide us from ignorance to truth . .
Gopala Krishna M N
Vijayanagar,Bangalore.
January 8, 2014 at 8:59 PM
hare raama…. tumba chennaagide…
January 8, 2014 at 9:00 PM
hareraama.
bhajagovindam keli shaleya dinagalu nenapige bandavu. kilingaru keshava mashtru nanna gurugalu taragathiyalli haduthiddaru mathu arthavannu heli vivarisuthiddaru.
kannadadalli bhajagovindam anuvada padyagalanna shrigurugala karyakramadalli belthangadiyalli keliddene. shrigurugalu hadidavara bagge mechuge vyakthapadisiddare. anuvada padyagalanna harerama.in nalli kottare yellarigu arthavagalu sulabha. dayamadi sangrahisi kodi.
hareraama.
January 8, 2014 at 9:19 PM
ಹರೇರಾಮ
January 8, 2014 at 10:47 PM
ರಚನ: ಆದಿ ಶಂಕರಾಚಾರ್ಯ
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕ್ರಿಂಕರಣೇ || 1 ||
Worship Govinda, Worship Govinda, Worship Govinda. Oh fool! Rules of Grammar will not save you at the time of your death
ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಮ್ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜ ಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ || 2 ||
Oh fool ! Give up your thirst to amass wealth, devote your mind to thoughts to the Real. Be content with what comes through actions already performed in the past.
ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯಾ ವಾರಂ ವಾರಮ್ || 3 ||
Do not get drowned in delusion by going wild with passions and lust by seeing a woman’s navel and chest. These are nothing but a modification of flesh. Do not fail to remember this again and again in your mind.
ನಳಿನೀ ದಳಗತ ಜಲಮತಿ ತರಳಂ
ತದ್ವಜ್ಜೀವಿತ ಮತಿಶಯ ಚಪಲಮ್ |
ವಿದ್ಧಿ ವ್ಯಾಧ್ಯಭಿಮಾನ ಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ || 4 ||
The life of a man is as uncertain as rain drops trembling on a lotus leaf. Know that the whole world remains a prey to disease, ego and grief.
ಯಾವದ್-ವಿತ್ತೋಪಾರ್ಜನ ಸಕ್ತಃ
ತಾವನ್-ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರ ದೇಹೇ
ವಾರ್ತಾಂ ಕೋஉಪಿ ನ ಪೃಚ್ಛತಿ ಗೇಹೇ || 5 ||
So long as a man is fit and able to support his family, see the affection all those around him show. But no one at home cares to even have a word with him when his body totters due to old age.
ಯಾವತ್-ಪವನೋ ನಿವಸತಿ ದೇಹೇ
ತಾವತ್-ಪೃಚ್ಛತಿ ಕುಶಲಂ ಗೇಹೇ |
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ || 6 ||
When one is alive, his family members enquire kindly about his welfare. But when the soul departs from the body, even his wife runs away in fear of the corpse.
ಬಾಲ ಸ್ತಾವತ್ ಕ್ರೀಡಾಸಕ್ತಃ
ತರುಣ ಸ್ತಾವತ್ ತರುಣೀಸಕ್ತಃ |
ವೃದ್ಧ ಸ್ತಾವತ್-ಚಿಂತಾಮಗ್ನಃ
ಪರಮೇ ಬ್ರಹ್ಮಣಿ ಕೋஉಪಿ ನ ಲಗ್ನಃ || 7 ||
The childhood is lost by attachment to playfulness. Youth is lost by attachment to woman. Old age passes away by thinking over many past things. But there is hardly anyone who wants to be lost in parabrahmam.
ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋஉಯಮತೀವ ವಿಚಿತ್ರಃ |
ಕಸ್ಯ ತ್ವಂ ವಾ ಕುತ ಆಯಾತಃ
ತತ್ವಂ ಚಿಂತಯ ತದಿಹ ಭ್ರಾತಃ || 8 ||
Who is your wife ? Who is your son ? Strange is this samsara. Of whom are you ? From where have you come ? Brother, ponder over these truths here.
ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್ |
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ || 9 ||
From Satsangh comes non-attachment, from non-attachment comes freedom from delusion, which leads to self-settledness. From self-settledness comes Jeevan Mukti(Salvation)
ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ |
ಕ್ಷೀಣೇ ವಿತ್ತೇ ಕಃ ಪರಿವಾರಃ
ಙ್ಞಾತೇ ತತ್ತ್ವೇ ಕಃ ಸಂಸಾರಃ || 10 ||
What good is lust when youth has fled ? What use is a lake which has no water ? Where are the relatives when wealth is gone ? Where is samsara when the Truth is known ?
ಮಾ ಕುರು ಧನಜನ ಯೌವನ ಗರ್ವಂ
ಹರತಿ ನಿಮೇಷಾತ್-ಕಾಲಃ ಸರ್ವಮ್ |
ಮಾಯಾಮಯಮಿದಮ್-ಅಖಿಲಂ ಹಿತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ || 11 ||
Do not boast of wealth, friends, and youth. Each one of these are destroyed within a minute. Free yourself from the illusion of the world of Maya and attain the timeless Truth.
ದಿನ ಯಾಮಿನ್ಯೌ ಸಾಯಂ ಪ್ರಾತಃ
ಶಿಶಿರ ವಸಂತೌ ಪುನರಾಯಾತಃ |
ಕಾಲಃ ಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಾಯುಃ || 12 ||
Daylight and darkness, dusk and dawn, winter and springtime come and go. Time plays and life ebbs away. But the storm of desire never leaves.
ದ್ವಾದಶ ಮಂಜರಿಕಾಭಿರ ಶೇಷಃ
ಕಥಿತೋ ವೈಯಾ ಕರಣಸ್ಯೈಷಃ |
ಉಪದೇಶೋ ಭೂದ್-ವಿದ್ಯಾ ನಿಪುಣೈಃ
ಶ್ರೀಮಚ್ಛಂಕರ ಭಗವಚ್ಛರಣೈಃ || 13 ||
This bouquet of twelve verses was imparted to a grammarian by the all-knowing Shankara, adored as the bhagavadpada.
ಕಾ ತೇ ಕಾಂತಾ ಧನ ಗತ ಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ |
ತ್ರಿಜಗತಿ ಸಜ್ಜನ ಸಂಗತಿರೇಕಾ
ಭವತಿ ಭವಾರ್ಣವ ತರಣೇ ನೌಕಾ || 14 ||
Oh mad man ! Why this engrossment in thoughts of wealth ? Is there no one to guide you ? There is only one thing in three worlds that can save you from the ocean from samsara. Get into that boat of satsangha quickly.
ಜಟಿಲೋ ಮುಂಡೀ ಲುಂಜಿತ ಕೇಶಃ
ಕಾಷಾಯಾನ್ಬರ ಬಹುಕೃತ ವೇಷಃ |
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರ ನಿಮಿತ್ತಂ ಬಹುಕೃತ ವೇಷಃ || 15 ||
There are many who go with matted locks, many who have clean shaven heads, many whose hairs have been plucked out; some are clothed in saffron, yet others in various colors — all just for a livelihood. Seeing truth revealed before them, still the foolish ones see it or not.
ಅಂಗಂ ಗಲಿತಂ ಪಲಿತಂ ಮುಂಡಂ
ದಶನ ವಿಹೀನಂ ಜಾತಂ ತುಂಡಮ್ |
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಮ್ || 16 ||
Strength has left the old man’s body; his head has become bald, his gums toothless and leaning on crutches. Even then the attachment is strong and he clings firmly to fruitless desires.
ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕ ಸಮರ್ಪಿತ ಜಾನುಃ |
ಕರತಲ ಭಿಕ್ಷಸ್-ತರುತಲ ವಾಸಃ
ತದಪಿ ನ ಮುಂಚತ್ಯಾಶಾ ಪಾಶಃ || 17 ||
Behold there lies the man who sits warming up his body with the fire in front and the sun at the back; at night he curls up the body to keep out of the cold; he eats his beggar’s food from the bowl of his hand and sleeps beneath the tree. Still in his heart, he is a wretched puppet at the hands of passions.
ಕುರುತೇ ಗಂಗಾ ಸಾಗರ ಗಮನಂ
ವ್ರತ ಪರಿಪಾಲನಮ್-ಅಥವಾ ದಾನಮ್ |
ಙ್ಞಾನ ವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮ ಶತೇನ || 18 ||
One may go to gangasagar(ganges), observe fasts, and give away riches in charity ! Yet, devoid of jnana, nothing can give mukthi even at the end of a hundred births.
ಸುರಮಂದಿರ ತರು ಮೂಲ ನಿವಾಸಃ
ಶಯ್ಯಾ ಭೂತಲಮ್-ಅಜಿನಂ ವಾಸಃ |
ಸರ್ವ ಪರಿಗ್ರಹ ಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ || 19 ||
Take your residence in a temple or below a tree, wear the deerskin for the dress, and sleep with mother earth as your bed. Give up all attachments and renounce all comforts. Blessed with such vairagya, could any fail to be content ?
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ || 20 ||
One may take delight in yoga or bhoga, may have attachment or detachment. But only he whose mind steadily delights in Brahman enjoys bliss, no one else.
ಭಗವದ್ಗೀತಾ ಕಿಂಚಿದಧೀತಾ
ಗಂಗಾ ಜಲಲವ ಕಣಿಕಾ ಪೀತಾ |
ಸಕೃದಪಿ ಯೇನ ಮುರಾರೀ ಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ || 21 ||
Let a man read but a little from Gitaa, drink just a drop of water from the ganges, worship murari (govinda) just once. He then will have no altercation with Yama.
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್ |
ಇಹ ಸಂಸಾರೇ ಬಹು ದುಸ್ತಾರೇ
ಕೃಪಯಾஉಪಾರೇ ಪಾಹಿ ಮುರಾರೇ || 22 ||
Born again, death again, birth again to stay in the mother’s womb ! It is indeed hard to cross this boundless ocean of samsara. Oh Murari ! Redeem me through Thy mercy.
ರಥ್ಯಾ ಚರ್ಪಟ ವಿರಚಿತ ಕಂಥಃ
ಪುಣ್ಯಾಪುಣ್ಯ ವಿವರ್ಜಿತ ಪಂಥಃ |
ಯೋಗೀ ಯೋಗ ನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ || 23 ||
There is no shortage of clothing for a monk so long as there are rags cast off the road. Freed from vice and virtue, onward he wanders. One who lives in communion with God enjoys bliss, pure and uncontaminated, like a child and as someone intoxicated.
ಕಸ್ತ್ವಂ ಕೋஉಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ನಿಜ ಸಂಸಾರಂ
ಸರ್ವಂ ತ್ಯಕ್ತ್ವಾ ಸ್ವಪ್ನ ವಿಚಾರಮ್ || 24 ||
Who are you ? Who am I ? From where do I come ? Who is my mother, who is my father ? Ponder thus, look at everything as essenceless and give up the world as an idle dream.
ತ್ವಯಿ ಮಯಿ ಸರ್ವತ್ರೈಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ |
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಞ್ಛಸ್ಯಚಿರಾದ್-ಯದಿ ವಿಷ್ಣುತ್ವಮ್ || 25 ||
In me, in you and in everything, none but the same Vishnu dwells. Your anger and impatience is meaningless. If you wish to attain the status of Vishnu soon, have samabhava always.
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹ ಸಂಧೌ |
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್-ಸೃಜ ಭೇದಾಙ್ಞಾನಮ್ || 26 ||
Do not waste your efforts to win the love of or to fight against friend and foe, children and relatives. See yourself in everyone and give up all feelings of duality completely.
ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾஉஉತ್ಮಾನಂ ಪಶ್ಯತಿ ಸೋஉಹಮ್ |
ಆತ್ಮಙ್ಞ್ನಾನ ವಿಹೀನಾ ಮೂಢಾಃ
ತೇ ಪಚ್ಯಂತೇ ನರಕ ನಿಗೂಢಾಃ || 27 ||
Do not waste your efforts to win the love of or to fight against friend and foe, children and relatives. See yourself in everyone and give up all feelings of duality completely.
ಗೇಯಂ ಗೀತಾ ನಾಮ ಸಹಸ್ರಂ
ಧ್ಯೇಯಂ ಶ್ರೀಪತಿ ರೂಪಮ್-ಅಜಸ್ರಮ್ |
ನೇಯಂ ಸಜ್ಜನ ಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ || 28 ||
Regularly recite from the Gita, meditate on Vishnu [thro’ Vishnu sahasranama] in your heart, and chant His thousand glories. Take delight to be with the noble and the holy. Distribute your wealth in charity to the poor and the needy.
ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ |
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ || 29 ||
He who yields to lust for pleasure leaves his body a prey to disease. Though death brings an end to everything, man does not give up the sinful path.
ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖ ಲೇಶಃ ಸತ್ಯಮ್ |
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ || 30 ||
Wealth is not welfare, truly there is no joy in it. Reflect thus at all times. A rich man fears even his own son. This is the way of wealth everywhere.
ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯ ವಿವೇಕ ವಿಚಾರಮ್ |
ಜಾಪ್ಯಸಮೇತ ಸಮಾಧಿ ವಿಧಾನಂ
ಕುರ್ವ ವಧಾನಂ ಮಹದ್-ಅವಧಾನಮ್ || 31 ||
Regulate the pranas, remain unaffected by external influences and discriminate between the real and the fleeting. Chant the holy name of God and silence the turbulent mind. Perform these with care, with extreme care.
ಗುರು ಚರಣಾಂಭುಜ ನಿರ್ಭರಭಕ್ತಃ
ಸಂಸಾರಾದ್-ಅಚಿರಾದ್-ಭವ ಮುಕ್ತಃ |
ಸೇಂದಿಯ ಮಾನಸ ನಿಯಮಾದೇವಂ
ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಮ್ || 32 ||
Oh devotee of the lotus feet of the Guru ! May thou be soon free from Samsara. Through disciplined senses and controlled mind, thou shalt come to experience the Indwelling Lord of your heart !
ಮೂಢಃ ಕಶ್ಚಿನ ವೈಯಾಕರಣೋ
ಡುಕೃಣ್ಕರಣಾಧ್ಯಯನ ಧುರೀಣಃ |
ಶ್ರೀಮಚ್ಛಂಕರ ಭಗವಚ್ಚಿಷ್ಯೈಃ
ಬೋಧಿತ ಆಸೀಚ್ಛೋದಿತ ಕರಣೈಃ || 33 |
Thus was a silly grammarian lost in rules cleansed of his narrow vision and shown the Light by Shankara’s apostles.
Gopala Krishna M.N.
Vijayanagar,Bangalore
January 9, 2014 at 8:51 PM
ದಯಮಾಡಿ ಕನ್ನಡ ಅನುವಾದ ಹಾಕುವಿರಾ? ಅರ್ಥೈಸಿಕೊ೦ಡು ಶ್ಳೋಕ ಹಾಡಿರೆ ಒಳ್ಳೆದಲ್ಲವೇ/
January 9, 2014 at 7:00 PM
ಹರೇ ರಾಮ
ತುಂಬಾ ಸೊಗಸಾಗಿ ಮೂಡಿ ಬಂದಿದೆ. ಮುಂದೊಂದು ದಿನ ಈ ಶ್ಲೋಕಗಳಿಗೆ ಶ್ರೀಸಂಸ್ಥಾನದವರ ವಿವರಣೆ ಬರಬಹುದೆಂಬ ನಿರೀಕ್ಷೆ ಇದೆ. ಪರಮಪೂಜ್ಯರು ಭಜಗೋವಿಂದಂ ಬಗೆಗೆ ನೀಡಿದ ಉಪನ್ಯಾಸವನ್ನು ನೆನಪಿಸಿಕೊಳ್ಳುತ್ತಿದ್ದೇವೆ.
ಶಂಕರ ಭಗವತ್ಪಾದರ ಇನ್ನೊಂದು ಕೃತಿಯಾದ ‘ಸಾಧನಾ ಪಂಚಕಮ್’ ಬಗೆಗೆಯೂ ಕೇಳುವ ಅವಕಾಶಕ್ಕಾಗಿ ಕಾಯುತ್ತಿದ್ದೇವೆ
ಮರುವಳ ನಾರಾಯಣ
January 11, 2014 at 1:44 AM
ಕೆಲವು ಶ್ಲೋಕಗಳಿಗೆ ವಿವರಣೆ ಲಭ್ಯವಿದೆ. ಕೆಳಗಿನ ಪ್ರವಚನದ ತುಣುಕುಗಳನ್ನು ಗಮನಿಸಿ.
1. http://audio.hareraama.in/DailyPravachana/Ramakatha_Satsanga/satsanga-1_part1.mp3
Format:
[ಶ್ಲೋಕದ ಸಂಖ್ಯೆ => ಶ್ಲೋಕದ ಒಂದೆರಡು ಶಬ್ದಗಳು (ಶ್ಲೋಕದ ಸಂಸ್ಕೃತ ರೂಪ) => ಧ್ವನಿಮುದ್ರಣೆಯಲ್ಲಿ ಶ್ಲೋಕದ ಪ್ರಸ್ತಾಪ – (hour: minutes: seconds) ]
1 => ಭಜ ಗೋವಿಂದಂ ಭಜ ಗೋವಿಂದಂ (भज गोविन्दं भज गोविन्दं) => 1:24:10 mins in audio.
11 => ಮಾ ಕುರು ಧನಜನ ಯೌವನ ಗರ್ವಂ (मा कुरु धन जन योउवन गर्वं) => 1:25:00 mins in audio.
15 => ಜಟಿಲೋ ಮುಂಡೀ ಲುಂಜಿತ ಕೇಶಃ (जटिलो मुण्डी लुञ्चित केश:) => 1:19:38 mins in audio.
17 => ಅಗ್ರೇ ವಹ್ನಿಃ ಪೃಷ್ಠೇ ಭಾನುಃ (अग्रे वह्निः पृष्ठेभानु:) => 39:55 mins in audio.
30 => ಪುತ್ರಾದಪಿ ಧನಭಾಜಾಂ ಭೀತಿಃ (पुत्रादपि धनभाजां भीतिः) => 41:22 mins in audio
2. http://audio.hareraama.in/DailyPravachana/Ramakatha_Satsanga/satsanga_day1_part2.mp3
5 => ಯಾವದ್-ವಿತ್ತೋಪಾರ್ಜನ ಸಕ್ತಃ (यावत् वित्तोपर्जन सक्तः) => 0:03:46 mins in audio.
6 => ಯಾವತ್-ಪವನೋ ನಿವಸತಿ ದೇಹೇ (यावत्पवनो निवसति देहे ) => 0:02:27 mins in audio.
10 => ವಯಸಿ ಗತೇ ಕಃ ಕಾಮವಿಕಾರಃ (वयसि गते क: कामविकार:) => 0:04:23 mins in audio.
11 => ಮಾಯಾಮಯಮಿದಮ್-ಅಖಿಲಂ ಹಿತ್ವಾ (मायामयमिदं अखिलं हित्वा) => 0:02:00 mins in audio.
17 => ಅಗ್ರೇ ವಹ್ನಿಃ ಪೃಷ್ಠೇ ಭಾನುಃ (अग्रे वह्निः पृष्ठेभानु:) => 13:01 mins in audio.
19 => ಸುರಮಂದಿರ ತರು ಮೂಲ ನಿವಾಸಃ (सुरमन्दिर तरुमूलनिवास:) => 0:11:45, 0:50:50 mins in audio.
20 => ಯೋಗರತೋ ವಾ ಭೋಗರತೋ ವಾ (योगरतो वा भोगरतो वा) => 0:52:37, 0:58:43 mins in audio.
January 11, 2014 at 7:01 PM
ಧನ್ಯವಾದಗಳು
ಮರುವಳ ನಾರಾಯಣ
January 14, 2014 at 1:52 PM
Day 2 Part 1 and Day2 Part 2 Link share madi, this is something missed out to participate .. hareraama
January 22, 2014 at 9:05 AM
ಹರೇರಾಮ
http://audio.hareraama.in/DailyPravachana/Ramakatha_Satsanga/satsanga-2_part1.mp3
http://audio.hareraama.in/DailyPravachana/Ramakatha_Satsanga/satsanga-2_part2.mp3
ಹರೇರಾಮ
January 10, 2014 at 11:14 AM
Can we get the translated (Kannada) version? I do not understand the lyrics completely since it is in Sanskrit.
January 10, 2014 at 2:08 PM
Hareraama
January 11, 2014 at 1:47 AM
Easy to take print out and word by word meaning available here – http://sanskritdocuments.org/all_pdf/bhajagovindam.pdf
Hareraama.
January 11, 2014 at 7:23 AM
Another translation in English with shlokas in Samskrutam – http://advaitaachaarya.blogspot.com/2012/08/bhaja-govindam-hymns.html
January 12, 2014 at 6:07 PM
ಆದಿಶಂಕರರು ನಮ್ಮನ್ನು ಮೂಢರೇಕೆಂದು ಕರೆಯುತ್ತಾರೆ?
ಏಕೆಂದರೆ ನೀವು ಹಾಗಿರುವಿರಿ. ಆದ್ದರಿಂದ ಬೇರೆ ರೀತಿಯಲ್ಲಿ ಹೇಳುವುದು ಸುಳ್ಳಾದೀತು. ಶಂಕರರು ನಿಮ್ಮೊಂದಿಗೆ – ‘ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೆ’ – ಎಂದು ಸಂಭೋದಿಸಿ ಹೇಳುವಾಗ ಅಂತರಾಳದ ಪ್ರೀತಿಯಿಂದ – ಅತ್ಯಂತ ಕರುಣೆಗೆ ವಶರಾಗಿ ಹಾಗೆ ಹೇಳುವರು. ಅವರು ನಿಮ್ಮನ್ನೇನು ಬಯ್ಯುತ್ತಿಲ್ಲ. ಶಂಕರರು ಎಂದೂ ಬಯ್ಯುವವರೇ ಅಲ್ಲ. ಅವರ ಬಾಯಿಂದ ಬೈಗುಳವೇ ಬಾರದು. ಅದು ಅಸಂಭವ. ಅವರು ನಿಮ್ಮನ್ನು ಎಚ್ಚರಿಸುತ್ತಿರುವರು – ನಿದ್ದೆಯಿಂದ ಎಬ್ಬಿಸುತ್ತಿರುವರು – ಎಬ್ಬಿಸಿ ಮುಂದೆ ದೂಡುತ್ತಿರುವರು. ‘ಎದ್ದೇಳು! ಬೆಳಗಾಯಿತು ಸೂರ್ಯನಾಗಲೇ ಮೇಲೆ ಬಂದಿರುವನು, ನೀನಿನ್ನೂ ಮಲಗಿರುವುದು ಒಳ್ಳೆಯದಲ್ಲ’ – ಎಂದು ಹೇಳುತ್ತಿರುವರು.
ಅವರು ಮೂಢರೆನ್ನುವುದು – ಅಷ್ಟು ಕಠೋರವಾಗಿ ಹೇಳದಿದ್ದರೆ ನಿಮ್ಮ ನಿದ್ದೆ ಹರಿಯದೆಂದು. ಅವರು ಮೂಢರೆನ್ನುವುದು – ಅದೇ ಸತ್ಯ – ಅದೇ ತಥಾರ್ಥವಾದುದರಿಂದ.
ಮೂಢತೆಯ ಅರ್ಥ : ಮೂರ್ಛೆ.
ಮೂಢತೆಯ ಅರ್ಥ : ನಿದ್ದೆಯಲ್ಲೇ ಜೀವಿಸುವುದು.
ಮೂಢತೆಯ ಅರ್ಥ : ವಿವೇಕ ಹೀನತೆ.
ಮೂಢತೆಯ ಅರ್ಥ : ಜಾಗೃತಿಯ ಕೊರತೆ – ಎಚ್ಚರವಿಲ್ಲದಿರುವಿಕೆ.
ಅಜ್ಞಾನದ ಅರಿವು ಜ್ಞಾನದ ಮೊದಲ ಚರಣ.
ಕತ್ತಲೆಯನ್ನು ಸರಿಯಾಗಿ ತಿಳಿಯುವುದು ದೀಪ ಬೆಳಗುವ ಮಂಗಳಾಚರಣೆ.
ಕತ್ತಲೆಯನ್ನೇ ಕತ್ತಲೆಯೆಂದು ತಿಳಿಯದವ – ಕುರುಡನ್ನು ಕುರುಡು ಎಂದು ತಿಳಿಯದವ – ಕಣ್ಣಿಗಾಗಿ ಏಕೆ ಹಂಬಲಿಸುವ? ನೀನು ಚಿಕಿತ್ಸಕನ ಬಳಿ ಹೋದಾಗ ನಿನಗಾವ ಔಷದಿಯನ್ನು ಕೊಡುವುದು ಎಂದು ಆತ ಚಿಂತಿಸುವುದಿಲ್ಲ. ರೋಗದ ವಿಧಾನದ ಬಗ್ಗೆ ಚಿಂತಿಸುವ. ಡಯಾಗ್ನೈಸ್ ಸರಿಯಾಗಬೇಕೆಂದು ಅವನ ಚಿಂತೆ. ಕಾಯಿಲೆಗೆ ವಿಧಾನ ಮೊದಲು ವಿಚಾರಾರ್ಹ. ನಂತರ ಚಿಕಿತ್ಸೆ ವಿಧಾನವು ಸರಿಯಾದರೆ ಔಷದಿ ಮಾಡುವುದು ಸರಳ. ಕಾಯಿಲೆ ಯಾವುದೆಂದು ಗುರುತು ಹಿಡಿದರೆ ಔಷದಿ ಮಾಡುವುದು ದೊಡ್ಡದೇನಲ್ಲ. ಆದ್ದರಿಂದ ದೊಡ್ಡ ದೊಡ್ಡ ಚಿಕಿತ್ಸಕರು ರೋಗದ ವಿಧಾನ ಹೇಳಲು ಹಣ ಪಡೆಯುವರು. ರೋಗವಿಂತಹುದೆಂದು ತಿಳಿದರೆ ಔಷದಿ ಮಾಡುವುದು ಬಲು ಸುಲಭ. ಅದೇನು ಮಹಾ. ದೊಡ್ಡ ದೊಡ್ಡ ಸೀಸೆಗಳಲ್ಲಿ ತಯಾರಾಗಿರುವುದು. ಖಾಯಿಲೆ ಮಾತ್ರ ತಿಳಿದರೆ ಸಾಕು. ತನಗೆ ತಾನೇ ಔಷದಿ ಸಿಕ್ಕೀತು ಅಡಚಣೆಯೇ ಇಲ್ಲ.
ಶಂಕರರು ಪುನಃ ಪುನಃ ಹೇಳುವರು. ‘ಹೇ ಮೂಢ! ಗೋವಿಂದನನ್ನು ನೆನೆ.’
ಅವರು ನಿಮ್ಮ ರೋಗಕ್ಕೆ ವಿಧಾನವನ್ನು ಹೇಳುತ್ತಿರುವರು. ಮೂಢತೆಯೇ ನಿಮ್ಮ ರೋಗ, ಗೋವಿಂದನ ಭಜನೆ ಅದಕ್ಕೆ ಔಷಧಿ. ನೀನು ಮೂಢನೇ ಅಲ್ಲವಾದರೆ ಗೋವಿಂದನ ಭಜನೆ ಏಕೆ ಮಾಡುವೆ? ನಿನಗೆ ಕಾಯಿಲೆ ಇಲ್ಲವಾದ ಮೇಲೆ ಚಿಕಿತ್ಸೆಯೇಕೆ? ಒಂದು ವೇಳೆ ನಿನ್ನ ರೋಗವನ್ನೇ ಜೋಪಾನ ಮಾಡುತ್ತಿದ್ದು – ರೋಗವೇ ನಿನ್ನ ಆರೋಗ್ಯವೆಂದು ಪೋಷಣೆ ಮಾಡಿದರೆ ಆಗ ನೀನು ಸರಿ ಹೋಗುವುದು ಅಸಾಧ್ಯ – ನಿನ್ನ ಚಿಕಿತ್ಸೆಯೇ ಅಸಾಧ್ಯ.
ಗೋಪಾಲ ಕೃಷ್ಣ .ಎಂ.ಎನ್
ವಿಜಯನಗರ, ಬೆಂಗಳೂರು
January 12, 2014 at 11:28 PM
ಶ್ರೀ ಶಂಕರಾಚಾರ್ಯರ ಕೃತಿಗಳಲ್ಲಿ ಇದು ಅತ್ಯಂತ ಸಣ್ಣದಾದರೂ, ಇದು ಶ್ರೇಷ್ಠ ಕೃತಿ. ಗೀತೆಯ ಮಾಧುರ್ಯ ಈ ಪದ್ಯಂಗಳಲ್ಲಿ ವೇದಾಂತದ ತತ್ವವ ಬಹು ಸರಳವಾಗಿ ಹೇಳಿ ಕೊಟ್ಟಿದವು. ಈ ಪದ್ಯಂಗಳ ಅಧ್ಯಯನ ಮಾಡಿರೆ, ಎಲ್ಲಾ ಮೋಹಂಗಳೂ ನಾಶ .
ಈ ಪದ್ಯಂಗಳ ರಚನೆಯ ಹಿನ್ನೆಲೆ ಆಗಿ ಒಂದು ಕತೆ ಇದ್ದು.
ಶ್ರೀ ಶಂಕರರ ಮತ್ತೊಂದು ಪ್ರಸಿದ್ಧವಾದ “ಭಜಗೋವಿಂದಂ, ಭಜಗೋವಿಂದಂ, ಗೋವಿಂದಂ ಭಜಮೂಢಮತೆ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಢುಕ್ರಿಞ ಕರಣೇ” ಗೀತೆಯಂತೂ ನಾವು ಬದುಕುವ ರೀತಿಗೂ ನಮ್ಮ ಬದುಕಿನ ಮೂಲ ಪ್ರೇರಣೆಗಳಿಗೂ ಇರುವ ಅಜಗಜಾಂತರವನ್ನು ಸಾರ್ವಕಾಲಿಕವಾಗಿ ಕನ್ನಡಿಯಂತೆ ತೋರುವ ದಿವ್ಯದರ್ಶನವಾಗಿ ಕಣ್ಣೆದುರು ನಿಲ್ಲುತ್ತದೆ. ಈ ಸಾಲುಗಳನ್ನು ಶ್ರೀ ಶಂಕರರು ಒಂದು ಹಳ್ಳಿಯಲ್ಲಿ ಹಾದು ಹೋಗುತ್ತಾ ಓರ್ವ ವೃದ್ಧನು ವ್ಯಾಕರಣ ಸೂತ್ರ ಬಾಯಿಂದ ಪಾಠ ಮಾಡುವುದನ್ನು ಕಂಡು ಅವನ ಮೇಲೆ ಕನಿಕರಿಸಿ ಬರೆದರಂತೆ. ಸಾಯುವ ಹೊತ್ತಿನಲ್ಲಿ ಈ ಮುದುಕ ವ್ಯಾಕರಣ ಸೂತ್ರ ಬಡಬಡಿಸುವುದನ್ನು ಕಂಡು ಅವರಿಗೆ ಕರುಣೆಯುಂಟಾಯಿತು. ಬಾಳೆಲ್ಲಾ ಕಳೆದು ಆಗಿದೆ. ಈಗ ಕಡೆಯ ಕ್ಷಣವನ್ನೂ ಸಹಾ ಈತ ಕಳೆದುಕೊಳ್ಳುತ್ತಿರುವನು. ಪರಮಾತ್ಮನನ್ನು ಸ್ಮರಿಸದೆ ಜೀವನವೆಲ್ಲಾ ಗತಿಸಿತು. ಇನ್ನೂ ಇವನು ವ್ಯಾಕರಣ ಸೂತ್ರವನ್ನು ಬಿಡುತ್ತಿಲ್ಲ. ಒಟಗುಟ್ಟುತ್ತಿರುವನು. ಈ ಸೂತ್ರಗಳಿಂದೇನು ಆಗಬೇಕಾಗಿದೆ? ಹೀಗೆ ಸುಂದರವಾಗಿ ಸಾಗುತ್ತದೆ ಶಂಕರರ ಬದುಕಿನ ಸೌಂದರ್ಯ ದೃಷ್ಟಿ.
ಭಜ ಗೋವಿಂದಂ- ಇದರಲ್ಲಿ ಅತ್ಮಜ್ಞಾನವ ಹೇಂಗೆ ಪಡಕ್ಕೊಳೆಕ್ಕು, ಮನುಷ್ಯನ ಜೀವನಲ್ಲಿ ದುಃಖಕ್ಕೆ ಮೂಲಕಾರಣ ಎಂತರ ಹೇಳುವದರ ವಿವರುಸುತ್ತವು. ಜೀವನಲ್ಲಿ ನಾವು ಹೋಯೆಕ್ಕಾದ ಮಾರ್ಗ ಯಾವದು, ನಮ್ಮ ಗುರಿ ಯಾವುದು ಅಗಿರೆಕ್ಕು ಹೇಳಿ ತಿಳಿಸುತ್ತು. ನಾವು ಜೀವನಲ್ಲಿ ಎಲ್ಲಿ ದಾರಿ ತಪ್ಪುತ್ತಾ ಇದ್ದು ಹೇಳಿ ತೋರಿಸಿಕೊಡುತ್ತಲ್ಲದ್ದೆ, ಇದೇ ರೀತಿ ಕಾಮ ಮತ್ತೆ ಮೋಹಕ್ಕಾಗಿ ಜೀವಿಸಿರೆ ಮುಂದೆ ಎಷ್ಟು ಭೀಕರ ಪರಿಣಾಮ ಎದುರುಸೆಕ್ಕಾವ್ತು ಹೇಳುವದನ್ನೂ ತಿಳಿಸುತ್ತು.
ಗೋವಿಂದನ ನೆನೆ,ಗೋವಿಂದನ ನೆನೆ ,
ಗೋವಿಂದನ ನೆನೆ ಮತಿಹೀನ
ಮೃತ್ಯುವು ಹತ್ತಿರವಾಗುವ ಕಾಲದಿ
ರಕ್ಷಿಪುದಿಲ್ಲವು ವ್ಯಾಕರಣ
ಮೂಢನೆ ನೀ ಬಿಡು ಧನಸಂಪಾದನೆ
ಸನ್ಮತಿಯಿರಲೈ ನೀ ಬಿಡು ಕಾಮನೆ
ಏನನು ಪಡೆವೆಯೊ ತನ್ನಯ ಕರ್ಮದಿ
ಆ ಹಣದಿಂದಲೆ ಸುಖವಿರು ಚಿತ್ತದಿ
ನಾರಿಯ ಗುರುಕುಚ ನಾಭೀ ದೇಶವ
ನೋಡುತ ಮೋಹಿತನಾಗದಿರು
ಅವು ಬರಿ ಮಾಂಸ ವಿಕಾರಗಳೆಂಬುದ
ಮತ್ತು ಮತ್ತು ನೆನೆಯುತಿರು
ಧನ ಸಂಚಯ ದಾಹವ ಬಿಡು ಮೂಢ
ನಿಜವೇನೆಂಬುದ ಚಿಂತಿಸು ಮನದಿ
ಏನನು ಗಳಿಸಿದೆ ಅದರಿಂದಲೇ ನೀ
ಪಡೆದುಕೋ ನೆಮ್ಮದಿ ಸಂತೋಷವನ್ನು
ಮರಳಿ ಬರುವುದಿಲ್ಲ, ಗೋವಿಂದನ ನೆನೆ ಮೂಢಮನವೇ’ ಎನ್ನುತ್ತಾರೆ ಶಂಕರಾಚಾರ್ಯರು.
ಗೋಪಾಲ ಕೃಷ್ಣ .ಎಂ.ಎನ್,ವಿಜಯನಗರ, ಬೆಂಗಳೂರು
January 14, 2014 at 12:29 PM
hare raama… thank u very much for upload this audio ..very nice
January 14, 2014 at 1:54 PM
Day 2 Part 1 and Day2 Part 2 Link share madi, this is something missed out to participate .. hareraama
January 14, 2014 at 5:47 PM
ಹರೇ ರಾಮಾ
ಶ್ರೀ ಗುರುಭ್ಯೋ ನಮಃ
January 21, 2014 at 10:21 PM
Exact tone to excellent meaning.very inspiring. Also very good explanation.
January 18, 2014 at 3:46 PM
hareraama
January 22, 2014 at 10:01 AM
Hare raama ..
Raama raama janaka mattu raama mangalaam bhajane recordings iddare upload madekku heli request
February 20, 2014 at 9:27 PM
ಶ್ರೀಗುರುಭ್ಯೋ ನಮಃ ಹರೇರಾಮ. ಪರಮಪೂಜ್ಯ ಶ್ರೀಸಂಸ್ಥಾನಂಗಳ ಪಾದ ಕಮಲಂಗೊಕ್ಕೆ ವಿಶ್ವನ ಸಾಷ್ಟಾಂಗ ಪ್ರಣಾಮಂಗೊ.
ಇದು ಭಜಗೋವಿಂದಂ-ನ ಕನ್ನಡ ಭಾವಾನುವಾದ. ಎನ್ನ ಸೀಮಿತ ಸಂಸ್ಕೃತ ಅರಿವಿನ ಆಧಾರದಲ್ಲಿ ಮಾಡಲು ಯತ್ನಸಿದ್ದೆ.
ಸದ್ಗುರು ಪ್ರೇರಣೆ,ಆಶೀರ್ವಾದ. ಸಾಷ್ಟಾಂಗ ಪ್ರಣಾಮಂಗೊ.
( ಭಜ ಗೋವಿಂದಮ್…….ಕರಣೇ)
ನೆನೆ ಗೋವಿಂದನ ನೆನೆ ಗೋವಿಂದನ,ನೆನೆ ಗೋವಿಂದನ ಹೇ ಮೂಢ !
ಕಾಲನು ಕರೆಯುತಲಿರುತಿರೆ ನಿನ್ನ, ಢುಕೃಞ್-ಪದವು ಕಾಯದು ಮೂಢ. 1.
(ಮೂಢಜಹೀಹಿ………….ಚಿತ್ತಮ್)
ಹಣಕೂಡುವ ಮನವನು ತೊರೆ ಮೂಢ,ವೈರಾಗ್ಯ ಸನ್ಮತಿ ಬೆಳೆಸು ನೀ ಮನದಿ
ನ್ಯಾಯಾರ್ಜಿತ ಧನವನು ನೀ ಬಳಸು,ಅದರಲಿ ಮನವನು ತೃಪ್ತಿಯಗೊಳಿಸು. 2.
( ನಾರೀಸ್ತನಭರ……..ವಾರಮ್)
ಕಾಮದಿ ನೋಡಲು ನಾರಿಯ ಅಂದವು,ಮೋಹಕವಾಗಿಯೆ ಕಾಣುವುದು
ಕರಗುವ ಮಾಂಸಲ ದೇಹ ವಿಕಾರಕೆ,ಸೋಲದೆ ವಿವೇಚಿಸು ಪದೇ ಪದೇ. 3.
(ನಲಿನೀ………..ಸಮಸ್ತಮ್)
ತಾವರೆ ಎಲೆಯ ನೀರ್ವನಿಯಂತೆ,ಚಂಚಲ ನಶ್ವರವೀ ಜೀವನವು
ಆಧಿ ವ್ಯಾಧಿಯ ಗ್ರಹಣದಿ( ಕಾಟದಿ) ಜನರು,ಶೋಕದಿ ಸಾವನು ಕಾಣುವರು. 4.
(ಯಾವದ್ವಿತ್ತೋ…..ಗೇಹೇ)
ಹಣವಿರುವನಕ ನೆಂಟರು-ಇಷ್ಟರು,ಗುಣವನೆ ನಿನ್ನಲಿ ಕಾಣುವರು
ಹಣವಿರದಿರೆ ಮುದಿವಯಸಲಿ ನಿನ್ನ,ಕಾಣುವ-ಕಾಯುವರಾರಿಹರು? 5.
(ಯಾವತ್ಪವನೋ……………..ತಸ್ಮಿನ್ಕಾಯೇ)
ಉಸಿರುಳ್ಳನಕ ಈ ದೇಹದಲಿ,ಉಸುರುವರೆಲ್ಲರು ನನ್ನವರೆಂದು
ಉಸಿರಾಟವು ನಿಲಲಾಕ್ಷಣದಿಂದ,ಸತಿ- ಸುತರೆಲ್ಲರು ಒಡನೆಯೆ ಬರರು. 6.
(ಬಾಲಸ್ತಾವತ್……ನ ಸಕ್ತಃ)
ಆಟದ ಆಸಕ್ತಿಯು ಬಾಲ್ಯದಲಿ,ಕೂಟದ(ಬೇಟದ)ಆಸಕ್ತಿಯು ಹರೆಯದಲಿ
ಚಿಂತೆಯೆ ಒಂದೇ ಮುದಿವಯಸಿನಲಿ, ಪರ-ಬ್ರಹ್ಮನ ಚಿಂತನೆಗೆಡೆಯಿಹುದೆಲ್ಲಿ? 7.
(ಕಾತೇ……….ಭ್ರಾತಾಃ)
ನೀನ್ಯಾರ್? ಅವನ್ಯಾರ್? ಸತಿ ಯಾರ್.-ಸುತನಾರ್?,ಈ ಸಂಸಾರದಿ ಎಲ್ಲ ವಿಚಿತ್ರ( ಚಿತ್ರ-ವಿಚಿತ್ರ)
ಎಲ್ಲಿಂದ ಬಂದಿಹೆ ಹೇ ಸೋದರನೆ? ಚಿಂತಿಸು ಯೋಚಿಸು ನಿನ್ನೊಳು ನೀನು. 8.
(ಸತ್ಸಂಗತ್ವೇ….ಜೀವನ್ಮುಕ್ತಿಃ)
ಸತ್ಸಂಗವು ನಿಸ್ಸಂಗಕೆ ಮೂಲ,ನಿಸ್ಸಂಗವು ನಿರ್ಮೋಹಕೆ ಮೂಲ
ನಿರ್ಮೋಹವು ನಿಶ್ಚಲತೆಗೆ ಮೂಲ,ನಿಶ್ಚಲತೆಯೇ ಮುಕುತಿಗೆ ಮೂಲ. 9.
( ವಯಸಿ………..ಸಂಸಾರಃ)
ಮುದಿತನದಲಿಯೂ ಕಾಮವಿಕಾರವೆ?,ನೀರೊಣಗಿದರು ಅದು ಸರೋವರವೆ?
ಧನವಿರದಿರೆ ಇಹುದೇ ಪರಿವಾರ ? ತತ್ತ್ವವನರಿತರೆ ಎಲ್ಲಿ ಸಂಸಾರ? 10.
(ಮಾಕುರು…………ವಿದಿತ್ವಾ)
ಧನ- ಜನ- ಜವ್ವನ ಗರ್ವವು ಬೇಡ,ಕ್ಷಣದಲಿ ಕಾಲಕೆ ಸಲುವುದು ಎಲ್ಲಾ
ಮಾಯೆಯ ಈ ಜಗವೆಲ್ಲವ ತೊರೆದು,ಮನ ನೆಲೆಗೊಳಿಸು ನೀ ಬ್ರಹ್ಮಪದದಲಿ. 11.
(ದಿನಯಾಮಿನ್ಯೋ…………ವಾಯಃ)
ಹಗಲಿರುಳುಗಳು ಬೆಳಗು ಬೈಗುಗಳು,ಶಿಶಿರ ವಸಂತಗಳು ಬರುತಲೆ ಇಹವು
ಆಡುತ ಕಾಲವು ಸವೆಸಿದೆ ವಯಸನು,ಆಸೆಯ ಬಿಡು;ತೊಡು ಸತ್ಯದ ದೀಕ್ಷೆಯ. 12 .
(ಕಾತೇ……………….ನೌಕಾ)
ಬದುಕಲಿ ಸತಿ ಧನಗಳ ಚಿಂತೆಯು ಸದಾ,ಹುಚ್ಚನ ತೆರದಲಿ ಅಟ್ಟಾಡಿಸುತಿದೆ
ಸಂಸಾರ ಸಾಗರ ದಾಟಲಿಕೊಂದೇ,ಸತ್ಸಂಗ ನೌಕೆಯು ಮೂಜಗದಲ್ಲಿ. 13.
(ಜಟಿಲೋ………..ವೇಷಃ)
ಜಡೆ;ಮುಂಡನ; ಕೀಳುತ ತಲೆಗೂದಲ,(ಕೀಳುತ ಕಟ್ಟುತ ಬೋಳಿಸುತ ಕೂದಲ)
ಬಹುವಿಧ ವೇಷದಿ ಕಾವಿಯನುಡುತ
ಹೊಟ್ಟೆಗ ಬಟ್ಟೆಗೆ ವೇಷವ ಧರಿಸುತ,ಸತ್ಯವ ಕಾಣದೆ ಕಳೆವೆಯೊ ಮೂಢ? 14.
(ಅಂಗಂ……..ಪಿಂಡಮ್)
ಅಂಗವು ಸೊರಗಿದೆ; ತಲೆ ಹಣ್ಣಾಗಿದೆ,ಹಲ್ಲುಗಳುದುರಿವೆ; ಬಾಯ್ ಬೋಡಾಗಿದೆ
ಕೋಲನು ಊರುತ; ನಡೆ ತತ್ತರಿಸುತ,ನಡೆದರು ಮುದಿಯನು ಆಸೆಯ ತೊರೆಯನು. 15.
(ಅಗ್ರೇ……………ಪಾಶಃ)
ಬೆಂಕಿಯು ಮುಂದೆ;ಸೂರ್ಯನು ಹಿಂದೆ,ಚಳಿಯಲಿ ಕೈಕಾಲ್ಮಡಚುತ ಮಲಗಿ
ಹಸಿವಿಗೆ ಭಿಕ್ಷೆ;ಮರವಾಸರೆಗೆ, ಆಶಾಪಾಶದಿ ಬದುಕೇ ಕಷ್ಟ. 16.
( ಕುರುತೇ……….ಶತೇನ)
ಗಂಗಾಸ್ಮಾನವೊ ತುಂಗಾಪಾನವೊ,ತೀರ್ಥಾಟನೆಯೊ ವ್ರತ ದಾನಗಳೊ
ಅರಿವಿರದಿರೆ ನೂರಾರು ಜನ್ಮಗಳ, ತಳೆದರು ಪಡೆಯೆ ನೀ ಮುಕುತಿಯ ಮೂಢ. 17.
( ಸುರಮಂದಿರ………..ವಿರಾಗಃ)
ದೇಗುಲದಲ್ಲೋ ಮರದಡಿಯಲ್ಲೋ,ನೆಲವೇ ಹಾಸುಗೆ;ಮೃಗಜಿನ ಹೊದಿಕೆಯು
ಭೋಗವ ತ್ಯಜಿಸಿ;ದಾನವ ಬೇಡದೆ-ಇರುವ ವೈರಾಗ್ಯದ ಸುಖವೇ ಸುಖ. 18.
(ಯೋಗರತೋವಾ…………ನಂದತ್ಯೇವ)
ಯೋಗದಲಿರು ನೀ ಭೋಗದಲಿರು ನೀ,ಸಂಗದಲಿರು ನಿಸ್ಸಂಗದಲಿರು ನೀ
ಚಿತ್ತವು ಬ್ರಹ್ಮನ( ದೇವನ) ನೆನೆಯುತಲಿರಲು,ಆನಂದ ಆನಂದ ಪರಮಾನಂದವು. 19.
( ಭಗವದ್ಗೀತಾ……… ಚರ್ಚಾ)
ಗೀತೆಯ ಪದವೊಂದಾದರು ಓದಿ,ಗಂಗೆಯ ಹನಿವೊಂದಾದರು ಕುಡಿದು
ಹರಿಯರ್ಚನೆಯೊಮ್ಮೆಯಾದರು ಮಾಡಿದ, ನರನಿಗೆ ಯಮಭಯ ತಾ ಎಲ್ಲಿಹುದು? 20.
( ಪುನರಪಿ………..ಮುರಾರೇ)
ಹುಟ್ಟುತಲಿರುವೆನು ಸಾಯಿತಲಿರುವೆನು,ತಾಯೊಡಲಿನಲಿ ಮಲಗುತಲಿರುವೆನು
ಕಡುಭವಜಲಧಿಯ ದಾಟಿಸು ದಯದಿ,ಮುಕುತಿಯ ದಡ ಸೇರಿಸು ಮುರಹರನೆ. 21.
(ಕಸ್ತ್ವಮ್…………ವಿಚಾರಮ್)
ಎಲ್ಲಿಂದ ಬಂದೆನು( ನೊ)ತಾಯ್-ತಂದೆ ಯಾರು(ರೊ)?,ನಾನ್ಯಾರು?ನಿನ್ಯಾರು?ಏನೀ ಬಂಧನ?
ಕರಗುವ ಕನಸಂತಿಹ ಈ ಜಗವು,ತಿಳಿ- ಮಿಥ್ಯೆಯು ಇದು ಸಾರವಿಹೀನವು. 22.
( ರಥ್ಯಾ……….ಅವದೇವ)
ನಡೆಯಲಿ ದೊರಕಿದ ಬಟ್ಟೆಯನುಟ್ಟೆ,ಪಾಪ-ಪುಣ್ಯಗಳ ಮೀರಿ ನಿಂತೆ
ಸುತ್ತಲ ಜಗವೆಲ್ಲವ ಮರೆಯುತ ನೀ,ಮುಗುದನ ಮುಗ್ಧತೆಯೊಳು ಇರು ಎಂದೂ. 23.
(ತ್ವಯಿ………..ವಿಷ್ಣುತ್ವಮ್)
ನಿನ್ನಲಿ ನನ್ನಲಿ ಅವನಲಿ ಇರುವ,ವಿಷ್ಣುವು ಒಬ್ಬನೆ-ಎಲ್ಲರಲಿರುವ
ಅಸಹನೆ ಭೇದ ಕೋಪಗಳೇತಕೆ?ಎಲ್ಲರಲಿರುವ ಆತ್ಮನ ಕಾಣು. 24.
(ಶತ್ರೌ……..ಜ್ಞಾನಮ್)
ಅರಿ- ಮಿತ್ರ; ಸುತ-ಬಂಧು; ಯಾರೇ ಇರಲಿ,ಯುದ್ಧವು ಸಂಧಿಯೊ ಯಾವುದೆ ಬರಲಿ
ತೊರೆ ಆಸಕ್ತಿಯ ತಳೆ ಸಮಬುದ್ಧಿಯ,ಎಲ್ಲರೊಳಿಹ ಗೋವಿಂದನ ಪದ ಪಡೆ. 25.
(ಕಾಮಮ್………ನಿಗೂಢಾ)
ಷಡ್ವೈರಿಗಳನು ದೂರದಲಿಟ್ಟು,ಚಿಂತಿಸು ಯೋಚಿಸು “ನಾನ್ಯಾರೆಂದು”?
(ನಾನ್ಯಾರೆಂದು ಯೋಚಿಸದಿರುವ)
ತನ್ನನು ಅರಿಯದೆ ಜ್ಞಾನವ ಪಡೆಯದೆ,ಮೂಢರು ಪಡೆವರು ನರಕದ ಯಾತನೆ. 26.
(ಗೇಯಮ್……………ವಿತ್ತಮ್)
ಗೀತೆಯ-ಸಾವಿರ ನಾಮವ ಹಾಡು;ಧ್ಯಾನಿಸು ಶ್ರೀಪತಿ ರೂಪವನೆಂದೂ
ಸಜ್ಜನಸಂಗದೊಳಿರುತಿರಲಿ ಮನ,ಧನದಾನವ ಗೈ ಬಡಬಗ್ಗರಿಗೆ. 27.
(ಅರ್ಥ……….ರೀತಿಃ)
ಅರ್ಥವೆ ಮೂಲ ಅನರ್ಥಕೆ ಎಂದೂ,ನಿಜವದರಲಿ ಸುಖ ಸಿಗದೆಂದೆಂದೂ
ಹಣವಿರೆ ಮಗನೂ ಬೆದರಿಕೆ ತಹನು,ನಿಜವಿದು ಜಗದೆಲ್ಲೆಡೆ ಇಹ ಸ್ಥಿತಿಯು. 28.
( ಪ್ರಾಣಾಯಾಮಂ…….ಅವಧಾನಮ್)
ಇಂದ್ರಿಯ ನಿಗ್ರಹ- ಪ್ರಾಣಾಯಾಮದಿ,ನಿತ್ಯಾನಿತ್ಯಗಳಾಯ್ಕೆ – ವಿವೇಕದಿ
ಜಪ-ತಪ ಸಮಾಧಿಗಳಭ್ಯಸಿಸುತ್ತ, ಸಮನಿಸು ಸಮನಿಸು ಸಮನಿಸು ಬ್ರಹ್ಮದಿ. 29.
(ಸುಖತಃ………..ಪಾಪಾಚರಣಮ್)
ಸ್ತ್ರೀ-ಪುರುಷರ ವಿಹರವು ಸುಖಕಾಗಿ,ತರುವುದು ಸುಖ ದೇಹಕೆ ರೋಗದ ದುಃಖ
ಭೋಗಕೆ ರೋಗಕೆ ಮೃತ್ಯುವೆ ಕೊನೆಯು,ಬಿಡದಿಹರಲ್ಲ!ಪಾಪವ ಜನರು! 30.
(ಗುರುಚರಣಾಂಬುಜ……….ದೇವಮ್)
ಭಕ್ತಿಯ ನೆಡು ಗುರುಚರಣಕಮಲದಲಿ( ಗುರುಚರಣಾಂಬುಜದಲಿ ಭಕ್ತಿಯನಿಡು)
ಸಂಸಾರದಿ ಮುಕುತಿಯ ಪಡೆ ಬೇಗ
ಮನ ಇಂದ್ರಿಯಗಳ ನಿಗ್ರಹಿಸುತ ನೀ,ಹೃತ್ಕಮಲದಲಿಹ ದೇವನ ಕಾಣು. 31.
ಉಂಡೆಮನೆ ವಿಶ್ವೇಶ್ವರ ಭಟ್ಟ
March 14, 2014 at 3:28 PM
Tumba tumba olleya hadu.ennastu mattastu kelutta erabekendu aniisuttide.tumba dhanyavadagalu…entha shlokavannu namagae hadina mulaka odagisida hadugarara vrandakke tumba dhanyavadagalu….
March 14, 2014 at 9:24 PM
sriyutha gopalakrishna m n ningogae tumba tumba dhanyavadagalu.kannadallu,englishliu ee shlokada sandhrbika vivaraneya chikkadagi,chokkavagi ramana bhktaringae baredu kalisiddere.Hare rama,,,,,,,
May 6, 2014 at 11:08 AM
“ಮೂಢ” word deffers with the booklit supplied!! Please gothrough it.
June 11, 2014 at 11:36 AM
||ಹರೇ ರಾಮ||
ವಿಶ್ವಣ್ಣನ ಕನ್ನಡ ಭಾವಾನುವಾದ ಚೆನ್ನಾಗಿದೆ. ಚಿಕ್ಕವಳಿದ್ದಾಗ ತುಳಸಿ ಹಬ್ಬದಲ್ಲಿ ಮನೆಯ ಹಿರಿಯರೊಂದಿಗೆ ತುಳಸಿ ಕಟ್ಟೆಯನ್ನು ಸುತ್ತುತ್ತಾ ಭಜಗೋವಿಂದಂ ಹೇಳುತ್ತಿದ್ದುದು ಕಣ್ಣೆದುರು ಈಗ ಕಾಣುತ್ತಿದೆ. ಮೊದಲಿನ ಎರಡು ಪ್ಯಾರಾಗಳು ಬಿಟ್ಟರೆ ಉಳಿದ ಸಾಲುಗಳ ಅರ್ಥ ಆಗ ಗೊತ್ತಿರಲಿಲ್ಲ. ಆದರೂ ತುಂಬಾ ಇಷ್ಟವಾದ ರಾಗ. ಅರ್ಥವಾದಾಗ ಜೀವನದ ಸತ್ಯ ಗೋಚರ.
ಅರುಣ ಕೆ.ಎಸ್.ಭಟ್
July 15, 2014 at 8:58 AM
i could not download the song, just the link, which run only with internet, please upload the song so that i can save it.
July 15, 2014 at 11:20 AM
bhajaneya sahita arthavannu karunisiddu tumba phalaprada
July 15, 2014 at 9:23 PM
ಬಹಳ ಸುಂದರ ಕನ್ನಡ ಭಾವಾನುವಾದ. ಯಾವುದೇ ಮಂತ್ರ ಅಥವಾ ಶ್ಲೂಕಗಳನ್ನು ಅರ್ಥ ಸಹಿತವಾಗಿ ತಿಳಿದಾಗ ಮಾತ್ರ ಅದನ್ನು ಪಠಿಸಿದ ಪುಣ್ಯ ಲಭಿಸುತ್ತದೆ ಎನ್ನುವುದು ನನ್ನ ದೃಢವಾದ ನಂಬಿಕೆ. ಭಜ ಗೋವಿಂದಂ ನಲ್ಲಿ ಶಂಕರಾಚಾರ್ಯರು ಬಹಳ ಅರ್ಥಗರ್ಭಿತವಾಗಿ ಅದನ್ನು ಲೋಕಕ್ಕೆ ತಿಳಿಸಿರುತ್ತಾರೆ. ನಾವು ಈಗ ಓದುವ ಭಗವದ್ಗೀತೆ ಕೂಡ ಶಂಕರಾಚಾರ್ಯರಿಂದಲೇ ಪುನರ್ ರಚಿಸಲ್ಪಟ್ಟದ್ದಾಗಿರುತ್ತದೆ. ಅದ್ವೈತಿಗಳಾದ ನಾವು ಅತ್ಯಂತ ವೈಜ್ನಾನಿಕವಾಗಿರುವ ಅದ್ವೈತ ತತ್ವವನ್ನು ತಿಳಿದು ಅದನ್ನು ಪ್ರಚಾರ ಮಾಡಿದಲ್ಲಿ ನಮ್ಮ ನಂಬಿಕೆಗಳೆಲ್ಲವೂ ವೈಜ್ನಾನಿಕ ತಳಹದಿಯ ಮೇಲೆ ನಿಂತಿರುವಂತದ್ದು ಎಂದು ನಾವು ಲೋಕಕ್ಕೆ ತಿಳಿಯಪಡಿಸಬಹುದು. ಭಜಗೋವಿಂದಂ ಕೂಡ ಅದ್ವೈತ ಸಿದ್ದಾಂತದ ಗೂಢಾರ್ಥಗಳನ್ನೇ ತಿಳಿಸುತ್ತದೆ. ಭಗವದ್ಗೀತೆ ಕೂಡ ಅದ್ವೈತ ತತ್ವವನ್ನೇ ಪ್ರತಿಪಾದಿಸುತ್ತದೆ. ಸರ್ವಮಿದಂ ಮಿಥ್ಯಂ (ನಾವು ಕಾಣುವುದೆಲ್ಲಾ ಒಂದೆ ಮಾಯೆ) ಎನ್ನುವ ಶಂಕರಾಚಾರ್ಯರ ಪ್ರಸಿದ್ದ ಅದ್ವೈತ ಮಂತ್ರ ಅತ್ಯಂತ ವೈಜ್ನಾನಿಕವಾದುದು. ಈ ಮಾಯೆಯ ಹಿಂದೆ ಹೋಗಿ ಜೀವನ ವ್ಯರ್ಥ ಮಾಡುವುದರ ಬದಲು ಮಾಯೆಯ ಸೂತ್ರಧಾರನನ್ನು ನೆನೆದು ಕೃತಾರ್ಥನಾಗು ಎಂದು ಹಲವು ಸಂದರ್ಬಗಳಲ್ಲಿ ಶಂಕರಾಚಾರ್ಯರು ತಿಳಿಹೇಳಿದ್ದಾರೆ. ವಾಸ್ತವದಲ್ಲಿ ಶಂಕರಾಚಾರ್ಯರು ಭಾರತ ದೇಶ ಕಂಡ ಅತಿ ವಿರಳ ವಿಜ್ನಾನಿಗಳಲ್ಲಿ ಒಬ್ಬರು.
July 20, 2014 at 8:03 PM
very good.thank you .we just love it.
July 25, 2014 at 10:28 PM
Bhajagovindam with translation is really inspiring.Bhat in Kannada version, I think in 5th stanza Visarga as last in 1st line(saktah) and stavannijaparivaro—-in 2nd line which should have been “tavannijaparivaro——“.
I beg pardon if I am wrong.
Even though I missed Ramakatha at spot, I really enjoyed seeing in internet.
August 1, 2014 at 12:32 PM
|| ಹರೇ ರಾಮ ||
2013 ನೇ ಮೇ ತಿಂಗಳಲ್ಲಿ ನಾಲ್ಕೂ ಧಾಮಗಳನ್ನು ಒಳಗೊಂಡ ಉತ್ತರ ಭಾರತ ಪ್ರವಾಸದ ಸಂದರ್ಭ. ಬದರಿನಾಥನ ಸನ್ನಿಧಿಗೆ ಹೋಗುವಾಗ ಜೋಷಿಮಠದಲ್ಲಿರುವ ವಿಶೇಷಗಳ ದರ್ಶನವಾಯ್ತು. ಅಲ್ಲಿ ಶ್ರೀ ಶಂಕರಾಚಾರ್ಯರು ವಾಸ್ತವ್ಯವಿದ್ದರು ಎನ್ನಲಾದ ಮಠವನ್ನು ನೋಡುವಾಗ ಮನಸ್ಸಿಗೆ ಬಂದಿದ್ದು ಭಜಗೋವಿಂದಂ. ಇಲ್ಲಿಯೇ ರಚಿಸಿದರೇನೋ ಎಂಬುದು ಮನಸ್ಸಿಗೆ ಬಂದಿತ್ತು. ದೇವಭೂಮಿ ಹಿಮಾಲಯದಲ್ಲಿ ಮನಸ್ಸು ಅದ್ಭುತವಾದ ಆನಂದವನ್ನು ಅನುಭವಿಸುತ್ತದೆ. ಆ ಅಗಾಧತೆಯ ಮುಂದೆ ನಾವು ಸೊನ್ನೆಗಳಾಗುತ್ತೇವೆ. ಜೋಷಿಮಠದ ಒಂದು ಗುಹೆಯಲ್ಲಿ ಶ್ರೀ ಶಂಕರ ಭಗವತ್ದಾದರ ಶಿಷ್ಯರು ಸ್ಥಾಪಿಸಿದರು ಎನ್ನಲಾಗುವ ತುಂಬಾ ಸುಂದರವಾದ ಸ್ಪಟಿಕ ಲಿಂಗವಿತ್ತು. ಯಾಕೋ ಏನೋ, ಭಜಗೋವಿಂದಂ ಅರ್ಥ ಓದುವಾಗ ಆ ಸ್ಥಳದ ನೆನಪಾಯ್ತು. ಒಟ್ಟಿನಲ್ಲಿ, ಕಣ್ಣಿಗೆ ಕಾಣುವ ಈ ಮಾಯಾ ಜಗತ್ತು ಮಿಥ್ಯ. ಭಗವಂತನ ಅನುಭೂತಿಯೇ ಸತ್ಯ ಎಂಬುದನ್ನು ಅರ್ಥ ಸಹಿತ ತಿಳಿಸಿದ್ದಕ್ಕೆ ಧನ್ಯವಾದಗಳು.
September 1, 2014 at 11:43 AM
hareRama guruji i am always with you
May 17, 2019 at 10:27 AM
Hello there,
What is the meaning of ‘ಡುಕುರುಞ್ ಕರಣೇ’ ?
September 8, 2020 at 10:07 AM
Somebody Please restore the missing audio.
April 29, 2021 at 9:14 AM
Beautiful with meaning.. thank you