ಅಂಬಾಗಿರಿಯ ಅಂಬಾಕಥೆಯಲ್ಲಿ ಜಗದಂಬೆ “ಅಮ್ಮ” ನ ಬಗೆಗೆ ಶ್ರೀಗುರುಗಳು ಸಮರ್ಪಿಸಿದ ನುಡಿನಮನ:
ನನ್ನ ತನು ಕಣಕಣವು ನಿನ್ನ ಋಣವಮ್ಮಾ
ನನ್ನ ನಡೆನುಡಿ ಪ್ರಜ್ಞೆ ನೀನಿತ್ತುದಮ್ಮಾ ||
ನೆತ್ತರವ ಬಸಿದೆನಗೆ ಜನ್ಮವನು ಕೊಟ್ಟೆ
ರಕ್ತಮಾಂಸವ ಹರಿಸಿ ದೇಹವನು ಇತ್ತೆ ||
ನಿನ್ನ ನಾಸಿಕದಿಂದ ಉಸಿರಾಡುತಿದ್ದೆ
ನಿನ್ನ ಬಾಯಿಯ ಅನ್ನ ನಾನುಣ್ಣುತಿದ್ದೆ ||
ನಿನ್ನ ಗರ್ಭಾಶ್ರಯದಿ ದಿವ್ಯತೆಯ ಕಂಡೆ
ಮಡಿಲಲ್ಲಿ ಮಗುವಾಗಿ ನೆಮ್ಮದಿಯನುಂಡೆ ||
ಎಂತು ತೀರಿಸಲಮ್ಮ ನಿನ್ನ ಋಣ ನಾನು
ನಿಂತು ನನ್ನೆದೆಯಲ್ಲಿ ಬೆಳಕಾಗು ನೀನು ||
ಅಮ್ಮ ಎನ್ನುವ ಎರಡು ಅಕ್ಷರದ ಮಂತ್ರ
ಸ್ಪೂರ್ತಿಯಲಿ ಚಲಿಸುವುದು ಜಗದ ಜಡ ಯಂತ್ರ ||
ಕೆಟ್ಟ ಮಕ್ಕಳು ಕೋಟಿ ಹುಟ್ಟಬಹುದಮ್ಮ
ಕೆಟ್ಟ ತಾಯಿಯ ಹುಟ್ಟು ಇರಲಾರದಮ್ಮ |
~
ಇನ್ನಷ್ಟು ವೀಡಿಯೋಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಸಂದರ್ಶಿಸಿ:
http://youtube.com/raamakatha
August 19, 2013 at 3:41 PM
hare rama
jai matha
August 27, 2013 at 1:32 PM
ಮಾನ್ಯರೆ,
ಮಾಣಿ ರಾಮಕಥಾ ದಲ್ಲಿ ಹಾಕಿರುವಂತೆ ಎಲ್ಲ ದೌನ್ ಲೊಡ್ ಲಿಂಕ್ ಗಳನ್ನು audio link & Download link ಗಳನ್ನು ಬೆರೆ ಬೆರೆಯಾಗಿ ಹಾಕಿ ಫ್ಲಾಶ್ ಪ್ಲಯೆರ್ನಿಂದ ದೌನ್ ಲೊಡ್ ಮಾಡಲು ಬರುತ್ತಿಲ್ಲ ದಯಮಾಡಿ ಸ್ವಾಮೀಜಿಯವರ ಎಲ್ಲಾ ಆಡಿಯೊ ವಿಡಿಯೊಗಳಿಗೆ ದಯಮಾಡಿ Download link ನೇರವಾಗಿ ದೌನ್ ಲೊಡ್ ಮಾಡುವಂತೆ ಹಾಕಿ.ಧಯ್ನ್ಯವಾದಗಳು
ಸಿದ್ದರಾಮೇಶ್ವರ