ಅಂಬಾಗಿರಿಯ ಅಂಬಾಕಥೆಯಲ್ಲಿ ಜಗದಂಬೆ “ಅಮ್ಮ” ನ ಬಗೆಗೆ ಶ್ರೀಗುರುಗಳು ಸಮರ್ಪಿಸಿದ ನುಡಿನಮನ:

ನನ್ನ ತನು ಕಣಕಣವು ನಿನ್ನ ಋಣವಮ್ಮಾ
ನನ್ನ ನಡೆನುಡಿ ಪ್ರಜ್ಞೆ ನೀನಿತ್ತುದಮ್ಮಾ ||

ನೆತ್ತರವ ಬಸಿದೆನಗೆ ಜನ್ಮವನು ಕೊಟ್ಟೆ
ರಕ್ತಮಾಂಸವ ಹರಿಸಿ ದೇಹವನು ಇತ್ತೆ ||

ನಿನ್ನ ನಾಸಿಕದಿಂದ ಉಸಿರಾಡುತಿದ್ದೆ
ನಿನ್ನ ಬಾಯಿಯ ಅನ್ನ ನಾನುಣ್ಣುತಿದ್ದೆ ||

ನಿನ್ನ ಗರ್ಭಾಶ್ರಯದಿ ದಿವ್ಯತೆಯ ಕಂಡೆ
ಮಡಿಲಲ್ಲಿ ಮಗುವಾಗಿ ನೆಮ್ಮದಿಯನುಂಡೆ ||

ಎಂತು ತೀರಿಸಲಮ್ಮ ನಿನ್ನ ಋಣ ನಾನು
ನಿಂತು ನನ್ನೆದೆಯಲ್ಲಿ ಬೆಳಕಾಗು ನೀನು ||

ಅಮ್ಮ ಎನ್ನುವ ಎರಡು ಅಕ್ಷರದ ಮಂತ್ರ
ಸ್ಪೂರ್ತಿಯಲಿ ಚಲಿಸುವುದು ಜಗದ ಜಡ ಯಂತ್ರ ||

ಕೆಟ್ಟ ಮಕ್ಕಳು ಕೋಟಿ ಹುಟ್ಟಬಹುದಮ್ಮ
ಕೆಟ್ಟ ತಾಯಿಯ ಹುಟ್ಟು ಇರಲಾರದಮ್ಮ |
~

ಇನ್ನಷ್ಟು ವೀಡಿಯೋಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಸಂದರ್ಶಿಸಿ:
http://youtube.com/raamakatha

Facebook Comments