ಅಮೃತಧಾರಾ ಗೋಶಾಲೆ ಕೋಲಾಡ, ಮಹಾರಾಷ್ಟ್ರ

ಶ್ರೀ ಶ್ರೀ ರಾಘವೇಶ್ವರ ಭ್ಹಾರತೀ ಸ್ವಾಮಿಜಿಯವರ ಕನಸಿನ ಕೂಸಾದ “ಕಾಮದುಘಾ” ಈ ಯೋಜನೆಯಡಿಯಲ್ಲಿ ಹಾಗೂ ಅವರ ನೇತೃತ್ವದಲ್ಲಿ, ಅಮೃತಧಾರಾ ಗೋಶಾಲೆಯು ಮಹಾರಾಷ್ಟ್ರದ ಕೋಲಾಡ, ತಾ, ರೋಹಾ, ರಾಯಗಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟಿದೆ. ಸುಮಾರು ೧೫೦ ಆಕಳುಗಳನ್ನು ಈ ಯೋಜನೆಯಡಿಯಲ್ಲಿ ಸಾಕಲಾಗುತ್ತಿದೆ. ವಿಶ್ವದಿಂದ ನಶಿಸುತ್ತಿರುವ ಭಾರತೀಯ ಗೋವಂಶದ ತಳಿಗಳನ್ನು ಸಂರಕ್ಷಿಸಲು ಅಮೃತಧಾರಾ ಗೋಶಾಲೆಯು ಟೊಂಕಕಟ್ಟಿದೆ.

ಇಲ್ಲಿ ಮಹಾರಷ್ಟ್ರದ ೪ ತಳಿಗಳಲ್ಲಿ (ಡಾಂಗಿ, ಗೀರ, ಗೌಳವ, ಖಿಲಾರಿ) ೨ ತಳೀಗಳನ್ನು (ಡಾಂಗಿ, ಖಿಲಾರಿ) ಸಂರಕ್ಷಿಸಲ್ಪಡುತ್ತಿದೆ. ಈ ಜಾಗವನ್ನು, ಸುಮಾರು ೪೦ ಎಕರೆ, ಶ್ರೀಮಾನ್ ಕೃಷ್ಣ ಭಟ್ಟರು ಮಠಕ್ಕೆ ದಾನ ಮಾಡಿದ್ದಾರೆ.

ಈ ಯೋಜನೆಯು ಭಾರತೀಯ ಗೋವಂಶದ ಸಂಶೋಧನೆ, ಸಂವರ್ಧನೆ ಹಾಗೂ ಸಂರಕ್ಷಣೆ ಯ ಉದ್ದೇಶ ಹಾಗೂ ಸಿದ್ಧಾಂತವಾದ ಗಾವೋ ವಿಶ್ವಸ್ಯ ಮಾತರಃ, ವನ್ನು ಇಟ್ಟುಕೊಂಡು  ಗೋಶಾಲೆ ಯನ್ನು ನಡೆಸಲಾಗುತ್ತಿದೆ.

ಅಮೃತಧಾರಾ ಗೋಶಾಲೆಯು, ಗೋಶಾಲೆಯ ಅಭಿವೃದ್ಡಿಗಾಗಿ ಆದಷ್ಟು ಹೆಚ್ಚಿನ ಮಟ್ಟಿಗೆ ಗವ್ಯೋತ್ಪನ್ನಗಳನ್ನು ತಯಾರಿಸಿ ಮಾರಟಮಾಡಬೇಕೆಂಬುದನ್ನು ಮನಗೊಂಡಿದೆ.

ಸದ್ಯಕ್ಕೆ ೨ ಗವ್ಯೋತ್ಪನ್ನಗಳು ಈ ಗೋಶಾಲೆಯಲ್ಲಿ ಉತ್ಪಾದಿಸಲಾಗುತ್ತಿದೆ:

೧. ಅಮೃತಸಾರ – ಗೋಮೂತ್ರ ಅರ್ಕ,

೨. ಸ್ಪ್ರಿಂಗ ಫ್ರೆಶ – ಗೋಮೂತ್ರದಿಂದ ಪ್ಲೋರ್ ಕ್ಲೀನರ್

ಇದರ ಹೊರತಾಗಿ ಅಲ್ಲಿ ಬೆಳೆಯುವ ನೆಲ್ಲಿಕಾಯಿಯನ್ನು (ಕೆಮಿಕಲ್ ರಹಿತ) ಉಪ್ಪಿನಕಾಯಿ, ಜಾಮ್ ನ್ನು ಮಾಡಿ, ಮಾರಾಟ ಮಾಡಿ, ಅದರ ಹಣವನ್ನು ಗೋಶಾಲೆಯ ಅಭಿವೃಧ್ಧಿಗೆ ಉಪಯೋಗಿಸಲಾಗುತ್ತಿದೆ.

ಮುಂದಿನ ಯೋಜನೆಯಲ್ಲಿ, ಪೇಸ್ ಪೆಕ್, ಅಮೃತ ಮಲಮ್ ಹಾಗೂ ಇತರ ಗವ್ಯೋತ್ಪನ್ನಗಳ ತಯಾರಿಕೆ ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.

ಅಮೃತಧಾರಾ ಗೋಶಾಲೆಯಲ್ಲಿ ಈಗ ರಾಮಾಶ್ರಮ, ಧ್ಯಾನ ಮಂದಿರ ಹಾಗೂ ೪ ಗೋಶಾಲೆ ಇದೆ.

Facebook Comments