|| ಹರೇರಾಮ ||
ಬೇಕೇ ಈ ಕೆಲಸ ?
ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ.. ನಾಳೆ ಮೈಯೆಲ್ಲ ಬೆವರ ಹೊಳೆ..
ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..
ಇವರ ಪಾಲಿಗೆ ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ.. ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!
ಇನ್ನು ನಿದ್ರೆಯ ಕಥೆ ಇದಕ್ಕಿಂತ ಭಿನ್ನವೇನಲ್ಲ..
ಪ್ರಯಾಣ ತರುವ ಬಳಲಿಕೆ..
ಕಾಲು ಚಾಚಿ ಕೆಲಹೊತ್ತು ಮಲಗುವಂತಿಲ್ಲ..
ಒಂದೆಡೆ ಕರ್ತವ್ಯದ ಕರೆ..
ಇನ್ನೊಂದೆಡೆ, ಸಂತೆಯಂತಿರುವಲ್ಲಿ ಮಲಗಲು ಎಡೆಯೆಲ್ಲಿ..?
ರಾತ್ರಿ…
ಒಮ್ಮೊಮ್ಮೆ ಹಾಸಲು ಹಾಸಿಗೆ.. ಹೊದೆಯಲು ಹೊದಿಕೆ…ವ್ಯವಸ್ಥಿತವಾಗಿ ಸಿಗುವ ಭರವಸೆಯಿಲ್ಲ…
ನಿದ್ರೆಗೆ ಸಮಯವೂ ಇಲ್ಲ – ಸ್ಥಳವೂ ಇಲ್ಲ!
ಯಾವುದೋ ಹೊತ್ತಿಗೆ ಇನ್ಯಾವುದೋ ಮೂಲೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ..!
ಅನಾರೋಗ್ಯ ಕಾಡಿದರೆ?…
ನೋಡಿಕೊಳ್ಳಲು ಅಮ್ಮ- ಅಕ್ಕರಿಲ್ಲ..ಔಷಧಿ ತರಲು ಅಪ್ಪ- ಅಣ್ಣರಿಲ್ಲ..
ಹಣೆಯ ಮೇಲೆ ಸಾಂತ್ವನದ ಕೈಯಿಡುವ ತಮ್ಮ-ತಂಗಿಯರಿಲ್ಲ..
ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ..!
ಹೇಳಿ ಕೇಳಿ ಹದಿಹರೆಯದ ಸಮಯ..ಆದರೆ, ಓರಗೆಯ ಪೋರರಿಗೆ ಸಿಗುವ ಸುಖ-ಸಾಧನಗಳು ಇವರಿಗೆ ಕನಸು ಮಾತ್ರ..!
ಗರಿ ಬಿಚ್ಚಿ ಹಾರುವ ವಯಸ್ಸು.. ಸ್ವತಂತ್ರವಲ್ಲದ ಮನಸ್ಸು..ನವನವೀನ ಉಡುಗೆ ತೊಡುಗೆಗಳಿಲ್ಲ..ವಾರಾಂತ್ಯಕ್ಕೊಂದು ರಜೆಯೂ ಇಲ್ಲ..!
ಸಿನೆಮಾ-ಹೋಟೆಲ್ ಇಲ್ಲವೇ ಇಲ್ಲ..!
ಹಬ್ಬ ಬಂದಿತೇ?
ಆತ್ಮೀಯರೊಂದಿಗಿನ ಸಂಭ್ರಮವಿಲ್ಲ..
ಗೆಳೆಯರೊಂದಿಗಿನ ಒಡನಾಟ ಸಿಗದು..
ಮನೆಯವರ ಒಡನಾಟ ಎಲ್ಲೋ ವರ್ಷದಲ್ಲೊಮ್ಮೆ..!
ಈಡೇರದ ಅಪೇಕ್ಷೆಗಳು..ಬಗೆಬಗೆಯ ಉಪೇಕ್ಷೆಗಳು..
ಇದು ಮುನಿಜೀವನವೇ..!
ಹಾಗೆಂದು ಇಂದಿನ ಜಗತ್ತಿನಲ್ಲಿ ಮುನಿಯಂತೆ ಬದುಕುವ ವಾತಾರವಣವಿಲ್ಲ..
ಎತ್ತಲೋ ಸೆಳೆಯುವ ವಯಸ್ಸು ಬೇರೆ ..
ಮುನಿಜೀವನವನ್ನೇ ನಡೆಸಬೇಕು; ಆದರೆ ಮುನಿಜೀವನಕ್ಕೆ ಸಲ್ಲಬೇಕಾದ ಗೌರವ ಮಾತ್ರ ಸಲ್ಲುವುದಿಲ್ಲ..!
ಹೊಟ್ಟೆ ಪಾಡಿಗಾಗಿ ಹೀಗೆ ದುಡಿಯುವವರುಂಟು..
ಆದರೆ ಇವರೊಂದು ವಿಚಿತ್ರ ..!
ಏಕೆಂದರೆ ಇವರಲ್ಲಿ ಅನೇಕರಿಗೆ ಸಂಪತ್ತಿನ ಕೊರತೆಯೇನಿಲ್ಲ..ಕೊರತೆ ಇರುವವರಿಗೂ ಹೊಟ್ಟೆ ಪಾಡಿನ ನಿರ್ವಹಣೆಗೆ ಬೇರೆ ಪ್ರಶಸ್ತ ಆಯ್ಕೆಗಳುಂಟು..
ಹೊಟ್ಟೆ ಪಾಡಿನ ನಂತರವೂ ಹೆಚ್ಚು ಹಣ ಸಂಪಾದನೆಗಾಗಿ ಹೀಗೆ ದುಡಿಯುವವರುಂಟು..ಆದರಿಲ್ಲಿ ವೇತನದ ಮಾತುಕತೆಯೇ ನಡೆಯದು !
ಹಲವರು ಹೆಸರ ಹಪಹಪಿಯಲ್ಲಿ ದುಡಿಯುವುದಿದೆ..
ಇವರೋ ಎಲೆಮರೆಯ ಕಾಯಿಗಳು..
ಜೀವನ ಸಂಗಾತಿಗಳ ಮೆಚ್ಚಿಸಲೋ.. ಪಡೆಯಲೋ.. ರಕ್ಷಿಸಲೋ ಹೀಗೆ ಮಾಡುವರು..
ಇಲ್ಲಿಯೋ ವೈರಾಗ್ಯದ ವಾತಾವರಣ!
ಕೆಲಸ ಬಹು ಸಂಕೀರ್ಣ..ದೊಡ್ಡದೊಡ್ಡವರನ್ನು ನಿಭಾಯಿಸಬೇಕು; ಸಾಮಾನ್ಯರನ್ನೂ ಸುಧಾರಿಸಬೇಕು..!
ಎಲ್ಲವೂ ಸರಿಯಾಗಿ ಒಂದು ತಪ್ಪಾದರೂ ಸಾಕು..ಸರ್ವರ ಕೆಂಗಣ್ಣು ನಿಶ್ಚಿತ..
ಸಾಮರ್ಥ್ಯ- ವಯಸ್ಸುಗಳಿಗೆ ಮೀರಿದ ಕೆಲಸ..
ಸಮಯ ಸೀಮಿತ…
ಅನುಭವ ಪರಿಣತಿಗಳು ಅಲ್ಪ..
ತರಬೇತಿ ತಾನಾಗಿಯೇ ಆಗಬೇಕು..
ಫಲಿತಾಂಶ ಮಾತ್ರ ನೂರಕ್ಕೆ ನೂರು ಬರಲೇ ಬೇಕು..!
ಇದು ನಮ್ಮ ನಿಮ್ಮ ನಡುವೆ ಸೇತುವೆ ಕಟ್ಟುವ ಪರಿವಾರದ ಬದುಕಿನ ಪರಿ!!!
ಇವೆಲ್ಲವೂ ಮನಸ್ಸಿನಲ್ಲಿ ಸುಳಿದಿದ್ದು ಮೊನ್ನೆ ಮೊನ್ನೆ ಪರಿವಾರದ ಹಿರಿಯ, ಚಿಪ್ಳಿ ರಮೇಶ ‘ಐವತ್ತಾಯಿತು’ ಎಂದು ಆಶೀರ್ವಾದ ಬೇಡಿದಾಗ..
ಆ ಜೀವನ.. ಅದು ರಾಮಾರ್ಪಣ..
ಆತ ಪರಿವಾರವನ್ನು ಪ್ರವೇಶಿಸಿದ್ದು ಹದಿನಾಲ್ಕರ ಹರಯದಲ್ಲಿ..
ಅಂದಿನಿಂದ ಇಂದಿಗೆ ಮೂವತ್ತಾರು ಸುದೀರ್ಘ ಸಂವತ್ಸರಗಳೇ ಸಂದಿವೆ..
ಬದುಕಿನ ಬಹುಮುಖ್ಯ ಭಾಗವೇ ಮಠದಲ್ಲಿ ಕಳೆದಿದೆ..
ಮಠದಲ್ಲಿ ಇಂದು ಎಲ್ಲವೂ ಬದಲಾವಣೆಯಾಗಿದೆ, ಆದರೆ ಬದಲಾಗದಿರುವುದು ರಮೇಶ ಮಾತ್ರ..
ಅಂದಿನ ನಾಯಕರು ಇಂದಿಲ್ಲ, ಅಂದಿನ ಸೇವಕರೂ ಇಂದಿಲ್ಲ..
ಅಷ್ಟೇ ಏಕೆ, ಪೀಠ ಪರಂಪರೆಯಲ್ಲಿಯೇ ಮೂವತ್ತೈದು ತಲೆಮಾರು ಕಳೆದು ಮೂವತ್ತಾರನೆಯ ತಲೆಮಾರು ನಡೆಯುತ್ತಿದೆ..
ಶಕ ಪರಿವರ್ತನೆಯೆಂಬುದು ಸಣ್ಣ ಪ್ರಳಯವಿದ್ದಂತೆ, ಅದನ್ನು ದಾಟಿ ಮುಂದುವರಿಯುವುದು ಸಾಮಾನ್ಯ ಸಂಗತಿಯಲ್ಲ..
ಆದರೆ ಅಂದು ಯಾವ ಮಹತ್ವ ರಮೇಶನಿಗಿದ್ದಿತೋ, ಯಾವ ವಿಶ್ವಾಸ ಪೀಠಕ್ಕೆ ಆತನಲ್ಲಿದ್ದಿತೋ ಅದು ಇಂದಿಗೂ ಹಾಗೆಯೇ ಇದೆ,ಇನ್ನಷ್ಟು ದೃಢವಾಗಿದೆ..
ರಮೇಶನೆಂದರೆ ನಮಗೆ ನೆನಪಾಗುವುದು ಆ ದಿನ.. ಆ ಸಮಯ…ಆ ಅಮೃತಘಳಿಗೆ…
ಭಾವ ಸಂ||ದ ಚೈತ್ರ ಶುದ್ಧ ಚತುರ್ಥಿ, ೧೯೯೪ರ ಏಪ್ರಿಲ್ ೧೫..
ಬದುಕೇ ಬದಲಾದ ದಿನವದು..ವ್ಯಷ್ಟಿ ಬದುಕಿನಿಂದ ಸಮಷ್ಟಿ ಬದುಕಿಗೆ..
ಭೋಗದ ಬದುಕಿನಿಂದ ತ್ಯಾಗದ ಬದುಕಿಗೆ..
ಸುಖದ ಬದುಕಿನಿಂದ ಸೇವೆಯ ಬದುಕಿಗೆ..
ಪ್ರಥಮ ಆಶ್ರಮದಿಂದ ತುರೀಯ ಆಶ್ರಮಕ್ಕೆ ನಾವು ಕಾಲಿರಿಸಿದ

ದಂಡ ಕಮಂಡಲುಗಳ ನೀಡಿದವ
ಮಂಗಲ ಮಹಾ ಮುಹೂರ್ತವದು..
ಹಳೆಯದೆಲ್ಲವು ಕಳೆಯಬೇಕು..
ಹುಟ್ಟು ಹೆಸರು, ಹಿಂದೆ ಸಂಪಾದಿಸಿದ ಹಣ, ಸಿಹಿ ಕಹಿ ಸಂಬಂಧಗಳು, ಹೆಚ್ಚೇಕೆ ಉಟ್ಟಬಟ್ಟೆಯನ್ನೂ ಪರಿತ್ಯಜಿಸಬೇಕು..
ಧರಿಸಿದ ಯಜ್ಞಸೂತ್ರವನ್ನೂ, ಶಿಖೆಯನ್ನೂ ಕಿತ್ತೆಸೆಯಬೇಕು..
ಪಾತ್ರೆಯನ್ನೊಮ್ಮೆ ಸಂಪೂರ್ಣ ಬರಿದು ಮಾಡಿ ತೊಳೆದಿರಿಸಿದ ಮೇಲಲ್ಲವೇ ಅದರಲ್ಲಿ ಹೊಸತನ್ನು ತುಂಬುವುದು ..
ಹಾಗೆಯೇ ಒಳಗಿನ ಹಳತೆಲ್ಲವೂ ಕಳೆದು ಶೂನ್ಯವಾದ ಮೇಲೆ, ಗುರು ಅಲ್ಲಿ ನಿತ್ಯ ನೂತನ ಪೂರ್ಣವನ್ನು ತುಂಬತೊಡಗುವುದು..
ಹೊಸ ಬದುಕಿನ ನಿತ್ಯ ಸತ್ಯ ಸಂಗತಿಗಳಾದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳು ಗುರುವಿನಿಂದ ಪ್ರಾಪ್ತವಾಗಬೇಕು..
ಸಲಿಲ ಸನಿಹದಲ್ಲಿ ಸಂನ್ಯಾಸ ವಿಧಿಗಳು…
ಆ ಸಮಯದಲ್ಲಿ ಗುರುಗಳಿರುವುದು ಮಠದಲ್ಲಿ.. ಉಪದೇಶ ನಡೆಯುವುದು ಅಲ್ಲಿಯೇ…
ಗುರುವಿನ ಪ್ರತಿನಿಧಿಯೊಬ್ಬ ಗುರುಕರಗಳಿಂದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳನ್ನು ತೆಗೆದುಕೊಂಡು ಸಂನ್ಯಾಸ ಸ್ಥಳಕ್ಕೆ ಆಗಮಿಸಿ ಗುರುಗಳ ಪರವಾಗಿ ಅವುಗಳನ್ನು ನೂತನ ಪೀಠಾಧಿಪತಿಗಳಿಗೆ ನೀಡಬೇಕು, ಇದು ಸಂಪ್ರದಾಯ..
ಇಲ್ಲೊಂದು ತಾದಾತ್ಮ್ಯವಿದೆ..
ಚಿಂತನೆಯೊಂದು ಕಾರ್ಯರೂಪಕ್ಕೆ ಬರುವಾಗ ಮೆದುಳಿಗೂ ಮತ್ತು ಕಾರ್ಯವೆಸಗುವ ಕರಗಳಿಗೂ ಒಂದು ಬಗೆಯ ತಾದಾತ್ಮ್ಯವಿರುವುದಲ್ಲವೇ..?
ಹಾಗೆಯೇ ಗುರುವಿನ ಮನದಲ್ಲಿ ಮನವನ್ನು ಬೆರೆಸಿ ಗುರುವಿನ ಕರಕಮಲವೇ ತಾನಾಗಿ ನಡೆಸಬೇಕಾದ ಮಹತ್ಕಾರ್ಯವದು..
ತಲೆಮಾರಿಗೊಂದು ಬಾರಿ ಒಬ್ಬರಿಗೆ ಮಾತ್ರವೇ ಸಿಗುವ ಈ ಯೋಗ ಯಾರದಾಗಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ………ಅದು ರಮೇಶನನ್ನರಸಿ ಬಂತು..!
“ಯುಗ ಪರಿವರ್ತನೆಯ ಈ ಮಹತ್ಕಾರ್ಯವನ್ನು ನೀನೇ ಮಾಡಬೇಕು” ಎಂದು ರಮೇಶನಿಗೆ ‘ದೊಡ್ಡ ಗುರುಗಳ’ ಅಪ್ಪಣೆಯಾಗಿತ್ತು..
ಪರಿವಾರಕ್ಕೆ ಸಂದ ಪರಮೋಚ್ಚ ಗೌರವವಿದು!
ಆದರೆ ಇತ್ತ ಸಂನ್ಯಾಸದ ಕ್ಷಣಗಣನೆಗಳು ಆರಂಭವಾಗುತ್ತಿದ್ದಂತೆಯೇ ಅತ್ತ ರುಗ್ಣಶಯ್ಯೆಯಲ್ಲಿದ್ದ ರಮೇಶನ ತಂದೆಯ ಮರಣದ ಕ್ಷಣಗಣನೆಯೂ ಆರಂಭವಾಗಿತ್ತು.
ಆಶೌಚ ಬಂದರೆ ಅವಕಾಶವಿರದು…
“ಹೇ ಭಗವಂತ…! ಕೃತಕೃತ್ಯತೆಯ ಆ ಅಮೃತ ಕ್ಷಣಗಳು ಕೈ ಜಾರದಿರಲಿ” ಎಂದು ನೆರೆನಂಬಿದ ರಾಮನಲ್ಲಿ ಮೊರೆಯಿಟ್ಟನಾತ..
ಆ ದಿನ ಬಂದೇ ಬಂದಿತು..
ಮೃತ್ಯುವಿನ ಮುಹೂರ್ತವನ್ನು ಬದಲಿಸಲು ಸಾಧ್ಯವೇ?
ಕತ್ತಲೆ-ಬೆಳಕುಗಳು ರಮೇಶನ ಬಾಳಿನಲ್ಲಿ ಆ ದಿನ ಕೂಡಿ ಆಡಿದವು..
ಅದೇನು ರಾಮನ ದಯೆಯೋ, ಸೇವೆಯ ಫಲವೋ, ತಂದೆಯ ಮೃತ್ಯುವಾರ್ತೆ ತಲುಪುವ ಮೊದಲೇ ಅಮೃತತ್ವದ ಸಂನ್ಯಾಸ ವಿಧಿಗಳು ಪೂರೈಸಿದ್ದವು..
ಗುರುಪೀಠದ ಎರಡು ತಲೆಮಾರುಗಳನ್ನು ಬೆಸೆಯುವ ಬೆಸುಗೆಯಾಗಿ ರಮೇಶನ ಜೀವನ ಸಾರ್ಥಕಗೊಂಡಿತ್ತು..
ವಿಪರ್ಯಾಸವೆಂದರೆ ಸಂನ್ಯಾಸ ದೀಕ್ಷೆಯಲ್ಲಿ ಅತ್ಯಂತ ಮುಖ್ಯಪಾತ್ರ ವಹಿಸಿದ ರಮೇಶನಿಗೆ, ಅದರ ವಾರ್ಷಿಕೋತ್ಸವದಲ್ಲೆಂದೂ ಭಾಗವಹಿಸಲು ಸಾಧ್ಯವಿಲ್ಲ, ಕಾರಣ ವಾರ್ಷಿಕವಾಗಿ ತಂದೆ ಬರುವ ದಿನವದು…
ಅಹೋ..!
ಧನ್ಯಸೇವಕ ರಮೇಶ..!
ರಮೇಶನದು ಉದಾಹರಣೆ ಮಾತ್ರ. ಪರಿವಾರದಲ್ಲಿ ಸೇವೆ ಸಲ್ಲಿಸಿದ ಒಬ್ಬೊಬ್ಬರ ಬಗ್ಗೆ ಹೇಳಹೊರಟರೆ ಅದು ತುದಿಮೊದಲಿಲ್ಲದ ಸೇವಾಕಾವ್ಯವೇ ಆದೀತು..
ನಮ್ಮ ಪರಂಪರೆಯ ಸಂಪ್ರದಾಯವೆಂದರೆ, ಗುರುಸ್ಥಾನವನ್ನಲಂಕರಿಸಿರುವವರು ತಾವಾಗಿ ಏನನ್ನೂ ಮಾಡುವಂತಿಲ್ಲ..
ಲೋಕದ ಕಾರ್ಯವನ್ನು ಗುರು ಮಾಡಿದರೆ ಗುರು ಕಾರ್ಯವೆಲ್ಲವೂ ಇವರದೇ..
ಅಕ್ಷರಶಃ ಗುರುವಿನ ಅಂಗ-ಪ್ರತ್ಯಂಗಗಳಂತೆ ಪರಿವಾರದವರು..
ಸ್ನಾನ, ಭೋಜನ, ಶಯನಗಳಲ್ಲಿ ಅವರು ತಾಯಿ ಪಾತ್ರ ವಹಿಸಿದರೆ ನಾವು ವಹಿಸುವುದು ಮಗುವಿನ ಪಾತ್ರ..
ಸಲಹೆ ನೀಡುವಾಗ ಇವರು ಮಂತ್ರಿಗಳು..
ಚರಣಸೇವೆಯಲ್ಲಿ ದಾಸರು..
ಬದುಕಿಗೆ ಮಾರ್ಗದರ್ಶನ ಕೇಳುವಾಗ ಮಕ್ಕಳು..
ಮಂತ್ರಾಕ್ಷತೆಯ ಪಡೆಯುವಾಗ ಶಿಷ್ಯರು..
ಗುರು-ಶಿಷ್ಯರನ್ನು ಬೆಸೆಯುವಲ್ಲಿ ಬೆಸುಗೆಗಳು…
ಸಂಕಟಗಳು ಬರುವಾಗ ಸೇನಾನಿಗಳು..
ಒಮ್ಮೊಮ್ಮೆ ಪರಿವಾರದಲ್ಲಿ ನಮಗೆ ಲಕ್ಷ್ಮಣ ಕಾಣಿಸುತ್ತಾನೆ..
ಅಯೋಧ್ಯೆಯಲ್ಲಿ ಸೀತಾರಾಮರಿಗೆ ಸಾವಿರ ಸೇವಕರು ಮಾಡುತ್ತಿದ್ದ ಸೇವೆಯನ್ನು ಅಡವಿಯಲ್ಲಿ ಆತನೊಬ್ಬನೇ ಗೈದನಲ್ಲವೇ!
ಒಮ್ಮೊಮ್ಮೆ ಪರಿವಾರದವರಲ್ಲಿ ನಮಗೆ ಭರತ ತೋರುತ್ತಾನೆ..
ಮಠದಲ್ಲಿರಬಹುದಾದ ಸಕಲ ಸಂಪತ್ತುಗಳನ್ನೂ ಸಂರಕ್ಷಿಸುವ, ಸಧ್ವಿನಿಯೋಗ ಮಾಡುವ ಭಾರ ಅವರದ್ದೇ..
ಆದರೆ ಅದ್ಯಾವುದೂ ಅವರದಲ್ಲ…
ಒಡರಿಸುವನೆಲ್ಲವನ್ ಅದಾವುದುಂ ತನದಲ್ಲ,
ಬಿಡನೊಂದನುಂ ರಾಜ್ಯ ತನದಲ್ಲವೆಂದು|
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ,
ಕಡುಯೋಗಿ ಭರತನಲ – ಮಂಕುತಿಮ್ಮ||
ಶಿಲೆಯನ್ನು ಶಿಲ್ಪವನ್ನಾಗಿಸುವಾಗ ಶಿಲ್ಪಿ ತನ್ನ ಚಾಣದ ಅದೆಷ್ಟು ಪೆಟ್ಟುಗಳನ್ನು ನೀಡುವುದಿಲ್ಲ?
ಹಾಗೆಂದು ಶಿಲ್ಪಿಗೆ ಶಿಲೆಯ ಮೇಲೆ ಮಮತೆಯಿಲ್ಲವೆಂದೇನಲ್ಲ..
ಹೆಜ್ಜೆ-ಹೆಜ್ಜೆಗೆ ಪರಿವಾರದವರನ್ನು ದಂಡಿಸುವಾಗ ನಾವೆದುರಿಸುವ ಸಂದಿಗ್ಧವಿದು..
ಒಂದೆಡೆ ಸಮಾಜವೆಂಬ ಬೆಂಕಿ… ಇನ್ನೊಂದೆಡೆ ಗುರುವೆಂಬ ಅಗ್ನಿ-
ಎರಡು ಮಹಾಶಕ್ತಿಗಳ ನಡುವೆ ಪರಿವಾರದವರ ಪರಿ ‘ಅತ್ತ ಪುಲಿ ಇತ್ತ ದರಿ’..
ಇದು ಇದೇನು ಮೊದಲಲ್ಲ..
ಹಿಂದಿನವರ ಅನುಭವವನ್ನು ಈ ಶ್ಲೋಕದಲ್ಲಿ ಗಮನಿಸಿ..
ಮೌನಾನ್ಮೂಕಃ ಪ್ರವಚನಪಟುಃ ಚಾಟುಲೋ ಜಲ್ಪಕೋ ವಾ
ದ್ಷ್ಧಷ್ಟಃ ಪಾರ್ಶ್ವೇ ಭವತಿ ಚ ವಸನ್ ದೂರತೋಪಿ ಪ್ರಗಲ್ಬಃ |
ಶಾಂತ್ಯಾ ಭೀರುಃ ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||
ಮಿತಿಯಲ್ಲಿ ಮಾತನಾಡಿದರೆ “ಮೂಕ”
ಧಾರಾಳ ಮಾತನಾಡಿದರೆ “‘ಪ್ರವಚನ ಪಟು ಅಥವಾ ಹಲುಬುವವನು”
ಪಕ್ಕದಲ್ಲೇ ನಿಂತರೆ “ಎಲ್ಲವೂ ಇವನದ್ದೇ ಆಯಿತು”
ಎಲ್ಲೋ ಮರೆಯಲ್ಲಿದ್ದರೆ “ಊಟಕ್ಕೆ ಮಾತ್ರ ಬರುವವನು”
ವಿನೀತನಾಗಿದ್ದರೆ “ಪುಕ್ಕಲ”
ಗಟ್ಟಿ ನಿಂತರೆ “ಅಧಿಕ ಪ್ರಸಂಗಿ“
ಸೇವಾಧರ್ಮವದೆಷ್ಟು ಗಹನವೆಂದರೆ ಯೋಗಿಗಳಿಗೂ ದುಸ್ಸಾಧ್ಯವಾದುದು (ನಮಗೂ ಹೀಗೆಯೇ ಅನಿಸಿದೆ.)
ಗುರುವೆಂದರೆ ರಾಮಕಿಂಕರ..
ಪರಿವಾರದವರು ಗುರುಕಿಂಕರರು..
ಅಂತವರ ಕುರಿತು ಸಮಾಜದ ಭಾವವೇನಿರಬೇಕೆಂಬುದನ್ನು ರಾಜಾ ಕುಲಶೇಖರನ ಮಾತುಗಳಲ್ಲಿ ಗಮನಿಸಿ..
ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ- ಭೃತ್ಯ- ಭೃತ್ಯಸ್ಯ- ಭೃತ್ಯ ಇತಿ ಮಾಂ ಸ್ಮರ ಲೋಕನಾಥ ||
” ಹೇ ಭಗವಂತ.. ನಿನ್ನ ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕ ನಾನು ಎಂದೊಮ್ಮೆ ನೆನೆಸಿಕೊಂಡರೂ ಬದುಕು ಸಫಲ..”
ಹಿಂದೆಲ್ಲ ಹಿರಿಯರು ಮಠದಲ್ಲಿ ಓಡಿಯಾಡುವ ನಾಯಿಗಳನ್ನು ತೋರಿಸಿ “ಮಠದ ಹಳೆಯ ಸೇವಕರು” ಎಂದು ಪರಿಚಯಿಸುತ್ತಿದ್ದುದುಂಟು.
“ಹಾಗೆಂದರೆ” ಎಂಬ ಪ್ರಶ್ನೆಗೆ ” ಹಿಂದಿನ ಜನ್ಮದಲ್ಲಿ ಮಠದಲ್ಲಿ ಪರಿವಾರದವರೋ ಅಧಿಕಾರಿಗಳೋ ಆಗಿದ್ದು ಮಾಡಿದ ತಪ್ಪುಗಳ-
ಭಾರವನ್ನಿಳಿಸಲು ಈ ಜನ್ಮದಲ್ಲಿ ನಾಯಿಗಳಾಗಿ ಇಲ್ಲಿಗೆ ಬಂದಿರುವವರು” ಎಂದು ಉತ್ತರಿಸಿದುದುಂಟು..!
ಪರಿವಾರದಲ್ಲಿ ತಪ್ಪುಗಳೇ ನಡೆಯುವುದಿಲ್ಲವೆಂದಲ್ಲ,
ಅವರೂ ಮನುಷ್ಯರೇ ಅಲ್ಲವೆ?
ತಪ್ಪುಗಳೇ ಇಲ್ಲದುದೆಲ್ಲಿ?
ಸಂತರು ತಪ್ಪು ಮಾಡುವುದಿಲ್ಲವೇ?
ರಾಜರು ತಪ್ಪು ಮಾಡುವುದಿಲ್ಲವೇ?
ಸಾಮಾಜಿಕರು ತಪ್ಪು ಮಾಡುವುದಿಲ್ಲವೇ?
ನಮ್ಮ ಶರೀರದಲ್ಲಿಯೇ ಎಲ್ಲೋ ಒಂದೆಡೆ ರೋಗ ಉಂಟಾದರೆ ಹೀಗಳೆಯುವುದುಂಟೇ… ಬಿಟ್ಟುಬಿಡುವುದಂಟೇ…?
ಬಾಹ್ಯ ಜಗತ್ತಿನ ಸಕಲ ಸುಖಸಾಧನಗಳ ಸೆಳೆತಗಳನ್ನು ಮೀರಿ, ಭೋಗಪರರಿಗೆ ಹೇಗೆ ನೋಡಿದರೂ ಶುಷ್ಕವೆನಿಸುವ ಮಠದ ವಾತಾವರಣದಲ್ಲಿ-
ಸೇವೆಗೈಯ್ಯಲು ಧಾವಿಸಿ ಬರುವ ಈ ಜೀವಿಗಳನ್ನು ಅದಾವುದು ಸೆಳೆಯಿತು..!?
ನಾಲ್ಕು ದಿನಕ್ಕೆಂದು ಬಂದು ಜೀವನವಿಡೀ ನಿಂತವರುಂಟು..
ಭೇಟಿ ಮಾಡಲು ಬಂದು ಭೇಟಿ ಮಾಡಿಸಲು ನಿಂದವರುಂಟು..
ಅದ್ಯಾವ ಬಗೆಯ ಸೆಳೆತವೋ!!
ಯಾವ ವೃಂದಾವನವು ಸೆಳೆಯಿತೊ ನಿನ್ನ ಮಣ್ಣಿನ ಕಣ್ಣನು..
ಯಾವ ವೃಂದಾವನವು ಚಾಚಿತೊ ತನ್ನ ಮಿಂಚಿನ ಕೈಯ್ಯನು..
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..
ಪರಿವಾರವೆ೦ದರೆ ಗುರುದ್ವಾರ..
ಮುಚ್ಚಿದ್ದು ಮರೆಯದು…ತೆರದದ್ದು ನೆನಪೇ ಇರದು…
ಪರಿವಾರವೆ೦ದರೆ ಗುರುವಿನ ದಾರಿ..
ಗುರಿ ತಲುಪಿದ ಮೇಲೆ ದಾರಿಯ ಪರಿವೆ ಇಲ್ಲ..
ಪರಿವಾರವೆಂದರೆ ಗುರುವಿನ ಮೆಟ್ಟಿಲು..
ಮೆಟ್ಟಿಲು ಇರುವುದು ಮೂರ್ತಿಯ ಮುಟ್ಟಲು..
ಆದರೆ ಹಲವರ ಭಾವನೆ… ಮೆಟ್ಟಿಲು ಇರುವುದೇ ಮೆಟ್ಟಲು..!
ಶಿವಾಜಿ ಹುಟ್ಟಿ ಬರಲೇ ಬೇಕು, ಆದರೆ ನಮ್ಮ ಮನೆಯಲ್ಲಲ್ಲವೆಂದರೆ ಹೇಗೆ?
ಆದಿಶಂಕರರು ಅವತಾರ ತಾಳಲೇ ಬೇಕು, ಆದರೆ ಪಕ್ಕದ ಮನೆಯಲ್ಲಿ ಎಂದರೆ ಸರಿಯೇ?
ನಮಗೆ ಮಠ ಬೇಕು, ಗುರು ಬೇಕು ಎಂದ ಮೇಲೆ ಪರಿವಾರವೂ ಬೇಕೇ ಬೇಕು..
ಒಮ್ಮೆ ಯೋಚಿಸಿ, ನಿಂತಲ್ಲಿ ಕುಳಿತಲ್ಲಿ ಪರಿವಾರವನ್ನು ವಿಮರ್ಶಿಸುವ ನಾವು ಆ ಕಾರ್ಯಕ್ಕೆ ನಮ್ಮ ಮಕ್ಕಳನ್ನು ಕಳುಹಿಸಿಕೊಡಲು ಸಿದ್ಧರಿದ್ದೇವೆಯೇ?
ರಾಮಬಾಣ:
ನಿಮ್ಮ ಮುಂದೆ ಎರಡು ಆಯ್ಕೆಗಳು.
ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳುಹಿಸಿಕೊಡಿ.
ಅದು ಸಾಧ್ಯವಾಗದಿದ್ದರೆ..
ಪರಿವಾರದವರನ್ನು ನಿಮ್ಮ ಮಕ್ಕಳಂತೆ ನೋಡಿ..!
|| ಹರೇರಾಮ ||
July 11, 2010 at 11:03 PM
ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ..!
ಈ ಮಾತನ್ನು
ಪರಿವಾರದವರು ಯಾರು ಒಪ್ಪುವುದಿಲ್ಲ ಸಂಸ್ಥಾನ..
July 11, 2010 at 11:17 PM
ಗುರುಗಳ ಕ೦ಬನಿ-ಮಿಡಿದ-ಹೃದಯ ಇಲ್ಲಿದೆ. ಯಾವ “ರಾಮ” “ರಾಜ್ಯ” ಲೇಖನವು ಈ ಲೇಖನಕ್ಕೆ ಯಾವುದೇ ರೀತಿ ಸಾಟಿಯಲ್ಲ.
July 11, 2010 at 11:41 PM
ಈಗ ನಾವು ಸುಖವಾಗಿ ಟಿ.ವಿ. ನೋಡಿಕೊ೦ಡು ವಾಸ ಮಾಡುತ್ತಿರುವ ಜಾಗದಲ್ಲಿ ಈಗ ಮಳೆ ಬರುತ್ತಿದೆ. ಕಾರಣ ಇ೦ತಹ ಕೆಲವೇ ಕೆಲವು ಸೇವಾಕಾವ್ಯ ಕವಿ ಹೃದಯದವರಿ೦ದ, ಭೂಮಿ ಇವರಿಗಾಗಿ ಸುತ್ತುತ್ತಿದೆ, ಮಧ್ಯದಲ್ಲಿ ನಾವೂ ತಿ೦ದು೦ಡುಕೊ೦ಡಿರುವೆವು.
July 11, 2010 at 11:24 PM
ಹರೇರಾಮ
ನಮಗಂತೂ ತಂದೆ ತಾಯಿ ಬಂಧು ಬಳಗದವರ ಬಂಧುತ್ವದ ಹಾಗೆ ತುಂಬಾ ನೆಮ್ಮದಿ ಸುಖವನ್ನು ತಂದುಕೊಟ್ಟಿದೆ. ಆ ಒಂದು ಬಾಂಧವ್ಯದ ಸವಿ ನೆನಪು ಇಂದಿಗೂ ಕಾಡುತ್ತಿದೆ. ಆ ಬಾಂಧವ್ಯದ ಬೆಸುಗೆ ಸರಿಯಾಗಿ ಮುಂದುವರಿಸಿಕೊಂಡು ಹೋಗುವಂತೆ ಅನುಗ್ರಹಿಸಬೇಕು.
ಹರೇರಾಮ
July 11, 2010 at 11:51 PM
ರಮೇಶಣ್ಣನ ಜೊತೆಯಲ್ಲಿರುವ ನಾವುಗಳೂ ಧನ್ಯರು..
ಇಂಥ ಗುರುವನ್ನು ಬೇರೆಲ್ಲೂ ಕಾಣೆವು…
ಗುರುವೇ ತಾಯಿ ನಮಗೆ ..
ಆ ತಾಯಿಯ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ..
July 11, 2010 at 11:57 PM
‘ಬಲ್ಲವನೇ ಬಲ್ಲ ಬೆಲ್ಲದ ಸವಿಯ’ ಎನ್ನುವಂತೆ ಪರಿವಾರದ ಸವಿ ಇದ್ದವ – ಇರುವವನಿಗೇ ಗೊತ್ತು….
ಪರಿವಾರವೆಂದರೆ ಜೇನುಗೂಡಿದ್ದಹಾಗೆ, ‘ರಾಣಿ’ ಹುಳವೇ ಪ್ರಧಾನ. ಪ್ರೀತಿ ಎಂಬ ಮಧು ಇಲ್ಲಿ ಎಲ್ಲರಿಗೂ ಸಮಾನ….
July 12, 2010 at 10:10 AM
ಸರಿಯಾಗಿ ಹೇಳಿದೆ ಗೌತಮ….
July 12, 2010 at 10:00 AM
ನಮಗೋ ಯಾವಾಗಲೋ ಒಂದು ದಿನ ಗುರುಗಳು ಬರುವ ಸಂಭ್ರಮ .ಆದರೆ ಪರಿವಾರದವರಿಗೆ ದಿನಾ ಒಂದೇ .ನಮಗೋ ಒಂದೆರಡು ದಿನ ಊಟ ,ನಿದ್ದೆ ಇಲ್ಲದಿರಲು ಕಷ್ಠ , ಆದರೆ ಈ ಮಕ್ಕಳೋ ಯಾವಾಗಲೂ ತಮ್ಮೆಲ್ಲಾ ಆಸೆಗಳನ್ನೂ ಬದಿಗೊತ್ತಿ ಗುರು ಸೇವೆಯೇ ತಮ್ಮ ಧ್ಯೇಯವೆಂದು ಮಾಡುತ್ತಾರೆ . ನಿಜವಾಗಿಯೂ ಅವರು ಧನ್ಯರು .” ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ ” ಈ ಮಾತು ನಿಜವೇ ? ಸಮಯ ದೊರೆತಾಗೆಲ್ಲಾ ದಿನದ ಹಲವಾರು ಬಾರಿ ಅವರ ಆರೋಗ್ಯ ವಿಚಾರಿಸುತ್ತಾರೆ .ಇದು ನನ್ನ ಅನುಭವ .
July 12, 2010 at 10:04 AM
ನಿಜಕ್ಕೂ ಪರಿವಾರದ ತ್ಯಾಗಕ್ಕೆ ಸರಿಸಾಟಿಯಿಲ್ಲ….
ಪರಿವಾರಕ್ಕೆ ಕಳಿಸಲು ಆಗದಿದ್ದರೆ ಕಡೇಪಕ್ಷ ಅದನ್ನು ಬೆಳೆಸುವ ಅಥವಾ ಅಭಿಮಾನಪಡುವ ಕೆಲಸವಾದರೂ ನಮ್ಮಿಂದ ಆಗಬೇಕು..
July 22, 2010 at 9:09 AM
its true…….. we may not able to do anything good for Sri mata but we must not harm to them……… Hands of to all (Parivaara)………………. Nothing can be a great rather than this………
I am proud about you and your scarifies………. Great……..!
:”Guru saaratyada saaarathigaligidoo dhanyavaadagalu”…………..
July 12, 2010 at 10:15 AM
ನಿಮಗೆರಡು ಅಯ್ಕೆ….ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳಿಸಿ ,,ಇಲ್ಲಾ ಪರಿವಾರದವರನ್ನು ಮಕ್ಕಳ೦ತೆ ನೋಡಿ…
ಇದು ರಾಮ ಬಾಣವೇ….ಪರಿವಾರದವರ ಬಗ್ಗೆ ಕೊ೦ಕು ನುಡಿವವರು ಈ ಮಾತನ್ನು ಓದಲೇ ಬೇಕು..
ಗುರುದೇವಾ…ಒಟಿನಲಿ ಈ ಲೇಕನ ಕಣ್ಣು ತೆರೆಸುವ೦ತಿದೆ…
ತಾನು ಮಾಡ, ಬೇರೆಯವರ ಮಾಡಲು ಬಿಡ,,ಹೀಗಿರುವ ಜನರಿಗೆ
ಗುರುಹ್ರುದಯ ವೈಶಾಲ್ಯತೆ ಮನಕ್ಕೆ ತಟ್ಟಿತು…
ಪರಿವಾರದವರಿಗಿದೋ ಕೋಟಿ ನಮನಗಳು…
July 12, 2010 at 11:23 AM
ಹರೇರಾಮ,
ಈ ಪರಿಯ ಪರಿಕಲ್ಪನೆ
ಪರಿಗ್ರಹಿಸುವ ಪರಿಯು
ಪರಿತಪಿಸುವ ಪರಮೋಚ್ಚನ
ಪರಿವಾರದಲಿ ಕಂಡೆ ಪರಮಾತ್ಮನ
ಹರೇರಾಮ
July 12, 2010 at 11:23 AM
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ|
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ಗುರುದೇವ||
ತಾಯಿ ತಂದೆಯರು ಮಗುವಿಗೆ ಲೌಕಿಕವಾದ ವಿದ್ಯೆಗಳಲ್ಲಿ, ಇಹದಲ್ಲಿ ಬದುಕಿಗೆ ಬೇಕಾದ ವ್ಯವಸ್ತೆಗಳಲ್ಲಿ ಪರಿಣತಿಯನ್ನು, ಅದಕ್ಕೆ ಬೇಕಾದ ವಿದ್ಯೆಗಳನ್ನು ಕಲಿಸುತ್ತಾರೆ. ತಂದೆ-ತಾಯಿಯರ ಪ್ರೀತಿಯಲ್ಲಿ ಸ್ವಾರ್ಥವಿರಬಹುದು.
ಆದರೆ ಗುರು ಪ್ರೀತಿ ಹಾಗಲ್ಲ. ಅದು ಒಂದು ಅಲೌಕಿಕವಾದ ಪ್ರೀತಿ-ಆಕರ್ಷಣೆ.
ಅಷ್ಟು ಮಾತ್ರವೇ ಅಲ್ಲ. ಗುರು ಭಗವಂತನ ದರ್ಶನಕ್ಕೆ ಬಾಗಿಲು. ಮೊದಲ ದೇವರೇ ಗುರು. ಆ ಗುರು ಸೇವೆಯಲ್ಲಿರುವ ನಾನೇ ಧನ್ಯ
July 12, 2010 at 11:41 AM
ಹರೇ ರಾಮ
ಇದಲ್ಲವೇ ನಮ್ಮ ಸಂಸ್ಥಾನ ನಮ್ಮ ಪರಿವಾರಕ್ಕೆ ಅನುಗ್ರಹಿಸಿದ ಮಹಾಪ್ರಶ್ಸಸ್ತಿ .. ಅಲ್ಲ ಮಹಾ ಫಲ… ಅಲ್ಲಲ್ಲ ಮಹಾ ಪ್ರಸಾದ..!!
ಇದು ಯುಗ ಯುಗದ ಯೋಗ..ಮಹಾ ಯೋಗ…ನಾವು ನಮ್ಮವರೆಲ್ಲ ಧನ್ಯರು…
ಪ್ರಪಂಚದ ಮಾತೃವಾತ್ಸಲ್ಯದ ಏಕಮೇವ ಮಹಾಗುರುವಿನ ಕಾರುಣ್ಯ ಧಾರೆಗೆ ನಮೋ ನಮ:..
ಎಂತು ಕಾಣಲಯ್ಯ ಇಂಥ ಗುರುವ ?
ಇನ್ನೆಂತು ಸೇವಿಸಲಯ್ಯ ಇಂಥ ಗುರುವ..?
ನಮ್ಮ ಗುರುವ ..?
ಅಹೋ ಭಾಗ್ಯ ಕರುಣಿಸಿದ ನಮ್ಮ ಮಹಾಗುರುವಿಗೆ ಶರಣು ಶರಣು
ಪ್ರಣಾಮಗಳು..ಮೋಹನ
July 12, 2010 at 11:41 AM
ಮನಸಿ ವಚಸಿ ಕಾಯೆ ಪುಣ್ಯಪೀಯೂಶ ಪೂರ್ಣಾಃ ತ್ರಿಭುವನಮುಪಕಾರ ಶ್ರೇಣಿಭಿಃ ಪ್ರೀಣಯಂತಃ
ಪರಗುಣ ಪರಮಾಣೂನ್ ಪರ್ವತೀಕೃತ್ಯ ನಿತ್ಯಂ ನಿಜಹೃದಿ ವಿಕಸಂತಿ ಸಂತಿ ಸಂತಃ ಕಿಯಂತಃ
ಪ್ರಣಾಮಗಳು..
ಗುರುನುಡಿಗಳೆಂದೂ ಬಿರುನುಡಿಗಳಾಗದು…..
ನಿಜ ಎಂಥ ವಿಚಿತ್ರ ಜೀವನ ಅನ್ನಿಸಿದರೂ,ಅದರ ಸೊಗಸೇ ಬೇರೆ…
ನನ್ನಾನುಭವಕ್ಕೆ ಬಂದಂತೆ..
ದಿನವಿಡೀ ದುಡಿದು ಹಣ್ಣಾದರೂ… ಗುರುಗಳ ಒಂದು ಮುಗುಳ್ನಗೆಗೆ… ಒಂದು ಮಧುರ ನುಡಿಗೆ… ಅಥ್ವಾ ಒಂದು ಬೈಗುಳಕ್ಕೆ… ಆ ಎಲ್ಲ ನೋವೂ ದೂರ… ಮನಸ್ಸು ಮುಂದಿನ ಕೆಲಸಕ್ಕೆ ಅಣಿಯಾಗುತ್ತದೆ… ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ….
ಮನತುಂಬಿ… ಯಾವುದೋ ಅವ್ಯಕ್ತಭಾವವೊಂದು… ನೆಮ್ಮದಿಯನ್ನು ನೀಡುತ್ತದೆ..
ನಂತರ ಎಲ್ಲವೂ ಸುಖ…
ಅಂಥದ್ದೊಂದು ಸುಖಕ್ಕಾಗಿ ಮನಸ್ಸು ಎಂದೆಂದಿಗೂ ತುಡಿಯುತ್ತದೆ…
ಅದೆಷ್ಟು ಕಷ್ಟವಾದರೂ ಸರಿ… ಅದೇ ಜೀವನವನ್ನು ಬಯಸುತ್ತದೆ….
ಗುರುಸೇವೆಯೇ ಪರಮಭಾಗ್ಯ…..
July 12, 2010 at 12:14 PM
ರಾಜಾ ಕುಲಶೇಖರನ ವಾಕ್ಯವನ್ನು ವಿವರಿಸಿದ ಪರಿಯಿದೇ??
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾಧೆಯ ವಿವರಣೆಯ ವಿಧಾನವೇ??
ನಮ್ಮ ತಪ್ಪುಗಳನ್ನು ಮನ್ನಿಸುವ ರೀತಿಯೋ…??
ನೀನಿರಬೇಕಾದ ರೀತಿಯಿದೆಂಬ ಸಂದೇಶವೋ….??
ಯಾವುದಾದರೂ ಇರಲಿ, ಅದನ್ನು ಸಾಕಾರ ಗೊಳಿಸಲು ಗುರುಕೃಪೆಯು ಸದಾ ನಮ್ಮೊಂದಿಗಿರಲಿ.
ಧನ್ಯೋಹಂ!! ಧನ್ಯಾಃ ವಯಂ!!
ಜಿರಲೆಯ ಜೀವನದಿಂದ ಮುಕ್ತಿ ಕೊಟ್ಟು ಭಕ್ತನ ಜೀವನದ ಹಾದಿ ತೋರಿ………..
July 12, 2010 at 12:19 PM
ನನ್ನೊಡನಾಡಿಗಳೇ….
ಕೇಳಿದಿರಾ ತಂದೆಯ ಮಾತನ್ನು..?
ಅನುಭವಿಸಿದಿರಾ ತಾಯಿಯ ವಾತ್ಸಲ್ಯವನು..?
ಅದಕೆ ತಕ್ಕಂತೆ ನಾವಿರಬೇಕಲ್ಲವೇ..?
ಬೆಲೆ ಕಟ್ಟಲಾಗದ ಪ್ರೀತಿಗೆ ಒಂದಲ್ಪವಾದರೂ…..
July 12, 2010 at 12:40 PM
“ಸಾಮಥ್ಯ೯- ವಯಸ್ಸುಗಳಿಗೆ ಮೀರಿದ ಕೆಲಸ..
ಸಮಯ ಸೀಮಿತ…
ಅನುಭವ ಪರಿಣತಿಗಳು ಅಲ್ಪ..
ತರಬೇತಿ ತಾನಾಗಿಯೇ ಆಗಬೇಕು..
ಫಲಿತಾಂಶ ಮಾತ್ರ ನೂರಕ್ಕೆ ನೂರು ಬರಲೇ ಬೇಕು..!”
——— ಸ೦ಸ್ಥಾನದ ಕೆಲಸವೋ ಸಾಫ್ಟವೇರ್ ಕೆಲಸವೋ????
July 14, 2010 at 10:32 AM
ಮೌನಾನ್ಮೂಖಃ ಪ್ರವಚನಪಟುಃ ಚಾಟುಲೋ ಜಲ್ಪಕೋ ವಾ
ದೃಷ್ಟಃ ಪಾರ್ಶ್ವೇ ಭವತಿ ಚ ವಸನ್ ದೂರತೋಪಿ ಪ್ರಗಲ್ಬಃ |
ಶಾಂತ್ಯಾ ಭೀರುಃ ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||
ಮಿತಿಯಲ್ಲಿ ಮಾತನಾಡಿದರೆ ಮೂಕ..
ಧಾರಾಳ ಮಾತನಾಡಿದರೆ ಪ್ರವಚನ ಪಟು ಅಥವಾ ಹಲುಬುವವನು….
ಪಕ್ಕದಲ್ಲೇ ನಿಂತರೆ “ಎಲ್ಲವೂ ಇವನದ್ದೇ ಆಯಿತು”..
ಎಲ್ಲೋ ಮರೆಯಲ್ಲಿದ್ದರೆ ಊಟಕ್ಕೆ ಮಾತ್ರ ಬರುವವರು.
ವಿನೀತನಾಗಿದ್ದರೆ ಪುಕ್ಕಲ, ಗಟ್ಟಿ ನಿಂತರೆ ಅಧಿಕ ಪ್ರಸಂಗಿ ವಂಶದವ..!
ಸಂಸ್ಥಾನದ ಕೆಲಸದ ಮಧ್ಯೆ ಈ ಮೇಲಿನ ಮಾತುಗಳ ಪ್ರಯೋಗವನ್ನು ತಡೆಯಲು
ಸಾಫ್ಟ ವ್ಹೆರ್? ಮತ್ತು ಹಾರ್ಡ್ ವ್ಹೆರ್? ಈ ಎರಡೂ ತರಬೇತಿ ಅನಿವಾರ್ಯವಲ್ಲವೇ?
ನಿಮಗೂ ಹಾಗೇ ಎನಿಸುತ್ತಿದೆಯೇ? ಹಾಗಾದರೆ ತಡವೇಕೆ? ಪರಿವಾರಕ್ಕೆ ತರಬೇತಿ ಕೊಡಲು ಸಂಸ್ಥಾನದ ಸಹಾಯಕ್ಕೆ ಸಿದ್ಧರಾಗಿ.
July 12, 2010 at 12:43 PM
ಮೊದಲ ಭಾಗ ಓದುವಾಗ ಕಣ್ಣುತುಂಬಿ ಬಂತು.
July 22, 2010 at 9:18 AM
Haree raama……..!
Yaako idanna odta irde mana tumbi bata iddu……. Guruvina rakshe, makkala golata, taayiya santvana heege hrudayada baagalna tattu. Sevavaahinili ene idru estotgu Yavde kaaryakku nan barak ready iddi samshana………(9449704447)… its true…….. we may not able to do anything good for Sri mata but we must not harm to them……… Hands of to all (Parivaara)………………. Nothing can be a great rather than this………
I am proud about you and your scarifies………. Great……..! But i feel jealous about you because your MOTHER is always with you………………! So… Be Happy. Be truth.
:”Guru saaratyada saaarathigaligidoo dhanyavaadagalu”…………..
July 12, 2010 at 2:32 PM
ಮನ ಮಿಡಿವ ಲೇಖನ..
ಎಲ್ಲವನ್ನೂ ತೊರೆದು ಬರುವ ಸೇವಕರನ್ನು ಸೆಳೆವ ‘ಗುರು’ತ್ವಾಕರ್ಷಣೆ ಅತ್ಯದ್ಭುತ!
ಪರಿವಾರದ ಬಗೆಗಿನ ತಾತ್ಸಾರವನ್ನು ಪರಿಹಾರ ಮಾಡಿದ ಗುರುಗಳಿಗೆ ನಮೋನ್ನಮ:
ಸಮರ್ಪಿತ ಜೀವಗಳಿಗೆ ಭಾವನಮನ
July 12, 2010 at 3:00 PM
ಹರೇರಾಮ
ವಂದೇ ಗೋಮಾತರಮ್
July 12, 2010 at 3:10 PM
ಭಾವೋತ್ಕಟ ಲೇಖನಕ್ಕೆ ಅಕ್ಷರರೂಪದ ಪ್ರತಿಕ್ರಿಯೆ ಸಾಧ್ಯವಿಲ್ಲ ; ಸಾಧುವೂ ಅಲ್ಲ !
ನಾವು ಮಾಡಬೇಕಾದ್ದು,
ಪರಿವಾರವನ್ನು ಕೀಳಾಗಿ ಭಾವಿಸಿದ್ದರೆ ಪಶ್ಚಾತ್ತಾಪ.
ಅವರ ಮೇಲಿರುವ ಗೌರವದ ಇಮ್ಮಡಿ,
ಸಾಧ್ಯವಾದರೆ,
ಪರಿವಾರದ ಜೊತೆ ನಾವೂ ಒಬ್ಬರಾಗಿ, ಅವರು ಅನುಭವಿಸುವ ಕಷ್ಟ – ಇಷ್ಟಗಳ ಅನುಭವ. . . .
July 12, 2010 at 11:54 PM
ನಿಜ …ಎಲ್ಲರೂ ಹೀಗೇ ಯೋಚಿಸಿದರೆ ….ಯೋಜಿಸಿದರೆ ….ಅದುವೇ ರಾಮರಾಜ್ಯ
July 12, 2010 at 3:10 PM
ತಮ್ಮ ಸೇವೆ ಮಾಡುವವರನ್ನು ಅಥವಾ ಕೆಲಸ ಮಾಡುವವರ ಬಗ್ಗೆ ಲೇಖನರೂಪವಾಗಿ ಬರೆಯಲು ನಮ್ಮ ಜಗದ್ಗುರುಗಳಿಗೆ ಅಥವಾ ನಮ್ಮ ಒಡೆಯನಿಗೆ ಮಾತ್ರ ಸಾಧ್ಯ…
ಇದೆಲ್ಲಾ ನಿಜವಾದರೂ ಗುರುಕೃಪೆ ನಮ್ಮ ಮೇಲಿಲ್ಲವೇ?
ಆ ಗುರುಶಕ್ತಿಯ ಮುಂದೆ ನಮ್ಮ ಶರೀರದ ಆಯಾಸವೋ, ನಿದ್ದೆ-ಆಹಾರ ಬಿಟ್ಟ ದಿನಗಳೋ, ಕಷ್ಟವಾಗಿ ಪರಿಣಮಿಸಲೇ ಇಲ್ಲ..!
ಅನುದಿನವೂ ನಮ್ಮ ಕಾಯವು ಗುರುಸೇವೆಗಾಗಿ ನವೋಲ್ಲಾಸಿತವಾಗಿ ಅಣಿಯಾಗುತ್ತಿತ್ತು..ಈಗಲೂ ಸಹ…
July 12, 2010 at 3:18 PM
ಎಲೆಮರೆಯ ಕಾಯಂತೆ ಸದಾ ಶ್ರೀಗಳವರ ಬೆನ್ನಿಗಿದ್ದು ಅವರ ಎಲ್ಲ ಕೆಲಸಗಳನ್ನು ನಿಷ್ಟೆಯಿಂದ ಮಾಡುತ್ತಾ ಬಂದಿರುವ ಎಲ್ಲ ಸಹೃದಯರಿಗೆ ಶುಭಹಾರೈಕೆಗಳು. ಅದೆಷ್ಟು ಕೆಲಸವಿದ್ದರೂ ದಣಿವರಿಯದಂತೆ ನೀವೆಲ್ಲಾ ಸೇವೆ ಮಾಡಿದ್ದೀರಿ. ನಿಜವಾಗಲು ನೀವು ಧನ್ಯರು. ಅದೆಷ್ಟೋ ಬಾರಿ ನಾವು ಅರಿಯದೇ/ಅರಿತು ನಿಮಗೆ ಬೇಸರ ತಂದಿರಬಹುದು, ನಿಮ್ಮೊಂದಿಗೆ ರೇಗಿರಬಹುದು. ಆದರೆಅದೆಲ್ಲವನ್ನೂ ನೀವು ಮನಸ್ಸಲ್ಲಿ ಇಟ್ಟುಕೊಳ್ಳದೇ ಮತ್ತೆ ಮತ್ತೆ ನಗುಮುಖದಿಂದ ಮಾತನಾಡಿದ್ದೀರ. ಒಂದು ಶಕ್ತಿಯ ಜೊತೆ ನೀವಿದ್ದೀರ. ಆ ಶಕ್ತಿ ನಿಮ್ಮೆಲ್ಲರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸದಾಕಾಲ ನೀವು ಸಂತೋಷದಿಂದಿರಿ. ಅದೇ ನಮ್ಮೆಲ್ಲರ ಪ್ರೀತಿಪೂರ್ವಕ ಹಾರೈಕೆಗಳು
July 12, 2010 at 3:57 PM
ಶಂಭೋರ್ಮೂತಿಃ ಚರತಿ ಭುವನೇ…………………..
ಗುರುಗಳೇ,
ನಿಮ್ಮ ಈ ಲೇಖನ, ಹರ-ಗಣದ ಹರಗಣದ ಹರಹು ಏನೆಂದು ತಿಳಿಯುವಂತೇ ಮಾಡುವಲ್ಲಿ ಸಫಲವಾಗಬಹುದಲ್ಲವೇ?
July 12, 2010 at 4:32 PM
ಅಂದು ರಾಮನವಮಿಯಂದು ’ಧನ್ಯ ಸೇವಕ’ ಪ್ರಶಸ್ತಿ ಕೊಟ್ಟ ನಂತರ ಗುರುಗಳ ಆಶೀರ್ವಚನವನ್ನು ನಾನು ಎಂದು ಮರೆಯೊಲ್ಲ. ’ನಿಮಗೆಲ್ಲ ಅಸಮಾಧಾನ ಇದ್ದರೆ ನಮ್ಮ ಮೇಲೆ ತೋರಿಸಿ, ಆದರೆ ಪರಿವಾರದವರನ್ನು ಏನೂ ಅನ್ನಬೇಡಿ. ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳಿಸಿ, ಸಾಧ್ಯವಿದೆಯಾ?’ ಅಂತ ಗುರುಗಳು ಕೇಳಿದ್ದರು. ಗುರುಗಳು ಪರಿವಾರದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ನೋಡಿ ನಾನು ಮೂಕಳಾದೆ. ಆಗಲೂ ಕಣ್ಣಲ್ಲಿ ನೀರು ಬಂದಿತ್ತು, ಈಗಲೂ ಬಂತು.
ಅಂತಾ ಪರಿವಾರದಲ್ಲಿ ಇದ್ದು, ಗುರುಗಳ ಸೇವೆ ಮಾಡುತ್ತಿರುವವರೇ ಧನ್ಯರು. ಕೊನೆಪಕ್ಷ ಅವರಲ್ಲು ನಮ್ಮ ಮಕ್ಕಳಾಗಿ, ಅಣ್ಣತಮ್ಮಂದಿರಾಗಿ ಕಂಡು ಗುರುಗಳ ಆಶೀರ್ವಾದಕ್ಕೆ ಪಾತ್ರರಾಗೊಣ.
July 12, 2010 at 6:58 PM
ಪರಿವಾರದ ಬಗೆಗಿನ ತಪ್ಪು ತಿಳುವಳಿಕೆಗಳನ್ನು ಮತ್ತು ಅವರ ಮಹತ್ವವನ್ನು ಮನಮುಟ್ಟುವಂತೆ ಮಾಡುವ ಬರಹ..
July 12, 2010 at 7:22 PM
ಪರಿವಾರದ ಹಿರಿಯಸದಸ್ಯ ಕೋಡನಕಟ್ಟೆ ಸ್ವಾಮಿಯಣ್ಣನವರ ಪ್ರತಿಕ್ರಿಯೆ……
ಅವರು ಅಂತರ್ಜಾಲವನ್ನು ಬಳಸದಿರುವುದರಿಂದ ಬರೆದು ಕೊಟ್ಟಿರುವುದು……..
ದೀನೋದ್ಧಾರಕ, ದೀನರಕ್ಷಕ, ದೀನದಯಾಳು, ಪರಮದಯಾಳು, ಪವಾಡಪುರುಷರಾದ ಶ್ರೀಗಳಚರಣ ಸೇವಾಭಾಗ್ಯ ದೊರಕಿದ ಹೊಸಚಿಗುರು – ಹಳೆಬೇರುಗಳಿಂದ ಒಡಗೂಡಿದ ಶ್ರೀಪರಿವಾರದವರಾದ ನಾವೇ ಧನ್ಯರು.
July 12, 2010 at 7:26 PM
ಹರೇ ರಾಮ. ಗಂಟಲು ಕಟ್ಟಿ ಬಂತು.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಗುರು ಪರಿವಾರದ ಗುರುತ್ವವನ್ನು ಅಂತರಾಳವನ್ನು ಶ್ರೀಗಳು ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ. ಎಷ್ಟೋ ಬಾರಿ ಮನಸ್ಸಿನಲ್ಲಿಅನಿಸಿದ್ದು ಸುಳ್ಳಲ್ಲ-ಪರಿವಾರದ ಈ ವ್ಯಕ್ತಿ ಹೀಗೇಕೆ ಎಂದು. (ಆ ಮೇಲೆ ಅದಕ್ಕೆ ಸಮಾಧಾನ ಮಾಡಿಕೊಂಡಿದ್ದೂ ಇದೆ-ಪಾಪ,ಅವರ ಸ್ಥಾನದಲ್ಲಿ ನಾನಿದ್ದರೂ ಕಷ್ಟವೇ ಅಲ್ಲವೇ ಎಂದು.) ಶ್ರೀಗಳ ಲೇಖನ ಓದಿದ ನಂತರ ನಮ್ಮಿಂದ ಎಂಥಾ ತಪ್ಪು ನಡೆಯುತ್ತಿದೆ ಎಂದು ಮನನವಾಗುತ್ತಿದೆ. ಕ್ಷಮಿಸು ತಂದೆಯೇ. “ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳಿಸಿ;ವಾ ಅವರನ್ನು ನಿಮ್ಮ ಮಕ್ಕಳಂತೆ ಕಾಣಿ” ಇದು ಮನದಾಳಕ್ಕೆ ತಲುಪಿದ ಮಾತು. ಗುರುಆಣತಿಗೆ ನಾವು ಬದ್ಧರು. ಹರೇರಾಮ.
July 12, 2010 at 7:38 PM
ತುಂಬಾ ಮಹತ್ವ ಕೊಡಬೇಕಾದ ವಿಷಯ… ನಮಗೆ ಸದಾ ಗುರುಗಳ ಅನುಗ್ರಹ, ಮಾರ್ಗದರ್ಶನ ಬೇಕಾಗುವುದರಿಂದ ಅವರ ಪರಿಚಾರಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿದ್ದೇನೆ.
ಪರಿವಾರದವರು ನಮ್ಮೆಲ್ಲರ ಪ್ರತಿನಿಧಿ ಎಂದು ಅಂದುಕೊಳ್ಲುತ್ತೇನೆ. ಏಕೆಂದರೆ ಎಲ್ಲ ಶಿಷ್ಯರು ಸದಾ ಕಾಲ ಗುರುಗಳೊಡನೆ ಇರುವುದು ಸಾಧ್ಯವಿಲ್ಲ. ಗುರುಗಳ ಪ್ರತಿಕ್ಷಣದ ಯೋಗಕ್ಷೇಮವನ್ನು ವಿಚಾರಿಸುವುದು ಒಬ್ಬ ಶಿಷ್ಯನ ಬಹುಮುಖ್ಯ ಕರ್ತವ್ಯ.ಈ ಕೆಲಸವನ್ನು ಎಲ್ಲ ಶಿಷ್ಯರೂ ಬಂದು ಮಾಡಲು ಸಾಧ್ಯವಿಲ್ಲ. ಆದಕಾರಣ, ಯಾರು ಮಾಡುತ್ತಿದ್ದಾರೋ,ಅವರೆಲ್ಲರನ್ನೂ ಪ್ರತಿನಿಧಿಯೆಂದು ಭಾವಿಸುತ್ತೇನೆ.
ನಿಜವಾಗಿಯು ಪರಿವಾರದವರು ಧನ್ಯರು, ಏಕಂದರೆ ಗುರುವಿನ ಸೇವೆಯ ದ್ವಾರಾ ಭಗವಂತನ ಸೇವಕನಾಗುವ ಯೋಗ. ಈ ಅವಕಾಶ ಎಲ್ಲರಿಗೂ ಸಿಗುವುದು ಕಷ್ಟ ಅಂದರೆ ಹುಡುಗಿಯರು ಈ ಅವಕಾಶದಿಂದ ವಂಚಿತರು. ಇದರ ಬಗ್ಗೆ ತುಸು ಬೇಸರವಿದೆ..
July 14, 2010 at 10:23 AM
ಪ್ರತಿನಿಧಿಯಲ್ಲ….ನಿಮ್ಮ ಪರಿವಾರದವರೇ…
ನಿಮ್ಮಲ್ಲೇ ಒಬ್ಬ….
July 12, 2010 at 7:59 PM
ಅಂತರ್ಜಾಲವನ್ನು ಬಳಸದ ಶ್ರೀಪರಿವಾರದ ಸದಸ್ಯ ಮಧುಕೇಶ್ವರ ನೀಡಿದ ಪ್ರತಿಕ್ರಿಯೆ…
ಏನೂ ಗೊತ್ತಿರದಿದ್ದ ನಮ್ಮನ್ನು ಕಷ್ಟದಿಂದ ಸಹಿಸಿಕೊಂಡು, ನಷ್ಟವನ್ನು ಅನುಭವಿಸಿ, ಅಂತಃಕರಣದಿಂದ ತಿದ್ದಿ, ಮನುಷ್ಯರನ್ನಾಗಿಸಿದ ಪರಮದಯಾಳುಗಳಾದ ಸಂಸ್ಥಾನದ ಸೇವೆ ಮಾಡುವ ನಾವೇ ಭಾಗ್ಯಶಾಲಿಗಳು.
July 12, 2010 at 8:07 PM
email ಬಳಸದ ಶ್ರೀಪರಿವಾರದ ಸದಸ್ಯ ಕೆ. ಎಸ್. ಅನಂತರ ಪ್ರತಿಕ್ರಿಯೆ…..
ಇಡೀ ಸಮಾಜವನ್ನು ನಡೆಸುವುದಕ್ಕಿಂತ ಕಷ್ಟದ ಕೆಲಸವಾದ ಹೊಸ-ಹಳೆ ತಲೆಮಾರಿನ ಪೀಳಿಗೆಯ ನಮ್ಮನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ಗುರುಗಳ ಪರಿಚಾರಕರಾದ ನಾವೇ ಭಾಗ್ಯಶಾಲಿಗಳು.
July 12, 2010 at 8:15 PM
ಒ೦ದೇ ದಿನದಲ್ಲಿ ಇಷ್ಟೊ೦ದು ಕಾಮೆ೦ಟ್ಸಗಳು, ಅದ್ಭುತ – ಹಿ೦ದಾಗಿಲ್ಲ.
.
ಗುರು ಶಿಷ್ಯರಲ್ಲಿನ ಪ್ರೀತಿ ಅಭಿವ್ಯಕ್ತಗೊ೦ಡಿದೆ?
.
ಶಕ್ತಿ ಯುಕ್ತಿ ಸಾಧಿಸದನ್ನು ಪ್ರೀತಿ ಪ್ರೇಮ ಸಾಧಿಸುತ್ತದೆ?
July 12, 2010 at 9:10 PM
ಗುರು ಪರಿವಾರವನ್ನು ಗುರುಗಳ ಪ್ರತಿನಿಧಿಯಾಗಿ ನೋಡುವಂತೆ ಎಲ್ಲರಿಗೂ ಆ ಪರಮಾತ್ಮನು ಅನುಗ್ರಹಿಸಲಿ.
July 12, 2010 at 9:35 PM
ತೋರಿಕೆಗೆ… ಕೆರದಡಿಯ ಪರದಾಟ ಮೈಯಲ್ಲ ಉರಿಯೇರಿತು….ಎ೦ದೆನಿಸಿದರೂ
ಹೊರಕ್ಕೆ ಪರಿವಾರದವರ ಸೇವೆ ಕಷ್ಟವಾದರುಕೂಡ ಪರಕ್ಕೆ ಪರಮಸುಖವೇ ಸರಿ…
ಅದಕ್ಕೆಬಲ್ಲವರು ಹೇಳ್ತಾರೆ…ಹರಿವನೀರಾಗು..ಗಿರಿಯಾಗು..ಆಗಸದಲ್ಲಿ ಮಿನುಗುತಾರೆಯಾಗು..
..ಪರಮಾನ೦ದಕ್ಕೆ ಬ್ರಹ್ಮದಲಿ ಕಸಪೊರಕೆಯಾಗು…
” ಕುಚ್ ಪಾನೆಕೇಲಿಯೆ ಕುಚ್ ಖೋನಾ ಪಡತಾಹೈ ”
July 12, 2010 at 9:53 PM
||ಹರೇರಾಮ||
ನಮಗೆ ತಂದೆ, ತಾಯಿ ಎಲ್ಲವೂ ಆಗಿರುವ ಗುರುಗಳ ಜೊತೆ ಇರಬೇಕಾದರೆ ಕಷ್ಠ ಎನ್ನುವುದೇ ಇಲ್ಲ. ಅವರ ಸೇವೆ ಮಾಡುವ ಭಾಗ್ಯ ನಮ್ಮ ಅದೃಷ್ಠ…
July 12, 2010 at 10:01 PM
|| ಹರೇರಾಮ ||
ವಿಶ್ವಗುರುಗಳಿಂದ ವಿನೀತ ಶಿಷ್ಯನ ಬಗೆಗೆ ವಿಶೇಷ ಬರಹ..
ಇದರಲ್ಲಿನ ಪ್ರತಿಯೊಂದು ಶಬ್ದವೂ, ಅಕ್ಷರವೂ ಪರಿಪೂರ್ಣ.
ಇಂತಾ ಬರಹಕ್ಕೆ ಪ್ರೇರಣೆಯಾದ ರಮೇಶಣ್ಣನ ಬದುಕೂ ಪರಿಪೂರ್ಣ..!
{ ಗುರು-ಶಿಷ್ಯರನ್ನು ಬೆಸೆಯುವಲ್ಲಿ ಬೆಸುಗೆಗಳು…
ಸಂಕಟಗಳು ಬರುವಾಗ ಸೇನಾನಿಗಳು.. }
– ನಿಜವಾಗಿಯೂ!
ಜೀವಮಾನದಲ್ಲೊಮ್ಮೆಯಾದರೂ ಪರಿವಾರದೊಂದಿಗೆ ಸೇರುವ ಹೆಬ್ಬಯಕೆಯಾಗುತ್ತಿದೆ.
ಅವಕಾಶವಿದೆಯಲ್ಲವೇ, ಗುರುಗಳೇ?
– 36 ನೆಯ ಶಂಕರರ ಈ ಲೇಖನಕ್ಕೆ 36ನೆಯ ಪ್ರತಿಕ್ರಿಯೆ!
July 12, 2010 at 10:15 PM
ಬಾ….ಬಾ….ಬಾಗಿಲು ಸದಾ ತೆರೆದಿದೆ…
July 12, 2010 at 11:37 PM
ಆಳಾಗಿ ದುಡಿದು …………
ಗುರು ಕರುಣೆ ಉಣ್ಣುವುದರಲ್ಲಿ ಅರಸನಾಗಿರುವುದು
………….ಕೋಟಿ- ಪುಣ್ಯ
“ಹುಚ್ಚು ಮನಸಿನ ಹತ್ತು ಮುಖಗಳು”
ಸೇವೆ- ತ್ಯಾಗ- ಪ್ರೀತಿ- ಭಕ್ತಿ -ಭಾವ ====== ಹುಚ್ಚು ಮನಸು
ನಾನಾತರದ ಸೇವೆಯೇ ====ಹತ್ತುಮುಖ
“ಎಲ್ಲಿಯೂ ಸಲ್ಲದವರು ಇಲ್ಲ ಸಲ್ಲುವರು
ಎಂಬ ಮಾತು ಇದೆ. ನಿಜವೇನೆಂದರೆ= ಇಲ್ಲಿ ಸಲ್ಲಿದವರು ಎಲ್ಲಿಯೂ ಸಲ್ಲುವರು”
July 12, 2010 at 10:08 PM
ಶ್ರೀಪರಿವಾರದ ಗ ಮ ಹೆಗಡೆ ಹೀಗೆನ್ನುತ್ತಾರೆ…….
ಶ್ರೀಸಂಸ್ಥಾನಕ್ಕೆ ಮಾತ್ರ ಪರಿವಾರದವರ ಕಷ್ಟ ಗೊತ್ತಿತ್ತು. ಈಗ ಎಲ್ಲರಿಗೂ ತಿಳಿಯುವಂತಾಯಿತು.
July 12, 2010 at 10:25 PM
ಗುರುಪಾದಕೆರಗಿದರೆ| ಶಿರಸುತಾ ಮಣೆಯಕ್ಕು| ಪರಿಣಾಮವಕ್ಕು ಕೈಲಾಸ| ನೆರೆಮನೆಯ ಅಕ್ಕು ಸರ್ವಜ್ಞ||
ಗುರುಚರಣಗಳಲ್ಲಿ ಪ್ರಣಾಮಗಳು.
ಕೊನೆಯ ಶಬ್ದವ ಓದಿ ಮುಗಿಸಿದಾಗ ಸುರಿಯುತ್ತಿರುವ ಕಣ್ಣೀರ ವರಿಸುವವರಾರು. ಏನೆನ್ನಲಿ ಈ ಪರಿಯ. ಪರಿಭ್ರಮಣದೊಳು ಸಕಲ ಕಾರ್ಯವ ಸಕಾಲದಲ್ಲಿ ಸಡೆಸುವ ಸ್ವಾಮಿ ಸೇವಕರಿಗೆ ಮನದಾಳದ ವಂದನೆಗಳು.
ರಾಮ ಬಾಣ ನಿಜವಾದರೆ, ರಾಮರಾಜ್ಯದ ದಿನಗಳು ಮತ್ತೆ ನೋಡುವ ಸುಸಮಯ ನಮಗೊದಗೀತು.
July 12, 2010 at 11:27 PM
ಹರೇರಾಮ …
ಗುರುವನರಿವ ಪರಿಯ ಹುಡುಕ ಹೊರಟ ಈ ಪರಿವಾರಕ್ಕೆ…..
ಮಾಯೆಯು ಬೆಂಬಿಡದೆ ಕಾಡುತಿದೆ, ಆದರೂ ಬೆಳಕಿನೆಡೆಗೆ ಸಾಗುವ ಹಂಬಲ…..
ಅದಕ್ಕಾಗೇ ಪರಿವಾರಕ್ಕೆ ಕಷ್ಟಗಲು ಮೈಮೇಲೆರಗುತ್ತವೆ……………..
July 12, 2010 at 11:36 PM
ಹರೇ ರಾಮ …ಕತ್ತಲೆಯ ಹೊರತು ದೀಪದ ಮಹತ್ವ ತಿಳಿಯುವುದಿಲ್ಲ :ಅಂತೆಯೇ ದು;ಖದ ಅನುಭವವಿಲ್ಲದೆ ಸುಖದ ಮಹತ್ವ ಗೊತ್ತಾಗದು ….” ಓ ರಾಘವೇಶ್ವರ ಪ್ರಭುವೇ … ನಿಮ್ಮ ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ ….ಸೇವಕನ …ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ ….ಸೇವಕನ ….. ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ ….ಸೇವಕನ …..ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ ….ಸೇವಕನ ….. ………………………………………………………………ಸೇವಕ ….ನಾನು .ಒಂದಲ್ಲ ಒಂದಿನ… “ನಮ್ಮ” ..ಪರಿವಾರದಲ್ಲಿ “ನಿಮ್ಮ ಚರಣ ಸೇವೆಯ “ಭಾಗ್ಯ”ಕ್ಕಾಗಿ …..ಅಂಥಹ ದಿನದ ನಿರೀಕ್ಷೆ ಯಲ್ಲಿರುತ್ತೇನೆ ….ಹರೇರಾಮ
July 13, 2010 at 11:02 AM
ಆ ದಿನ ಬಹು ಬೇ……..ಗ ಬರಲಿ…
July 13, 2010 at 12:38 AM
ಹರೇ ರಾಂ ಸಂಸ್ಥಾನ,
ನಿನ್ನೆಯೇ ಈ ಲೇಖನ ಓದಿದ್ದೆ… ಪ್ರತಿಯಾಗಿ ಎನಾದರೂ ಬರೆಯಬೇಕೆನ್ನಿಸಿತ್ತು… ಆದರೆ.. ಇಲ್ಲಿಯವರೆಗೂ ಪರಿಸ್ಥಿತಿ ಹೇಗಿತ್ತೆಂದರೆ…
ಕುಡುಕರು ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕುಡಿಸಿದರೆ ಹೆಚ್ಚು ಮಾತನಾಡುತ್ತಾರಂತೆ.
ಅದಕ್ಕಿಂತ ಸ್ವಲ್ಪ ಜಾಸ್ತಿ ’ಹಾಕಿಸಿ’ದರೆ ಆಮೇಲೆ ಬರಿ ತೊದಲು..ಬಡಬಡಿಕೆ
ಇನ್ನೂ ಜಾಸ್ತಿಯಾಯಿತೋ… ಮಾತಿಲ್ಲ, ಕತೆಯಿಲ್ಲ. ಬರಿ ಉಧ್ಗಾರಗಳಷ್ಟೆ!
ಅವರದೇ ಭಾಷೆಯಲ್ಲಿ ಹೇಳುವುದಾದರೆ ‘ಅವರು FLAT’!
(ನೈಚ್ಯೋಪಮೆಗಾಗಿ ಕ್ಷಮೆ ಇರಲಿ)
ಇಷ್ಟು ದಿನಗಳ ಬ್ಲಾಗ್ ಎಂಬ ಅಮೃತ ನಮ್ಮ ಸಾಮರ್ಥ್ಯಕ್ಕಿಂತ ಜಾಸ್ತಿಯೇ ಇದ್ದರೂ ಅಲ್ಪ ಸ್ವಲ್ಪ ತೊದಲು ಹಾಗೂ ಹೀಗೂ ಹೊರಡುತ್ತಿತ್ತು.
ಆದರೆ ಈ ಬ್ಲಾಗಿಗೆ ಮಾತ್ರ…NO COMMENTS! ಪೂರಾ ಪೂರಾ FLATTT…
ಪ್ರತಿಮಾತಿಲ್ಲ… ಹೃತ್ಕೋಣೆಯಲಿ ದಿವ್ಯಗಾನ.. ಗಾಢ ಮೌನ!
ಒಂದಿಷ್ಟು ಗೊಣಗೋಣವೆಂದುಕೊಂಡರೂ… ಏನೆನ್ನುವುದು?
ಶ್ರೀಸಂಸ್ಥಾನದ ಅನ್ಯಾದೃಶ ಮಾತೃವಾತ್ಸಲ್ಯದ ಬಗೆಗೋ, ಅದನ್ನು ಮನಮುಟ್ಟುವಂತೆ ಅಭಿವ್ಯಕ್ತಿಸಿದ ಸು-ಪರಿಯ ಕುರಿತಾಗಿಯೋ,
ಶ್ರೀಪರಿವಾರದವರ ಅಹೇತುಕ ಸೇವಾಮನೋಭಾವದ ಬಗೆಗೋ,
ಅಂಥೊದ್ದೊಂದು ನಿರಪೇಕ್ಷಸೇವಾಗುಣಲೇಶವಿಲ್ಲದ ನನ್ನ ಹೀನ ಸ್ವಾರ್ಥದ ಬಗೆಗೋ,
ಅಥವಾ, ಸದಾ ಇವೆಲ್ಲವೂ ನನ್ನೆದುರೇ ನಡೆದರೂ ಅದನ್ನು ಅರ್ಥೈಸಿ ಕೊಳ್ಳದೇ ಇರುವ, ಶ್ರೀಪರಿವಾರದ ಸೇವೆಯ ಘನತೆಯನ್ನು ಮನಗಾಣದೇ ಇರುವ ಕ್ಷೀಣ ಭಾವಸಂಸ್ಕಾರದ ಕುರಿತಾಗಿಯೋ,
ಮಾತೃವಾತ್ಸಲ್ಯಪೂರಿತ ಗುರುಸಾನ್ನಿಧ್ಯವನ್ನು ಸದಾ ಆನಂದಿಸುವ ಭಾಗ್ಯವಿಲ್ಲವೆಂಬ ಅಂತರಂಗದ ಹಳಹಳಿಕೆಯ ಕುರಿತಾಗಿಯೋ…
ಹೇಳಿ, ಯಾವುದರ ಕುರಿತಾಗಿ ಬರೆಯಲಿ?
ಇದ್ಯಾವುದರ ಕುರಿತಾಗಿ ನಾನು ಬರೆದರೂ ಅದು ಬರಿ ತೊದಲು ತಾನೆ? ಅದು ಕೇವಲ ಬಡಬಡಿಕೆಯಾದೀತು ತಾನೆ?
ಹೀಗಾಗಿ ನಾನೇನೊ ಹೇಳುವುದಿಲ್ಲ…
ಇಂದಿನ ಗುರುಕರುಣೆ, ಶಿಷ್ಯಸಮರ್ಪಣೆಯ ದಿವ್ಯಾಮೃತದ ’ಮತ್ತು’ ನನ್ನೋಳಗೆ ಸ್ಥಿರವಾಗಿ ಉಳಿಯಲಿ… ಈ ಮತ್ತು ಮತ್ತೆಂದೂ ಇಳಿಯದಿರಲಿ…
ತಾನಾರೆಂಬ ಪರಿವೆಯನ್ನು ಮರೆಸುವುದೇ ತಾನೇ ಮತ್ತಿನ ಗುಣ? ಹಾಗಾಗಲಿ…
’ನಾನು’ ಮರೆಯಲಿ… ಭೃತ್ಯಭಾವೊಂದೇ ಉಳಿಯಲಿ
ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ- ಭೃತ್ಯ- ಭೃತ್ಯಸ್ಯ- ಭೃತ್ಯ ಇತಿ ಮಾಂ ಸ್ಮರ
ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ- ಭೃತ್ಯ- ಭೃತ್ಯಸ್ಯ- ಭೃತ್ಯ ಇತಿ ಮಾಂ ಸ್ಮರ
ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ- ಭೃತ್ಯ- ಭೃತ್ಯಸ್ಯ- ಭೃತ್ಯ ಇತಿ ಮಾಂ ಸ್ಮರ
July 13, 2010 at 11:03 AM
ಸದೈವ… ಸ್ಮರಾಮಃ…
July 13, 2010 at 11:32 AM
” ಹೃತ್ಕೋಣೆಯಲಿ ದಿವ್ಯಗಾನ.. ಗಾಢ ಮೌನ! ” – Beautiful.
July 13, 2010 at 12:50 AM
ಹರಮುನಿದರೆ ಗುರು ಕಾಯ್ವ ಎಂದು ಅಜ್ಜಿ ಕಥೆ ಹೇಳುತ್ತಿದ್ದರು
ಆದರೆ ನಮ್ಮ ಹೆದರಿಕೆ ನಾವು ಕೊನೆಯಲ್ಲಿರುವವರು(ಡೆಡ್ ಎಂಡ್ ಶಬ್ಧ ಬಳಸಲು ಇಷ್ಟವಿಲ್ಲ :))
ನಮಗಾರು ಗತಿ..?
ಶಂಕರರಾಗಿ, ಶಿವಾಜಿಯಾಗಿ, ರಾಜಾ ರಾಣಾಪ್ರತಾಪನಾಗಿ,ಚಾಣಕ್ಯನಾಗಿ, ಮಾತೆ ಜೀಜಾಬಾಯಿ-ಯಶೋಧೆಯಾಗಿ,
ನಮ್ಮ ಹೆತ್ತವರಿಗಿಂತ ಹೆಚ್ಚಾಗಿ ಬದುಕು – ಬದುಕಿನ ಲಕ್ಷ್ಯ – ಲಕ್ಷ್ಯದೆಡೆಗೆ ಸಾಗುವ ದಾರಿ ಎಲ್ಲವೂ ಆಗಿ ಸಾಕಿ ಸಲಹುತ್ತಿರುವ ನಮ್ಮ ಭಗವಂತ ನಮ್ಮೆಡೆಗೆ ಹರಿಸುವ ಪ್ರೀತಿಯಧಾರೆಯನ್ನು ಸವಿಯುತ್ತಾ ನಮ್ಮ ಜೀವನ ಪಾವನವಾಗುತ್ತಿದೆ…..
ಗಂಗೆಯನ್ನು ಧರಿಸಲು ಶಿವ ಶಕ್ತನಾಗಿದ್ದನಂತೆ ಆದರೆ ಗುರುವಿನ ಈ ಕರುಣಾರಸ ಉಣ್ಣಲು ನಾವು ಎಷ್ಟು ಶಕ್ತರೆಂದು ಗೊತ್ತಿಲ್ಲ..
ಹಿಂದೆ ದೇವರಿಗೆ ಮಾತ್ರ ಎರಡು ಅಮ್ಮಂದಿರು ಇದ್ದರಂತೆ ಆದರೆ ಈಗ ಪರಿವಾರದಲ್ಲಿರುವ ನಮ್ಮೆಲ್ಲರಿಗೂ ಆ ಭಾಗ್ಯ ದೊರಕಿದೆ.. ಹೆತ್ತವರೊಬ್ಬರಾದರೆ ಬದುಕನಿತ್ತವರೊಬ್ಬರು..
ಹೆತ್ತಮ್ಮ ಮಾಡುವ ಪ್ರೀತಿಯ ಕನಿಷ್ಠವೆಂದರು ಸಾವಿರಪಾಲು ಹೆಚ್ಚು ಪ್ರೀತಿಸುವ ಗುರು ಕರುಣಾಳು ನಮ್ಮ ಭಾಗ್ಯದಲ್ಲಿದ್ದಾನೆ..
ನನ್ನಪಾಲಿಗೆ ನನ್ನ ತಂದೆ-ತಾಯಿ ಗುರುಗಳಾದರೆ ಅಣ್ಣ -ತಮ್ಮಂದಿರು(ಸಧ್ಯಕ್ಕೆ ಯಾರೂ ಇಲ್ಲ) ಪರಿವಾರದವರು..
ನನ್ನ ಎಲ್ಲಾ ಕರ್ಕರೆ ಸಹಿಸಿಕೊಂಡೂ ಸುಮ್ಮನಿರುವ ಮಧ್ಯಸ್ಥಣ್ಣ..
ಹೆಚ್ಚಿನ ದಿವಸ ಅನಾರೋಗ್ಯದಲ್ಲಿರುವ ನನಗೆ ಸರಿ ಮಾತ್ರೆ ಔಷಧಿ ತಗಂಡ್ಯೇನೋ ಎಂದು ಹುಸಿಮುನಿಸಿನಿಂದ ಗದರುವ ಹರ್ಷಣ್ಣ ಸ್ವಲ್ಪ ಕೆಮ್ಮಲು ಪ್ರಾರಂಭಿಸಿದರೆ ಕೂಡಲೇ ಮೆಣಸಿನಕಾಳು ಕಷಾಯ ಮಾಡಿಕೊಡುವ ಸ್ವಾಮಿ ಅಣ್ಣ,ರಮೇಶಣ್ಣ ಅನಂತಣ್ಣ ಮತ್ತು ಮಧು..
ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋಗುವ ಗಪ್ಪಣ್ಣ,ಗುರು,ಆದರ್ಶ,ಶ್ರೀಶ..
ನಾನೆಷ್ಟೇ ರಗಳೆಮಾಡಿದರೂ ಸಹಿಸಿಕೊಂಡು ಇರುವ ಪೆರಿಯಪ್ಪು ಮತ್ತು ಡಾ.ತಿ.ಪ್ರಸಾದ್, ಅವಾಗವಾಗ ಹೋಗಿ ಉಚಿತ ಸಲಹೆಕೊಟ್ಟರೂ ತಿರುಗಿ ಬೈಯದ ಗೌತಮ ಅರವಿಂದ ಬಿಡಸಳ್ಳಿತಾತ,ಸ್ವಲ್ಪ ಜ್ವಾಲಾಮುಖಿಯಾದರೂ ಪಾದರಸಂತಿರುವ ದತ್ತಣ್ಣ, ಅಗ್ನಿಹೋತ್ರಿಗಳು, ಇನ್ನು ನಮ್ಮೆಲ್ಲರ ನೆಚ್ಚಿನ ಗೊಂಬೆ ವಿನಾಯಕ ಸದಾ ಕೆಲಸದಲ್ಲಿರುವ ರಾಮಚಂದ್ರ ಗ.ಮ ಹೆಗಡೆ ಹಾಗು ಪ್ರೀತಿಯ ಕೃಷ್ಣಮೂರ್ತಿ ಇವರೆಲ್ಲರ ನೆನಪು ಸಧ್ಯ ಮನೆಯಲಿರುವ ನನಗೆ ಬಹುವಾಗಿ ಕಾಡುತ್ತಿದೆ..
ಕಂಗಳಿದ್ಯಾತಕೋ ಗೀತೆಯ ಭಾವ ತುಂಬಾ ಸತ್ಯ ಎನಿಸುತ್ತಿದೆ…
July 13, 2010 at 1:27 AM
ಮೂರುಸಲ ಮಲಗಲು ಹೋದ ನನಗೆ ನಿದ್ರೆ ಬರುತ್ತಿಲ್ಲ……….
ಕಾರಣ ಈ ಲೇಖನ..
ನಮ್ಮನ್ನು – ನಾವುಮಾಡುವ ಕೆಲಸಗಳನ್ನು ಸಹಿಸಿಕೊಂಡೂ ನಮ್ಮಬಗ್ಗೆ ಇಷ್ಟು ಅಕ್ಕರೆಯ ಮಾತನಾಡಲು
ನಮ್ಮ ಕರುಣಾಕರನಿಗಲ್ಲದೇ ಬೇರಾರಿಗೂ ಸಾಧ್ಯವಿಲ್ಲ..
ನನಗೆ ಈಗಲೂ ನೆನಪಿದೆ ನಾನು ಪರಿವಾರಕ್ಕೆ ಬಂದ ಹೊಸತರಲ್ಲಿ ದಿನವೂ ಒಬ್ಬಬ್ಬರು ನನಗೆ ಪಂಚೆ ಉಡಿಸುತ್ತಿದ್ದರು(ನನಗೆ ಪಂಚೆ ಉಡಲೂ ಬರ್ತ್ತಿರಲಿಲ್ಲ),
ನನ್ನ ಬಟ್ಟೆ ಒಗೆಸುತ್ತಿದ್ದರು, ಮಲಗಲು ಹಾಸಿಗೆ ಮಾಡಿಕೊಡುತ್ತಿದ್ದರು.. ಅನಾರೋಗ್ಯವಾದಾಗ ಊಟಮಾಡಿಸುತ್ತಿದ್ದರು
ಒಮ್ಮೆ ಯಲ್ಲಾಪುರದಲ್ಲಿ ಮೊಕ್ಕಾಂ ಆದಾಗ ನನ್ನ ಆರೋಗ್ಯ ತುಂಬಾ ಹಾಳಾಗಿತ್ತು ಅಂದು ಪೂರ್ತಿ ರಾತ್ರಿ ಸುಬ್ಬಣ್ಣ ನನ್ನನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡಿದ್ದರು.. ಒಮ್ಮೆ ರಜನೀಶಣ್ಣ ನನ್ನನ್ನು ಭಾಲೋಕದಿಂದ ಮಠದವರೆಗೆ(ಆಗ ರಸ್ತೆ ಇರಲಿಲ್ಲ) ಹೆಗಲಲ್ಲಿ ಕೂರಿಸಿಕೊಂಡು ಬಂದಿದ್ದು ಇನ್ನೂ ನೆನಪಿದೆ..
July 14, 2010 at 11:32 PM
ಎಲ್ಲರೂ ಮನಬಿಚ್ಚಿ ಮನಮುಟ್ಟುವ೦ತೆ ಮಾತನಾಡಿದ್ದಾರೆ.
July 13, 2010 at 5:58 AM
ಹರೇ ರಾಮ.
ಶ್ರೀಗುರುಗಳ ತೆರೆದ ಹೃದಯದ ತುಡಿತವಿದು, ಓದಿದಾಗ ಮನಸ್ಸು ತುಂಬಿಬಂತು. ಹಾಗೆಯೇ ನಾವು ಮಾಡುವ ಸೇವಾ ಕೈಂಕರ್ಯದ ಸ್ಥಾನದ ಅರಿವುವುಂಟಾಯಿತು. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬಂತೇ ಏನಾದರೂ ಮಹತ್ವದ ಫಲವನ್ನು ಪಡೆಯುವಾಗ ತನು-ಮನವ ದಂಡಿಸದೇ ಸಾಧ್ಯವೇ? ಅದರಲ್ಲೂ ಪರಮೋಚ್ಚವಾದ ಗುರುಪ್ರೀತಿ-ಗುರುಕೃಪೆಯನ್ನು ಪಡೆಯಲು ಸಾಮಾನ್ಯನೂ ಮಾಡಬಹುದಾದ ಅತ್ಯಲ್ಪವಾದ ಮಹತ್ಕಾರ್ಯವಿದು.
ಸ್ವಪರಿಶ್ರಮದ ಅಂತ್ಯದ ಫಲ “ಶ್ರೀಗುರುಕೃಪೆ”ಯೇ ಆದರೆ ಅದರಂತ ಭಾಗ್ಯ ಬೇರೆಯಿದೆಯೇ?(ಶ್ರೀಗುರು)ಪರಿವಾರದ ಸದಸ್ಯನಾಗಿರುವ ಶಾಶ್ವತಸ್ಥಾನ ಯಾವತ್ತೂ ನಮ್ಮ ಪಾಲಿಗಿರಲೆಂದು,ಶ್ರೀಗುರುಪ್ರೀತಿಯೇ ವರವಾಗಿರಲೆಂದು ಶ್ರೀಪರಿವಾರದವರೊಂದಿಗಿನ ನನ್ನ ಪ್ರಾರ್ಥನೆ………
ಇಂತಿ ಶ್ರೀ ಪರಿವಾರದವ
ವಿನಾಯಕ ಭಟ್ಟ.ಕೂಜಳ್ಳಿ
July 13, 2010 at 10:52 AM
ನಿಜ, ಸಮಾಜಕ್ಕಾಗಿ ದುಡಿಯುವಾಗ ಕಷ್ಟವೆ೦ಬುದು ಅನುಭವಕ್ಕೆ ಬರದು. ತತ್ವವಿರಲು ಜೊತೆ ಗುರುವಿರಲು – ಶಿವನ ದರ್ಶನಕ್ಕೆ೦ದು ಸಾಗುವಾಗ ಎಲ್ಲಿಯ ಕಷ್ಟ. ಸತ್ವಶಕ್ತಿ ಸದಾ ನರ್ತನಗೈಯುತ್ತಿರಲು ಆಯಸವೆ೦ದರೇನು, ಆಯುಷ್ಯ ಸವೆಸುವ ಆನ೦ದವೇನ್
.
ಗುರುವೊಡನೆ ಗುರುವಿನ ಪರಿವಾರದೊಡನೆ ನಮಗೆಲ್ಲಾ ಒ೦ದು ಯಾತ್ರೆಯಾದರೆ ಅದ್ಭುತ, ಮನಸ್ಸಿನ ಮನೆಯಲ್ಲಿ ಚಿತ್ರ ಸದಾ ರಾರಾಜಿಸುತ್ತಿರುತ್ತದೆ. ಅಶ್ವಿನಿ ದೇವತೆಗಳು ಅಸ್ತು ಅಸ್ತು ಎ೦ದ೦ತೆ ಭಾಸವಾಗುತ್ತಿದೆ, ಸ೦ಸ್ಥಾನ ಅಸ್ತು ಎನ್ನಬೇಕಷ್ಟೆ.
July 13, 2010 at 11:00 AM
ಅಸ್ತು..ಅಸ್ತು… ತಥಾಸ್ತು…
July 13, 2010 at 12:49 PM
ಹರೇ ರಾಮ.
ಗುರುಪರಿವಾರದವರ ಬದುಕಿನ ಬಗೆಗೆ ಗುರುತರವಾಗಿ ತಿಳಿಸುವ ಶ್ರೀ ಗುರುಗಳ ಈ ಮೆಲ್ನುಡಿಗಳಿಗೆ ಮನದುಂಬಿ ಬಂತು. ‘ಸೇವೆ’ಗೆ ಇನ್ನೊಂದು ಹೆಸರೇ ಈ ಪರಿವಾರವೇನೋ ಎಂದೆನಿಸುತಿದೆ. ಸಾಟಿಯಿಲ್ಲದ ಸೇವೆಗೆ ಸಮರ್ಪಿಸಿಕೊಂಡವರ ಬಗೆಗೆ ಮಾತನಾಡಲೂ ನಾವು ಅಸಮರ್ಥರು.
ಗುರುಗಳ ಮಾತೃವಾತ್ಸಲ್ಯ ಪಡೆದು ನಿಸ್ವಾರ್ಥ ಸೇವೆಗೈವ ಅವರೆಲ್ಲ ಧನ್ಯಾತಿ ಧನ್ಯರು. ‘ರಾಮಬಾಣ’ವು ನಮ್ಮ ಹೃದಯ ಭೇದಿಸಿ ಅರಿವನ್ನರಳಿಸಿದರೆ ನಾವು ಕೃತಾರ್ಥರು!
July 13, 2010 at 1:19 PM
ರಾಮಬಾಣದ ಬಗ್ಗೆ ಓದಿ ತಿಳಿದಿದ್ದೆ ಇಂದು ಪ್ರತ್ಯಕ್ಷ ಅನುಭವಿಸಿಯಾಗಿದೆ ರಾಮಬಾಣಕ್ಕೆ ಪ್ರತಿ ಇಲ್ಲ ಹಾಗೆಯೇ ಕಲಿಯುಗದ ರಾಮ “ರಾಘವ “ರ ರಾಮಬಾಣಕ್ಕೆ ಪ್ರತಿಉತ್ತರ ಇಲ್ಲವೇ ಇಲ್ಲ ಹಾಗಾಗಿ ಎರಡೂ ಆಯ್ಕೆಗೂ …..ಹರೇರಾಮ .
July 14, 2010 at 1:22 PM
ಆಂಜನೇಯರಾಗಿ ಸೇವೆ ಮಾಡೋಣ
July 13, 2010 at 2:49 PM
ಪರಮ ದಿವ್ಯ ಕುಟುಂಬದ ಪರಿಕಲ್ಪನೆ ನೀಡಿದ ಪರಮ ಗುರುವಿಗೆ ಪ್ರಾಣಾಮಗಳು.
ಪವಿತ್ರವೇ ತಾನದ ಗುರುವಿನ ಚರಣ ಸೇವಕರು.
ರೀತಿಯಲ್ಲಿ ನೀತಿ ಮೆರೆದ ವಿಶ್ವ ಗುರುವಿನ ಮಾತೃಪ್ರೇಮ ಪಾತ್ರರು.
ವಾಸ್ತವತೆ ಇಂದ ಮಾಧವತೆಯಡೆಗಿನ ನಿಜ ನಡಿಗೆಯ ಹಿಂಬಾಲಕರು.
ವಿಶ್ವ ರಕ್ಷಕನ ವಿಶ್ವಾಸ ಪಾತ್ರರು.
ಹೇಗೆ ಕರೆದರು ಅದೊಂದು ಸೇವಾ ನಿರತ ಪರಿವಾರವೇ.
ಸೇವೆಯೆಂಬ ಅನಂತ ಆನಂದ ಹೃನ್ಮಂಡಲ ಪ್ರವೇಶಿಸಿ ನಿರಂತರವಾಗಲೆಂಬ ಪ್ರಾರ್ಥನೆ.
July 13, 2010 at 5:04 PM
ಶ್ರೀಗುರುವಿಗೂ ಶ್ರೀಪರಿವಾರಕ್ಕೂ ಗೌರವಪೂರ್ಣ ನಮನಗಳು…
July 13, 2010 at 9:34 PM
ಓದಿ ತುಂಬ ಖೇದವಾಯಿತು. ಪರಿವಾರದವರ ಬಗ್ಗೆ ನನಗಿದ್ದ ತಪ್ಪು ಕಲ್ಪನೆಯ ಬಗ್ಗೆ ಪಶ್ಚಾತ್ತಾಪವಾಯಿತು. ಆದರೆ ಒಂದು ದೃಷ್ಟಿಯಲ್ಲಿ ನೋಡಿದಾಗ, ಪರಿವಾರದವರೇ ಪುಣ್ಯವಂತರು. ಗುರು ಸೇವೆಯನ್ನು ಮಾಡುವ ಭಾಗ್ಯ ಅವರಿಗೆ ಸಿಕ್ಕಿದೆ. ಈ ಪುಣ್ಯ ಅವರನ್ನು ಕಾಪಾಡುತ್ತದೆ.
“ಗುರುಚರಣಾಂಬುಜ ನಿರ್ಭರ ಭಕ್ತ:
ಸಂಸಾರಾದ ಚಿರಾದ್ಭವಮುಕ್ತ:”
ಮೋಹಮುದ್ಗರದಲ್ಲಿ ಆದಿಶಂಕರರ ಮಾತಿದು.
ಮುಕುತಿಯ ದಾರಿಯ ಸೋಪಾನದಲ್ಲಿ ನನ್ನಿಂದ ಮೇಲಿದ್ದಾರೆ- ಪರಿವಾರದವರು.
ನನಗಿದು ಗೊತ್ತಿರಲಿಲ್ಲವೆ? ಖಂಡಿತ, ಬಹಳ ಹಿಂದೆಯೇ ಗೊತ್ತಿತ್ತು. ಆಗ ದೇಹದಲ್ಲಿ ಶಕ್ತಿಯಿತ್ತು, ಆದರೆ ಮನಸ್ಸಿರಲ್ಲಿಲ್ಲ. ಈಗ ಮನಸ್ಸಿದೆ, ದೇಹದಲ್ಲಿ ಶಕ್ತಿಯಿಲ್ಲ. ’ಕಿವಿನೆಟ್ಟಗಿದ್ದಾಗ ಕೇಳಲಿಲ್ಲ, ಈಗ ಕೇಳುತ್ತಿಲ್ಲ ಯಾಕೆಂದರೆ ಕಿವೆ ನೆಟ್ಟಗಿಲ್ಲ’ ಎಂದ ಹಾಗಾಯಿತು.
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” – ದಾಸರ ಪದವಿದು.
ಈ ಜನ್ಮದಲ್ಲಂತೂ ಗುರುಸೇವಕನಾಗುವ ಭಾಗ್ಯ ನನಗಿಲ್ಲ. ಮುಂದಿನ ಜನ್ಮದಲ್ಲೆಂತೊ?
ಪರಿವಾರದವರೆ ನನ್ನನ್ನು ಕ್ಸಮಿಸಿ. ಇಂಥ ಗುರುವಿನ ಸೇವಕರಾಗುವ ಭಾಗ್ಯ ಪಡೆದ ನೀವೇ ಧನ್ಯರು.
July 13, 2010 at 9:49 PM
ಚಿಂತನೀಯ ವಿಷಯ ಒಂದರ ಬಗ್ಗೆ ಶ್ರೀ ಗುರುಗಳ ಹಿರಿತನವನ್ನು ಬಿಂಬಿಸುವ ವಿಚಾರಮಂಡನೆ.
“ಹೂವ ತರುವರ ಮನೆಗೆ ಹುಲ್ಲ ತರುವಾ” ಎಂಬಂತೆ ಹಾಲು ಕೊಡುವ ದನ, ಹಣ್ಣು ಕೊಡುವ ಮರ, ತಾವು ಕೊಡುವ ಭೂಮಿಗೆ ತಲೆಬಾಗುವ ಸಂಸ್ಕೃತಿ ನಮ್ಮದು.
ಪರಿವಾರ ಶ್ರೀ ಮಠದ ವ್ಯವಸ್ಥೆಯ ಅವಿಭಾಜ್ಯ ಅಂಗ.
ಅದು ತನ್ನ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ಗುರುಗಳು ತಮ್ಮ ಸಂಪೂರ್ಣ ಸಮಯವನ್ನು ಉದ್ದೇಶಿಸಿದಂತೆ ವಿನಿಯೋಗಿಸಲು ಸಾಧ್ಯ. ಅದರ ಮಹತ್ವವನ್ನು ಗುರುತಿಸಿ ಸಮಾಜಕ್ಕೆ ತೋರಿಸಿಕೊಡುವ ಯತ್ನ.
ದೇಶದ ನೂರೊಂದು ಕೋಟಿ ಪ್ರಜೆಗಳು ನೆಮ್ಮದಿಯಿಂದ ನಿದ್ರಿಸಬೇಕಾದರೆ ಹಗಲಿರುಳು ಕೊರೆಯುವ ಚಳಿ, ಸುಡುವ ಬಿಸಿಲುಗಳಲ್ಲಿ ಸಮವಸ್ತ್ರ ಧರಿಸಿ ಕಣ್ಣಿಗೆ ಎಣ್ಣೆಯಿಟ್ಟು ಕಾಯುವ, ಜೀವ ಕೈಯಲ್ಲಿ ಹಿಡಿದು ನಿಂತಿರುವ ಅಸಂಖ್ಯಾತ ಯೋಧರ ಸೇವೆ ಅನಿವಾರ್ಯ.
ಬಂಗಾರದ ಕಳಸ ಮೇಲಿದ್ದು ಹೊಳೆಯಲು ತಳದಲ್ಲಿರುವ ಕಲ್ಲು ಇಟ್ಟಿಗೆಗಳು ಅನಿವಾರ್ಯ.
ಗುರುಗಳಿಗೂ ಪರಿವಾರಕ್ಕೂ ವಂದಿಸೋಣ, ದೇವತಾರ್ಚನೆಯಲ್ಲಿ “ಸವಾಹನ, ಸಪರಿವಾರ — ಮೂರ್ತಯೇ”ಎಂಬಂತೆ…
July 13, 2010 at 10:12 PM
ಮನಮೋಹಕ! ಗುರುಗಳ ಮಾರ್ಗದರ್ಶನ ನಿಜವಾಗ್ಯೂ ಅತ್ಯಂತ ಶ್ರೇಷ್ಟ. ನಾವು ಇಂದು ಹೀಗೆ ಈ ಸಮಾಜದಲ್ಲಿರುವುದಕ್ಕೆ ಅವರೇ ಕಾರಣ. ಇಂತಹ ಸುಂದರ ಲೇಖನ ಓದಿದ ನನಗೆ ಗುರುಗಳ ಸನ್ನಿಧಿಯಲ್ಲಿ ಪರಿವಾರದವನಾಗಿ ಕನಿಷ್ಠ ಒಂದು ವಾರವಾದರೂ ಸೇವೆ ಸಲ್ಲಿಸುತ್ತೇನೆ ಗುರುಗಳೇ,,,ಹರೇ ರಾಮ…
July 13, 2010 at 11:17 PM
ಶ್ರೀಪರಿವಾರದ ಗೌರವಾನ್ವಿತ ಹಿರಿಯ ಸದಸ್ಯ, ಕಣ್ತೆರಸಿದ ಈ ಬರಹದ ಮೂಲಕಾರಣ, ‘ಧನ್ಯ ಸೇವಕ’ ಚಿಪ್ಳಿ ರಮೇಶಣ್ಣ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ…….
ನಾನು ಚಿಕ್ಕವನಾದಾಗಿನಿಂದ ಮಠದಲ್ಲೇ ಇದ್ದವನು. ದೊಡ್ಡಗುರುಗಳು ನನ್ನನ್ನು ಬೆಳೆಸಿದ್ದು. ನಾನು ವಿದ್ಯಾಭ್ಯಾಸ ಮಾಡಿದವನಲ್ಲ. ಪ್ರಪಂಚ ವ್ಯವಹಾರ ಗೊತ್ತಿರಲಿಲ್ಲ. ನಾನು ಈಗ ಹೀಗಿದ್ದರೆ ಅದು ಗುರು ಅನುಗ್ರಹ.
ನನ್ನ ಪುಣ್ಯ, ಹೊಸ ಗುರುಗಳನ್ನು ಮಾಡುವಾಗ ನನಗೊಂದು ವಿಶೇಷ ಅವಕಾಶ ಸಿಕ್ಕಿತು. ಅದಕ್ಕಿಂತಲೂ ಹೆಚ್ಚಾಗಿ ಸಂಸ್ಥಾನ ನನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಂಡರು. ದೊಡ್ಡಗುರುಗಳು ನನ್ನನ್ನು ನೋಡಿದಂತೆಯೇ ನೋಡಿದರು.
ನನಗೆ ‘ಧನ್ಯ ಸೇವಕ’ ಪ್ರಶಸ್ತಿ ಕೊಟ್ಟರು. ಈಗ ನನ್ನ ಬಗ್ಗೆ ಬರೆದು ನನ್ನ ಜೀವನವನ್ನು ಉದ್ಧರಿಸಿದ್ದಾರೆ. ನಾನು ನನಗೆ ತಿಳಿದಂತೆ ಸೇವೆ ಮಾಡುತ್ತಾ ಬಂದಿದ್ದೇನೆ. ಅಷ್ಟೆಲ್ಲ ದೊಡ್ಡವನಲ್ಲ ನಾನು.
“ನನ್ನ ಕೊನೆಯವರೆಗೆ ಸೇವೆಯ ಅವಕಾಶ ನನಗೆ ಕೊಡಿ” ಎಂದು ಸಂಸ್ಥಾನದಲ್ಲಿ ಬೇಡಿಕೊಳ್ಳುತ್ತೇನೆ.
July 13, 2010 at 11:23 PM
ಹರೇರಾಮ…
ಇಂದಿಗೆ ೧೩೨ ದಿನಗಳು ಕಳೆದವು.ಶ್ರೀ ಸವಾರಿಯ ತಿರುಗಾಟ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದೆ.
ಬೆಳಿಗ್ಗೆ ೯ಕ್ಕೆ ಪೂಜೆ-೧೨ಕ್ಕೆ ಪೀಠಕ್ಕೆ-ಹಾಗೇ ಸಂಜೆ ೭ಕ್ಕೆ ಪೂಜೆ ಹೀಗೆ ಸಮಯಕ್ಕೆ ಸರಿಯಾಗಿಯೇ ನಡೆಯುತ್ತಿದೆ.
ಊಟ-ನಿದ್ರೆಗಳೂ ಒಂದು ರೀತಿಯಲ್ಲಿ ಸಮಯಕ್ಕನುಗುಣವಾಗಿಯೇ ನಡೆಯುತ್ತಿದೆ.
ಇನ್ನು ಅನಾರೋಗ್ಯದ ವಿಷಯ.. ಪರಿವಾರದಲ್ಲಿ ಯಾರಿಗೆ ಏನಾದರೂ ಪರಸ್ಪರ ಖಂಡಿತ ವಿಚಾರಿಸಿಕೊಳ್ಳುತ್ತೇವೆ.
ಮಾತ್ರವಲ್ಲ, ಇದು ಒಡೆಯನ ಕಣ್ಗಾವಲಿನಲ್ಲೇ ನಡೆಯುವುದು..!
ಇನ್ನು ಪರಿವಾರದಲ್ಲಿ ನಾವು ಇರಬೇಕಾದ ರೀತಿ.
ಮಠದ ವಾತಾವರಣಕ್ಕೆ ತಕ್ಕಂತೆ ನಾವಿರಲೇಬೇಕು. ಅದನ್ನು ಮೀರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ ಎಂಬುದು ನನ್ನ ಭಾವನೆ.
ಅಲ್ಲಿ ನಾವಿರುವಷ್ಟು ದಿನ ಹಾಗಿದ್ದರೆ ಏನು ಕಷ್ಟ ? ಬದುಕಿಗೊಂದು ದಾರಿ ದೀಪವಲ್ಲವೇ ಅದು ?
ನಿಜ, ಹೊರಗೆ ದುಡಿದರೆ ಹೊಟ್ಟೆಪಾಡು ಉತ್ತಮವಾಗುತ್ತದೆ.ಆದರೆ, ನಮ್ಮ ಸಂಸ್ಕೃತಿಯ ಪಾಡೇನು?
ಅದರ ಅನುಭವ ನಮಗಾಗುವುದು ಯಾವಾಗ?ಹೊಟ್ಟೇಪಾಡಿಗಾಗಿ ದುಡಿದರೆ ಸಾಲದು..
ಹಣ ಸಂಪಾದನೆಯಿಂದ ಶಾಂತಿ ನೆಮ್ಮದಿ ಸಿಕುವುದೇ? ದಯವಿಟ್ಟು ಗಮನಿಸಿ..
ಏಂದಿಗೂ ಅರ್ಥಕ್ಕಾಗಿ ಮಠಕ್ಕೆ ಬರಬಾರದು, ಬದುಕಿನ ಅರ್ಥ ತಿಳಿಯುವುದಕ್ಕಾಗಿ ಬರಬೇಕು..!
ಸೇವೆ ಮಾಡುವುದರಲ್ಲಿ ಎಷ್ಟು ಆನಂದವಿದೆ..! ಅದನ್ನು ಅನುಭವಿಸಬೇಕೆ ಹೊರತು ವಿವರಿಸಿದರಾರಿಗೂ ಅರ್ಥವಾಗದು.
ಪರಿವಾರವೆಂದೂ ಸೇವೆಗಾಗಿಯೇ ಇರುವುದು, ಇರಬೇಕು, ಇರುತ್ತದೆ ಎಂದೇ ನನ್ನ ನಂಬಿಕೆ..
ನನ್ನೊಡನಾಡಿಗಳೇನು ಹೇಳುತ್ತಾರೋ ಗೊತ್ತಿಲ್ಲ
.
ಇನ್ನು ಪರಿವಾರದಲ್ಲಿನ ಲೋಪಗಳು..
ಹೌದು ಲೋಪಗಳಿಲ್ಲವೆಂದು ನಾವು ಹೇಳುವುದಿಲ್ಲ,
ಕೆಲವರಿಗೆ ಪರಿವಾರವೆಂದರೆ ‘ತಿಂದುಂಡು ತಿರುಗಾಡುವ ದಂಡದವರು’, ಎಂಬ ಅಭಿಪ್ರಾಯವಿದೆ..
ಇದನ್ನು ತಪ್ಪು ಎನ್ನುತ್ತೇನೆ ನಾನು. ದಯವಿಟ್ಟು ಹಾಗೆ ಯೋಚಿಸುವುದನ್ನು ಬಿಡಿ.
ನಿಮಾ ಅಣ್ಣ-ತಮ್ಮಂದಿರನ್ನು , ನಿಮ್ಮ ಮಕ್ಕಳನ್ನು ಆ ಪರಿವಾದಲ್ಲಿಟ್ಟು ನೋಡಿ..
ಮುಂದೆ ನಿಮ್ಮವ ಹಿಂತಿರುಗಿ ಮನೆಗೆ ಬರುವಾಗ ಹೇಗಿರುತ್ತಾನೆ ನೋಡಿ..!
ನೋವಿನಿಂದ ಹೇಳುತ್ತಿದ್ದೇನೆ ..ದಯವಿಟ್ಟು ಪರಿವಾರವನ್ನು ಆಡಿಕೊಳ್ಳುವುದನ್ನು ಬಿಡಿ..ನಗುಮೊಗದಿಂದ ನೋಡಿ.
ನಿಮ್ಮವರನ್ನು ಪ್ರೀತಿಯಿಂದ ಮಾತನಾಡಿಸಿ.. ಮುಂದೆ ನಿಮ್ಮಲ್ಲಿ ಅವರು ಹೇಗೆ ಹೇಗೆ ನಡೆದುಕೊಳ್ಳುತ್ತಾರೋ ನೋಡಿ..!
ಎಲ್ಲಕ್ಕಿಂತ ಹೆಚ್ಚಾಗಿ…
ಪರಿವಾರವನ್ನು ನಂಬಿ…ಗೌರವಿಸಿ…
ನೀವೆಷ್ಟು ಪ್ರೀತಿಯಿಂದ ಇರುತ್ತೀರೋ, ಅಷ್ಟು ಉತ್ಸಾಹದಿಂದ ಸೇವೆ ಸಲ್ಲಿಸಲು ನಮಗೆ ಸ್ಫೂರ್ತಿ…
ನಮ್ಮ ಬದುಕಿಗೆ ದಾರಿ ತೋರುವ ದೀಪದ ಬುಡಕ್ಕೆ , ವಾತ್ಸಲ್ಯವುಣಿಸುವ ತಾಯಿಯ ಬಳಿಗೆ, ಎಲ್ಲಿ ತಿದ್ದಬೇಕೋ ಅಲ್ಲಿ ತಿದ್ದಿ,
ಎಲ್ಲಿ ಹುರಿದುಂಬಿಸಬೇಕೋ ಅಲ್ಲಿ ಹುರಿದುಂಬಿಸಿ, ನಮ್ಮನ್ನು ತಮ್ಮ ದಾರಿಯಲ್ಲೇ ಕರೆದುಕೊಂಡು ಹೋಗುವ –
ಆ ತಂದೆಯ ಬಳಿಗೆ, ..
ನಮಗೆಲ್ಲವೂ ಆದ ಗುರುವಿನ ಬಳಿಗೆ ಬರಲು ಇನ್ಯಾವ ಆಕರ್ಷಣೆ ಬೇಕು.,!?
ನಮೋನ್ನಮಃ…..ನನ್ನೊಡೆಯನಿಗೆ..
October 26, 2010 at 11:59 AM
॥ಹರೇರಾಮ॥
ಪರಮಾದ್ಭುತ………………………..
ತುಂಬ ಚಲೊ ಬರದ್ದೆ ಹರ್ಷಣ್ಣ
October 26, 2010 at 9:46 PM
ನಮ್ಮ ಭಾವಗಳಿಗೆ ಬರಹವಾದವನಿವನು…!
October 2, 2012 at 8:33 AM
Analytical response on practical terms. Khudos sriharsha.jois
July 14, 2010 at 12:06 AM
ಪರಮಲಾಭವ ಗಳಿಸೆ ಜೀವತವ್ಯಾಪಾರ- |
ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||
ಚಿರಲಾಭ ಜತದಾತ್ಮ ಲೀಲಾವಿಹಾರಸುಖ |
ಧರೆಯ ಸುಖ ಮೇಲ್ ಬಡ್ಡಿ – ಮ೦ಕುತಿಮ್ಮ ||
.
ಪರಿವಾರದವರೇ, ವೈರಾಗ್ಯ ನಿಧಿ ಗಳಿಕೆಯ ಮು೦ದೆ ವೇತನದ ಕಸವೇನು.. ಪರರ ಅಧೀನ-ಬ೦ಧನ-ಹಗ್ಗಗಳಿಗಿ೦ತ ಭವಬ೦ಧನವ ಮುಕ್ತಗೊಳಿಸಲು ಹಿಡಿದ ಭಾವ-ಬ೦ಧನ-ಕಾರುಣ್ಯದ ರಸವೇನು..
.
ನಡೆ-ನಡೆದು ಸೋಲುವವರ ಮಧ್ಯೆ ನಡೆ-ನಡೆದು ನಲಿವವರು ನೀವು.. ನೀವು ಪಡುವ ಪಾಡಿಗೆ ದೇವ ಬಡ್ಡಿ ತೆರಬೇಕು, ನಾವು ಪಡುವ ಪಾಡಿಗೆ ದೇವ ನಕ್ಕು ಕೊರಗಬೇಕು..
.
ಬೆಳಕಿಲ್ಲದೆ, ಹಗ್ಗವನ್ನು ನೋಡಿ ಹಾವೆ೦ದು ಹೆದರಿ ನಿತ್ಯ ಹಾರುತ್ತಿರುವವರ ನಡುವೇ, ಹಾವಲ್ಲು ಹಗ್ಗದಲ್ಲು ಸಮತೆಯನ್ನು ಸಾಧಿಸಿದ ಪರಿವಾರದವರೊಡನಾಡಿ ನೀವು, ಬೇರೆಯಲ್ಲ.. ನಿಮ್ಮ ಅಲ್ಪ ನಿದ್ದೆಗೆ ನಮ್ಮ ಕಲ್ಪ ನಿದ್ದೆಯು ಸಮವಲ್ಲ..
.
ಕಲಶದ ಮೇಲೆ ಇಟ್ಟ ತೆ೦ಗಿನಕಾಯಿ ಶ್ರೇಷ್ಟವೇ ಆದರು ಗಾಳಿಯಲ್ಲಿ ನಿಲ್ಲಿಸಲು ಸಾಧ್ಯವೆ?..
.
ಅನುದಿನವು ಬಳ್ಳಿಯ ಗರ್ಭದಿ೦ದ ಜನ್ಮ ಕಳೆದುಕೊಳ್ಳುವ ಹೂವಿಗಿ೦ತ, ಬಳ್ಳಿ, ಮರ, ಭೂಮಿ, ವಿಶ್ವ ದೊಡ್ಡದಾದರು, ವಿಶ್ವೇಶ್ವರನಿರುವಲ್ಲಿಗೆ ಯಾತ್ರೆಗೈದು, ವಿಶ್ವ೦ಬರನಿರುವ ಜಗದ ಜಾಗದೊಳು ಕುಣಿದು ಅಲೆದು, ವಿಶ್ವ೦ತರ೦ಗನನು ಬೆರೆಯುವವರು ಯಾರು? ಗುರುಪರಿವಾರದವರು.
.
ಗುರುಪರಿವಾರ ಬಲು ದೊಡ್ಡದು, ತುಡಿತವಿರುವ ಎಲ್ಲರು ಗುರುವಿನ ಪರಿವಾರದವರೆ, ನಾವೆಲ್ಲಾ ಗುರು-ಪ್ರೀತಿ-ನೋಟ-ಅಲೆಯಲಿ ತೇಲಿ-ಮುಳುಗಿ-ಮಿ೦ದವರೆ. ಪರಿವಾರದ ಅಷ್ಟೂ ಮ೦ದಿ ಈ ಪ್ರೇಮಲೇಖನದಡಿಯಲಿ ತಮ್ಮದೇ ಗೂಡೆ೦ದು ಹಿಗ್ಗುವದ ಕ೦ಡು, ಪ್ರಕೃತಿ ಪುರುಷನ ಸೃಷ್ಟಿಯೇ ಹೊರತು ಬೇರಲ್ಲವೆ೦ದು ದೃಢವಾಗುತ್ತಿದೆ.
.
ಪರಮಾತ್ಮ ನಮ್ಮ ಗೋಳಾಟ ನಿಲ್ಲಿಸೊ, ಆದಿ ಸೇರುವ ಆಟದವರೊಡಗೂಡಿಸೊ
July 14, 2010 at 1:02 PM
wonderful!!
July 14, 2010 at 1:38 PM
ಅದ್ಭುತ….
ತುಂಬಾ ಸುಂದರವಾಗಿ ಬರೆದಿದ್ದೀರಿ…
July 14, 2010 at 5:36 PM
ತುಂಬಾ ಚೆನ್ನಾಗಿ ಬರೆದಿದ್ದೀರ
July 14, 2010 at 12:20 AM
ಹರೇರಾಮದ ಗೆಳೆಯ ಗೆಳೆತಿಯರೇ, ನಿಮ್ಮ ಭಾವವನ್ನು ಭಾವಲೋಕದ ಒಳ-ಹೊರಗಿ೦ದಲೋ ವ್ಯಕ್ತಪಡಿಸಿಬಿಡಿ. ಈ ಲೇಖನ ಇತಿಹಾಸವಾಗಲಿದೆ.
.
ಎಲ್ಲರೂ ಕವಿಯಾಗುತ್ತಿದ್ದಾರೆ ಕರುವಾಗುತ್ತಿದ್ದಾರೆ – ಹೊರ ನಿ೦ತು ನಲಿಯುವದರಲ್ಲೇನಿದೆ, ಒಳ ಬ೦ದು ಕುಣಿಯುವದರಲ್ಲಿದೆ.
July 14, 2010 at 1:50 PM
ನಿಜ….
ಕಮೆಂಟ್ಗಳ ಸಂಖ್ಯೆಯನ್ನು ನೂರಕ್ಕೆ ಮುಟ್ಟಿಸುವುದರ ಮೂಲಕ ಶ್ರೀಪರಿವಾರಕ್ಕೆ ನಮ್ಮ ಸಾಂಕೇತಿಕ ಗೌರವ ಸಲ್ಲಿಸೋಣ…
July 14, 2010 at 12:33 AM
“ಕಾರುಣ್ಯ ಮೂರ್ತಿಯ ಕಣ್ಣೀರಿದು”
“ಅಮ್ಮನ ಅಂತರಾಳವಿದು”
“ಕಂದನ ಕೂಗಿನ ಪ್ರತಿಧ್ವನಿಯಿದು”
ಮರೆಯದಿರಲಿ
July 14, 2010 at 12:34 AM
ಅಮ್ಮ………………………….. ಸರಿ ತಾನೆ???????????????????
July 14, 2010 at 6:44 PM
ಮೂರನೆಯದು ಹೌದು….
July 14, 2010 at 6:51 PM
ಎಲ್ಲವು ಹೌದು ….ನಮ್ಮ ಪ್ರಕಾರ
July 14, 2010 at 12:38 AM
ಸ್ನೇಹಕ್ಕು ಬದ್ಧ………………….
ಸಮರಕ್ಕು ಸಿದ್ಧ………………..
ಎರಡು ಅನಿವಾರ್ಯ
July 14, 2010 at 12:43 AM
ತಾಳ್ಮೆಗೆ ಇನ್ನೊಂದು ಹೆಸರೇ = ಪರಿವಾರ
“ವ್ಯಕ್ತಿಯಾಗಿ ಬನ್ನಿ; ಶಕ್ತಿಯಾಗಿ ಹೊಮ್ಮಿ”
July 14, 2010 at 10:06 PM
i liked this…
July 14, 2010 at 12:53 AM
ಈ ಮಕ್ಕಳ ಮೇಲೆ ಅದೇನು ಭರವಸೆ!!!!!!!
ಅದೇನು ನಿರೀಕ್ಷೆ!!!!!!!!!!!
“ಎಲ್ಲೆಡೆ ಮುದುಕರೆ ಇರುವ ಪರಿವಾರ, ಆದರೆ ಇಲ್ಲಿ ಎಲ್ಲ ಬಗೆಯೂ ಇದೆ….ಕೆಲವರು ಯುವಕರು, ಇನ್ನು ಕೆಲವರು ನವಯುವಕರು” ಆದರೆ ಸಮವಸ್ತ್ರ, ಎಲ್ಲರಿಗೂ ಒಂದೇ__________
ಎಲ್ಲರು all rounders
ನಾನಾ ಕೆಲಸ ಮಾಡಬಲ್ಲರು.
July 14, 2010 at 1:00 AM
“ಪರಿವಾರವ ಒಳಗಿಂದಲು ಹೊರಗಿಂದಲು ಕಾಣಲು ಅವಕಾಶ ಕೊಟ್ಟ ತಾಯೇ ನಿನಗಿದೋ ಕೋಟಿ ನಮನ”
ಮತ್ತೆ ಬರುವೆನು ….
ನಿನ್ನ ಕೂಡುವೆನು…
ಸದಾ ಚರಣ ಸೇವಕನು…
July 14, 2010 at 6:45 PM
ಬಾ…….ಬಾ……
July 14, 2010 at 1:12 AM
ಶ್ರೀ ಶ್ರೀ ಶ್ರೀ ಆದಿ ಶ೦ಕರಾಚಾರ್ಯವಿರಚಿತ ಭಜಗೋವಿ೦ದ೦ (ಕೆಲವು ಶ್ಲೋಕ)
=========================================
.
ಮೂಢ ಜಹೀಹಿ ಧನಾಗಮತೃಷ್ಣಾ೦
ಕುರು ಸದ್ಬುದ್ಧಿ೦ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜಕರ್ಮೋಪಾತ್ತ೦
ವಿತ್ತ೦ ತೇನ ವಿನೋದಯ ಚಿತ್ತಮ್ ||
.
೨. ಮೂಢ, ಧನಸ೦ಚಯದ ತೃಷ್ಣೆಯನ್ನು ತೊರೆ;
ಮನಸಿನಲ್ಲಿ ಸದ್ಬುದ್ಧಿಯನ್ನೂ ವೈರಾಗ್ಯವನ್ನೂ ಬೆಳಸು;
ನಿನ್ನ ಕರ್ಮದಿ೦ದ ಬರುವ ದ್ರವ್ಯದಿ೦ದ ಮನಸ್ಸನ್ನು ತೃಪ್ತಿಗೊಳಿಸು.
.
ನಲಿನೀದಲಗತಜಲಮತಿ ತರಲ೦
ತದ್ವಜ್ಜೀವಿತಮತಿಶಯಚಪಲಮ್ |
ವಿದ್ಧಿ ವ್ಯಾಧ್ಯಭಿಮಾನಗ್ರಸ್ತ೦
ಲೋಕ೦ ಶೋಕಹತ೦ ಚ ಸಮಸ್ತಮ್ ||
.
೪. ಕಮಲಪತ್ರದ ಮೇಲೆ ಇರುವ ಜಲ
ಬಿ೦ದುವು ಚ೦ಚಲವಾಗಿರುವ ಹಾಗೆ ಜೀವನವೂ
ಅತ್ಯ೦ತ ಚ೦ಚಲವಾದುದು; ವ್ಯಾಧಿ-ಅಭಿಮಾನ
ಗಳಿ೦ದ ಜನರೆಲ್ಲಾ ಗ್ರಸ್ತರಾಗಿ, ಶೋಕದಿ೦ದ
ಹತರಾಗಿದ್ದಾರೆ೦ದು ತಿಳಿದುಕೊ.
.
ಅರ್ಥಮನರ್ಥ೦ ಭಾವಯ ನಿತ್ಯ೦
ನಾಸ್ತಿ ತತಃ ಸುಖಲೇಶಃ ಸತ್ಯಮ್ |
ಪುತ್ರಾದಪಿ ಧನಭಾಜಾ೦ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||
.
೭. ಯಾವಾಗಲೂ ಅರ್ಥವು (wealth) ಅನರ್ಥವೆ೦ದು
ಭಾವಿಸು; ಸತ್ಯವಾಗಿ ಅದರಲ್ಲಿ ಸ್ವಲ್ಪವೂ ಸುಖವಿಲ್ಲ.
ಐಶ್ವರ್ಯವ೦ತರಿಗೆ ತಮ್ಮ ಮಕ್ಕಳಿ೦ದಲೇ ಭೀತಿ
ತಪ್ಪಿದ್ದಲ್ಲ; ಸರ್ವತ್ರ ಕಾಣುವ ಸ್ಥಿತಿಯೇ ಇದು.
.
ಬಾಲಸ್ತಾವತ್ಕ್ರೀಡಾಸಕ್ತ
ಸ್ತರುಣಸ್ತಾವತ್ ತರುಣೀಸಕ್ತಃ |
ವೃದ್ಧಸ್ತಾವಚ್ಚಿ೦ತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||
.
೮. ಬಾಲಕ ಯಾವಾಗಲೂ ಕ್ರೀಡೆಯಲ್ಲಿ ಆಸಕ್ತ
ನಾಗಿರುವನು; ತರುಣ ಯಾವಾಗಲೂ ತರುಣಿಯಲ್ಲಿ
ಆಸಕ್ತನಾಗಿರುವನು; ವೃದ್ಧ ಯಾವಗಲೂ ಚಿ೦ತೆಯಲ್ಲಿ
ಮಗ್ನನಾಗಿರುವನು; ಆದರೆ ಯಾವನೂ
ಪರಬ್ರಹ್ಮದಲ್ಲಿ ಅನುರಕ್ತನಾಗಿರುವುದಿಲ್ಲ.
.
ಕಾ ತೇ ಕಾ೦ತಾ ಕಸ್ತೇ ಪುತ್ರಃ
ಸ೦ಸಾರೋsಯಮತೀವ ವಿಚಿತ್ರಃ |
ಕಸ್ಯ ತ್ವ೦ ಕಃ ಕುತ ಆಯಾತ –
ಸ್ತತ್ತ್ವ೦ ಚಿ೦ತಯತದಿಹ ಭ್ರಾತಃ
.
೯. ನಿನ್ನ ಕಾ೦ತೆ ಯಾರು? ಸುತನಾರು? ಈ
ಸ೦ಸಾರ ಅತಿ ವಿಚಿತ್ರವಾಗಿದೆ. ನೀನು ಯಾರು?
ಯಾರವನು? ಎಲ್ಲಿ೦ದ ಬ೦ದೆ? ಹೇ ಸಹೋದರನೆ,
ಇದನ್ನು ಕುರಿತು ಯೋಚಿಸು.
.
ಸತ್ಸ೦ಗತ್ವೇ ನಿಸ್ಸ೦ಗತ್ವ೦
ನಿಸ್ಸ೦ಗತ್ವೇ ನಿರ್ಮೋಹತ್ವ೦ |
ನಿರ್ಮೊಹತ್ವೇ ನಿಶ್ಚಲ ತತ್ತ್ವ೦
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||
.
೧೦. ಸತ್ ಸ೦ಗದಿ೦ದ ನಿಸ್ಸ೦ಗತ್ವ, ನಿಸ್ಸ೦ಗತ್ವದಿ೦ದ
ನಿರ್ಮೋಹತ್ವ, ನಿರ್ಮೊಹತ್ವದಿ೦ದ ನಿಶ್ಚಲತತ್ತ್ವ,
ನಿಶ್ಚಲ ತತ್ತ್ವದಿ೦ದ ಜೀವನ್ಮುಕ್ತಿ – ಪ್ರಾಪ್ತವಾಗುತ್ತವೆ.
.
ಮಾ ಕುರು ಧನಜನಯೌವನಗರ್ವ೦
ಹರತಿ ನಿಮೇಷಾತ್ ಕಾಲಃ ಸರ್ವಮ್ |
ಮಾಯಮಯಮಿದಮಖಿಲ೦ ಹಿತ್ವಾ
ಬ್ರಹ್ಮಪದ೦ ತ್ವ೦ ಪ್ರವಿಶ ವಿದಿತ್ವಾ ||
.
೧೨. ಧನಜನಯೌವನಗಳಿ೦ದ ಗರ್ವಪಡಬೇಡ;
ಕಾಲವು ಇವೆಲ್ಲವನ್ನೂ ಕ್ಷಣದಲ್ಲಿ ನಾಶ ಮಾಡುವುದು;
ಮಾಯಮಯವಾದ ಈ ಅಖಿಲ ಜಗತ್ತನ್ನೂ ತೊರೆದು,
ಪರಬ್ರಹ್ಮಸ್ವರೂಪವನ್ನು ತಿಳಿದುಕೊ೦ಡು ಅದರಲ್ಲಿ ಪ್ರತಿಷ್ಠಿತನಾಗು.
.
ದಿನಯಾಮಿನ್ಯೌ ಸಾಯ೦ ಪ್ರಾತಃ
ಶಿಶಿರವಸ೦ತೌ ಪುನರಾಯಾತಃ |
ಕಾಲಃ ಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮು೦ಚತ್ಯಾಶಾವಾಯುಃ ||
.
೧೩. ದಿನರಾತ್ರಿಗಳು, ಅರುಣಸ೦ಧ್ಯೆಗಳು,
ಶಿಶಿರ-ವಸ೦ತಋತುಗಳು ಪುನಃ ಪುನಃ ಬರುತ್ತವೆ;
ಕಾಲ ಆಟವಾಡುತ್ತಿದೆ; ಆಯಸ್ಸು ಸವೆಯುತ್ತಿದೆ;
ಆದರೂ ವ್ಯರ್ಥವಾದ ಆಸೆಯು ಬಿಡುವುದಿಲ್ಲ.
July 14, 2010 at 11:38 PM
ಗುರು ಚರಣಾ೦ಬುಚ ನಿರ್ಭರ ಭಕ್ತಃ
ಸ೦ಸಾರಾದಚಿರಾದ್ಭವ ಮುಕ್ಃ |
ಸೇ೦ದ್ರಿಯ ಮಾನಸ ನಿಯಮಾದೇವ೦
ದ್ರಾಕ್ಷ್ಶಸಿ ನಿಜಹೃದಯಸ್ಥ೦ ದೇವಮ್ ||
.
ಗುರುಚರಣಾ೦ಬುಜದಲ್ಲಿ ಪೂರ್ಣಭಕ್ತಿಯುಳ್ಳವನಾಗಿ ಸ೦ಸಾರದಿ೦ದ ಶೀಘ್ರವಾಗಿ ಮುಕ್ತನಾಗು; ಇ೦ದ್ರಿಯಗಳೊ೦ದಿಗೆ ಮನಸ್ಸನ್ನು ನಿಗ್ರಹಿಸಿದರೆ ನಿನ್ನ ಹೃದಯಸ್ಥನಾದ ಈಶ್ವರನನ್ನು ನೋಡುವೆ.
July 14, 2010 at 11:15 AM
ಜೀವನ ಸಾರ್ಥಕತೆಯ ಪಯಣದಲ್ಲಿ ಸಾಗುವಾಗ ಭಾವ ಬ೦ಧನದಲ್ಲಿ ಸಿಲುಕಿದ ನಮಗೆ ಬದುಕಿನ ಪರಮಾನ೦ದಕ್ಕೆ ಒಯ್ಯುವ ಪ್ರೀಯ ಗುರುವಿನ ಪ್ರೀತಿಯ ನುಡಿಮುತ್ತುಗಳಿಗೆ ಎನಿತು ಬಣ್ಣಿಸಲಿ ……………….!
ಮಾತು ಮರೆತಿದೆ…………..
ತನುವು ತು೦ಬಿದೆ …………….
ಮನದ ಗಾಯ ಮಾಸಿದೆ………….
ಬಾಹ್ಯ ಜಗತ್ತಿನ ಸಕಲ ಸುಖಸಾಧನಗಳ ಸೆಳೆತಗಳನ್ನು ಮೀರಿ, ಭೋಗಪರರಿಗೆ ಹೇಗೆ ನೋಡಿದರೂ ಶುಷ್ಕವೆನಿಸುವ ಮಠದ ವಾತಾವರಣದಲ್ಲಿ-
ಸೇವೆಗೈಯ್ಯಲು ಧಾವಿಸಿ ಬರುವ ಈ ಜೀವಿಗಳನ್ನು ಅದಾವುದು ಸೆಳೆಯಿತು..!?
!!!!!!!!!!!!!!!!!!!!!??????????????????ಪ್ರೀತಿಯೆಂಬ ಕೋಲ್ಮಿಂಚಿನ ಸೆಳೆತವಲ್ಲವೇ………… ಅದು, ಜ್ಞಾನದ ಬೆಳಕಲ್ಲವೇ ಪರಿವಾರದ ಹುಳುಗಳನ್ನು ಸೆಳೆದದ್ದು?
ಅಬ್ಬಾ!!!!! ಬೆಳಕಿನ ಸೆಳೆತವೇ!!!!!!!!!!!?????????
July 14, 2010 at 1:21 PM
ಹರೇ ರಾಮ
ರಮೇಶಣ್ಣನಿಗೆ ಹುಟ್ಟಿದ ದಿನದ ಶುಭಾಶಯಗಳು {ತಡವಾಗಿ ಹೇಳುತ್ತಿದ್ದೇನೆ }
July 14, 2010 at 3:03 PM
ಗುರು ವಾಣಿಯು ಸದಾ ನಿತ್ಯ ನೂತನವಾಗಿ ಹರಿದು ಬರುತ್ತಿರಲಿ
ಅದರನರಿತು ಅನುಸರಿಸುವ ಬುದ್ಢಿ, ಭಾಗ್ಯ ನಮಗಿರಲಿ
ಹರೇರಾಮ…
July 14, 2010 at 3:57 PM
ತತ್ವಕ್ಕಾಗಿ ಸಮಾಜಕ್ಕಾಗಿ ದುಡಿಯುವಾಗ ರಾಮ-ಕೃಷ್ಣರು ಕೂಡ ಕಷ್ಟಗಳನ್ನು ಅನುಭವಿಸಬೇಕಾಯಿತು – ಸಲ್ಲದ ಮಾತುಗಳನ್ನು ಕೇಳಬೇಕಾಯಿತು. ನಮಗೆ ಆದರ್ಶ ರಾಮ-ಕೃಷ್ಣರಾಗಿರಲಿ, ಅವರನ್ನು ಮೆಚ್ಚಿಸುವುದಕ್ಕಾಗಿ ಕುಣಿಯುವ – ನಮ್ಮ ಜಗಳ ಕದನ ಬೇಸರ ಏನಿದ್ದರು ಇವರೊಡನಿರಲಿ. ವ್ಯವಹಾರ ಪ್ರಪ೦ಚದಲ್ಲೇ ಇದ್ದರು, ಮೂಲ ವ್ಯವಹಾರ ಮಾತ್ರ ಒಡೆಯನೊಡನಿರಲಿ.
.
ಒಳ್ಳೆಯ ಭಾವಕ್ಕೆ, ಒಳ್ಳೆಯ ಕೆಲಸಕ್ಕೆ ಸ೦ಸ್ಥಾನದ ಆಶೀರ್ವಾದ ಸದಾ ಇದೆ.
.
ನಾರಾಯಣನ ಸ್ವಾಗತ ನಮಗೆ ಸ್ಪೂರ್ತಿ ನೀಡಲಿ. ಪರಶಿವನ ಬೂದಿ ನಮಗೆ ರಕ್ಷೆ ನೀಡಲಿ. ಕಣ್ಣು ತೆರೆಯುವ ಕಣ್ಣು ತೆರೆಸುವ.
July 14, 2010 at 10:14 PM
……………………………………………..ಪದಗಳು ಏನನ್ನು ಹೇಳಿಯಾವು? ಪರಿವಾರದ ಸಹೋದರರಿಗೆ ನಿದ್ದೆಯಿಲ್ಲ, ಆಹಾರ…ಯಾವಾಗಲೋ ಏನೋ!! ಆದರೂ ನನಗನ್ನಿಸುವ ಒಂದು ಮಾತಿದು…….ಪ್ರತಿಕ್ಷಣವೂ ಶ್ರೀಗುರುಗಳ ಜೊತೆಗಿರುವ ಭಾಗ್ಯ ..ನಮಗೆಲ್ಲಿದೆ? ಕೈ ತುಂಬಾ ಸಂಬಳ, ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಾ ಊಟ..ಅದರಲ್ಲೂ ವೈವಿಧ್ಯ, ನಿದ್ದೆ… ಎಲ್ಲವೂ ಇದೆ, ಆದರೆ ನೆಮ್ಮದಿ?????
July 14, 2010 at 11:23 PM
“ಭೇಟಿ ಮಾಡಲು ಬಂದು ಭೇಟಿ ಮಾಡಿಸಲು ನಿಂದವರುಂಟು..” – ಅದ್ಭುತ. ಇ೦ತವರ ಅನುಭವಗಳನ್ನು ತಿಳಿಯುವಾಸೆ. ಸಾಧ್ಯವಾದರೆ ಸಮ್ಮುಖದಲ್ಲಿ ಖ೦ಡಿತ ಬರೆಯರಿ.
July 14, 2010 at 11:33 PM
ಕಣ್ಣಿಗೆ ಬಟ್ಟೆ ಕಟ್ಟಿಕೊ೦ಡು ಆನೆಯನ್ನು ಮುಟ್ಟಿ ಎನೇನೋ ಕಲ್ಪಿಸಿಕೊಳ್ಳುತಿದ್ದವರು, ಘನಗ೦ಭಿರ ಆನೆಯನ್ನು ನೋಡಿ ಪುಳಕಗೊ೦ಡಿದ್ದಾರೆ. ಆನೆಯ ಭಾರ ಹೆಚ್ಚಿದೆ?
July 15, 2010 at 7:55 AM
Hareraama. The people like me can’t reply to this. After reading that I criied for a while. Will reply in Kannada tomorrow.
July 15, 2010 at 8:58 AM
ಹರೇ ರಾಮ
ಪದಗಳು ತುಂಬಿದ ವಾಕ್ಯಗಳಲ್ಲ
ಹೃದಯವೇ ತುಂಬಿದೆ ಇದರಲ್ಲಿ ,
ಅಮ್ಮ ಮಕ್ಕಳ ಬಗ್ಗೆ ,ಮಕ್ಕಳು ಅಮ್ಮನ ಬಗ್ಗೆ ,
ಕಣ್ಣು ತುಂಬಿ ಬಂತು
ಧನ್ಯರಿವರು
July 15, 2010 at 10:21 AM
ಹರೇರಾಮ,
ಇದು ಜನುಮ ಜನುಮದ ಅನುಬಂಧ.
ಇದು ಭಾಗ್ಯವಿದು ಭಾಗ್ಯವಯ್ಯ
ಶ್ರೀಪರಿವಾರವೆ ನಿಮ್ಮ ಸೇವೆ ಅಪಾರ
ಅರಿತು ಧನ್ಯವಾದೆವು ನಾವಯ್ಯ
ಜೈ ಶ್ರೀರಾಮ್
July 15, 2010 at 11:14 AM
ಈ ಹಿಂದೆ ಬಂದತಹ ಜಟಾಯುವಿನ ಕತೆಗೂ …ಪರಿವಾರದ ಕತೆಗೂ ತುಂಬಾ ಸಾಮ್ಯವಿದೆ ಅನ್ನಿಸ್ತು ……
ಸೇವಕರು ಕಾವಿಯನ್ನು ಧರಿಸದೆ ಇರುವ ಸನ್ಯಾಸಿಗಳು ಅಂತ ಹೇಳಬಹುದು ..!!!!!!!!!!!!
July 15, 2010 at 11:33 AM
ಸದ್ಗುರುಗಳು ನಮ್ಮ ಮಠದ ಕಲಶವಾದರೆ, ಈ ಪರಿವಾರ ನಮ್ಮ ಮಠವನ್ನು ಹೊತ್ತಿರುವ ಕಂಬಗಳು,……. ಅದರ ಸ್ತಂಬಗಳು.
July 15, 2010 at 6:06 PM
ಹರೇ ರಾಮ.
ತುಂಬಾ ಅದ್ಬುತವಾದ ಲೇಖನ. ಈಗಾಗಲೇ ಹೇಳಿರುವಂತೆ, ಇದು ಎಲ್ಲ ಶಬ್ದಗಳಿಗೆ ಅತೀತ. ಬರೆದಿದ್ದು ಈಗಾದರೂ ಶ್ರೀ ಸಂಸ್ಥಾನದಲ್ಲಿ ಇಂತಹ ಭಾವನೆಯ ಪ್ರತ್ಯಕ್ಷ ಅನುಭವ ಬಹಳ ಹಿಂದೆಯೇ ಆಗಿದೆ. ಪರಮ ಪೂಜ್ಯ ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ಕ್ಕೆ ಬಂದ ಹೊಸ ತರಲ್ಲೇ , ಬಂದ ಒಂದೆರಡು ತಿಂಗಳು ಗಳಲ್ಲೇ, ಪರಿವಾರ ದ ಶಿಷ್ಯರಿಗೆ ಅಶು ಭಾಷಣ ಸ್ಪರ್ಧೆ ಏರ್ಪಡಿಸುತ್ತಿದರು. ಸ್ವತಃ ಶ್ರೀ ಸಂಸ್ಥಾನ ತೀರ್ಪು ನೀಡುತ್ತಿದ್ದರು. ಒಮ್ಮೆ ಶ್ರೀ ಸಂಸ್ಥಾನ ಹೇಳಿದ್ದು ಜ್ಞಾಪಕ ಇದೆ. ಪರಿವಾರದವರು ಉಪ್ಪು ಸೊಪ್ಪು ಇಲ್ಲದ ಉಪ್ಪಿಟ್ಟು ತಿನ್ನುವುದು ಆಗಿಬಿಟ್ಟಿದೆ – ಮಠ ದಲ್ಲಿ ಇಡ್ಲಿ ಯಂತಹ ತಿಂಡಿ ಮಾಡಬೇಕು ಎಂದು ಮಠ ದಲ್ಲಿ ಬೇರೆ ಬೇರೆ ರೀತಿಯ ತಿಂಡಿ ವ್ಯವಸ್ತೆ ಪ್ರಾರಂಬಿಸಿದರು. ಯಾರಿಗಾದರೂ ಸ್ವಲ್ಪ ಅರೋಗ್ಯ ಸರಿ ಇಲ್ಲವಾದರೆ ಶ್ರೀ ಗಳ ಕಾಳಜಿ! ಈ ರೀತಿಯ ಹಲವರು ಚಿಕ್ಕ ಚಿಕ್ಕ ಸಂಗತಿಗಳು ಶ್ರೀ ಸಂಸ್ಥಾನಕ್ಕೆ ಪರಿವಾರದ ಮೇಲೆ ಇರುವ ಪ್ರೀತಿ ಅಭಿಮಾನಕ್ಕೆ ಉದಾಹರಣೆಗಳು. ಅದಲ್ಲದೆ, ಶ್ರೀ ಸಂಸ್ಥಾನಕ್ಕೆ ಪರಿವಾರದಲ್ಲಿ ಇರುವ ಪ್ರತಿಯೊಬ್ಬರ ಮೇಲೂ ಇರುವ ವಿಶ್ವಾಸ! ಮಠದ ಹಿರಿಯ ಶಾಸ್ತ್ರೀ ಗಳ ಬಗೆಗೆ ಕೂಡ ಅವರಿಗಿರುವ ಪ್ರೀತಿ, ಅವರನ್ನು ನೋಡಿಕೊಳ್ಳುವ ರೀತಿ ಅವರಿಗೆ ಇರುವ ಅಭಿಮಾನ ತೋರಿಸುತ್ತದೆ. ನಿಜವಾಗಲೂ ಧನ್ಯ. ಪರಿವಾರದಲ್ಲಿ ಇದ್ದು ಶ್ರೀ ಸಂಸ್ಥಾನದ ವಿಶೇಷ ಪ್ರೀತಿ ಗೆ ಪಾತ್ರ ಆಗಿರುವ, ಪ್ರತಿ ನಿತ್ಯ ಶ್ರೀ ಕರಾರ್ಚಿತ ಶ್ರೀ ರಾಮನ ಪೂಜೆ ಯನ್ನು, ಶ್ರೀರಾಮನಿಂದ ಪೂಜಿಸಲ್ಪಟ್ಟ ಶ್ರೀ ಚಂದ್ರಮೌಳೀಶ್ವರ ನ ಪೂಜೆ ಯಲ್ಲಿ ಪಾಲ್ಗೊಳ್ಳುವ ಅತಿ ಅಮೂಲ್ಯ ಪುಣ್ಯ ಹೊಂದಿರುವ ಎಲ್ಲ ನನ್ನ ಆತ್ಮೀಯ ಸಹೋದರರಿಗೆ ಅಭಿನಂದನೆಗಳು.
ನಮಸ್ಕಾರಗಳೊಂದಿಗೆ,
ಪ್ರಸನ್ನ.
July 15, 2010 at 7:46 PM
ಜೆಡ್ಡು ಸರಸ್ವತಿ ಇವರಿ೦ದ –
ಒ೦ದು ಕಡೆಯಿ೦ದ ನೋಡಿದರೆ ಪರಿವಾರದವರೆ ಭಾಗ್ಯಶಾಲಿಗಳು ಎನ್ನಿಸುತ್ತದೆ.
ಒ೦ದು ಕಡೆಯಿ೦ದ ಅವರ ಕಷ್ಟಗಳನ್ನು ನೋಡಿ ಮನ ಮರುಗುತ್ತದೆ.
ವಯಸಲ್ಲಿ ಚಿಕ್ಕವರೂ ಇರುವರು, ಪರಿವಾರದ ಎಲ್ಲರಿಗೂ ಒಳ್ಳೆಯದಾಗಲಿ, ಜೀವನ ಸುಖಮಯವಾಗಿರಲಿ ಎ೦ದು ಗುರುವಲ್ಲ್ಲಿ ಮತ್ತು ದೇವರಲ್ಲಿ ಬೇಡಿಕೊಳ್ಳುತ್ತೇನೆ.
July 15, 2010 at 8:07 PM
ಶ್ರೀಪರಿವಾರದಲ್ಲಿ ಬಿಡ್ಸಳ್ಲಿ ಕೃಷ್ಣಮೂರ್ತಣ್ಣ ಇದ್ದಾರೆ. ಅವರಿಗೆ 57 ವರ್ಷ. ಕಳೆದ ಐದಾರು ವರ್ಷದಿಂದ ಸೇವೆಯಲ್ಲಿದ್ದಾರೆ. ವಿಶೇಷವೆಂದರೆ ಅವರಿಗಿದು ಆವಶ್ಯಕವೇನೂ ಅಲ್ಲ. ಇಂತವರೂ ಈ ಎಲ್ಲ ಕಷ್ಟ ಸಹಿಸುತ್ತ ಪರಿವಾರದಲ್ಲಿದ್ದಾರೆ… ಅವರು ಹೀಗೆನ್ನುತ್ತಾರೆ….
ಶ್ರೀಗಳವರ ಆದೇಶದಂತೆ ಪರಿವಾರಕ್ಕೆ ಬಂದೆ. ಮನಸ್ಸಿಗೆ ತುಂಬಾ ಸಮಾಧಾನ ಸಿಗುತ್ತಿದೆ. ಇಲ್ಲಿ ಯಾವುದೂ ಕಷ್ಟ ಎನಿಸುವುದೇ ಇಲ್ಲ. ಸಂಸ್ಥಾನದ ಸೇವೆ ನನ್ನ ಭಾಗ್ಯ.
July 15, 2010 at 8:43 PM
ಇದು ಗುರುಕರುಣೆಯಲ್ಲ; ಈ ಗುರುವೆ ಕರುಣೆ
ಇದು ಸೇವಕಸೇವೆಯಲ್ಲ; ಈ ಸೇವಕರೆ ಸೇವೆ
July 16, 2010 at 11:25 AM
ಗುರುಪರಿವಾರದೆವರೆಲ್ಲಾ ಬಹುಮಾನ ಗೆದ್ದ೦ತೆ ಅನ್ನಿಸುತ್ತಿದೆ, ನೂರು ಮುಟ್ಟಿದೆ, ಒ೦ದು ಸೇರಿರುವುದರಿ೦ದ ಇನ್ನೇಷ್ಟು ಸೊನ್ನೆ ಬೇಕಾದರು ಸೇರಿಸುತ್ತಾ ಹೋಗಬಹುದು. ಗುರುಪರಿವಾರ ಅಗಣಿತವಾಗಲಿ.
July 16, 2010 at 11:28 AM
ಗುರುಪರಿವಾರದ ಪ್ರತಿಯೊಬ್ಬರು ಅವರ ನೆನಪನ್ನು ಅನುಭವಗಳನ್ನು ಹ೦ಚಿಕೊ೦ಡರೆ ಅದೇ ಅನುಭವ ನಮಗೂ ಆಗುತ್ತದೆ, ಪರಿವಾರದ ಪ್ರತಿಯೊಬ್ಬರು “ಸಮ್ಮಖ”ದಲ್ಲಿ ಮಖವನ್ನು ತೋರಿಸಿ, ಸಿಹಿಯನ್ನು ಹ೦ಚಿ, ಎ೦ದಿಗೂ ಅಜೀರ್ಣವಾಗದ ಹೆಚ್ಚಾಗದ ಸಿಹಿಯದು. ದಯವಿಟ್ಟು ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು ಎ೦ದು ವಿನ೦ತಿಮಾಡಿಕೊಳ್ಳುತ್ತಿದ್ದೇವೆ.
.
ದಯವಿಟ್ಟು ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು ಎ೦ದು ವಿನ೦ತಿಮಾಡಿಕೊಳ್ಳುತ್ತಿದ್ದೇವೆ.
ದಯವಿಟ್ಟು ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು ಎ೦ದು ವಿನ೦ತಿಮಾಡಿಕೊಳ್ಳುತ್ತಿದ್ದೇವೆ.
ದಯವಿಟ್ಟು ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು ಎ೦ದು ವಿನ೦ತಿಮಾಡಿಕೊಳ್ಳುತ್ತಿದ್ದೇವೆ.
ದಯವಿಟ್ಟು ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು ಎ೦ದು ವಿನ೦ತಿಮಾಡಿಕೊಳ್ಳುತ್ತಿದ್ದೇವೆ.
.
July 16, 2010 at 11:51 AM
ನಾನೂ ಕೂಡಾ..
’ದಯವಿಟ್ಟು ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು ಎ೦ದು ವಿನ೦ತಿಮಾಡಿಕೊಳ್ಳುತ್ತಿದ್ದೇವೆ.’
July 16, 2010 at 1:17 PM
ಹರೇ ರಾಮ
ರಾಮ ನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಬೆರೆಸಿ
ಬಾಯ ಚಪ್ಪರಿಸಿರೋ ಹೇಳುವ ಹಾಗೆ
ಗುರುಪರಿವಾರದ ಪ್ರತಿಯೊಬ್ಬರು “ಸಮ್ಮುಖ”ದಲ್ಲಿ ಬರೆಯಬೇಕು
ನಾವೆಲ್ಲಾ ಅನುಭವದ ಪಾಯಸ ತಿಂದು ಬಾಯಿ ಚಪ್ಪರಿಸುವೆವು
July 17, 2010 at 3:16 PM
ಮೂಕಮ್ ಕರೋತಿ ವಾಚಾಲಮ್ ಪಂಗುಮ್ ಲಂಗಯತೇ ಗಿರಿಮ್
ಯತ್ ಕ್ರುಪಾ ತಮಹಮ್ ವಂದೇ ರಾಘವೇಶ್ವರ ಭಾರತೀಮ್
July 17, 2010 at 3:24 PM
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ಗುರುದೇವ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಇರುವಂತೆ ನಿನಿರಿಸು ರಾಘವೇಶ………………………………………………..\\\\\\\\\\\\\\\\\\\\\\\\\\\\\\\
July 18, 2010 at 12:36 AM
“…….ಇದು ನಮ್ಮ ನಿಮ್ಮ ನಡುವೆ ಸೇತುವೆ ಕಟ್ಟುವ ಪರಿವಾರದ ಬದುಕಿನ ಪರಿ!!!……”
ಇದನ್ನರಿಯದೆ, ಲಘುವಾಗಿ ಮಾತನಾಡುವ ,ಅಚಾರ ವಿಚಾರ ವಿಹಾರ ವ್ಯವಹಾರ ಗಳಲ್ಲಿ ಉಪಚಾರದ ಬದಲಾಗಿ ಅಪಚಾರ ಮಾದಿದ ಮಂದಿ ಗಳನ್ನು ಕ್ಶಮಿಸ ಬೇಕಾಗಿ ಬೇಡುವೆ.
July 18, 2010 at 6:50 PM
ಮಲ್ಲಿಗೆಯ ಜೊತೆ ದಾರವೂ ಸ್ವರ್ಗಕ್ಕೆ ಹೋದಂತಾಗಿದೆ …ಬಯಸದೇ ಬಂದ ಭಾಗ್ಯವದು…ಗುರು ಇಚ್ಛೆಯ ಮೇರೆಗೆ ಪರಿವಾರದಲ್ಲೊಬ್ಬರ ಜೊತೆ ಪರಿಣಯವಾಗಿದ್ದು..ಪರಿವಾರಕ್ಕೆ ಪುಟ್ಟ ಕಂದಮ್ಮನ ಸೇರ್ಪಡೆಯಾಗಿದ್ದು….ಎಲ್ಲ ಕನಸಿನಂತಿದೆ..ಎಷ್ಟು ಜನ್ಮದ ಸುಕೃತವೋ ….!!!! ನಾವು ಧನ್ಯರು ಧನ್ಯರು .. ಧನ್ಯರು ಧನ್ಯರು… ಧನ್ಯರು ….
ಅತ್ತಲಿತ್ತ ಎತ್ತಲೆತ್ತ ದೃಷ್ಟಿ ಹರಿಸಿದೆ …ಮತ್ತೆ..
ಎತ್ತಲಲ್ಲೂ ಕತ್ತೆಲೆನಿಸಿ ನಿನ್ನ ಸ್ಮರಿಸಿದೆ ..ಕಳೆದುಕೊಂಡೆ ಹಲವು ವರುಷ ಸೇವೆ ಗೈಯ್ಯದೆ…
July 22, 2010 at 12:30 PM
ಹರೇರಾಮ.
ನಮ್ಮ ಪರಿವಾರದ ಬಗ್ಗೆ ಲೇಖನ ತುಂಬಾ ತುಂಬಾ ಸುಂದರವಾಗಿ ಬೈಂದು, ಹಾಗೆ ಪ್ರತಿಕ್ರಿಯೆಗಳೂ ಒಬ್ಬರಿಗಿಂತ ಒಬ್ರಿದ್ದು ಚೆನ್ನಾಗಿ ಬೈಂದು ಗುರುಗಳೇ.
July 22, 2010 at 1:06 PM
ಹಸು ತನ್ನ ಕರುವನ್ನು ಪ್ರೀತಿಯಿಂದ ನೆಕ್ಕಿದಂತಿದೆ ಈ ಲೇಖನ!
July 25, 2010 at 7:52 PM
ಸಂಸ್ಥಾನದ ಪಾದ ಕಮಲಗಳಿಗೆ ಸಾವಿರ ಸಾವಿರ ಉದ್ದಂಡ ನಮಸ್ಕಾರಗಳು
ಪರಿವಾರದ ಮೇಲಿನ ಅವ್ಯಕ್ತವಾದ ಪ್ರೀತಿಯ ಸಿಂಚನದಂತಿದೆ ಈ ಬರೆಹ,
ಮನಮಿಡಿಯುವ ನಿಮ್ಮ ಸಾಲುಗಳಿಗೆ
“ನೋಡಿಕೊಳ್ಳಲು ಅಮ್ಮ- ಅಕ್ಕರಿಲ್ಲ..ಔಷಧಿ ತರಲು ಅಪ್ಪ- ಅಣ್ಣರಿಲ್ಲ..
ಹಣೆಯ ಮೇಲೆ ಸಾಂತ್ವನದ ಕೈಯಿಡುವ ತಮ್ಮ-ತಂಗಿಯರಿಲ್ಲ”
ಇಲ್ಲ ಎನ್ನುವುದಕ್ಕೆಲ್ಲ ಇದೆ ಎನ್ನುವ ಉತ್ತರ ಇವೆಲ್ಲಕ್ಕಿಂತ ಹೆಚ್ಚಿನ ಗುರು ಪೀಠವಿದೆ ಪೀಠಾದಿಪತಿಗಳಿದ್ದಾರೆ, ಪರಿವಾರದವರ ಮನೆಯೊಡೆಯರಿದ್ದಾರೆ, ಇದಕ್ಕಿಂತ ಹೆಚ್ಚಿನದೇನು ಅಪೇಕ್ಷೆಯಿಲ್ಲ.
ಪರಿವಾರವೆಂಬ ಪುಟ್ಟದಾದ ಹೆಸರಿನೊಳಗಿನ ಅಘಾದವಾದ ಶ್ರೀ ಮಠದ ಪರಿವಾರದೊಳಗೆ ಗೌತಮ ನೆಂಬ ನಮ್ಮೂರಿನವನು ಅದಕ್ಕಿಂತಲೂ ಹೆಚ್ಚಾಗಿ ನನ್ನ ಆತ್ಮೀಯ ಗೆಳೆಯನಾದ ಗೌತಮ ಗುರು ಪೀಠದ ಸೇವೆಗೆ ಟೊಂಕ ಕಟ್ಟಿ ನಿಂತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ.
August 24, 2010 at 5:25 PM
ಪರಿವಾರಕ್ಕೆ ನಮ್ಮ ಗೌರವಪೂರ್ವಕ ನಮನ….
September 2, 2010 at 5:53 PM
ಶ್ರೀಮತಿ ಶಾಂತಾ ಮಂಜಪ್ಪ ಅವರ ಪ್ರತಿಕ್ರಿಯೆ
ಹರೇರಾಮ
ಈ ಪರಿಯ ನೋಡುವುದೆ ಈ ಪರಿವಾರವ…..? ಲೇಖನವ ಓದಿದೆ. ಕಣ್ಣಾಲಿಗಳು ತುಂಬಿದವು. ಉತ್ತರವಾಗಿ ತೊದಲುನುಡಿಗಳನ್ನು ಹೇಳಬೇಕೆಂಬ ಬಯಕೆಯಾಯಿತು. ಸದಾ ಶಿಷ್ಯವೃಂದ ತಮ್ಮ ಕಷ್ಟಗಳನ್ನು ನಿಮ್ಮ ಮುಂದಿಡುತ್ತದೆ. ಆದರೆ ಇಂದು ನೀವು ಪರಿವಾರದವರ ಕಷ್ಟವನ್ನು ತಿಳಿಸಿದ್ದೀರಿ. ಪರಿವಾರದ ಕಷ್ಟಗಳು ದಿನ ಬರುವ ನಮ್ಮಂತಹವರಿಗೆ ನಿಜವಾಗಿ ತಿಳಿದಿರುತ್ತದೆ. ಆದರೂ ನಿಮ್ಮ ಲೇಖನಿಯಿಂದಲೇ ತಿಳಿದಾಗ ಮನಸ್ಸಿಗೆ ಖೇದವೆನಿಸಿತು. ಕಣ್ಣುಗಳಲ್ಲಿ ನೀರು ತಾನಾಗಿ ಹರಿಯಿತು. ನಾವು ಎಂದೂ ಗುರು ಪೀಠವನ್ನು ಪರಿವಾರವನ್ನು ಅಸಡ್ಡೆಯಾಗಿ ಕಂಡವರಲ್ಲ. ಆದರೆ ಮಾಡುವವರನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಅಸಡ್ಡೆಯನ್ನು ಮಾಡುವವರು ಗುರುಗಳ ನೋಡಿದ ಮೇಲಾದರೂ ತಮ್ಮ ಸ್ವಭಾವವನ್ನು ತಿದ್ದಿಕೊಳ್ಳಲಿ. ಗುರುಪೀಠ ಹಾಗೂ ‘ಪರಿವಾರ’ವನ್ನು ಪೂಜ್ಯ ಭಾವನೆಯಿಂದ ಕಾಣಲಿ ಎಂಬುದು ನನ್ನ ಆಶಯ. ನಾನು ನನ್ನ ಹನ್ನೊಂದನೆಯ ವಯಸ್ಸಿನಲ್ಲಿ ರಾಘವೇಂದ್ರ ಭಾರತೀ ಸ್ವಾಮಿಗಳನ್ನು ನೋಡಿದ ನೆನಪು. ಅವರ ಕಾವಿ ಬಟ್ಟೆ ಅವರ ಹಿಂದೆ ಬೆಳ್ಳಿಯ ಬೆತ್ತವನ್ನು ಹಿಡಿದು ನಿಂತಿರುತ್ತಿದ್ದ ಜನರನ್ನ ನೋದಡಿದಾಗ ವಿಚಿತ್ರ ಹಾಗೂ ಆಶ್ಚರ್ಯ ಆಗುತ್ತಿತ್ತು. ಅಂದಿನಿಂದ ನನಗೆ ನಮ್ಮ ಧಾರ್ಮಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರ, ಸಂನ್ಯಾಸ, ದೇವರು, ಪೂಜೆ, ದೇವರು ಎನ್ನುವ ವಿಚಾರಗಳಿಗೆ ಅರ್ಥವನ್ನು ತಿಳಿಯುತ್ತಾ ಹೊರಟೆ. ಇಂದಿಗೂ ಕುತೂಹಲ ಮುಗಿದಿಲ್ಲ.
‘ಪರಿವಾರ’ವೆಂದರೆ ಪರಿ-ಪರಿಯ ಕಷ್ಟಗಳನ್ನು ಅನುಭವಿಸುವರೇ ಇರಬಹುದು ಎಂದೆನಿಸಿತು. ಬೇಸರ ಮೂಡಿತು. ಇಂದಿನ ದಿನಗಳಲ್ಲಿ ಧನದಾಹಕ್ಕಾಗಿ ದೇಶ ಬಿಟ್ಟು ಪರದೇಶಕ್ಕೆ ಹಾರುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಆದಾಗ್ಯೂ ನಮ್ಮ ಧರ್ಮ, ಸಂಸ್ಕೃತಿಯ ಉಳಿವಿಗಾಗಿ ಎಲ್ಲವನ್ನು ಬಿಟ್ಟು ಗುರು ಸಾನ್ನಿಧ್ಯವನ್ನು ಸೇರುವ ಪರಿವಾರದ ಮಕ್ಕಳು…. ಅವರೆಲ್ಲಿ ಇವರೆಲ್ಲಿ? ಇವರಿಬ್ಬರ ಮಧ್ಯೆ ನಾವೆಲ್ಲಿ? ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ಪರಿವಾರವು ಗುರುಪೀಠದ ಅಂಗ. ಯಾವುದೇ ಅಂಗಕ್ಕೆ ನೋವಾದರೂ ಎಲ್ಲರಿಗೂ ನೋವಾಗುತ್ತದೆ. ಯಾರೂ ನೋವುಂಟುಮಾಡದಿರಲಿ ಎಂಬುದೇ ನನ್ನ ಆಶಯ.
ಮೊದಲು ಪರಿವಾರದಲ್ಲಿ ಇದ್ದ ಮಹೇಶ ಈಗ ನಮ್ಮ ಜೊತೆ ಮನೆಯಲ್ಲಿ ಇದ್ದಾನೆ. ಅದೇ ಒಂದು ಚಿಕ್ಕ ಸಮಾಧಾನ. ಸದ್ಗುರುವಿಗೆ, ಪರಿವಾರಕ್ಕೆ “ನಮ್ಮ ಮನೆ” ಬಾಗಿಲು ಸದಾ ತೆರೆದಿರುತ್ತದೆ. ನೀವೆಲ್ಲರೂ ಬಂದು ಆತಿಥ್ಯ ಸ್ವೀಕರಿಸಿ. ಈ ಒಂದೆರಡು ನುಡಿಗಳು ಪರಿವಾರಕ್ಕೆ ಸಮಾಧಾನ ನೀಡಬಲ್ಲದೆ?
ಇವು ನನ್ನ ಒಡಲಾಳದ ಮಾತುಗಳು. ಇದನ್ನು ಗುರುಗಳಿಗೆ ಹಾಗೂ ಗುರು ಪರಿವಾರಕ್ಕೆ ಸಮರ್ಪಿಸುತ್ತಿದ್ದೇನೆ.
ವಂದೇ ಗೋ ಮಾತರಮ್.
ಶ್ರೀಮತಿ ಶಾಂತಾ ಮಂಜಪ್ಪ , ಬೆಂಗಳೂರು
—
October 21, 2010 at 11:52 AM
ಹರೇರಾಮ ಗುರುಗಳೆ,
ಇದನ್ನು ಓದಿ ಕಣ್ಣು ತುಂಬಿ ಬಂತು.ಆದರೆ ಆ ಪರಿವಾರದಲ್ಲಿರುವವರೆಲ್ಲ ಧನ್ಯರು. ಪ್ರತಿದಿನವೂ,ಪ್ರತಿನಿತ್ಯವೂ, ನೊಂದ ಮನಸ್ಸಿಗೆ ತನ್ನ ಕರುಣಾ ದೃಷ್ಟಿಯಿಂದಲೇ ತಂಪು ಸಮಾಧನವೆರೆಯುವ ಮಹಾಗುರುವಿನ ಸೇವೆಯನ್ನು ಮಾಡುವ ಪರಿವಾರದವರ ಭಾಗ್ಯವನ್ನು ಕಂಡು ತುಂಬ ಸಂತೊಷ ಆತು.
ನಿಮ್ಮ ಪಾದ ಸೇವೆಯ ಭಾಗ್ಯ ನನಗೂ ಸಿಗಲಿ ಈ ಜನುಮದಲಿ ತಂದೆ….
॥ಹರೇರಾಮ॥
॥ವಂದೇ ಗೋ ಮಾತರಮ॥
October 22, 2010 at 7:31 AM
ಸುಂದರ ಭಾವ ಸುಫಲ ಕೊಡಲಿ…
October 26, 2010 at 12:02 PM
॥ಹರೇರಾಮ॥
ಆ ಸುಫಲ ಬೇಗ ಸಿಗಲಿ ತಂದೆ…
॥ವಂದೇ ಗೋ ಮಾತರಂ ॥
October 22, 2010 at 12:16 PM
ಹರೇರಾಮ ಗುರುಗಳೆ,
ಎನು ಹೇಳಬೇಕೆಂದು ತಿಳಿಯುತ್ತಿಲ್ಲ ಗುರುಗಳೆ,ಪರಿವಾರದವರ ಪುಣ್ಯವೆಂದೆ ಹೇಳಬೇಕು.ಎಂತಕ್ಕೆ ಅಂದರೆ ದಿನ ಗುರುಗಳನ್ನು ನೋಡುವ,ಸೇವೆ ಮಾಡುವ ಭಾಗ್ಯ ಸಿಕ್ಕಿದೆ.ಒಂದೊಂದು ಸಲ ನಾ ಅಂದ್ಕೊಳ್ತೆನೆ ಎಂತಕ್ಕಾದ್ರು ಮಾಣಿಯಾಗಿ ಹುಟ್ಟಲಿಲ್ಲ ಹೇಳಿ.
ಆದರೆ ಗುರುಗಳೆ ಗುರು ಸೇವೆ ಮಾಡುವ ಆ ಭಾಗ್ಯ ನನಗು ಸಿಗಲಿ ಹೇಳಿ ಹರಸಿ.
ಹರೇರಾಮ.
October 22, 2010 at 1:41 PM
!!ರಾಮಾ!! ಏನೋ ತಿಳಿದೆ ಪರಿವಾರವನು ಗುರುವೇ…..
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ !! ಪರಿವಾರದವರು ದಿನವೂ ಮಾಡುವರು ಗುರುಸೇವೆ ಪಡೆಯುವರು ಮೋಕ್ಶವನು!!
“ಬನ್ನಿರೈ ಸಂಸಾರ ಶರಧಿಯನು ದಾಟುವರೆ ! ಬನ್ನಿರೈ ಮೋಕ್ಶಕಾಂಕ್ಶಿಗಳು!!
ಸೇರಿರೈ ಪರಿವಾರ ! ಮಾಡಿರೈ ಗುರುಸೇವೆ!
ಪಡೆಯಿರೈ ಮುಕ್ತಿಯನು ! ಹೊಂದಿರೈ ರಾಮಪದ ತಲವ!!
October 2, 2012 at 9:32 AM
ಅಜ್ಜಿಯೊಂದು ದಿನಾಲು ಮೊಮ್ಮಗನನ್ನು ಬಯ್ಯುತಿತ್ತು. ದಂಡಿಸುತ್ತಿತ್ತು. ಪಕ್ಕದಮನೆಯವ ಒಂದು ದಿನ ಹುಡುಗನಿಗೆ ಬುದ್ಧಿ ಹೇಳಲು ಹೋದ, ತಿರುಗಿ ಏನೋ ಮಾತನಾಡಿದ ಎಂದು ದಂಡಿಸ ಹೋದ. ಎಲ್ಲಿತ್ತೋ ಅಜ್ಜಿ , ಓಡಿ ಬಂದಳು ಮೊಮ್ಮಗನ ರಕ್ಷೆಗೆ . ಪಕ್ಕದ ಮನೆಯವನನ್ನೇ ದಂಗುಬಡಿಸಿದಳು.
ಹರೇ ರಾಮ.
Office ನಲ್ಲಿ ಕೆಲಸ ಮಾಡುವಾಗ Boss ಪ್ರಶ್ನಿಸುತ್ತಾನೆ . ದಂಡಿಸುತ್ತಾನೆ. ಅದೇ Boss ಮೇಲಾಧಿಕಾರಿಗಳಿಗೆ ಪ್ರಶಂಸೆ ಕಳುಹಿಸಿ promotion ಕೊಡಿಸುತ್ತಾನೆ.
ಹರೇ ರಾಮ.
ಸೊಸೆಯನ್ನು ದಿನಾಲು ಗೋಳು ಹುಯ್ಯುವ ಅತ್ತೆ, ಸೊಸೆಯನ್ನು ಬಸಿರಿನಲ್ಲಿ ಹೂ ನಂತೆ ನೋಡುತ್ತಾಳೆ. ನೆರಳಾಗಿ ನಿಲ್ಲುತ್ತಾಳೆ.
ಹರೇ ರಾಮ.
” ಮಠಕ್ಕೆ ಸೇರಿದ. ಇನ್ನೆಲ್ಲೂ ದಕ್ಕಲಿಲ್ಲ. ಕೊನೆಗೆ ಇದೇ ದಾರಿ. ಉಂಡುಟ್ಟು ಹಾಯಾಗಿದ್ದಾನೆ. ” ಎನ್ನುವವರೆಲ್ಲ , ” ನಮ್ಮನೆಲೊಮ್ಮೆ ಗುರುಗಳ ಭಿಕ್ಷೆ ಆಗಬೇಕಿತ್ತೋ ಭಾವ , influence ಮಾಡೋ” ಎಂದು ಸಮ್ಮಂದ ಹೇಳಿಕೊಂಡು ಬರುವವರ ನೋಡಿ . ಹೀಗಿದೆ ಪರಿವಾರದಲ್ಲಿರುವ ಮೋಡಿ.
ಹರೇ ರಾಮ.
ನಮ್ಮ ಗುರುಗಳು , ತುಂಬಾ practical ( ಸಾತ್ವಿಕವಾಗಿ ). ಶುಷ್ಕ ಜ್ಞಾನವನ್ನು ಆರ್ದ್ರವಾಗಿ ಶಿಷ್ಯಸಮುದಾಯಕ್ಕೆ ತಲುಪಿಸುತ್ತಾರೆ. ಸೂಜಿಗಲ್ಲಿನನ್ತೆ ಆಕರ್ಷಿಸುತ್ತಾರೆ. ಆಕರ್ಷಣೆ ಯನ್ನು ಉಳಿಸಿಕೊಳ್ಳುತ್ತಾರೆ. ವ್ರದ್ದಿಸುತ್ತಾರೆ. ಶಿಷ್ಯರ ಹ್ರದಯ ಕಮಲದಲ್ಲಿ ಆಸೀನರಾಗಿ , ಬಾ ರಾಮ, ಬಾ ರಾಮ ಎಂದು ಶ್ರೀ ರಾಮನನ್ನು ಕರೆಯುತ್ತ , ಶಿಷ್ಯ ಸಮೂಹದ ಕಣ್ಮಣಿಯಾಗಿದ್ದಾರೆ .ಅಲ್ಪಾವಧಿಯಲ್ಲಿ ಧೀರ್ಘಾವಧಿಯ ಫಲ ನೀಡಿದ ಶಂಕರ ವ್ರಕ್ಷದ , ಫಲ , ಪುಷ್ಪ ಭರಿತ ರೆ೦ಬೆಯಾಗಿದ್ದಾರೆ .
ಹರೇ ರಾಮ.
ಪರಿವಾರದವರೆಲ್ಲರ ಹೆಸರು , ವಿವರಗಳನ್ನೂ photo ಅಡಿಯಲ್ಲಿ ನೀಡಬಹುದಿತ್ತೇನೋ.
ಆಸೀನರಾಗಿ ರಾಮ ಸಭೆಯ, ರಾಮ ಪೂಜೆಯ ಸುಖ ಪಡೆಯುವ ಶಿಷ್ಯ ಸಮೂಹಕ್ಕೆ , ಪರಿವಾರದವರ ವ್ಯವಸ್ತಿತ ಕಾರ್ಯ ತೆರೆ ಮರೆಯಲ್ಲಿದ್ದರೂ , ಸ್ತುತ್ಯಾರ್ಹ .
ಹರೇ ರಾಮ.
ಇನ್ನು ನಮ್ಮ ಗುರುಗಳ ಬರವಣಿಗೆ, ವ್ಯಕ್ತನೆ. ಸೂರ್ಯನ ಪ್ರಭೆಗೆ ಸೂರ್ಯನೇ ಸಾಕ್ಷಿ , ಚಂದ್ರಮನೆನ್ದೂ ಬರುವನೇ ಬಳಿಗೆ?
ಹರೇ ರಾಮ. ಶ್ರೀ ಗುರುಭ್ಯೋ ನಮಃ.
ಹರಿಹರ ಭಟ್, ಬೆಂಗಳೂರು.
ಅಕ್ಟೋಬರ್ 02, 2012.
November 26, 2012 at 3:26 PM
“Hare Raama”
Parivaradavarannu nodidagalella annisuvudu ” Ivara nisvartha seve inda thane navu matakke bandaga navu madisuva pada pooje, rama sevegalu adachane illade aaguthide” endu. Samsthanada lekhana kannu theresuvanthide.. Ellaru omme odi artha madikolla beku..
December 12, 2012 at 11:58 PM
ಹರೆ ರಾಮ…ನಾನು ನಿನ್ನವನು…ಶರಣು…ಶರಣು.
June 30, 2013 at 1:29 PM
ನಾನು ಇದನ್ನ ಓದಿರಲಿಲ್ಲ. ಯಾರೋಜೊತೆಗೆ ಚರ್ಚಿಸುವಾಗ ಸುಮ್ಮನೆ ಹೇಳಿದ್ದೆ.. ಪರಿವಾರ ಮಾಡುವ ಕೆಲಸ ನಮ್ಮಿಂದಾದೀತೆ ಹೆಳೀ.. ಆಗ ಆತ ನನಗೆ ಈ ಲಿನ್ಕ್ ಕೊಟ್ಟ..
ಇದನ್ನ ಒಡೀ ನನಗೆ ಯೆನು ಬರೆಯಬೇಕೊ ತೋಚುತ್ತಿಲ್ಲ.. ಈ ವಿಶಯದಲ್ಲಿ ಮೌನವಾಗಿದ್ದೇನೆ. ಕಾರಣ ಬರಹ.. ಮತ್ತು ಅದರ ಒಳ್ಗಿರುವ ಪ್ರೀತಿ ಮತ್ತು ನೋವು. ಗುರುವುನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ .. ನಿಜ.. ಮತ್ತಿನ್ನೇನು ಬರೆಯಲಿ?
ಹರೆ ರಾಮ
October 6, 2013 at 9:54 PM
Hare rama
Gurugale namonnamaha.. Kashtadinda paaru madu thande..
February 6, 2015 at 8:17 PM
ನಮೋನ್ನಮಃ ನಿಜಕ್ಕೂ ಧನ್ಯರು ಪರಿವಾರದವರು. ಎಲ್ಲರೊಡನೆಯೂ ಹೊ೦ದಿಕೊಳ್ಳಬೇಕು
ಒ೦ದು ಬಾರಿ ಮಾತ್ರಾ ನಾನು ವಿಷ್ಣು ಅಣ್ಣನ ಮೇಲೆ ಸಿಟ್ಟುಗೊ೦ಡಿದ್ದೆ. ಭೇಟಿಗೆ ಹೆಸರು ಕೊಟ್ಟರೆ ಬರೆದುಕೊ೦ಡಿರಲೇ ಇಲ್ಲ. ಆದ್ರೆ ಯೋಗಾಯೋಗ ಭೇಟಿ ಆಯ್ತು ಸಮಾಧಾನವೂ ಆಯ್ತು. ಆ ನ೦ತರ ಮತ್ತೆ೦ದೂ ಪರಿವಾರದ ಯಾರ ಮೇಲೂ ಸಿಟ್ಟುಗೊ೦ಡಿಲ್ಲ ಕಾರಣ ಶ್ರೀಗಳು ಯಾವಾಗಲೂ ಒತ್ತಡದಲ್ಲೇ ಇರುವಾಗ ನಾವು ತೊ೦ದರೆ ಕೊಡುವುದು ಸರಿ ಅಲ್ಲ ಅ೦ತ ತೀರ್ಮಾನಿಸಿದೆ..