Dasharatha’s plight is like someone who searched his necklace all over the place only to realize that it was always sitting in his neck! In his quest for a son he searched for a solution all over the universe, but… Continue Reading →
ಜೀವರಾಶಿಗಳ ಒಡಲು ತಂಪಾಗಿ, ಲೋಕವು ತೃಪ್ತಿಯಲ್ಲಿ ನಕ್ಕು ನಲಿಯುವುದೊ, ಅವರೇ ಕ್ಷಾಮ ನೀಗಿ, ಕ್ಷೇಮ ನೀಡುವ ತಂಪಿನ ಸಂತ ಋಷ್ಯಶೃಂಗರು! ವಿಭಾಂಡಕ ಮಹಾಮುನಿಯ ಸುಪುತ್ರ. ನಿನ್ನ ಮಿತ್ರನಾದ ಅಂಗರಾಜ ರೋಮಪಾದನ ಜಾಮಾತಾ. ಅಂಗರಾಜನ ಸುತೆಗೆ ವರನಾದವರು. ಅಷ್ಟೇ ಅಲ್ಲ, ಬಹುಕಾಲದ ಬರ ನೀಗಿ ಅಂಗರಾಜ್ಯಕ್ಕೇ ವರವಾದವರು! ದೊರೆಯೇ, ನಿನ್ನ ಬದುಕಿನ ಬರ ನೀಗಿ ಸಂತಾನದ ವರವು ಬರಬೇಕಾದರೆ ಅಯೋಧ್ಯೆಗೆ ಋಷ್ಯಶೃಂಗರು ಬರಬೇಕು.”
ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ.. ಆದರೆ ಕಾರ್ಯವಿಧಾನದಲ್ಲಿ ಮಹದಂತರ..! ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು.. ಕಿವಿಗಳು ?? ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !! ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !! ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು.. ಕಿವಿಗೆ ಒಂದು ಜೀವನವಿಡೀ ನಡೆದ… Continue Reading →
||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..
ಮಂತ್ರಿಯೆಂದರೆ ರಾಜ್ಯದ ಬುದ್ಧಿ..
ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?
ಮನನವೆಂದರೆ ಅರಿಯುವುದು..
ತ್ರಾಣವೆಂದರೆ ಪೊರೆಯುವುದು…
ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..
ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..
ಅರಿಯುವುದು ಮತ್ತು ಪೊರೆಯುವುದು…
ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..
ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?
ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..