ಋಷಿ ಮತ್ತು ಕೃಷಿಗೆ ಒಂದಕ್ಷರದ ವ್ಯತ್ಯಾಸ.
ದೇವಲೋಕದ ಋಷಿ ನಾರದರು; ಭೂಲೋಕದಲ್ಲಿ ಕೃಷಿ ಮಾಡಿದರು! ಅಂದು ಅವರು ವಾಲ್ಮೀಕಿಗಳ ಹೃದಯದಲ್ಲಿ ರಾಮಾಯಣದ ಬೀಜವನ್ನು ಬಿತ್ತಿದರು; ಇಂದಿಗೂ ಅದು ಎಲ್ಲರಿಗೂ ಫಲ ನೀಡುತ್ತಿದೆ!

ನಮಗೆ ಎಲ್ಲಿಂದಲಾದರೂ ಒಳ್ಳೇಯದಾದರೆ, ಆ ಸ್ಥಾನವನ್ನು ಪೂಜಿಸಬೇಕು. ಅದನ್ನು ಎಂದಿಗೂ ಮರೆಯಬಾರದು. ಮೂಲವನ್ನು ಮರೆಯಬಾರದು; ಯಾವ ವೃಕ್ಷವೂ ಬೇರಿನಿಂದ ಬೇರಾಗಬಾರದು.

ಸ್ನಾನಕ್ಕೆ ಹೊರಟವರು ಏನೋ ಪ್ರೇರಣೆಯಿಂದ ವನಸಂಚಾರಕ್ಕೆ ಹೋದ ವಾಲ್ಮೀಕಿಗಳ ಕಣ್ಣಿಗೆ ಬೇಡನು ಅಕಾರಣವಾದ ವೈರದಿಂದ ಗಂಡು ಕ್ರೌಂಚಪಕ್ಷಿಯನ್ನು ಹತ್ಯೆ ಮಾಡಿದ್ದನ್ನು ಕಂಡು ಕಾರುಣ್ಯ ರಸವು ಹರಿದು ಅವರ ಬಾಯಿಂದ ಶ್ಲೋಕವೊಂದು ಅವರ ಅರಿವಿಲ್ಲದಂತೆಯೇ ಹೊರಹೊಮ್ಮಿತು. ಇದೇ ಆದಿಕಾವ್ಯದ ಆದಿಶ್ಲೋಕವಾಯಿತು!

“ಎಲ್ಲಿಯವರೆಗೆ ರಾಮಾಯಣ ಉಳಿಯುವುದೋ ಅಲ್ಲಿಯವರೆಗೆ ನಿನಗೆ ಬ್ರಹ್ಮಲೋಕದಲ್ಲಿ ವಾಸ!” ಎಂದು ಬ್ರಹ್ಮದೇವ ವಾಲ್ಮೀಕಿಗಳಿಗೆ ವರ ನೀಡಿದರು

ಯೋಗದ ಬಲದಿಂದ ರಾಮನ ಬದುಕನ್ನು ಸಂಪೂರ್ಣವಾಗಿ ನೋಡಿದರು‌. ಹಾಗಾಗಿ ಅವರು ರಾಮಾಯಣವನ್ನು ರಚನೆ ಮಾಡಲು ಸಾಧ್ಯವಾಯಿತು. ನಾರದರು ಇಷ್ಟರಲ್ಲಿ ಹೇಳಿದ್ದನ್ನು ವಾಲ್ಮೀಕಿಗಳು ಅಷ್ಟರಮಟ್ಟಿಗೆ ರಚಿಸುತ್ತಾರೆ‌‌. ಬೀಜವು ವೃಕ್ಷವಾಗುತ್ತದೆ

ಪ್ರವಚನವನ್ನು ಇಲ್ಲಿ ಕೇಳಿರಿ : Dhara~Ramayana-Day3

ಪ್ರವಚನವನ್ನು ನೋಡಲು :

Facebook Comments