ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ರಾಮ ಪಟ್ಟಾಭಿಷೇಕ ವ್ಯವಸಾಯ ಭಾಗ

ಬಾಲ ಕಾಂಡವು ಭರತ-ಶತ್ರುಘ್ನರು ಕೇಕೆಯ ದೇಶದ ರಾಜಗೃಹವನ್ನು ತಲುಪುವವರೆಗೆ ಉಲ್ಲೇಖಿಸುತ್ತದೆ. ನಂತರದ ಭಾಗವಾದ ಅಯೋಧ್ಯಾ ಕಾಂಡದಲ್ಲಿ ರಾಮನ ಬದುಕಿನ ದೇಶ/ಸ್ಥಳ ಆರಂಭವನ್ನು ಮತ್ತು ಶ್ರೀರಾಮನು ತನ್ನ ಬಾಲಾವಸ್ಥೆಯನ್ನು ಮುಗಿಸಿ ಗೃಹಸ್ಥಾಶ್ರಮವನ್ನು ಪ್ರಾರಂಭಿಸಿದರ ಕುರಿತಾಗಿಯೂ ಹಾಗೂ ಅಯೋಧ್ಯೆಯ ಸಿಂಹಾಸನವನ್ನು ಕೇಂದ್ರೀಕರಿಸಿ ನಡೆದಂತಹ ಹಲವಾರು ಘಟನೆಗಳನ್ನು ಒಳಗೊಂಡಿರುವುದಾಗಿದೆ.

ಭರತನ ಅಜ್ಜನಾದ ಅಶ್ವಪತಿಗೆ ಭರತನ ನೋಡುವ ಬಯಕೆ;,ಕೇಕಯ ದೇಶಕ್ಕೆ ನಿಜವಾಗಿ ತೆರಳಬೇಕಾದವನು ಬರತ ಮಾತ್ರನಾದರೂ ಭರತನಿಗೆ ಶತ್ರುಘ್ನ ಜೊತೆಗಿರಬೇಕೆಂಬ ಬಯಕೆ. ಆದುದರಿಂದ ಭರತನ ಜೊತೆ ಶತ್ರುಘ್ನನು ತೆರಳಿದ.

ಶ್ರೀರಾಮನ ಮೇಲೆ ಮತ್ತು ರಾಮನಿಗೆ ಅವರುಗಳ ಮೇಲೆ ಏಕಪ್ರಕಾರವಾದ ನಿಷ್ಠೆ, ಸ್ನೇಹವನ್ನು ಹೊಂದಿದ್ದ ಲಕ್ಷ್ಮಣ, ಭರತ – ಶತ್ರುಘ್ನ ಮೂವರು ಹೊಂದಿರುವವರಾಗಿದ್ದರೂ ಕೂಡ ಅವರಲ್ಲಿ ಸಣ್ಣ ವ್ಯತ್ಯಾಸವಿರಬಹುದು.

ರಾಮ-ಲಕ್ಷ್ಮಣರು ಮತ್ತು ಭರತ-ಶತ್ರಘ್ನರು “ಜೋಡಿ ಜೀವಗಳು”. ಈ ಶತ್ರುಘ್ನ ನ ಅನುಸಂಧಾನವೆಂದರೆ ‘ನಮ್ಮೊಳಗಿನ ನಿತ್ಯ ಶತ್ರು/ನಿಜವಾದ ಶತ್ರುಗಳೇ ಆದ (ಕಾಮ,ಕ್ರೋಧ , ಮೋಹ, ಮದ, ಮತ್ಸರಗಳನ್ನು) ಗೆದ್ದವನು’ ಶತ್ರುಘ್ನ. ಅವನನ್ನು ಸಹ ಮಾತುರ ನ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಸುಖವಾಗಿದ್ದರೂ ಕೂಡ.. ತಮ್ಮ ತಂದೆಯಾದ ದಶರಥನನ್ನು ಮರೆಯಲಿಲ್ಲ. ಇತ್ತ ದಶರಥನು ‘ಮಹೇಂದ್ರ – ವರುಣ’ನಂತಿರುವ ಭರತ-ಶತ್ರಘ್ನರನ್ನು ನೆನಪಿಸಿಕೊಳ್ಳುತ್ತಾನೆ.

ಆದರೆ ದಶರಥನಿಗೆ ರಾಮನ ಮೇಲೆ ಬಹಳ ಪ್ರೀತಿ. ಕಾರಣವೇನೆಂದರೆ: ರಾಮನೆಂದರೆ ಇಹದ ವಸ್ತುವಲ್ಲ, ಪರರ ವಸ್ತು ; ಆತನ ಅತಿಶಯದ ಗುಣ, ಕಾಂತಿಯನು ಹೊಂದಿರುವ ಇಂದ್ರನಂತೆ ಮತ್ತು ಅವನನ್ನು ಹಡೆದ ಅದಿತಿಯಂತಿಹ ಕೌಸಲ್ಯೆ.

ಹಾಗೆಯೇ ವಿವಾಹದ ಪೂರ್ವ ಮತ್ತು ಬಳಿಕ ರಾಮನ ಗುಣಗಳು ಎಲ್ಲರೂ ಇಷ್ಟಪಡುವಂತೆಯೂ ಮೆಚ್ಚುವಂತೆಯೂ ಇದ್ದವು.
ಏಕೆಂದರೆ… ರಾಮನೆಂಬುವವನು ಜೀವನದ ಒಂದು ವಯಸ್ಸಿನಲ್ಲಿ ಪಕ್ವಗೊಂಡವನಲ್ಲ. ಅವನಿದ್ದದ್ದೇ ಹಾಗೆ!!! ಅಸೂಯೆಯಿಂದ ಮುಕ್ತವಾದ ಮನಸು, ಆತನು ರೂಪವಂತ ಮತ್ತು ಪರಾಕ್ರಮಿ, ಒಳ್ಳೆಯ ಮನಸ್ಸನ್ನು ಹೊಂದಿರುವ ರಾಮನು ದಶರಥನ
ಇಂತಹ ಎಲ್ಲಾ ಒಳ್ಳೆಯ ಗುಣಗಳೊಂದಿಗೆ , ಇನ್ನೂ ಹೆಚ್ಚಿನ ಸದ್ಗುಣಗಳಿಂದ ಕೂಡಿದವನಾಗಿದ್ದ.

ಆತನು ಉಪಕಾರವನ್ನು ಮರೆಯುವವನಲ್ಲ. ಕೃತಜ್ಞತೆಯನ್ನು ನೆನಪಿನಲಿ ಇಟ್ಟುಕೊಳ್ಳುತ್ತಿದ್ದ. ಯಾರು ಎಷ್ಟೇ ಅಪಕಾರ ಮಾಡಿದರೂ ಅದನ್ನು ನೆನಪಿನಲ್ಲಿರಿಸದೆ; ಸಂಯಮವನ್ನು ತೋರುತ್ತಿದ್ದ.
ಹಿರಿಯರು ಹಾಗೂ ವಯಸ್ಸಿನಲ್ಲಿ, ಜ್ಞಾನದಲ್ಲಿ ವೃದ್ಧರ ಬಗ್ಗೆ ಪ್ರೀತಿಯನು ಹೊಂದಿದ್ದನಲ್ಲದೇ, ಬುದ್ಧಿಮಾನ್ ಮತ್ತು ಮಧುರ ಭಾಷಿ ಹಾಗೆಯೇ ಪೂರ್ವ ಭಾಷಿ.
ಅಸದೃಶ್ಯ ಶಕ್ತಿಯಿಂದ ಕೂಡಿದ ವೀರವಂತನಾದರೂ; ಒಂದಿಷ್ಟು ಗರ್ವ ಇಲ್ಲದವ. ವಿದ್ವಾನ್. ಪ್ರಜೆಗಳನ್ನು ಪ್ರೀತಿಸುತ್ತಿದ್ದನಲ್ಲದೇ, ಪ್ರಜೆಗಳು ಅವನನ್ನು ಪ್ರೀತಿಸುವಂತಿದ್ದ ಮತ್ತು ಪ್ರೀತಿಸುತ್ತಿದ್ದರು. ಸಮಾಜದ ಏಳಿಗೆಗಾಗಿ ಶ್ರಮಿಸುವ ವಿಪ್ರರನ್ನು ಪೂಜಿಸುವುದಲ್ಲದೇ,ದೀನರ ಮೇಲೆ ಕನಿಕರ ಹೊಂದಿದ್ದ.

ಅಂತೆಯೇ ಸಂಯಮ, ಮನಸಿನ ನಿಗ್ರಹ ಇತ್ತಲ್ಲದೇ, ಶ್ರೇಯಸ್ಸಲ್ಲದ ವಿಷಯದ ಮೇಲೆ ಆಸಕ್ತಿ ಇರಲಿಲ್ಲ. ರಾಮನು ತರುಣ, ವಾಗ್ಮಿ, ವಾಕ್ಭವನ ಕಟ್ಟಬಲ್ಲವ ಅಂದರೆ ಧನಾತ್ಮಕವಾದ ಉತ್ತರೋತ್ತರ ಮಾತುಗಳನ್ನಾಡಬಲ್ಲವನಾಗಿದ್ದ. ಮಾತಿಗೆ ನಿಂತರೆ ವಾಚಸ್ಪತಿ, ಕಾಲ-ದೇಶಗಳನ್ನರಿತು ಮಾತಾಡುವ ಪ್ರಜ್ಞೆಯುಳ್ಳವನು. ಹೀಗೆ ಜೀವನದ ಎಲ್ಲಾ ಸಾರವ ಬಲ್ಲವ ಸೃಷ್ಟಿ ನಿರ್ಮಿಸಿತು. ಸೃಷ್ಟಿ ನಿರ್ಮಿಸಿದ ಈ ರಾಮನು ಎಳೆಯ ಪ್ರಾಯದಲ್ಲೇ ಪ್ರಜೆಗಳ ಪ್ರಾಣನಾದ.

ಎಲ್ಲಾ ವೇದಾಂಗಗಳನ್ನು ಬಲ್ಲವ, ಭರತನ ದೊಡ್ಡಣ್ಣ ಶ್ರೀರಾಮ.

ಅದಲ್ಲದೇ…ಧನುರ್ವಿದ್ಯೆಯಲ್ಲಿ ತಂದೆಯನು ಮೀರುಸುವ ಧನುರ್ವೀರ,ಎಲ್ಲಾ ಒಳಿತುಗಳ ಉಗಮ ಸ್ಥಾನ, ಮಾತು- ಕೃತಿಗಳು ನೇರ ಮಾತ್ರವಲ್ಲದೇ, ಸತ್ಯವನ್ನು ಹೇಳುವ, ಲೌಕಿಕ ಮತ್ತು ಅಲೌಕಿಕರೆರಡರಲ್ಲೂ ಸಮಯಾಚಾರ ವಿಶಾರದ, ವಿನೀತ, ತಂದೆ – ಗುರುಗಳ ನಿರಂತರ ಸೇವೆಯನ್ನು ಮಾಡುವವ;ಆದ್ದರಿಂದ ಆತ ಅಷ್ಟು ಸರಳವಾಗಿ ಅರ್ಥವಾಗುವವನಲ್ಲ.

ಮಂತ್ರಗಪ್ತ ಹಾಗೂ ಸಂಪತ್ತಿನ ತ್ಯಾಗ, ಸಂಗ್ರಹಗಳ ಕಾಲದ ಅರಿವುಳ್ಳವನು, ಆಲಸ್ಯ, ಕೆಟ್ಟಮಾತು ತಿಳಿಯದವ, ತನ್ನ ದೋಷ ಮತ್ತು ಪರರ ದೋಷವನ್ನು ಅರಿತವ. ಶಾಸ್ತ್ರ ಸಮೂಹಗಳಲ್ಲಿ ಶ್ರೇಷ್ಠತೆಯನ್ನು ಹೊಂದಿದವ ಅಂದರೆ ನಿಷ್ಣಾತ, ಶಾಸ್ತ್ರಜ್ಞ ಮತ್ತು ಕೃತಜ್ಞ, ಸಂಪತ್ತಿನ ಆಯ-ವ್ಯಯಗಳನ್ನು ಬಲ್ಲವ ಇವುಗಳಲ್ಲದೇ ಮನಸಿಗೆ ಮುದ/ಉಲ್ಲಾಸ ನೀಡುವಂತಹ ಶಿಲ್ಪ, ನಾಟಕ, ನೃತ್ಯ, ಗೀತ ನಿಪುಣ ಮತ್ತು ಧನುರ್ವೀರ್ಯವಾನ್.

ಸೇನಾನಯ ವಿಶಾರದ, ಸೇನೆಯ ರಣ-ಕಣದಲ್ಲಿ ತಾನೇ ಮುಂದಾಗಿ ನಿಂತು ಯುದ್ಧ ಮಾಡುವವನು, ಸೇನೆಯ ವ್ಯೂಹ ರಚನೆಯನು ಅರಿತಿರುವವ.
ಮತ್ಸರ, ಅಸೂಯೆ, ಹಿರಿಯ – ಕಿರಿಯರೆಂಬ ಕೀಳರಿಮೆ ಇಲ್ಲದವ. ಕೆಟ್ಟ ಕಾಲವನು ಈಜಿ ಒಳಿತನ್ನು ನೀಡುವವ, ಭೂಮಿಯಂತಹ ಕ್ಷಮೆಯ ಗುಣವನ್ನು ಹೊಂದಿದ ರಾಮನನ್ನು ಮೂಜಗವು ಸ್ವೀಕರಿಸಿತು ಮತ್ತು ಒಪ್ಪಿತು. ಹೀಗೆ ಪ್ರಪಂಚವಿಡೀ ರಾಮನು ಕಂಗೊಳಿಸಿದ.

ಇಂತಹ ಲೋಕಪಾಲನನ್ನು ಭೂಮಿಯ ಸ್ಥಾವರ-ಜಂಗಮರು ಸೇರಿದಂತೆ, ಜಡ-ಚೇತನಗಳಿಂದ ಕೂಡಿದ ಜಗತ್ತು/ಪ್ರಪಂಚ, ಭೂಲೋಕ, ದೇಶವು ಬಯಸಿತು ಅಪೇಕ್ಷಿಸಿತು ; ಈ ಇಚ್ಛೆಯು ದಶರಥನ ಹೃದಯದಲಿ ಕೂಡ ಒಡಂಬಡಿಸಿತು. ತಾನು ಗತಿಸಿಹೋದ ಮೇಲೆ ರಾಮ ರಾಜಾರಾಮ(ರಾಜ)ನಾಗುವುದು ಸಹಜ. ಆದರೆ ಅಂತರಂಗಕ್ಕೆ ಆನಂದ ಹಾಗೂ ಮನಸಿಗೆ ಕೆಡುಕು ಅನಿಸಿ ಕಾಡುತ್ತಿದ್ದ ಹಲವಾರು ಕಾರಣಗಳಿದ್ದವು. ಆದುದರಿಂದ ತಾನಿರುವಾಗಲೇ ದೊರೆ ಸ್ಥಾನದಲ್ಲಿ ರಾಮನನ್ನು ದಶರಥನು ನೋಡಬಯಸುವನು.
ಇವೆಲ್ಲವೂ ಅಂತರಂಗದ ಆನಂದದ ಕಾರಣಗಳಿದ್ದವು. ಹಾಗಾದರೆ ಕೆಡುಕು ಏನು ಎಂಬುದನ್ನು ಶ್ರೀಸಂಸ್ಥಾನದವರ ನಾಳೆಯ ಪ್ರವಚನದಲ್ಲಿ ಕೇಳೋಣ

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box