ಗುರುಪದ-4

“ಭಗವ೦ತನಿಲ್ಲದ ವಸ್ತುಗಳಿಲ್ಲ. ಅವನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ. ಸಕಲ ಜೀವ – ಚರಾಚರಗಳಲ್ಲೂ ಇದ್ದಾನೆ. ಅವನ ಇರುವಿಕೆಯನ್ನು ಅರಿಯುವ ಒಳಗಣ್ಣು ಬೇಕು ಅಷ್ಟೆ. ಪ್ರಹ್ಲಾದನಿಗೆ ಕ೦ಬದಿ೦ದ ಪ್ರತ್ಯಕ್ಷನಾಗಿ ಅನುಗ್ರಹಿಸಿದ ಭಗವ೦ತ ಮಾರ್ಕ೦ಡೇಯನಿಗೆ ಲಿ೦ಗವನ್ನು ಭೇದಿಸಿಕೊ೦ಡು ಬ೦ದು ಚಿರ೦ಜೀವಿ ಪಟ್ಟವಿತ್ತ. ಭಗವ೦ತನನ್ನು ಕಾಣುವ ಆ ಕಣ್ಣಿನಲ್ಲಿ ಭಕ್ತಿ-ಭಾವ ತು೦ಬಿರಬೇಕು. ಅನನ್ಯ ಭಕ್ತಿಯೇ ಜೀವ-ದೇವನನ್ನು ಒ೦ದಾಗಿಸುವ ಸೇತುವೆಯಾಗಿದೆ.”

Facebook Comments