ಮೊಟ್ಟಮೊದಲಬಾರಿಗೆ ಗಟ್ಟಿ ಗಟ್ಟಿ ಅಕ್ಕಿಯಿಂದ ಮೃದು – ಮೃದುವಾದ, ಮಧುರ – ಮಧುರವಾದ, ರುಚಿ – ರುಚಿಯಾದ ಅನ್ನವನ್ನು ಸಿದ್ಧಪಡಿಸಬಹುದೆಂಬುದನ್ನು ಯಾರು ಕಂಡುಹಿಡಿದರು..?
ಮನವನ್ನು ಮನಗಳೊಂದಿಗೆ ಬೆರೆಸಲು ನೆರವೀಯುವ ಅಕ್ಷರಗಳನ್ನು ಮೊಟ್ಟಮೊದಲು ಕಂಡುಹಿಡಿದವರಾರು..?
ಬೆಣ್ಣೆ- ಬೆಣ್ಣೆಯಂತಹ ಹತ್ತಿಯಿಂದ ಎಳೆ – ಎಳೆಯಾಗಿ ನೂಲೆಳೆದು ಹಾಗೊಂದು – ಹೀಗೊಂದು ನೇಯ್ದು, ಮೈಮರೆಸುವ – ಮೈಮೆರೆಸುವ ಉಡುಗೆ ತೊಡುಗೆಗಳನ್ನು ನಿರ್ಮಿಸಬಹುದೆಂಬುದು ಯಾರ ಅನ್ವೇಷಣೆ..?
ಬಾಯಾರಿದರೆ ಬಾವಿಗಿಳಿಯಬೇಕಾಗಿಲ್ಲ…!
ಕೊಡದ ಕೊರಳಿಗೆ ಕುಣಿಕೆ ತೊಡಿಸಿ ಬಾವಿಗಿಳಿಸಿದರೆ ಅದರೊಳಗೆ ಕುಳಿತು ನೀರೇ ಮೇಲೇರಿ ನಮ್ಮೆಡೆಗೆ ಬರಬಹುದೆಂಬುದನ್ನು ಕಂಡುಹಿಡಿದವನ ಹೆಸರೇನು..?
ಅಕ್ಕಿಯೊಳಗನ್ನವನು ಮೊದಲಾರು ಕಂಡವನು..?|
ಅಕ್ಕರದ ಬರಹಕ್ಕೆ ಮೊದಲಿಗನದಾರು..? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ.. |
ಸಿಕ್ಕುವುದೆ ನಿನಗೆ ಜಸ – ಮಂಕುತಿಮ್ಮ…||
ಬದುಕಿನ ಭವನದ ಮೂಲಾಧಾರಶಿಲೆಗಳನ್ನಿಟ್ಟವರ ಗುರುತೇ ಇಲ್ಲ…!
ಆದರೆ ಹೆಸರಿಗಾಗಿ ಓಟ ಮಾತ್ರ ನಿಂತಿಲ್ಲ..!
ಹೆಸರಿಗಾಗಿ ಉಸಿರುಗಟ್ಟಿ ಓಡುವವರೇ…….!!!!
ಈ ಬ್ರಹ್ಮಾಂಡದಲ್ಲಿ ಅದೆಲ್ಲಿ ಕೆತ್ತಿದರೂ ಶಾಶ್ವತವಾಗಿ ಉಳಿಯದು ನಿಮ್ಮ ಹೆಸರು..!!
ಸುತ್ತಲೆಲ್ಲ ಮಲಗಿದ ಹಚ್ಚ ಹಸಿರು, ಬೀಸಿ ಬರುವ ಕಡಲ ಗಾಳಿ, ವಿಶಾಲವಾಗಿ ಹರಡಿದ ಮುರಕಲ್ಲಿನ ಬಯಲು, ಮಧ್ಯೆ ಸರೋವರ, ಪ್ರಶಾಂತ ಪರಿಸರದ ನಡುವೆ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಸಂತಸಗಳನ್ನು ಹೆಚ್ಚಿಸುವ ಮುಜುಂಗಾವು, ಮುಚುಕುಂದ ಮಹರ್ಷಿಯ ತಪೋಭೂಮಿ. ಧರ್ಮ ರಕ್ಷಕನೆಂದೇ ಹೆಸರು ಪಡೆದ ಪಾರ್ಥಸಾರಥಿ ಶ್ರೀಕೃಷ್ಣ ಆರಾಧ್ಯ ಮೂರುತಿಯಾಗಿರುವ ಈ ಭೂಮಿ ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ… Continue Reading →
ಶ್ರೀಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನ ಗೋಕರ್ಣ. ಶ್ರೀರಾಮಚಂದ್ರಾಪುರ ಮಠ ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ, ಅಂಚೆ: ಮೂರೂರು, ತಾ: ಕುಮಟಾ, ಜಿ: ಉ.ಕ 581343 ದೂ.ನಂ.(08386)268133 ದಿವಂಗತ ಶ್ರೀ ಎಲ್.ಟಿ.ಶರ್ಮ ಮತ್ತು ಡಾ|| ಕೃಷ್ಣ ಭಟ್ಟ ಹಳಕಾರ ಹಾಗೂ ಊರ ನಾಗರಿಕರು ಕೂಡಿ ಕ್ರಿ.ಶ 1958 ರಲ್ಲಿ ವಿದ್ಯಾನಿಕೇತನ ಮೂರೂರು-ಕಲ್ಲಬ್ಬೆ ಶಿಕ್ಷಣ ಸಂಸ್ಥೆ ಸ್ಥಾಪನೆ ಆಯಿತು ಮತ್ತು 1958 ರಲ್ಲಿ ಪ್ರಗತಿ… Continue Reading →
D:12-03-10 ಕಲ್ಕತ್ತಾದಲ್ಲಿರುವ ಕಾಳೀ ಮಂದಿರಕ್ಕೆ ತೆರಳಿ ಮಾತೆಯ ದರ್ಶನ-ಪೂಜೆ ಸಂಪನ್ನಗೊಳಿಸದ ನಂತರ ಇಮಾಮಿ ಪರಿವಾರದವರೊಂದಿಗೆ ಶ್ರೀಗಳು ಸುಮಾರು ೧.೩೦ ಗಂಟೆಗಳ ಕಾಲ ಗಂಗಾವಿಹಾರವನ್ನು ಮಾಡಿದರು… ಸಂಜೆ ಕೇಸರ್ ಕುಂಜ್ ನಲ್ಲಿ ನಡೆದ ಕುಂಚ ಬ್ರಹ್ಮ ಬಿ.ಕೆ.ಎಸ್.ವರ್ಮಾರವರ ಗೀತ-ಕುಂಚ ಹಾಗೂ ಭಜನಾ-ಸತ್ಸಂಗ ಕಾರ್ಯಕ್ರಮದಲ್ಲಿ ಸಾನಿಧ್ಯವಿತ್ತು ಭಕ್ತವೃಂದಕ್ಕೆ ಆಶೀರ್ವದಿಸಿದರು..
ಜಗತ್ತಿನ ಅತಿದೊಡ್ಡ ರಥದ ವೀಕ್ಷಣೆ ಹಾಗೂ ಶಿಲ್ಪಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳವರು ದಿವ್ಯಸಾನಿಧ್ಯವಿತ್ತು ರಾಜಶೇಕರ್ ಹೆಬ್ಬಾರ್ ಮತ್ತು ಕುಟುಂಬದವರಿಗೆ ಆಶೀರ್ವದಿಸಿದರು.. ಈ ಬ್ರಹಧೃಥವನ್ನು ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಶತಮಾನೋತ್ಸವಕ್ಕೆ ಶ್ರೀ ಡಿಸೈನ್ ನ ರಾಜಶೇಖರ ಹೆಬ್ಬಾರ್ ರವರು ಕೇವಲ ಐದುತಿಂಗಳಿನಲ್ಲಿ ಸುಮಾರು ೪೫೦೦೦ ಕಿ.ಗ್ರಾಂ ತೂಕವಿರುವ ಜಗತ್ತಿನ ಅತೀ ಎತ್ತರದ (೬೫ ಅಡಿ) ಏಕಾಹ ರಥವನ್ನು… Continue Reading →