ಶ್ರೀಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನ ಗೋಕರ್ಣ.
ಶ್ರೀರಾಮಚಂದ್ರಾಪುರ ಮಠ
ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ,
ಅಂಚೆ: ಮೂರೂರು, ತಾ: ಕುಮಟಾ,
ಜಿ: ಉ.ಕ 581343
ದೂ.ನಂ.(08386)268133
ದಿವಂಗತ ಶ್ರೀ ಎಲ್.ಟಿ.ಶರ್ಮ ಮತ್ತು ಡಾ|| ಕೃಷ್ಣ ಭಟ್ಟ ಹಳಕಾರ ಹಾಗೂ ಊರ ನಾಗರಿಕರು ಕೂಡಿ ಕ್ರಿ.ಶ 1958 ರಲ್ಲಿ ವಿದ್ಯಾನಿಕೇತನ ಮೂರೂರು-ಕಲ್ಲಬ್ಬೆ ಶಿಕ್ಷಣ ಸಂಸ್ಥೆ ಸ್ಥಾಪನೆ ಆಯಿತು ಮತ್ತು 1958 ರಲ್ಲಿ ಪ್ರಗತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭವಾಯಿತು. ಅನೇಕ ವರ್ಷಗಳ ಕಾಲ ಊರ ಹಿರಿಯರ ಸಹಕಾರದಿಂದ ನಡೆಸಲ್ಪಟ್ಟ ಈ ವಿದ್ಯಾ ಸಂಸ್ಥೆಯನ್ನು 2001 ರಲ್ಲಿ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ ಇವರಿಗೆ ಸಮರ್ಪಿಸಲಾಯಿತು ಮತ್ತು ಶ್ರೀಗಳವರ ಸೂಚನೆಯಂತೆ ಸ್ಥಳಿಯರನ್ನೊಳಗೊಂಡ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಶ್ರೀಗಳವರ ಮಾರ್ಗದರ್ಶನದಲ್ಲಿ ಗುರುಕುಲ ಮಾದರಿಯ ಶಿಕ್ಷಣದ ಜೊತೆಯಲ್ಲಿ ಆಧುನಿಕ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಯೋಜನೆಯನ್ನು ಹಾಕಿಕೊಂಡು ಈ ಕೆಳಗಿನಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಸಂಸ್ಥೆಯ ಹೆಸರು: ವಿದ್ಯಾನಿಕೇತನ ಮೂರೂರು-ಕಲ್ಲಬ್ಬೆ ಸ್ಥಾಪನೆ : ಕ್ರಿ.ಶ. 1958 1958 : ಪ್ರಗತಿ ವಿದ್ಯಾಲಯ ಮೂರೂರು ಕನ್ನಡ ಮಾಧ್ಯಮ ಅನುದಾನಿತ ಪೌಢಶಾಲೆ ಪ್ರಾರಂಭ 2001 : ಸಂಸ್ಥೆಯನ್ನು ಶ್ರೀಗಳವರಿಗೆ ಸಮರ್ಪಿಸಿದ್ದು. 2002-2003 : ಪ್ರಗತಿ ವಿದ್ಯಾಲಯ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭ (ಅನುದಾನ ರಹಿತ) 2002-2003 : ಪ್ರಗತಿ ವಿದ್ಯಾಲಯ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭ (ಅನುದಾನ ರಹಿತ) 2006-2007 : ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭ (ಅನುದಾನ ರಹಿತ). 2008-2009 : ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಾರಂಭ (ಅನುದಾನ ರಹಿತ) 2001 ರಲ್ಲಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 126. 2009-10 ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಕಲಿಯುತ್ತಿರುವ ಒಟ್ಟೂ ವಿದ್ಯಾರ್ಥಿಗಳ ಸಂಖ್ಯೆ 358. ಶೈಕ್ಷಣಿಕ ಪ್ರಗತಿ : ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್. ಎಸ್. ಎಲ್. ಸಿ. ಫಲಿತಾಂಶ. 2001-2002 82%, 2002-2003 71%, 2003-2004 65%, 2004-2005 63%, 2005-2006 64%, 2006-2007 67%, 2007-2008 82%, 2008-2009 91%, 2004-2005 ರಲ್ಲಿ ಶ್ರೀ ಭಾರತೀ ಕಲಾ ಕೇಂದ್ರ ಸ್ಥಾಪನೆ ಸಂಗೀತ, ಯಕ್ಷಗಾನ, ಭರತನಾಟ್ಯ ತರಬೇತಿ. ಶ್ರೀ ಭಾರತೀ ಕಲಾ ಕೇಂದ್ರದ ವಿದ್ಯಾರ್ಥಿಗಳ ಸಂಖ್ಯೆ – 63.

Facebook Comments