Raam and Hanumant

ಚಿಕ್ಕಂದಿನಿಂದಲೇ ಹನುಮಂತನು ಬಹಳ ತುಂಟನೂ , ಅಸಾಮಾನ್ಯ ಶಕ್ತಿಶಾಲಿಯೂ ಆಗಿದ್ದನು. ಅವನ ಮನದಲ್ಲಿ ಹಲವಾರು ಪ್ರಶ್ನೆಗಳಿದ್ದರೂ, ಉತ್ತರಿಸಲು ಯಾರೂ ಮುಂದಾಗುತ್ತಿರಲಿಲ್ಲ. ಎಲ್ಲ ದೇವ ದೇವತೆಗಳು ಅವನಿಗೆ ಬೇರೆ ಬೇರೆ ಶಕ್ತಿಯನ್ನು ಅನುಗ್ರಹಿಸುತ್ತಾರೆ. ಹನುಮಂತನು ಎಲ್ಲ ದೇವರುಗಳಿಗೆ ನೆಚ್ಚಿನವನಾದನು. ಇದೆ ಕಾರಣಕ್ಕೆ “ಹನುಮಂತನನ್ನು ಪೂಜಿಸಿದರೆ ಎಲ್ಲ ದೇವದೇವತೆಗಳನ್ನು ಪೂಜಿಸಿದಂತೆ” ಎಂದು ಹೇಳುತ್ತಾರೆ. ಸಾವೂ ಕೂಡ ಅವನಿಗೆ ಯಾವಾಗ ಬೇಕೋ ಆವಾಗ ಆಗ್ಲಿ ಎಂಬ ಅನುಗ್ರವನ್ನೂ ಈತ ಪಡೆದಿದ್ದಾನೆ.

ಹಿಂದೂ ಪುರಾಣಗಳನ್ನು ನಂಬುವುದಾದರೆ ಹನುಮಂತನು ಚಿರಂಜೀವಿ, ಇಂದಿಗೂ ಭೂಮಿಯ ಮೇಲೆ ವಾಸಿಸುತ್ತಿದ್ದಾನೆ. ಕಷ್ಟದಲ್ಲಿರುವವರು ಆತನನ್ನು ನೆನೆಸಿದರೆ ರಕ್ಷಣೆಗೆ ಧಾವಿಸುತ್ತಾನೆ.

ಶ್ರೀರಾಮನು ಸೀತೆಯ ಹುಡುಕಾಟದಲ್ಲಿದ್ದಾಗ ಹನುಮಂತ ರಾಮನನ್ನು ಭೇಟಿಯಾಗುತ್ತಾನೆ. ಹನುಮನು ರಾಮನಿಗೆ ಸೀತ್ಯನ್ನು ಹುಡುಕಲು ಸಹಾಯ ಮಾಡುವುದಾಗಿ ಭಾಷೆ ಕೊಡುತ್ತಾನೆ ಮತ್ತು ಕೊಟ್ಟ ಭಾಷೆಯನ್ನೂ ಉಳಿಸಿಕೊಳ್ಳುತ್ತಾನೆ. ಆತ ರಾಮನ ಕಟ್ಟಾ ಅನುಯಾಯಿಯಾಗುತ್ತಾನೆ. ಇಂದಿಗೂ ನಂಬಿರುವಂತೆ ಎಲ್ಲೆಲ್ಲಿ ರಾಮನ ಗುಣಗಾನ ಆಗುತ್ತದೆಯೋ ಅಲ್ಲೆಲ್ಲ ತತ್ಕ್ಷಣದಲ್ಲಿ ಹನುಮ ಪ್ರತ್ಯಕ್ಷ ಆಗುತ್ತಾನೆ. ಅವನೇ ಹೇಳಿರುವಂತೆ ಭೂಮಿಯ ಮೇಲೆ ಎಲ್ಲಿಯವರೆಗೂ ರಾಮನ ಹೆಸರನ್ನು ಪಠಿಸುತ್ತಾರೋ ಅಲ್ಲಿಯವರೆಗೂ ತಾನು ಭೂಮಿಯ ಮೇಲೆ ಇರುತ್ತೇನೆ.

ಹನುಮಾನ್ ಚಾಲೀಸ ಎಂಬ ಕೃತಿಯನ್ನು ಸಂಯೋಜಿಸಿದ್ದು ಶ್ರೀ ತುಳಸಿದಾಸರು. ರಾಮನ ಅನುಯಾಯಿ ಆಗಿರುವ ಶ್ರೀ ತುಳಸಿದಾಸರು “ಹನುಮಾನ್ ಚಾಲೀಸಾ” ಎಂಬ ಕೃತಿಯಲ್ಲಿ ಹನುಮ ಹೇಗೆಲ್ಲ ಇದ್ದ ಹಾಗೂ ಅವನ ವಿಶೇಷತೆಗಳ ಕುರಿತು ಹೇಳಿದ್ದಾರೆ. ಇದನ್ನು ಓದಲು ಪ್ರಾರಂಭದಲ್ಲಿ ಸುಮಾರು ಹತ್ತು ನಿಮಿಷ ಬೇಕಾಗಬಹುದು, ಅಭ್ಯಾಸ ಆದಂತೆಲ್ಲ ಕಡಿಮೆ ಸಮಯದಲ್ಲಿ ಓದಬಹುದು. ಹನುಮಾನ್ ಚಾಲೀಸಾವನ್ನು ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಓದಿದಲ್ಲಿ ಉತ್ತಮ.. ಇದನ್ನು ಓದಲು ಯಾವುದೇ ವಯಸ್ಸಿನ/ಲಿಂಗದ ಭೇದವಿಲ್ಲ. ಓದಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಹನುಮಾನ್ ಚಾಲೀಸ್ ಪಠಣದ ವಿಶೇಷ ಅನುಭವಗಳು ನಿಮಗೇ ಅರಿವಾಗಲು ಪ್ರಾರಂಭವಾಗುತ್ತದೆ. ನಿರಂತರ ಹನುಮಾನ್ ಚಾಲೀಸ್ ಓದುವಿಕೆ ನಮ್ಮನ್ನು ಮೋಕ್ಷದ ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಹಾಗೂ ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಹನುಮಾನ್ ಚಾಲೀಸ್ ಪಠಣದ ಉಪಯೋಗಗಳು:

೧. ಇದು ಭಗವತ್ ಸ್ವರೂಪಿ ಹನುಮನ್ನು ಸಂತೃಪ್ತಿಗೊಳಿಸಿ, ನಿಮ್ಮ ಕುಟುಂಬಕ್ಕೆ ಹನುಮನ ಕೃಪೆ ಪ್ರಾಪ್ತವಾಗುತ್ತದೆ.

೨. ಬೆಳಿಗ್ಗೆ ಮೊದಲು ಹನುಮಾನ್ ಚಾಲೀಸ್ ಓದಿ ದಿನಚರಿ ಪ್ರಾರಂಭಿಸಿದರೆ, ಆ ದಿನ ನಿಮಗೆ ಯಶಸ್ವಿಯಾಗುತ್ತದೆ.

೩. ನಿಮ್ಮಲ್ಲಿರುವ ಆತಂಕಗಳನ್ನೂ ಹೋಗಲಾಡಿಸಿ, ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುತ್ತದೆ.

೪. ದುಷ್ಟ ಶಕ್ತಿಗಳು ನಮ್ಮ ಮನೆ ಹತ್ತಿರವೂ ಸುಳಿಯಲಾರವು. ಹನುಮನನ್ನು ಕಂಡರೆ ಅವಕ್ಕೆ ತುಂಬಾ ಹೆದರಿಕೆಯಂತೆ.

೫. ನಕಾರಾತ್ಮಕ ಭಾವನೆಯಿಂದ ಬಳಲುತ್ತಿರುವ ವ್ಯಕ್ತಿ ಇದನ್ನು ಓದಿದರೆ, ಅವನ ಚಿಂತನೆಗಳು ಸುಧಾರಿಸುತ್ತವೆ.

೬. ಇದನ್ನು ಓದಿದವರಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ಹೆಚ್ಚುತ್ತದೇ,

೭. ಇದನು ಓದಿದವರ ವ್ಯಕ್ತಿತ್ವ ಸುಧಾರಿಸುತ್ತದೆ. ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ,

(ಇನ್ನೂ ಹತ್ತು ಹಲವು)
~

ಇಷ್ಟೆಲ್ಲ ವಿಶೇಷವಾಗಿರುವ ಹನುಮಾನ್ ಚಾಲೀಸ್ ಪಠಣವನ್ನು ಶ್ರೀ ಸಂಸ್ಥಾನದವರು ನಮಗೆಲ್ಲ ಆದೇಶಿಸಿದ್ದಾರೆ ಅಂದರೆ ಅದು ಖಂಡಿತ ನಮ್ಮ ಉನ್ನತಿಗಾಗಿಯೇ ಹೊರತು ಬೇರೆಯದಕಲ್ಲ.. ಈಗಾಗಲೇ ತಾವೆಲ್ಲರೂ ಅತ್ಯಂತ ಶೃದ್ಧಾ ಭಕ್ತಿಯಿಂದ ಓದುತ್ತಾ ಇದ್ದೀರಿ. ಪ್ರಾರ್ಥಮಿಕ ಗುರಿ ಹತ್ತು ಲಕ್ಷವಾಗಿದ್ದು, ಅದನ್ನು ತಲುಪುವತ್ತ ನಾವು ಭರದಿಂದ ಸಾಗಿದ್ದೇವೆ. ತಮ್ಮಲ್ಲಿ ಹಲವರು ಈಗಾಗಲೇ ಲೆಕ್ಕವನ್ನು ಕೊಟ್ಟಿದ್ದೀರಿ/ಕೊಡುತ್ತಿದ್ದೀರಿ.
ತಮ್ಮ ವಲಯದ ಗುರಿಕ್ಕಾರರ ಮೂಲಕವೂ ಲೆಕ್ಕ ಕೊಡಬಹುದು ಅಥವಾ ಈ ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರವೂ ಕೊಡಬಹುದು. ಇನ್ನೂ ಓದಲು ಪ್ರಾರಮ್ಭಿಸದವರು ಈ ಕೂಡಲೇ ಪ್ರಾರಂಭ ಮಾಡಿ, ಹನುಮನ ಹಾಗೂ ಆ ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಕೋರಿಕೆ.

https://goo.gl/2Whw4f

ನಮಸ್ಕಾರಗಳು
ಶಿಶಿರ ಹೆಗಡೆ.

Facebook Comments Box