ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು, ಅವಕಾಶಕ್ಕಾಗಿ ವಂದಿಸುವೆ.. ಹೀಗೊಂದು ಘಟನೆ.. ವೇಗದೂತ ರೈಲೊಂದು ಅತ್ಯಂತ ವೇಗದಲ್ಲಿ ಸಾಗುತ್ತಿತ್ತು. ವೇಗದೂತ ರೈಲು ಆದ್ದರಿಂದ ಮದ್ಯದಲ್ಲಿ ಒಂದು ನಿಲ್ದಾಣಕ್ಕೆ ನಿಲುಗಡೆ ಇರಲಿಲ್ಲ. ನಿಲುಗಡೆ ಇಲ್ಲದ ನಿಲ್ದಾಣ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಆ ನಿಲ್ದಾಣದಲ್ಲಿ ಅದೇ ಕಂಬಿಗಳ ಮೇಲೆಯೇ ಇನ್ನೊಂದು ರೈಲು ನಿಂತಿರುವುದು ಕಾಣಿಸಿತು! ಮುಂದೆ ಆಗುವ ಅನಾಹುತ ಒಂದು ಬಾರಿ ಅವನ… Continue Reading →
ನಾಗರಿಕತೆಯ ಬೆಳವಣಿಗೆಯಲ್ಲಿ “ಗುರು”ಗಳ ಪಾತ್ರ ಗಣನೀಯ. ಆಳವಾದ ಅಭ್ಯಾಸ, ಚಿಂತನ, ಸಾಧನೆಗಳ ಮೂಲಕ ತಾವು ಕಂಡುಕೊಂಡ ಸತ್ಯ, ಜ್ಞಾನ, ಕೌಶಲ್ಯಗಳನ್ನು ಯೋಗ್ಯ- ಸತ್ಪಾತ್ರ ಶಿಷ್ಯರ ಮೂಲಕ ಸಮಾಜಕ್ಕೆ ಉಪಯುಕ್ತವಾಗುವಂತೆ ಮಾಡಿ ಮಾನವ ಸಮಾಜವನ್ನು ಪ್ರಗತಿಯ ಹಾದಿಯಲ್ಲಿ ಒಯ್ಯುವಲ್ಲಿ ಗುರುಸಮೂಹದ ಪಾತ್ರ ಮಹತ್ವದ್ದು. ನೂರಾರು ಋಷಿಮುನಿಗಳು ತಮ್ಮ ಸಾಧನೆಗಳ ಮೂಲಕ ಕಂಡುಕೊಂಡ ಸಿದ್ಧಾಂತಗಳನ್ನು ಗೌರವಿಸಿ ಆ ಹಾದಿಯಲ್ಲಿ… Continue Reading →
ಶ್ರೀ ಬಿ. ಕೆ. ಎಸ್. ವರ್ಮಾ ಅಂತಾರಾಷ್ಟ್ರೀಯ ಚಿತ್ರಕಲಾವಿದರು ಕೆಲವು ದಿನಗಳ ಹಿಂದೆ ಪವಾಡವೊಂದು ಜರುಗಿತು. ‘ಶ್ರೀಗಳು ಭಕ್ತರೊಬ್ಬರಿಗೆ ಕೊಡುವುದಕ್ಕೆ ಎರಡು ಚಿತ್ರಗಳು ಬೇಕು’ ಅಂತ ನನಗೆ ದೂರವಾಣಿ ಕರೆ ಬಂತು. ಚಿತ್ರದ ಕಾನ್ಸೆಪ್ಟ್ ಏನಿರಬೇಕೆಂದು ಶ್ರೀಗಳೇ ಲೈನ್ ಮೇಲೆ ಬಂದು ತಿಳಿಸಿದರು. ಅದನ್ನು ಕೇಳಿದ ಮೇಲೆ ನನಗನ್ನಿಸಿದ್ದು ಈ ಚಿತ್ರ ರಚಿಸಲು ೩ ತಿಂಗಳು… Continue Reading →
ಶ್ರೀರಾಮರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ || ಶ್ರೀ ನಾರಾಯಣ ನ ನಾಮವನ್ನು ಒಮ್ಮೆ ಜಪಿಸುವದರಿಂದ ಕೋಟಿ ಜನ್ಮ ದ ಪಾಪಗಳು ನಿಶ್ಯೇಷ ಆಗುತ್ತವೆ ಎನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಹೇಶ್ವರ ತನ್ನ ಸತಿ ಮಹಾಸತಿ ಪಾರ್ವತಿಗೆ ಹೇಳುವ ಪ್ರಕಾರ, ಅಂತಹ ಸಾವಿರ ವಿಷ್ಣು ನಾಮಗಳನ್ನ ಹೇಳಿದ ಪುಣ್ಯ… Continue Reading →
ಹರೇ ರಾಮ.. ಭಾರತದ ಸಂಸ್ಕೃತಿಯನ್ನು ಜಗತ್ತಿಗೆ, ಅದರಲ್ಲೂ ಭಾರತೀಯರಿಗೆ ಸಾರಿ ಹೇಳಿದ ಆಚಾರ್ಯ ತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಭಾರತದಲ್ಲಿ ಪುನಃಚೈತನ್ಯವನ್ನು ತುಂಬಿದರು. ಸೂರ್ಯ, ಗಣಪತಿ, ದುರ್ಗಾ, ಶಿವ, ವಿಷ್ಣು – ಮತಗಳನ್ನು… Continue Reading →
ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.
ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !
ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.
ಹರೇರಾಮ ಓದುಗರೇ.. ರಾಮಚಂದ್ರಾಪುರ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಈ-ಸಮ್ಮುಖದಲ್ಲಿ ಬರೆಯುವ ಅವಕಾಶಕ್ಕಾಗಿ ಸಾಷ್ಟಾಂಗ ವಂದಿಸುತ್ತೇನೆ. ಶ್ರೀ ಶಿಷ್ಯರ ಅಂಕಣವಾಗಿರುವ ಸಮ್ಮುಖದಲ್ಲಿ ಆರಂಭಿಕ ಲೇಖವನವಾಗಿ ನಿಮ್ಮೆದುರು ಇಡುತ್ತಿದ್ದೇನೆ. ಸುಮಾರು ಹದಿನೈದು ಶತಮಾನಗಳಷ್ಟು ಹಿಂದೆ ಶ್ರೀ ಆದಿ ಶಂಕರಾಚಾರ್ಯರು ಅವತರಿಸಿದಾಗ.. ಭಾರತದ ಉದ್ದಗಲಕ್ಕೂ ಅಧರ್ಮ ತಾಂಡವವಾಡುತ್ತಿತ್ತು. ಯವನ, ಮ್ಲೇಚ್ಛ ಧರ್ಮಗಳ ಆಗಮನದಿಂದಾಗಿ ಸುಂದರ… Continue Reading →