ಅದೇಕೋ, ಕಳೆದೊಂದು ವಾರದಿಂದ ಯಾರನ್ನು ನೋಡಿದರೂ ಪರೇಶ ಮೇಸ್ತನೇ ನೆನಪಾಗುತ್ತಿದ್ದಾನೆ! ಯಾರ ಮುಖ ನೋಡಿದರೂ  ‘ಓ ದೇವರೇ! ಪರೇಶ ಮೇಸ್ತನಿಗಾದ ಗತಿ ಇವರಿಗೆ ಆಗದಿರಲಿ’ ಎಂದು ಸರ್ವಶಕ್ತನನ್ನು ಅಡಿಗಡಿಗೆ ಪ್ರಾರ್ಥಿಸುವಂತಾಗುತ್ತಿದೆ.

ಹೌದು, ಪರೇಶ ಮೇಸ್ತನಿಗೇನಾಯಿತೋ ಅದು ಯಾರಿಗೂ ಆಗಬಾರದು! ಹಿಂದುವಿರಲಿ, ಅಹಿಂದುವಿರಲಿ, ಪ್ರಾಣಿ-ಪಕ್ಷಿ-ಕ್ರಿಮಿ-ಕೀಟಗಳಿರಲಿ, ಯಾರಿಗೂ ಈ ಬಗೆಯ ಘೋರವಧೆ ಬರಬಾರದು!

‘ಮರೆತೇನೆಂದರೂ ಮರೆಯಲಿ ಹ್ಯಾಂಗ’ ಎನ್ನುವ ಹಾಗಿನ ಆ ಎರಡು ಮುಖಗಳು! ಅದೇ ಪರೇಶನ ಎರಡು ಮುಖಗಳು; ಒಂದು- ಅವನ ಜೀವಂತ ಮುಖ; ಮುಗ್ಧತೆಯೇ ಮೂರ್ತಿವೆತ್ತ ಮುಖವದು. ಕಂಡೊಡನೆಯೇ ನಮ್ಮೆದೆಯಲ್ಲಿ ವಾತ್ಸಲ್ಯ-ಕಾರುಣ್ಯಗಳನ್ನು ಉಕ್ಕಿಸಿದ ಮುಖವದು! ಇನ್ನೂ ಪೂರ್ತಿಯಾಗಿ ಚಿಗುರದ ಮೀಸೆ; ತಿಳಿವಳಿಕೆ ಬಲಿಯಬೇಕಾದ ವಯಸ್ಸು; ಎಳೆಯ ಮನಸ್ಸು; ಇನ್ನಷ್ಟೇ ಅರಳಬೇಕಾದ ಬದುಕು; ಬೆಳಗಿನ ಸೂರ್ಯನಿಗೆ ಈಗ ತಾನೇ ತನ್ನ ಮೊಗವನ್ನು ಒಡ್ಡಿಕೊಳ್ಳುತ್ತಿರುವ ಮೊಗ್ಗು ಅದು!

ಇನ್ನೊಂದು- ಅವನ ಶವದ ಮುಖ! ಅದೆಷ್ಟು ಘೋರ! ಅದೆಷ್ಟು ವಿಕೃತ! ಕಂಡವರ ಗುಂಡಿಗೆಯನ್ನು ಕ್ಷಣದಲ್ಲಿ ಖಂಡ-ಖಂಡವಾಗಿಸುವ ಮುಖವದು! ಎರಡೂ ಮುಖಗಳೂ ಒಂದೇ ಮನುಷ್ಯನದೆಂಬುದನ್ನು ತಿಳಿಸಿ ಹೇಳಿದರೂ ಒಪ್ಪಲು ಸಾಧ್ಯವಾಗದು! ಆ ಜೀವನ್ಮುಖ ಮುಖ ಹುಣ್ಣಿಮೆಯಾದರೆ, ಈ ಮರಣಮುಖ ಅಮಾವಾಸ್ಯೆ! ಅಷ್ಟು ದೊಡ್ಡ ಅಂತರ ಬಂದಿತು ಆ ಮುಖದಲ್ಲಿ…ಕೇವಲ ಒಂದೂವರೆ ದಿನದಲ್ಲಿ!

ಸಾಯುವಾಗ ಜೀವವು ಅನುಭವಿಸುವ  ವೇದನೆಯು ಶವದ ಮುಖದಲ್ಲಿ ವಿಕೃತಿಯಾಗಿ ಅಭಿವ್ಯಕ್ತಗೊಳ್ಳುವುದೆನ್ನುವರು; ಪರೇಶನ ಮುಖದಲ್ಲಿ ಕಂಡು ಬರುವ, ಕಲ್ಪನೆಗೂ ಮೀರಿದ ವಿಕಾರವನ್ನು ಅವಲೋಕಿಸಿದರೆ- ಸಾಯುವ ಮುನ್ನ ಎಷ್ಟು…ಎಷ್ಟು ನೋವನುಭವಿಸಿತೋ ಆ ಬಡ ಜೀವ!?

‘ಪರೇಶ’ನೆಂದರೆ ಪರಮೇಶ್ವರನೆಂದರ್ಥ; ಒಂದಕ್ಷರ ಬದಲಿಸಿ ‘ಪರೇತ’ನೆಂದರೆ ಗತಿಸಿದವನೆಂದರ್ಥ. ಪರೇಶನಾಗಿ ವಿಹರಿಸುತ್ತಿದ್ದವನನ್ನು ನಿಷ್ಕಾರಣವಾಗಿ ಸಂಹರಿಸಿ, ಪರೇತನನ್ನಾಗಿಸಿಬಿಟ್ಟರು ಪರಕೀಯ ಪಾತಕಿಗಳು!

ಇಷ್ಟಕ್ಕೂ ಪರೇಶನ ತಪ್ಪಾದರೂ ಏನು? ಹಿಂದೂ ತಂದೆತಾಯಿಗಳು ಹಡೆದ-ಪಡೆದ ಮಗನಾದುದೇ ಬರ್ಬರ ಹತ್ಯೆಗೆ ಕಾರಣವಾಗುವ ಮಹಾಪರಾಧವಾಗಿಹೋಯಿತೇ!?

ಹೌದೇ ಹೌದು! ಹಿಂದೂ ತಂದೆತಾಯಿಗಳ ಮಗನಾಗದಿದ್ದರೆ ಪರೇಶನು ಹೊನ್ನಾವರದ ಮೊನ್ನೆಯ ಗಲಭೆಯಲ್ಲಿ ಕ್ರೂರ ಹತ್ಯೆಗೀಡಾಗುತ್ತಿರಲಿಲ್ಲ! ಹತಭಾಗ್ಯನಾದ ಈ ಹಿಂದೂ ಕುವರನನ್ನು ಕಂಡಾಗ ನಮಗೆ ನೆನಪಾಗುವುದು ಹಿಂದುಗಳ ಆ ಹತಭಾಗ್ಯ ಮಾತೆ, ಗೋಮಾತೆ!

ಹಿಂದುಗಳ ತಾಯಿಯಲ್ಲದಿದ್ದರೆ ಗೋಮಾತೆಯೂ ಈ ಪರಿಯ ದಾರುಣ ಆಕ್ರಮಣ-ಮರಣಗಳಿಗೆ ಒಳಗಾಗುತ್ತಿರಲಿಲ್ಲ! ಆಕೆಯು ಮುಸಲ್ಮಾನರ ಅಥವಾ ಕ್ರೈಸ್ತರ ತಾಯಿಯಾಗಿದ್ದರೆ ಸರ್ಕಾರಗಳು ಆಕೆಯ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತಿದ್ದವು! ಆಕೆಯ ಒಂದು ಬಿಂದು ರಕ್ತ ಬೀಳಲೂ ಪೋಲೀಸರು ಬಿಡುತ್ತಿರಲಿಲ್ಲ! ಇಲಾಖೆಗಳಲ್ಲಿ ಶತ ಶತ ಕೋಟಿ ರೂಪಾಯಿಗಳು ಆಕೆಗಾಗಿ ಕೊಳೆತು ಕಾಯುತ್ತಿರುತ್ತಿದ್ದವು! ಯಾರಿಂದ ಇಂದು ಗೋವುಗಳಿಗೆ ಆಪತ್ತಿದೆಯೋ ಅವರೇ ಆಕೆಯ ಮಹಾಸಂರಕ್ಷಕರಾಗಿರುತ್ತಿದ್ದರು! ಆಕ್ರಮಣ-ಅನ್ಯಾಯಗಳು ಹಿಂದುಗಳ ರಕ್ತದಲ್ಲಿಯೇ ಇಲ್ಲದಿರುವುದರಿಂದ ಅವರಿಂದ ಹೇಗೂ ತೊಂದರೆಯಾಗುವ ಸಾಧ್ಯತೆಯಿರಲಿಲ್ಲ! ಹೀಗೆ ಗೋಮಾತೆಯು ಸರ್ವಥಾ ಸುರಕ್ಷಿತಳಾಗಿರುತ್ತಿದ್ದಳು.

ತಮ್ಮ ತಾಯಿಯನ್ನು ಕಾಪಾಡಿಕೊಳ್ಳಲಾರದ ಮಕ್ಕಳ ತಾಯಿಯಾಗಿರುವುದರಿಂದ ಗೋಮಾತೆಗೆ ಈ ನರಕ!

ಮುಸಲ್ಮಾನ ಹಲ್ಲೆಕೋರರನ್ನು ಪೋಲೀಸರು ತಾವೇ ಎಸ್ಕಾರ್ಟ್ ಮಾಡಿ ಮನೆಗೆ ತಲುಪಿಸುವ, ಅವರ ಕೈಯಲ್ಲಿರುವ ಮಾರಕಾಸ್ತ್ರಗಳನ್ನೂ ಅವರ ಕೈಯಲ್ಲಿಯೇ ಬಿಡುವ ವಿಡಿಯೋ ಇದೀಗ ವೈರಲ್ ಆಗಿದೆ; ಅದನ್ನೊಮ್ಮೆ ಗಮನಿಸಿದರೆ ಪರೇಶನು‌ ಮುಸಲ್ಮಾನನಾಗಿರುತ್ತಿದ್ದರೆ ಇಂದು ರಾಜಾಶ್ರಯ-ರಾಜರಕ್ಷಣೆ-ರಾಜಾತಿಥ್ಯದಲ್ಲಿ ಸುಖ-ಸುರಕ್ಷಿತವಾಗಿರುತ್ತಿದ್ದನೆಂಬುದರಲ್ಲಿ ಯಾವ ಸಂಶಯವೂ ಇಲ್ಲ!

ಸಹಸ್ರ ವರ್ಷಗಳ ಭಾರತದ ಚರಿತ್ರೆಯಲ್ಲಿ ಮುಸಲ್ಮಾನರ, ಕ್ರೈಸ್ತರ, ಇನ್ನಿತರ ವಿಧರ್ಮೀಯರ ಕ್ರೌರ್ಯ-ಕೌಟಿಲ್ಯಗಳಲ್ಲಿ ಮತಾಂತರಗೊಂಡ ಅಥವಾ ಲೋಕಾಂತರ*ಗೊಂಡ(ಪರೇಶನಂತೆ ವಧೆಗೀಡಾದ) ಹಿಂದುಗಳ ಸಂಖ್ಯೆ ಶತಕೋಟಿಯೊಳಗಿಲ್ಲ!

ಹಾಗೆಯೇ ತಳಿಸಂಕರಕ್ಕೊಳಗಾದ ಅಥವಾ ಕಟುಕರ ಕೈಯ ಕ್ರೂರಮರಣಕ್ಕೊಳಗಾದ ಗೋವುಗಳ ಸಂಖ್ಯೆಯೂ ಶತಕೋಟಿ ಮೀರಿದೆ!

ನಮ್ಮ ಮನೆಗೆ ಬಂದು, ನಮ್ಮ ಆಶ್ರಯವನ್ನೇ ಪಡೆದು, ಬಳಿಕ ಮನೆಯೊಡೆದು, ಮನೆಯವರಲ್ಲಿ ಕೆಲವರ ಕುಲಗೆಡಿಸಿ, ಉಳಿದವರ ತಲೆ ಒಡೆಯುವ ಕೃತಘ್ನ-ಕರ್ಮವು ಅಂದಿನಿಂದ ಇಂದಿನವರೆಗೂ ರಾಜಾಶ್ರಯದಲ್ಲಿ ರಾಜಾರೋಷವಾಗಿ ನಡೆದು ಬರುತ್ತಿದೆ! ಇದನ್ನು ಪರಕೀಯರ ಕ್ರೌರ್ಯವೆಂದು ಬೇಕಾದರೂ ಕರೆಯಿರಿ; ನಮ್ಮವರ ಮೌರ್ಖ್ಯ*ವೆಂದು ಬೇಕಾದರೂ ಕರೆಯಿರಿ! ಪರಕೀಯರ ಕ್ರೌರ್ಯಕ್ಕಿಂತಲೂ ಮನ ನೋಯುವುದು ನಮ್ಮವರ ಮೌರ್ಖ್ಯವನ್ನು ಕಂಡಾಗ..

ಮಹಾದುರಂತವೆಂದರೆ ಶತ-ಶತವರ್ಷಗಳ, ಶತ-ಶತಕೋಟಿ ಕಗ್ಗೊಲೆಗಳ ಬಳಿಕವೂ ಪರಕೀಯ ರಾಕ್ಷಸರ ರಕ್ತಾಕಾಂಕ್ಷೆ ಹಿಂಗಿಲ್ಲ; ನಮ್ಮ ಮೂರ್ಖತೆಯೂ ಮುಗಿದಿಲ್ಲ! ಇಂದೂ…ಈಗಲೂ…ಇನ್ನೂ… ಅವರು ಬಲಿ ತೆಗೆದುಕೊಳ್ಳುತ್ತಲೇ ಇದ್ದಾರೆ; ನಾವು ಬಲಿಯಾಗುತ್ತಲೇ ಇದ್ದೇವೆ!

ಪರಕೀಯರು ನಮ್ಮವರನ್ನು ಕೊಲ್ಲುವುದನ್ನಾದರೂ ಸಹಿಸಬಹುದು; ಆದರೆ ನಮ್ಮವರೆನಿಸಿಕೊಂಡವರು ಆ ಸಮಯದಲ್ಲಿ ವಹಿಸುವ ಹೇಡಿ-ಮೌನವನ್ನು, ಜಾಣ-ಜಾಡ್ಯವನ್ನು ಸಹಿಸಲಾಗದು!

ಅದನ್ನಾದರೂ ಸಹಿಸಬಹುದು; ಆದರೆ ಪರಕೀಯ ಕೊಲೆಗಡುಕರ ಜೊತೆ ನಮ್ಮವರೇ ಶಾಮೀಲಾಗುವುದನ್ನು ಸಹಿಸಲು ಸಾಧ್ಯವೇ ಆಗದು!

ಇದೆಲ್ಲವನ್ನೂ ಸಹಿಸಬಹುದು; ಆದರೆ ನಮ್ಮೆಲ್ಲರ ರಕ್ಷಣೆಗಾಗಿಯೇ ಸಂಬಳ ತೆಗೆದುಕೊಳ್ಳುವ, ಅಪರಾಧಿಗಳ ನಿಗ್ರಹವೇ ನಿತ್ಯಕರ್ತವ್ಯವಾಗಿರುವ ಪೋಲೀಸರು ಈ ಕುಕೃತ್ಯದಲ್ಲಿ ಶಾಮೀಲಾಗುವುದನ್ನು, ಅವರೇ ಮುಂದೆ ನಿಂತು ಪಾತಕಿಗಳ ರಕ್ಷಣೆಯನ್ನು ಸರ್ವರೀತಿಯಿಂದಲೂ ಮಾಡುವುದನ್ನು ಎಂದೆಂದೂ ಸಹಿಸಲಾಗದು! ಒಪ್ಪಲಾಗದು!

ದುರಂತಕಾರಿ ದುರ್ದೈವ! ಇಂಥ ಪೋಲೀಸರಲ್ಲಿ ಬಹ್ವಂಶ ಹಿಂದುಗಳೇ ಇರುತ್ತಾರೆ; ಇತ್ತ ಅನ್ನವಿತ್ತ ಕಾನೂನಿಗೂ ನಿಷ್ಠೆಯಿಲ್ಲ; ಅತ್ತ ಆತ್ಮವಿತ್ತ ಧರ್ಮಕ್ಕೂ ನಿಷ್ಠೆಯಿಲ್ಲದವರಿವರು! ಇಂಥವರಿಗೆ ಒಂದು ಮಾತನ್ನು ಹೇಳಲೇಬೇಕಾಗಿದೆ:

“ಪರಕೀಯರ ಕುಕಾರ್ಯಗಳಿಗೆ ನೀವು ನೀಡುವ ಒಂದೊಂದು ಸಹಕಾರ, ಅದು ನಿಮ್ಮನ್ನು ಹೆತ್ತ ಹಿಂದೂ ತಾಯಿಯ ಗರ್ಭಕ್ಕೆ ನೀವು ಮಾಡಿದ ಅಪಚಾರ!”

ಪ್ರಿಯ ಪುತ್ರಸಮಾನ ಪರೇಶ, ‘ನೀನೆಲ್ಲಿರುವೆಯೋ, ಹೇಗಿರುವೆಯೋ’ ಎಂದು ಕಳವಳಿಸುವ-ತಳಮಳಿಸುವ ನಿನ್ನ ಕುಟುಂಬದ ಪರವಾಗಿ; ‘ನೀನೆಷ್ಟು ನೊಂದೆಯೋ, ಇನ್ನೆಷ್ಟು ಬೆಂದೆಯೋ’ ಎಂದು ಪರಿತಪಿಸುವ ಕೋಟ್ಯಂತರ ಹಿಂದೂ-ಬಂಧುಗಳ ಪರವಾಗಿ; ಈ ಲೋಕದಲ್ಲಿ ನಿನಗೆ ಸಿಗದ ಸೌಖ್ಯವು ಆ ಲೋಕದಲ್ಲಿಯಾದರೂ ಸಿಗಲೆಂದು ಹೃದಯಾಂತರಾಳದಿಂದ ಹಾರೈಸುವೆವು.

  • ಮೇಸ್ತನೆಂಬ ನಿನ್ನ ಉಪನಾಮವು ನೀನೊಬ್ಬ ಗಂಗಾಪುತ್ರ*ನೆಂಬುದನ್ನು ನೆನಪಿಸುತ್ತದೆ; ಆದರೆ ನಮ್ಮವರ ಕ್ಲೈಬ್ಯ* ಮತ್ತು ಪರಕೀಯರ ಕ್ರೌರ್ಯಗಳ ಫಲವಾಗಿ ಗಂಗಾಮಾಯಿಗೆ ನಿನ್ನ ವಿಕೃತ ಮೃತದೇಹದಿಂದ ಮಡಿಲು ತುಂಬಿಕೊಳ್ಳುವ ದುರ್ಯೋಗ!
  • ನಿನ್ನ ಮನದೊಳಗೆ ಅಚ್ಚೊತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಸ್ಫೂರ್ತಿ-ಮೂರ್ತಿಯು ಹಚ್ಚೆಯಾಗಿ ನಿನ್ನ ತನುವಿನಲ್ಲಿ ರಾರಾಜಿಸಿತ್ತು; ಅದು ಮುಂದೆ ನೀನಿಡಲಿದ್ದ ಧರ್ಮರಕ್ಷಣೆಯ ದಿಟ್ಟ ಹೆಜ್ಜೆಯ ಪ್ರತೀಕವಾಗಿತ್ತು. ಆದರೆ ಶನಿದೇವಸ್ಥಾನಕ್ಕೆಂದು ಹೊರಟ ನೀನು ಶೆಟ್ಟಿಕೆರೆಯಲ್ಲಿ ಶವವಾಗಿ ತೇಲಿದಾಗ ಆ ಹಚ್ಚೆಯು ಕಾಣದಾಯಿತು; ಆ ಹೆಜ್ಜೆಗಳೂ ಕನಸಾಗಿಯೇ ಉಳಿದವು.
  • ಗುರುವಿನ ಕುರಿತಾದ ಗೌರವ, ಗೋಮಾತೆಯ ಕುರಿತಾದ ಪ್ರೇಮದ ಫಲವಾಗಿ ನೀನೊಬ್ಬ ಗೋಕಿಂಕರನಾದೆ; ಗೋರಕ್ಷೆಯ ಅಭಯಾಕ್ಷರಗಳನ್ನು ಸಂಗ್ರಹಿಸಿದೆ. ಅದಕೆಂದೇ ನಾವು ನಿನ್ನನ್ನು ಪುತ್ರಸಮಾನನೆಂದು ಸಂಬೋಧಿಸಿದ್ದು! ಆದರೆ ಹಿಂದುಗಳ ದೌರ್ಭಾಗ್ಯ ಮತ್ತು ಮತರಾಕ್ಷಸರ ದೌರ್ಜನ್ಯಗಳಿಂದಾಗಿ ಆರುವ ನಿನ್ನ ಬಾಯಿಗೆ ಕೊನೆಯ ಬಾರಿಗೆ ಗೋವಿನ ಹಾಲು ಬಿಡಲೂ ಅವಕಾಶವಿಲ್ಲದಾಯಿತು!

ನೀನು ಗೈದ ಗೋಸೇವೆಯ ಫಲವಾಗಿ ಕಾಮಧೇನುವು ನಿನಗೆ ಕ್ಷೀರಸಾಗರದಲ್ಲಿ ನೆಲೆಯನ್ನು ಕಲ್ಪಿಸಲಿ; ಆ ಅಮೃತದಾಯಿನಿಯು ನಿನಗೆ ಅಮೃತತ್ವವನ್ನೇ ನೀಡಲಿ! ರಾಮಾನುಗ್ರಹದ ರಕ್ಷೆಯು ನಿನ್ನ ಕುಟುಂಬವನ್ನು ಎಂದೆಂದಿಗೂ ಕಾಯಲಿ.

ಅಳಿದುಳಿದ ಹಿಂದೂ ಜನರೇ!

ಜಾಡ್ಯದ ನಿದ್ದೆಯನ್ನು ತೊರೆದು ಎದ್ದು ನಿಲ್ಲಿ! ಈಗಲೂ ಸೆಟೆದು ನಿಲ್ಲದಿದ್ದರೆ ಪಳೆಯುಳಿಕೆಯಾಗಿಹೋದೀರಿ! ಪರೇಶ ಮೇಸ್ತನಿಗೆ ಬಂದ ಗತಿ ಇಂದೋ-ನಾಳೆಯೋ, ನಿಮಗೋ-ನಿಮ್ಮವರಿಗೋ ತಪ್ಪಿದ್ದಲ್ಲ!

ಏಳಿ! ಎಚ್ಚರಗೊಳ್ಳಿ! ಸಂಘಟಿತರಾಗಿ! ಹಿಂದೂ~ಹತ್ಯಾಸರಣಿಯನ್ನು ಇಲ್ಲಿಗೇ ನಿಲ್ಲಿಸುವ ನಿರ್ಣಾಯಕವಾದ ಹೋರಾಟವೊಂದನ್ನು ಕೈಗೊಳ್ಳಿ!

ಹೋರಾಡಿ ಗೆದ್ದರೆ ಬದುಕು; ಸೋತರೆ ಸಾವು! ಹೋರಾಡದಿದ್ದರೆ ಕುಳಿತಲ್ಲಿಯೇ ಸಾವು!

~*~

ತಿಳಿವು-ಸುಳಿವು:

  • ಪರಾಸ್ತ = ಪರರ ಕ್ರೌರ್ಯದಿಂದಾಗಿ ಅಸ್ತಂಗತಗೊಂಡ ಎಂಬರ್ಥ
  • ಲೋಕಾಂತರ = ಹತ್ಯೆ
  • ಮೌರ್ಖ್ಯ = ಮೂರ್ಖತನ
  • ಗಂಗಾಪುತ್ರ = ಗಂಗೆಯ ಮಗ; ನೀರಿನಿಂದಲೇ ಬದುಕು ಕಟ್ಟಿಕೊಳ್ಳುವ ಮೀನುಗಾರ ಜನಾಂಗವನ್ನು ಈ ರೀತಿ ಗುರುತಿಸುತ್ತಾರೆ.
  • ಕ್ಲೈಬ್ಯ = ನಪುಂಸಕತ್ವ

 

LokaLekha by @SriSamsthana SriSri RaghaveshwaraBharati MahaSwamiji

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box