ಶ್ರೀರಾಮಚಂದ್ರಾಪುರ ಮಠದ ಶ್ರೀಭಾರತೀಪ್ರಕಾಶನದ  ಹೊಸ ಪುಷ್ಪಗಳ ಲೋಕಾರ್ಪಣೆಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ದಿನಾಂಕ 05-01-2014ರಂದು ನಡೆಯಿತು.

SRI_7070

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಿ ಲೋಕಾರ್ಪಣೆಯನ್ನು ನಡೆಸಿಕೊಟ್ಟರು. ನಿವೃತ್ತ ಐ.ಜಿ.ಪಿ. ಹಾಗೂ ಪ್ರಸಕ್ತ ಲೋಕಾಯುಕ್ತ ನಿರ್ದೇಶಕ ಶ್ರೀ ಡಿ ಎನ್ ಮುನಿಕೃಷ್ಣ, ಐಪಿಎಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

SRI_7083

ಲೋಕಾರ್ಪಣೆಗೊಂಡ ಪುಸ್ತಕಗಳು:

1. ಗುರುವಿನ ಗರಿಮೆ – ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೇಖನಗಳ ಸಂಕಲನ

2. ಸಂತರ ಸಂತ – ಮಹಾನಂದಿ ನಾಟಕ – ಲೇಖಕರು: ಡಾ. ಗಜಾನನ ಶರ್ಮರು

3.  ಗೋ ಯಕ್ಷ ವೈಭವ – ಯ ಕ್ಷಗಾನ ಲೇಖಕರು: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

ಲೋಕಾರ್ಪಣೆಗೊಂಡ  ಸಿ ಡಿ ಗಳು:

1. ಭಜಗೋವಿಂದಮ್ – ಹಾಡಿದವರು: ಚಂದ್ರಶೇಖರ ಕೆದಿಲಾಯ

2. ಗುಲ್ಬರ್ಗದಲ್ಲಿ ನಡೆದ ರಾಮಕಥೆ – ರಾಮ ಜನ್ಮ

3. ಕೈರಂಗಳದಲ್ಲಿ ನಡೆದ ರಾಮಕಥೆ – ಸುಂದರ ಕಾಂಡ

4. ಕಾಂಚನದಲ್ಲಿ ನಡೆದ ರಾಮಕಥೆ – ಸಮರ ಸನ್ನಾಹ

ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಗಜಾನನ ಶರ್ಮ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಶ್ರೀಭಾರತೀಪ್ರಕಾಶನದ ವಿದ್ವಾನ್ ಜಗದೀಶ ಶರ್ಮ, ಹಾಗೂ ಶ್ರೀಮಠದ ಪದಾಧಿಕಾರಿಗಳು ಭಾಗವಹಿಸಿದ್ದರು.

Facebook Comments Box