ಪತ್ರಿಕಾ ಪ್ರಕಟಣೆ- Press release: 25.9.2015

ಸ್ಪಷ್ಟೀಕರಣ:
ಚಾತುರ್ಮಾಸ್ಯದ ಸಮಯದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ, ಹಾಗೂ ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಆ ಮಾತುಗಳು ಈ ಚಾತುರ್ಮಾಸ್ಯದ ಸಮಯದ್ದಾಗಿರುವುದಿಲ್ಲ, ಕೆಲವರ್ಷಗಳ ಹಿಂದೆ ಹೊಸನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಕೆಲವು ಮಾಧ್ಯಮಗಳಲ್ಲಿ ಶ್ರೀಮಠವನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಶ್ರೀಗಳು ನೀಡಿದ ಉತ್ತರವಾಗಿರುತ್ತದೆ. ಷಡ್ಯಂತ್ರ ಮಾಡುತ್ತಿರುವವರು ಆ ಧ್ವನಿಮುದ್ರಿಕೆಯ ಆಯ್ದಕೆಲವು ಭಾಗಗಳನ್ನು ಹಂಚಿ ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆ ಮಾತುಗಳು ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಹೇಳಿದ ಉತ್ತರವಾಗಿರುತ್ತದೆ ಹೊರತು ಯಾವುದೇ ರೀತಿಯ ಪ್ರಚೋದನಾತ್ಮಕ ಪ್ರವಚನವಾಗಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತೇವೆ. ಅಂತೆಯೇ ಚಾತುರ್ಮಾಸ್ಯ ಸಮಯದಲ್ಲಿ ಶ್ರೀಗಳು ಅನುಗ್ರಹಿಸಿರುವ ಪ್ರವಚನಗಳು ಶ್ರೀಮಠದ ಅಧಿಕೃತ ಜಾಲತಾಣ www.hareraama.in ದಲ್ಲಿ ಲಭ್ಯವಿರುತ್ತದೆ.

Facebook Comments Box