ದಿನಾಂಕ 21.ಜನವರಿ 2010 ಮಾಲೂರಿನ ಚರಿತ್ರೆಯಲ್ಲಿ ಮುಂದಿನ ದಿನಗಳಲ್ಲಿ ಬರೆದಿಡಬೇಕಾದ ದಿನ..

ಪ.ಪೂ.ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದಂತೆ ಮತ್ತು ಮಾರ್ಗದರ್ಶನದಲ್ಲಿ, ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯಡಿ, ಗೋ ಭಕ್ತ ಉದ್ಯಮಿಗಳ ಮತ್ತು ತಾಂತ್ರಿಕ ತಜ್ಞರ ಸಹಕಾರದೊಡನೆ “ಮಾ ಗೋ ಪ್ರೋಡಕ್ಟ್ಸ್ ಪ್ರೈ.ಲಿ.” ಎಂಬ ಗೋ ಆಧಾರಿತ ಉದ್ಯಮವನ್ನು ಪರಮಪೂಜ್ಯರು ಅಂದು ಲೋಕಾರ್ಪಣ ಮಾಡಿದರು..

ಮಾಲೂರಿನ ಶ್ರೀ ರಾಘವೇಂದ್ರ ಗೋ ಶಾಲೆಯ ಆವರಣದಲ್ಲಿ ಈ ಘಟಕ ಅಂದಾಜು 2 ಕೋಟಿ ರೂ.ಭಂಡವಾಳದೊಡನೆ ನಿರ್ಮಾಣಗೊಂಡಿದೆ. ಗೋ ಆಧಾರಿತ ಓಷಧಿಗಳು, ಪ್ರಾಸಾಧನ ಸಾಮಗ್ರಿಗಳು, ದಿನಬಳಕೆಯ ವಸತುಗಳು, ಕೀಟ ನಿಯಂತ್ರಕಗಳು, ಗೋಬರ್ ಅನಿಲ, ಮಿಥೇನ್ ಅನಿಲ, ಸಾವಯವ ಗೊಬ್ಬರ ಮುಂತಾದ ಗವ್ಯೋತ್ತನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ಉತ್ಪಾದಿಸಿ ಮಾಲುರು ತಾಲೂಕಿನ/ ಕೋಲಾರ ಜಿಲ್ಲೆಯ ಕೃಷಿಕರ ನೆರವಿಗೆ ಬರುವುದು ಈ ಯೋಜನೆಯ ಉದ್ದೇಶ. ಗೋವಿನ ಹಾಲಿನಿಂದಲ್ಲದೇ ಇತರ ಗೋಜನ್ಯ ಪದಾರ್ಥಗಳಿನದಲೂ ಸಮರ್ಥ ಆದಾಯ ಗಳಿಸಬಹುದೆನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಲು ಈ ತಯಾರಿಕಾಘಟಕವನ್ನು ತೆರೆಯಲಾಗಿದೆಯೆಂದು ನೂತನಕಂಪನಿಯ ತಾಂತ್ರಿಕ -ನಿರ್ದೇಶಕರಾದ ಶ್ರೀ ಎಂ.ಕೆ.ಜನಾರ್ದನ ಅವರು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದರು.

ಪ್ರಸಿದ್ಧ ಉದ್ಯಮ ಸಮೂಹದ ಮಾಲೀಕರುಗಳಾದ ಶ್ರೀ ರಾಧೇಶ್ಯಾಮ ಗೋಯಂಕಾ, ಆನಂದ ರಾಠೀ, ಮಹಾಬೀರ್ ಪ್ರಸಾದ್ ಸೋನಿಕಾ ಮುಂತಾದವರು ಈ ಉದ್ಯಮದಲ್ಲಿ ಬಂದವಾಳವನ್ನು ತೊಡಗಿಸಿದ್ದಾರೆ. ಸುತ್ತ ಮುತ್ತಲ ರೈತರುಗಳಿಂದ ದೇಶೀ ಗೋವುಗಳ ಮೂತ್ರ ಮತ್ತು ಸಗಣಿ ಉತ್ತಮ ಬೆಲೆಗೆ ಖರೀದಿಸಿತನ್ಮೂಲಕ ಗೋ ರಕ್ಷಣೆಗೆ ನೆರವಾಗುವುದು ಈ ಉದ್ಯಮದ ಧ್ಯೇಯಗಳಲ್ಲೊಂದೆಂದು ಶ್ರೀ ಜನಾರ್ದನ ತಿಳಿಸಿದರು.

ಪರಮ ಪೂಜ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸರಕಾರ ಮಾಡಬೇಕಿದ್ದ ಕೆಲಸವನ್ನು ನಾವುಮಾಡುತ್ತಿದ್ದೇವೆ. ಇದರಿಂದ ಮಾಲೂರಿನ ರೈತರಿಗೆ ಮಹಾಲಕ್ಷ್ಮಿ ಒಲಿಯಲಿ ಎಂದು ಹಾರೈಸಿದರು.

ಶ್ರೀ ವರ್ತೂರು ನಾರಾಯಣ ರೆಡ್ಡಿ ಅವರು ದೇಶೀತಳಿ ಗೋಸಂರಕ್ಷಣೆ ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು. ಮಾಣಿಲದ ಶ್ರೀ ರಮಾನಂದ ಸ್ವಾಮಿಗಳು ಮತ್ತು ಗದಗದ ಕಪ್ಪತಗುಡದ ಶ್ರೀ ಶಿವಕುಮಾರ ಸ್ವಾಮಿಗಳು ಉದ್ಯಮಕ್ಕೆ ಶುಭಹಾರೈಸಿ ಆಶೀರ್ವಾದ ಮಾಡಿದರು. ಮಾಜಿ ಮಂತ್ರಿಗಳೂ, ಶಾಸಕರೂ, ಮುಜರಾಯಿ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಕೃಷ್ಣಯ್ಯ ಶೆಟ್ಟರು ಉದ್ಯಮಕ್ಕೆ ನೆರವಿನ ಭರವಸೆ ನೀಡುತ್ತಾ, ಈ ಘಟಕ ತಯಾರಿಸುವ ಫೀನಾಯಿಲ್ ಅನ್ನು ಮುಜರಾಯಿ ದೇವಸ್ಥಾನಗಳು ಖರೀದಿಸುವನತೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಗೋಮುಖ ಎಂಬ ಕಿರಿ ಪ್ರಹಸನವನ್ನು ಈ ಸಂದರ್ಭದಲ್ಲಿ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ತಂಡ ಅಭಿನಯಿಸಿದರು.

Report by- CHS Bhat.

Facebook Comments