ಇಂದಿನ ಭಿಕ್ಷಾ ಸೇವೆ ಕಿರಣ್ ಸುಬ್ರಾಯ್
ರಾಣಿ ಚನ್ನಮ್ಮ ನಗರ ಬೆಳಗಾವಿ

ಪ್ರಾತಃ ಪೂಜೆ : ೦೯.೩೫
ಸಂಜೆ ೪.೦೦ ಗಂಟೆಗೆ ಗೋವಾದ ಪೊಂಡದಲ್ಲಿ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ -ಆಶೀರ್ವಚನ..
ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ನ ಸ್ವಾಮಿಜಿ ಭಾಗವಹಿಸಿದ್ದರು ಇವರು ತಮ್ಮ ಭಾಷಣ ದಲ್ಲಿ ಶಾಖಾಹಾರ ಮತ್ತು ಮಾಂಸಾಹಾರದ ಪ್ರಭಾವ ವೈಶಿಷ್ಟ್ಯ ತಿಳಿಸಿದರು..
ಶ್ರೀಗಳು ತಮ್ಮ ಆಶಿರ್ವಚನದಲ್ಲಿ ಭಾರತೀಯ ಗೋ ವಂಶವನ್ನು ಕಳೆದ ೫೦ ವರ್ಷಗಳಲ್ಲಿ ಪ್ರತಿಶತ ೭೫ ರಷ್ಟನ್ನು ಕಳೆದು ಕೊಂಡಿದ್ದೇವೆ, ನಾವು ಗೋವಾಕ್ಕೆ ಯಾವುದೇ ಪಾದಪೂಜಾ,ನಿಧಿ ಸಂಗ್ರಹಣೆ,ಭೇಟಿ ಗಾಗಿ ಬಂದಿಲ್ಲ ಬದಲಾಗಿ ಧರ್ಮಸಂಗ್ರಾಮಕ್ಕಾಗಿ ಜಾಗೃತಿ ಮೂಡಿಸಲು ಬಂದಿದ್ದೇವೆ ಎಂದು ನುಡಿದರು.
At ponda program

ಸಾಯಂಕಾಲದ ಪೂಜೆ ಯನ್ನು ಮಂಜುನಾಥ ಹೆಗಡೆ poonda ರವರ ಮನೆಯಲ್ಲಿ ಪೂರೈಸಿ ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು..

ರಾತ್ರಿ ೮.೩೦ ಕ್ಕೆ ಭಿಚೋಲಿಯಂ ನ ಛತ್ರಪತಿ ಶಿವಾಜಿ ಮೈದಾನ ದಲ್ಲಿ ನಡೆದ ವಿಶ್ವ ಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು ..
ಕಾರ್ಯಕ್ರಮದಲ್ಲಿ ತಪೋಭೂಮಿ ಗೋವಾ ದ ಸ್ವಾಮೀ ಬ್ರಮ್ಹೆಷಾನಂದ ಜಿ ಹಾಗೂ ರಾಮಬಾಲಕ್ ಜಿ ಮಹಾರಾಜ್ ಉಪಸ್ಥಿತ ರಿದ್ದರು..
ನಮ್ಮ ದೇಶದ ಅರ್ಥ ಆರೋಗ್ಯ ಇಂಧನ ಕ್ಷೇತ್ರಗಳು ಗೋ ವನ್ನು ಅವಲಂಬಿಸಿವೆ, ಗೋವು ಟೂ ಇನ್ ಒನ್ ಅಲ್ಲ ಆಲ್ ಇನ್ ಒನ್ ಎಂದು ಶ್ರೀಗಳು ತಮ್ಮ ಆಶೀರ್ವಚನ ದಲ್ಲಿ ತಿಳಿಸಿದರು..

ಅಲ್ಲಿಂದ ಶ್ರೀಗಳು ಮೂಲಗವ್ ನ ಅಣ್ಣ ದೇವಿ ದೇವಸ್ಥಾನಕ್ಕೆ ಚಿತ್ತೈಸಿ ದೇವಿಯ ದರ್ಶನ ಪಡೆದು ಮೊಕ್ಕಾಂ ಸ್ಥಳ ವಾದ ಇಬ್ರಾಂಪುರ ಗೆ ಪ್ರಯಾಣ ಬೆಳೆಸಿ ವಸತಿ ಸ್ಥಳ ವಾದ ಗಜಾನನ ಭಟ್ ಹಾವ್ಗೊಡಿ,ಇಬ್ರಾಂ ಪುರ ಗೋವಾಕ್ಕೆ ಚಿತ್ತಯಿಸಿದರು,,

Facebook Comments Box