ಗೋಕರ್ಣದ ಮಹಾಬಲೇಶ್ವರ ಮಂದಿರದಲ್ಲಿ ನಡೆಯುತ್ತಿರುವ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ಕಾರ್ಯಕ್ರಮ ಇಂದು ಮಧ್ಯಾಹ್ನ ದೇಗುಲದ ಪ್ರಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಟ್ಕಳ ಶಾಸಕರಾದ ಜೆ.ಡಿ.ನಾಯಕ್,ಸಂಸದ ಧನಂಜಯ ಕುಮಾರ್, ಗಾಂವ್ಕರ್ ಮೈನ್ಸ್ ನ ಪಿ.ಎಸ್.ಗಾಂವ್ಕರ್ ಮುಂತಾದವರು ಭಾಗವಹಿಸಿದ್ದರು..
ಪ್ರತಿ ಒಂದು ರುದ್ರಾನುಷ್ಠಾನದ ಲೆಕ್ಕದಲ್ಲಿ ಒಂದು ಬಿಲ್ವಪತ್ರದ ಗಿಡವನ್ನು ನೆಡುವುದಾಗಿ ನುಡಿದರು,
ಗಿಡಗಳನ್ನು ಗೋಕರ್ಣ ಮತ್ತು ಭಾರತದಾದ್ಯಂತ ವಿತರಿಸಲಾಗುವುದು ಹಾಗೂ ಮಹಾಬಲೇಶ್ವರ ದೇವರ ಹೆಸರಿನಲ್ಲಿ ಕೆರೆ,ಸರೋವರ, ನೀರಿಂಗಿಸುವ ಗುಂಡಿ ಮಂತಾದ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿರುವುದಾಗಿ ನುಡಿದ ಶ್ರೀಗಳು ಈಗಾಗಲೇ ಹನ್ನೊಂದು ಲಕ್ಷಕ್ಕೂ ಹೆಚ್ಚು ರುದ್ರಾಧ್ಯಾಯ ಸಂಪನ್ನ ಗೊಂಡಿದೆ ಎಂದರು..
ಕೋಟಿರುದ್ರದ ನೆಪದಲ್ಲಿ ಮನೆ ಮನೆಯಲ್ಲಿ ರುದ್ರ ಪಾಠಕಲಿಯುತ್ತಿದ್ದಾರೆ ಹಾಗೂ ಕ್ಷೇತ್ರಕ್ಕೆ ಆಗಮಿಸಿ ಮಹಾಬಲನಿಗೆ ಸೇವೆಸಲ್ಲಿಸುತ್ತಿದ್ದಾರೆ ಎನ್ನುತ್ತಾ ಗೋಕರ್ಣದಲ್ಲಿರುವ ಮಣ್ಣು ಶಿವಸ್ವರೂಪ ನೀರಿನ ಪ್ರತಿಬಿಂದುವೂ ತೀರ್ಥ ಕೇವಲ ಪರಶಿವನ ಮಹಿಮೆಯಿಂದ ಇಂದು ಈ ಕಾರ್ಯಗಳು ಸಂಪನ್ನಗೊಳ್ಳುತ್ತಿವೆ
ಪರ್ವವೆಂದರೆ ಒಂದು ಹಂತದಿಂದ ಇನ್ನೊಂದು ಹಂತದೆಡೆಗೆ ಮುಂದುವರಿಯುವುದು…..
ಪರ್ವ ಬೆಳವಣಿಗೆಯ ಪ್ರತೀಕ ಎಂದು ತಮ್ಮ ಆಶೀರ್ವಚನದಲ್ಲಿ ಶ್ರೀಗಳು ನುಡಿದರು..
May 20, 2010 at 7:19 AM
ಸತ್ಯ೦ ಶಿವ೦ ಸು೦ದರ೦…. ಸು೦ದರ೦ ಬದಲು ರುದ್ರ ಪಠಣ ಎ೦ದು ಹೇಳಬಹುದು
.
ಪರಮ ಕರುಣಾಕರ ಪರಶಿವನ ಕರುಣೆಯನು ಅರಿಯುವ, ಮನಸಿನ ಮುಸುಕನು ಕಳೆಯುವು, ಸಸಿಯ ನೆಡುವ, ನೀರುಣಿಸುವ, ಬೆಳೆಸುವ, ಹೆಮ್ಮರವಾಗಿಸುವ, ಸಮಾಜಮುಖಿಯಾಗುವ, ಆತ್ಮಲಿ೦ಗದಲಿ ಐಕ್ಯವಾಗುವ
March 2, 2014 at 10:32 PM
Ok