ಶ್ರೀ ರಾಮನ ಅನುಪಮ ಉಪಾಸನೆಯ ಮತ್ತೊಂದು ಸಂಭ್ರಮದ ಮಹೋತ್ಸವದ ಸಡಗರಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು..
ಈ ಬಾರಿ ಮಾ.೨೨ ರಿಂದ ಮಾ ೨೫ ರವರೆಗೆ ೪ ದಿನಗಳಕಾಲ ನಡೆಯಲಿರುವ ” ಶ್ರೀರಾಮೋತ್ಸವ ” ಆಚರಣೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಗಳವರು ಚಾಲನೆ ನೀಡಿದರು..
ಸಂಜೆ ೦೬.೩೦ ರಿಂದ ಡೊಳ್ಳು ಚಕ್ರವರ್ತಿ ತವಿಲ್ ಮಂತ್ರಾಲಯ ಆಸ್ಥಾನ ವಿದ್ವಾನ್ ಡಾ| ಎ. ಆರ್. ಮುನಿರತ್ನಂ ಮತ್ತು ಸಂಗಡಿಗರಿಂದ ಮಂಗಳವಾದ್ಯ ಕಛೇರಿ ನೆರವೇರಿತು..
ಇದಕ್ಕೂ ಮುನ್ನ ಸಂಜೆ ಸುಮಾರು ಐದು ಘಂಟೆಗೆ ಕಾರಣಗಿರಿಗೆ ಆಗಮಿಸಿದ ಶ್ರೀಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು,
ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಯಿಸ್,ಶ್ರೀ ಮಠದ ಸರ್ವಾಧ್ಯಕ್ಷರಾದ ಶ್ರೀ ಟಿ. ಮಡಿಯಾಲ್,
ಶ್ರೀ ಮಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕೆ.ಜಿ.ಭಟ್, ಶ್ರೀ ಮಠದ ಆರ್ಥಿಕ ಶಾಖೆಯ ಕಾರ್ಯದರ್ಶಿ ಶ್ರೀ ಗಣಪತಿ ಟಿ ಹೆಗಡೆ,
ಶ್ರೀ ಮಠದ ಶ್ರೀಚರಣ ಸೇವಾಶಾಖೆಯ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು, ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್. ಹೆಗಡೆ,ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಶ್ರೀಧರ ಭಟ್,
ಶ್ರೀ ರಾಮಚಂದ್ರಾಪುರ ಮಠ ಹೊಸನಗರದ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಶ್ರೀ ಕುಮಾರ್ ಸಂಪೆಕಟ್ಟೆ ,
ಶ್ರೀ ರಾಮೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಶೇಖರ ಹೆಬ್ಬಾರ್ ಮುಂತಾದವರು ಶ್ರೀಗಳ ಸ್ವಾಗತ ಕೋರಿದರು..
Leave a Reply