ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಶ್ರೀ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿಸಮಾವೇಶದಲ್ಲಿ ಸಂತರಿಗೆ ಕರೆನೀಡಿದರು.

ಶ್ರೀ ಷ.ಬ್ರ ವಾಮದೇವ ಶ್ರೀಗಳು ಮಾತನಾಡಿ, ರಾಘವೇಶ್ವರ ಶ್ರೀಗಳು ಅವರ ಸಾಮಾಜಿಕ ಕಾರ್ಯಗಳಿಂದ ನಮಗೆ ಪರಿಚಿತರು , ಸಂತ ಸಮೂಹ ಶ್ರೀಗಳಿಗೆ ನೈತಿಕ ಬೆಂಬಲ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟರು.‍ ಗೋಕರ್ಣದ ಧರ್ಮರಕ್ಷಕ ಯತಿಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಇಂದು ಶ್ರೀ ರಾಘವೇಶ್ವರ ಶ್ರೀಗಳ ಮೇಲಾಗುತ್ತಿರುವ ಆಕ್ರಮಣ ನಾಳೆ ಬೇರೆಯ ಸಂತರ ಮೇಲೂ ಆಗಬಹುದು ಹಾಗಾಗಿ ನಾವು ಜಾಗೃತರಾಗಿ ಇಂತಹ ಆಕ್ರಮಣಗಳನ್ನು ಖಂಡಿಸುತ್ತೀವೆ ಎಂಬುದಾಗಿ ಸಂತಸಮೂಹದ ಪರವಾಗಿ ಹೇಳಿದರು. ಸಾನ್ನಿಧ್ಯ ವಹಿಸಿದ್ದ ಹಂಪಿ ಶಂಕರಾಚಾರ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಇಂದು ಧರ್ಮದ ಮೇಲೆ ಆಕ್ರಮಣವಾಗುತ್ತಿದ್ದು ಧರ್ಮ ರಕ್ಷಣೆಗೆ ನಾವು ಮುಂದಾಗಬೇಕೆಂದು ಆಶಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೇಲೆಯವರು,ಗೋವು-ಧರ್ಮ ಗ್ರಂಥ-ಸಂತರ ಮೇಲೆ ಆಕ್ರಮಣ ಖಂಡನೀಯ. ಗೋಮಾತೆಯ ಆಶೀರ್ವಾದದಿಂದಾಗಿ ಶ್ರೀ ರಾಘವೇಶ್ವರರಿಗೆ ಏನೂ ಆಗಿಲ್ಲ, ಆದರೆ ಇನ್ನುಮುಂದೆ ಯಾವುದೇ ಸಂತರ ಮೇಲೆ ಈರೀತಿಯ ಮಿಥ್ಯಾಪವಾದದ ಆಕ್ರಮಣ ಆಗದಂತೆ ಜಾಗೃತರಾಗಿ ಒಟ್ಟಗಬೇಕು ಎಂದರು.
ಮಾತೃಹೃದಯದ ಸಂತರನ್ನು ಯಾರೂ ನೋಯಿಸಬಾರದು, ಸಂತರ ಮೇಲೆ ಸುಳ್ಳು ಆರೋಪಹೊರಿಸುವುದು ಮಾತೃ ಕುಲಕ್ಕೆ ಮಾಡುವ ಅವಮಾನ. ಶ್ರೀರಾಮಚಂದ್ರಾಪುರ ಮಠಕ್ಕೆ ಅದರದ್ದೆ ಆದ ಪರಂಪರೆ ಇದೆ, ಪೀಠತ್ಯಾಗ ಎನ್ನುವುದು ಮಕ್ಕಳಾಟವಲ್ಲ ಎಂದ ಅವರು,ಧರ್ಮವನ್ನು ರಕ್ಷಿಸುತ್ತಿರುವ ಸಂತ ಶ್ರೀರಾಘವೇಶ್ವರರ ವಿರುದ್ದ ಧರ್ಮವನ್ನು ರಕ್ಷಿಸಬೇಕಾದ ಕೆಲವರು ಧರ್ಮ ವಿದ್ವಂಸಕ ಕಾರ್ಯಮಾಡುತ್ತಿರುವುದು ಶೋಚನೀಯ ಎಂದು ವಿಷದ ವ್ಯಕ್ತಪಡಿಸಿ, ಶ್ರೀಮಠದ ಮೇಲೆ ನೆಡೆಯುತ್ತಿರುವ ಬ್ಲಾಕ್ ಮೇಲ್ ಪ್ರರಕರಣದ ತನಿಖೆಗೆ ಸರ್ಕಾರವನ್ನು ಆಗ್ರಹಿಸಿದರು.

ಗೋಕರ್ಣದ ಧರ್ಮರಕ್ಷಕ ಯತಿಸಮಾವೇಶದಲ್ಲಿ ನಾಡಿನ ನಾನಾಭಾಗದ 200ಕ್ಕೂ ಹೆಚ್ಚು ಸಂತರು ಭಾಗವಹಿಸಿ ಸಭಾ ನಿರ್ಣಯವನ್ನು ಕೈಗೋಂಡರು.
ಸಂಚಾಲಕರಾದ ಪ್ರದೀಪ ನಾಯಕ್ ಅವರು ಸ್ವಾಗತ ಕೋರಿದರು, ಶ್ರೀ ಗಣೇಶ್ ಹಿರೆಗಂಗೆ ಅವರು ಸಭಾಪೂಜೆ ನೆರವೇರಿಸಿ, ಮುರಳೀದರ ಪ್ರಭುಅವರು ಪ್ರಾಸ್ಥಾವಿಕ ನುಡಿಯಲ್ಲಿ ಸಮಾವೇಶದ ಪ್ರಸ್ತುತತೆಯಬನ್ನು ತಿಳಿಸಿದರು.
ರಾಜ್ಯಾದ್ಯಂತ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು 5 ಸಾವಿರ ಜನರು ಈ ಬೃಹತ್ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾದರು.

Facebook Comments