ಪೆರಾಜೆ-ಮಾಣಿ ಮಠಃ12.8.2013, ಸೋಮವಾರ

ಇಂದಿನ ದಿನ ಶ್ರೀ ಬಿ ಜಿ ರಾಮ ಭಟ್ ಕುಟುಂಬದವರಿಂದ ಗುರುಭಿಕ್ಷಾಸೇವೆ  ನಡೆಯಿತು.  ಶ್ರೀಗುರುಗಳ ರಾಮಾದಿದೇವತೆಗಳ ಪೂಜೆಯ ನಂತರ ಮಾತೆಯರು ಕುಂಕುಮಾರ್ಚನೆ ನಡೆಸಿದರು.  ಬೈಕುಂಜ ಕುಟುಂಬದವರು ಶ್ರೀಗುರುಗಳಿಂದ ಅನುಗ್ರಹಮಂತ್ರಾಕ್ಷತೆ ಪಡೆದುಕೊಂಡರು. ಭಟ್ಕಳ ಶಾಸಕರಾದ ಮಾಂಕಾಳೆ ಎಸ್ ವೈದ್ಯ, ಶ್ರೀ ಮಠದ ಸರ್ವ ಪದಾಧಿಕಾರಿಗಳು, ಶಿಷ್ಯವರ್ಗ ಶ್ರೀಗುರುಗಳ ಆಶೀರ್ವಾದ ಪಡೆದರು.

ಯಾಗಶಾಲೆಯಿಂದ:
ಭಿಕ್ಷಾಂಗ ಆಂಜನೇಯ ಹವನ. ಮಹಾಗಣಪತಿ ಹೋಮ, ಮಹಾಗಣಪತಿ ಹವನ-ನವಗ್ರಹಶಾಂತಿ ಶುಕ್ರಾರ್ಕ ದಶಾ ಸಂಧಿಶಾಂತಿ, ಮಹಾಗಣಪತಿ ಹವನ- ನವಗ್ರಹಶಾಂತಿ ಕುಜರಾಹು ದಶಾ ಸಂಧಿಶಾಂತಿ, ವಟು ಆರಾಧನೆ ನಡೆಯಿತು.
ಪಾದಪೂಜೆ: ಶ್ರೀ ಕೆ ಎಸ್ ನರಸಿಂಹ ಭಟ್ ಕೋಡಿ, ಪೆರ್ನೆ
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥಾ:

ಇಂದಿನ ರಾಮಕಥೆ ಶ್ರೀಗುರುಗಳು ಶ್ರೀರಾಮಾದಿದೇವರುಗಳಿಗೆ ಹಾಗೂ ಹನುಮನಿಗೆ ಪುಷ್ಪನಮನ ಸಲ್ಲಿಸಿ ಪ್ರಾರಂಭಿಸಿದರು. ಇಂದಿನ ಪ್ರವಚನದಲ್ಲಿ ಗುರುಗಳು ಸುಗ್ರೀವನ ಅಣತಿಯಂತೆ ಬಂದು ಸೇರಿದ ಕಪಿವೀರರ ಪ್ರತ್ಯೇಕ ಪ್ರತ್ಯೇಕ ಪರಿಚಯ ನೀಡಿದರು. ಶ್ರೀರಾಮನ ಸೇವೆ ಮಾಡಲು ಬಂದ ಕಪಿಗಳ ಸಾಗರವನ್ನುದ್ದೇಶಿಸಿ  ಶ್ರೀರಾಮ,  ಸೀತೆಯನ್ನರಸಲು ಉತ್ತಮರನ್ನಾರಿಸಿ ದಿಕ್ಕುಗಳಿಗೆ ಕಳುಹಿಸುವ ಕಥಾನಕವನ್ನು ವಿವರವಾಗಿ ನಡೆಸಿದರು. ನಂತರ ಶ್ರೀ ಶಂಕರನಾರಾಯಣ ಕೊರ್ಗಿಯವರ ನಿರ್ದೇಶನದಲ್ಲಿ ರೂಪಕವನ್ನು ಕಲಾವಿದರು ಪ್ರಸ್ತುತಪಡಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ವಿರಾಮ ಪಡೆಯಿತು. ಇಂದಿನ ದಿನದ ರಾಮಕಥೆಯನ್ನು ಪ್ರಾಯೋಜಿಸಿದವರು ಶ್ರೀ ಕೆ ಸುಬ್ರಹ್ಮಣ್ಯ ಪ್ರಭು ಸುರತ್ಕಲ್.

~

Facebook Comments