ಶ್ರೀ ಗಳು ಪ್ರಾತಃ ಪೂಜೆಯನ್ನು ಕೊಲ್ಲಾಪುರದ H V ಭಾಸ್ಕರ್ ರವರ ಮನೆಯಲ್ಲಿ ಪೂರೈಸಿ,
ಅಲ್ಲಿಂದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದರು ಅಲ್ಲಿ ಮಹಾಲಕ್ಷ್ಮಿಯ ದರ್ಶನ ಪಡೆದು ತಾಯಿಯ ಪಾದಾರವಿಂದಗಳಿಗೆ ನಮಸ್ಕರಿಸಿದರು..
ಅಲ್ಲಿಂದ ಕೊಲ್ಲಾಪುರದಲ್ಲಿರುವ ಕರವೀರ ಶಂಕರ ಪೀಠಕ್ಕೆ ಭೇಟಿ ನೀಡಿ ಸ್ವಾಮಿಗಳೊಂದಿಗೆ ಅಲ್ಲಿಯ ಗೋ ಶಾಲೆ ವೀಕ್ಷಿಸಿದರು..
ತದನ೦ತರ H V ಭಾಸ್ಕರ್ ರವರ ಫ್ಯಾಕ್ಟರಿ ಗೆ ಭೇಟಿ ನೀಡಿ ಅದರ ಕಾರ್ಯ ವೈಖರಿ ವೀಕ್ಷಿಸಿದರು..
ಅಲ್ಲಿಂದ ಹೊರಟು ಆಟಪಾಡಿಯ ರಾಜೇಂದ್ರ ಅಣ್ಣಾ ದೇಶಮುಖ್ ರವರ ಮನೆಗೆ ಭೇಟಿ ನೀಡಿದರು..
ಸಂಜೆ ಪಂಡರಾಪುರದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯ ಕ್ರಮದಲ್ಲಿ ಭಾಗವಹಿಸಿದರು.. ಕಾರ್ಯಕ್ರಮದಲ್ಲಿ ರಾಮ್ ಬಾಲಕ ದಾಸ್ ಜಿ ,ಹುಕುಮ್ಚಂದ್ ಸಾವ್ಲಾ, ಶಂಕರಲಾಲ್ ಜೈನ್ ಮುಂತಾದವರು ಭಾಗವಹಿಸಿದ್ದರು..
ಪಂಡರಾಪುರ ದಲ್ಲಿ ಪಂಡರಿನಾಥನೇ ಗೋವಿನ ರೂಪದಲ್ಲಿ ತಿರುಗಾಡುತ್ತಿದ್ದಾನೆ.. ನಮ್ಮ ಗೋವು ನಮ್ಮ ಗ್ರಾಮವನ್ನು ನಮ್ಮದಾಗಿ ಉಳಿಸಿಕೊಳ್ಳೋಣ ..ಇನ್ನಾದರೂ ಗೋ ರಕ್ಷಣೆಗೆ ಗ್ರಾಮ ರಕ್ಷಣೆಗೆ ಮುಂದಾಗೋಣ ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಕರೆ ನೀಡಿದರು..

Facebook Comments Box