ಪೆರಾಜೆ-ಮಾಣಿ ಮಠಃ 15.9.2013, ಆದಿತ್ಯವಾರ

ಇಂದು ಏಕಾದಶೀ. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಇಂದು “ಒಪ್ಪಣ್ಣ ಸಮಾವೇಶ”(ಯುವ ಸಮಾವೇಶ).
ಭಾಗವಹಿಸಿದ ಒಟ್ಟು ಒಪ್ಪಣ್ಣಂದಿರ ಸಂಖ್ಯೆ 556. ಮಂಡಲವಾರು ಭಾಗವಹಿಸಿದವರ ವಿವರ-
ಉಪ್ಪಿನಂಗಡಿ ಮಂಡಲ- 214, ಮಂಗಳೂರು ಮಂಡಲ- 141, ಮುಳ್ಳೇರಿಯಾ ಮಂಡಲ- 128,  ರಾಮಚಂದ್ರಾಪುರ  ಮಂಡಲ-  51, ಇತರ ಮಂಡಲಗಳಿಂದ-  22.
ಶ್ರೀಗುರುಗಳ ಅನುಗ್ರಹಪೂರಕ ಮಾರ್ಗದರ್ಶನದ ಧಾರೆಯಲ್ಲಿ ನಮ್ಮ ಹುಡುಗರು ಹಲವು ಮಾಹಿತಿಗಳನ್ನು ಪಡೆದು ಕೊಂಡರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಇಂದಿನ ಪುಣ್ಯ ದಿನ ಗೋಲೋಕಕ್ಕೆ ಹೊಸ ಜೀವದಾನ ಮಾಡಿ ನಮ್ಮ ಕಣ್ಮರೆಯಾದ ಶ್ರೀರಾಮಚಂದ್ರಾಪುರ ಮಠದ ಮುಕುಟಮಣಿ ಮಹಾನಂದಿಯ ನೆನಪಿಗಾಗಿ “ಗೋರಾಷ್ಟ್ರದ ಅನಭಿಷಿಕ್ತ ಸಾಮ್ರಾಟ ಮಹಾನಂದಿ” ಎಂಬ ಮಹಾನಂದಿಯ ಜೀವನದಾರಿಯ ಒಂದು ಪುಸ್ತಕ ಶ್ರೀಗುರುಗಳಿಂದ ಲೋಕಾರ್ಪಣಗೊಂಡಿತು. ಲಕ್ಷ್ಮೀ ಭಟ್ ಕಿರುತೆರೆ ಕಲಾವಿದೆ, ಶ್ರೀ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ, ಒಪ್ಪಣ್ಣಂದಿರು, ಶ್ರೀಮಠದ ಶಿಷ್ಯರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯನಿಗೆ ಅಕ್ಕಿ ಕಣಜ, ಕಾರ್ತವೀರ್ಯಾರ್ಜುನ ಹವನ, ಗಣಪತಿ ಹವನ ಕುಜರಾಹುದಶಾ ಸಂಧಿ ಶಾಂತಿ, ವೇದಮಂತ್ರ ಜಪ, ಭಾಗವತ ಪಾರಾಯಣ, ಕನ್ಯಾಸಂಸ್ಕಾರ ಪಂಚಗವ್ಯ ಹವನ, ಗುರುಪರಂಪರಾಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಸಾಯಂಕಾಲ ಸತ್ಯನಾರಾಯಣಪೂಜೆ, ದುರ್ಗಾಪೂಜೆಗಳು ನಡೆದವು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Facebook Comments