ಪೆರಾಜೆ-ಮಾಣಿ ಮಠಃ 18.9.2013, ಬುಧವಾರ

ಇಂದು ಬೆಂಗಳೂರು ಮಂಡಲಾಂತರ್ಗತ ಬನಶಂಕರಿ, ಗಿರಿನಗರ, ರಾಜರಾಜೇಶ್ವರೀ, ವಿಜಯನಗರ ಹಾಗೂ ಸರ್ವಧಾರೀ ವಲಯಗಳ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಈಶ್ವರ ಕೃಷ್ಣ ಭಟ್ಟ ವಲಯಗಳ ಪರವಾಗಿ ಭಿಕ್ಷಾಕಾರ್ಯ ನೆರವೇರಿಸಿದರು. ಶ್ರೀ ಆರ್ ಎಸ್ ಅಗರ್ವಾಲ್, ಶ್ರೀಮತಿ ಉಷಾ ಅಗರ್ವಾಲ್, ಶ್ರೀ ರಾಧೇಶ್ಯಾಂ ಗೋಯೆಂಕಾ, ಶ್ರೀ ಮೊಯ್ದೀನ್ ಬಾವ ಶಾಸಕರು ಸುರತ್ಕಲ್, ಶ್ರೀ ಬಾಲಕೃಷ್ಣ ಶೆಟ್ಟಿ ಬೆಳ್ತಂಗಡಿ, ಶ್ರೀ ಎಮ್ ಎನ್ ಮದ್ಗುಣಿ, ಶ್ರೀ ವಾಸುದೇವ ಹೆಬ್ಬಾರ್, ಶ್ರೀ ರಘುರಾಮ ಆಳ್ವ ಪಳ್ಳತ್ತಡ್ಕ, ಶ್ರೀ ರಿಚಾರ್ಡ್ ಲಸ್ರಾಡೋ, ಶ್ರೀ ಶರತ್ ಆಳ್ವ ಪುತ್ತೂರು, ಶ್ರೀ ಎಸ್ ಕೆ ಆನಂದ, ಶ್ರೀಮತಿ ಪ್ರಭಾವತಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಃ

ಭಿಕ್ಷಾಂಗ ಆಂಜನೇಯ ಹವನ, ಗಣಪತಿ ಹವನ, ರಾಮತಾರಕ ಹವನ, ವಿದ್ಯಾಗಣಪತಿ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯನಿಗೆ ಅಕ್ಕಿ ಕಣಜ, ಶ್ರೀರಾಮ ಪೂಜೆ, ಶ್ರೀರಾಮತಾರಜ ಯಜ್ಞ, ಗೋಪೂಜೆ, ಸುವಸ್ತುಗಳಿಂದ ಗೋತುಲಾಭಾರಗಳು ನಡೆದವು. ರಾತ್ರಿಗೆ ಆಂಜನೇಯನಿಗೆ ರಂಗಪೂಜೆ, ಮಹಾದೀಪೋತ್ಸವ ನಡೆಯಿತು.

ಪಾದಪೂಜೆಃ ಶ್ರೀ ಅಮೈ ಈಶ್ವರ ಭಟ್ಟ ಸರ್ವಧಾರೀ, ಡಾ ಗೋಪಿನಾಥ ಬಿ ಕೆ ಬನಶಂಕರಿ, ಶ್ರೀ ಶಿವರಾಮ ಭಟ್ಟ ಗಿರಿನಗರ, ಶ್ರೀ ವಿ ಎನ್ ಗಣಪತಿ ಭಟ್ಟ ಬೆಂಗಳೂರು

~

ಸಾಂಸ್ಕೃತಿಕ ಕಾರ್ಯಕ್ರಮಃ

ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ತಂಡ ಇಡಗುಂಜಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Facebook Comments