ಪೆರಾಜೆ-ಮಾಣಿ ಮಠಃ 2.9.2013, ಸೋಮವಾರ

ಇಂದು ಶ್ರೀರಾಮ ಕೆ ಟಿ ಬೆಂಗಳೂರು ಮತ್ತು ಕುಟುಂಬದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮದೇವರ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.  ಕೊಣಿಲ ಕುಟುಂಬದವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ಶ್ರೀವಿಷ್ಣುದೇವಾನಂದ ಸ್ವಾಮಿ ಉತ್ತರಾಖಂಡ, ಶ್ರೀ ಮಹಾಬಲೇಶ್ವರ ಭಟ್ ಮುಖ್ಯ ಪ್ರಭಂಧಕ ಕರ್ನಾಟಕ ಬ್ಯಾಂಕ್, ಆರ್ ಕೆ ಶರ್ಮಾ ಕೋಲ್ಕೊತ್ತಾ ಇವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ. ಸೇವಾರ್ಥ ಆಂಜನೇಯ ಹವನ, ರುದ್ರಹೋಮ, ಕಾಲಮೃತ್ಯುಂಜಯ ಶಾಂತಿ ಹವನ, ಮೃತ್ಯುಂಜಯ ಹವನ, ಮೃತ್ಯುಂಜಯ ತ್ರ್ಯಂಬಕ ಗಣಪತಿ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮಪೂಜೆ, ಶ್ರೀರಾಮತಾರಕಹವನ, ಗೋಪೂಜೆಗಳು ನಡೆದವು.

ಪಾದಪೂಜೆಃ ಶ್ರೀ ಕೇಶವಪ್ರಸಾದ ಬಡೆಕ್ಕಿಲ ಕೆದಿಲ, ಶ್ರೀ ಜಯರಾಮ ಭಟ್ಟ ತಂಬಿಲಕೋಡಿ, ಶ್ರೀ ಈಶ್ವರ ಭಟ್ಟ ಮೋಂತಿಮಾರು, ಶ್ರೀ ಚಂದ್ರಶೇಖರ ಭಟ್ಟ ಬೆಂಗಳೂರು

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಮೂರನೇ ಹಂತದ ಎರಡನೆಯ ದಿನದ ರಾಮಕಥೆಯನ್ನು ಶ್ರೀಗುರುಗಳು ಶ್ರೀರಾಮನಿಗೆ, ಹನುಮನಿಗೆ ಪುಷ್ಪನಮನ ಸಲ್ಲಿಸಿ ಪ್ರಾರಂಭಿಸಿದರು. ಇಂದಿನ ಪ್ರವಚನದಲ್ಲಿ  ಮೈನಾಕನ ಕಥೆಯಿಂದ ಕಥಾನಕವನ್ನು ಪ್ರಾರಂಭಿಸಿ, ಒಳ್ಳೆ ಗುಣಗಳಿದ್ದರೆ ಬದುಕಿಗೆ ಅಲಂಕಾರ. ಎರಡು ಗುಣಗಳು- ಒಂದು ಋಣಪ್ರಜ್ಞೆ, ಇನ್ನೊಂದು ಆತಿಥ್ಯ. ತಾನು ಪಡ್ಕೊಂದದ್ದು ಕೊಡು. ಕೊಡುವಾಗ ತೆಕ್ಕೊಂಡದ್ದರಿಂದ ಇನ್ನೂ ಹೆಚ್ಚು ಕೊಡು. ಮೈನಾಕ ಹನುಮನಿಗೆ ತನ್ನ ಋಣ ತೀರಿಸುವ ಹಾಗೂ ಆತಿಥ್ಯದ ಅವಕಾಶ ಕೊಡಲು ವಿಜ್ಞಾಪಿಸಿದ. ಆದರೆ ರಾಮಕಾರ್ಯದಲ್ಲಿ ಹೋಗಿ ಬರುವ ಸಮಯದಲಿ ಬರುವ ಮಾತು ಕೊಡುತ್ತಾನೆ ಹನುಮ. ಮೈನಾಕನಿಂದ ನಂತರ ಸಮುದ್ರದಲ್ಲಿ ಸಿಕ್ಕಿದುದು ನಾಗಮಾತೆ ಸುರಸೆ. ದೊಡ್ಡ ಗುಹೆಯಂತೆ ಬಾಯಿ ತೆರೆದ ವಿಚಿತ್ರಾಕಾರವನ್ನು ಕಂಡ ಹನುಮ ಚಕಿತನಾದ. ತನ್ನ ಬಾಯೊಳಗೆ ಬರುವಂತೆ ಸುರಸೆ ಹೇಳುವಾಗ ಹನುಮಂತನಿಗೆ ಆಕೆಯ ಗುರುತು ಸಿಕ್ಕಿ, ಆಕೆಯ ಬಳಿ ಹೇಳುತ್ತಾನೆ. ತಾನು ರಾಮಕಾರ್ಯಕ್ಕಾಗಿ ಹೋಗುತ್ತಿರುವುದಾಗಿ ತಿಳಿಸಿದರೂ ತನ್ನ ಬಾಯನ್ನು ದೀರ್ಘವಾಗಿ ತೆರೆದ ಸುರಸೆಯ ಬಾಯನ್ನು ಕ್ಷಣಾರ್ಧದಲ್ಲಿ ಹೊಕ್ಕು ಹೊರ ಬಂದ ಹನುಮ! ಇಂದಿನ  ಕಥಾನಕವನ್ನು  ರಾಮಕಥಾ  ಕಲಾವಿದರು  ರೂಪಕದಲ್ಲಿ  ಪ್ರಸ್ತುತ  ಪಡಿಸಿದರು.  ಜೈ  ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ವಿರಾಮಪಡೆಯಿತು.  ಇಂದಿನ ರಾಮಕಥೆಯ  ಪ್ರಾಯೋಜಕರು  ಕರ್ನಾಟಕ  ಬ್ಯಾಂಕ್,  ಸಹಪ್ರಾಯೋಜಕರು   ವಕೀಲರ ಸಂಘ ಪುತ್ತೂರು, ಗೌರವ ಪ್ರಾಯೋಜಕರು ಶ್ರೀ ನಾರಾಯಣ ಭಟ್ ಅಗತ್ತಡಿ.

~

Facebook Comments