ಪೆರಾಜೆ-ಮಾಣಿ ಮಠಃ21.8.2013, ಬುಧವಾರ
ಇಂದು ಕುಮಟಾ ಮಂಡಲದ ಕೆಕ್ಕಾರು, ಧಾರೇಶ್ವರ, ಗುಡೆಯಂಗಡಿ, ಚಂದಾವರ ವಲಯದವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀರಾಮದೇವರ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಕುಮಟಾ ವಲಯದವರ ಪರವಾಗಿ ಶ್ರೀಪಾದ ನಾರಾಯಣ ಹೆಗಡೆ ಹೊಲನಗದ್ದೆ ನೇತೃತ್ವ ವಹಿಸಿದ್ದರು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಎದುರು ಇಡಲಾಯಿತು. ಡಾ. ಶ್ವೇತಾ ವಿ ಮತ್ತು ಮಾಣಿ ಪ್ರಾಥಮಿಕ ಆರೋಗ್ಯಕೇಂದ್ರದ ಸಿಬ್ಬಂದಿಗಳು ಶ್ರೀಗುರುಗಳ ಆಶೀರ್ವಾದ ಪಡೆದರು.
~
ಯಾಗಶಾಲೆಯಿಂದಃ
ಭಿಕ್ಷಾಂಗ ಆಂಜನೇಯ ಹವನ, ವಟುಕಭೈರವ ಹವನ, ಧನ್ವಂತರಿ ಹವನ, ಧನ್ವಂತರಿ ಕಲ್ಪೋಕ್ತ ಹವನ, ಧನ್ವಂತರಿ ವ್ರತ, ಸುಂದರಕಾಂಡ ಪಾರಾಯಣ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.
ಪಾದಪೂಜೆಃ ಶ್ರೀ ಜೈರಾಮ ಗಣಪತಿ ಭಟ್ಟ ಧಾರೇಶ್ವರ, ಶ್ರೀ ಗಣಪತಿ ಗಜಾನನ ಹೆಗಡೆ ಗುಡೆಯಂಗಡಿ, ಶ್ರೀ ಗೋಪಾಲಕೃಷ್ಣ ರಾಮ ಭಟ್ಟ ನವಿಲಗೋಣ
~
ಸಾಂಸ್ಕೃತಿಕ ಕಾರ್ಯಕ್ರಮಃ
ಇಂದು ಖ್ಯಾತ ಭಾಗವತರ ಕೂಡುವಿಕೆಯಿಂದ ಯಕ್ಷರಸಾಯನ ಕಾರ್ಯಕ್ರಮ ನಡೆಯಿತು. ಶ್ರೀ ಪುತ್ತೂರು ರಮೇಶ್ ಭಟ್, ಶ್ರೀ ಉಂಡೆಮನೆ ಕೃಷ್ಣ ಭಟ್ ಮತ್ತು ಶ್ರೀ ಪ್ರಫುಲ್ಲ ಯಕ್ಷಗಾನದ ಹಾಡುಗಳನ್ನು ಹಾಡಿದರು. ಮೃದಂಗದಲ್ಲಿ ಶ್ರೀ ವಧ್ವ ರಾಮಪ್ರಸಾದ್, ಚೆಂಡೆ ಶ್ರೀ ಜಗನ್ನಿವಾಸ ರಾವ್ ಪಿ ಜಿ. ಶ್ರೀ ಶಿವರಾಮ ಕಜೆ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಿಸಿದವರು ಡಾ. ಗೋವಿಂದಪ್ರಸಾದ್ ಕಜೆ.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.
~*~
Leave a Reply