ನೀರ್ಚಾಲು, ಕಾಸರಗೋಡು:
ಇಲ್ಲಿನ “ಮಹಾಜನ ಸಂಸ್ಕೃತ ಕೋಲೇಜು ಹೈಸ್ಕೂಲು” ಇದರ ಶತಮಾನೋತ್ಸವ ಕಾರ್ಯಕ್ರಮವು ಡಿಸೆಂಬರ್ 21, 2013 ರಿಂದ 23ರ ವರೆಗೆ ನಡೆಯಲಿದೆ.
21 ಕ್ಕೆ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ಅವರಿಂದ ಉದ್ಘಾಟನೆಗೊಂಡು ನಡೆಯುತ್ತಿರುವ ಕಾರ್ಯಕ್ರಮಗಳು ದಿನಾಂಕ 23ರಂದು ಪರಿಸಮಾಪ್ತಿಗೊಳ್ಳಲಿದೆ.

Nirchal-SriSri

23 ಕ್ಕೆ ನಡೆಯುವ “ಸಮಾರೋಪ ಸಮಾರಂಭ” ಸಭಾಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ತೈಸಲಿದ್ದಾರೆ;
ಮಲೆಯಾಳಂ ಚಿತ್ರನಟಿ ಕಾವ್ಯಾ ಮಾಧವನ್ ಸೇರಿದಂತೆ ಹಲವು ಸಮಾಜಪ್ರಮುಖರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು:

Facebook Comments