ಪೆರಾಜೆ-ಮಾಣಿ ಮಠಃ 24.8.2013, ಶನಿವಾರ
ಇಂದು ಶ್ರೀಮತಿ ಸರ್ಪಂಗಳ ಗಂಗಮ್ಮ ಮತ್ತು ಮಕ್ಕಳು ಗುರುಭಿಕ್ಷಾಸೇವೆ ನಡೆಸಿದರು. ಶ್ರೀಗುರುಗಳ ರಾಮಾದಿ ಪೂಜೆಗಳ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಸರ್ಪಂಗಳ ಕುಟುಂಬದವರು, ಶ್ರೀ ಎಸ್ ವೆಂಕಟೇಶ ರೆಡ್ಡಿ ಬೆಂಗಳೂರು, ಶ್ರೀ ಎಮ್ ರಾಮಮೂರ್ತಿ ಬೆಂಗಳೂರು ಶ್ರೀಗುರುಗಳಿಂದ ಆಶೀರ್ವಾದವನ್ನು ಪಡೆದರು.
~
ಯಾಗಶಾಲೆಯಿಂದಃ
ಗಣಪತಿ ಅಥರ್ವ ಶೀರ್ಷಹೋಮ, ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಶನಿಪೂಜೆ ನವಗ್ರಹ ಶಾಂತಿ ಶನಿಶಾಂತಿ, ನವಗ್ರಹ ಶಾಂತಿ ಪಂಚಮಾರಿಷ್ಠ ಶಾಂತಿ ಅನ್ನ ಪ್ರಾಶನ, ತ್ರಿಕಾಲ ಪೂಜೆ, ಶ್ರೀರಾಮ ಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಆಂಜನೇಯನಿಗೆ ಸೀಯಾಳಾಭಿಷೇಕಗಳು ನಡೆದವು.
ಪಾದಪೂಜೆಃಶ್ರೀ ರಾಮಚಂದ್ರ ಭಟ್ ಕೆಮ್ಮಾಯಿ, ಶ್ರೀ ಮಂಜುನಾಥ ವೆಂಕಟರಮಣ ಹೆಗಡೆ ಹೊನ್ನಾವರ, ಶ್ರೀ ಪೆದಮಲೆ ನಾಗರಾಜ ಭಟ್ ಕಟ್ಟೆಮಾರು ಮುಡಿಪು, ಶ್ರೀ ನಾರಾಯಣ ಮಧ್ಯಸ್ಥ ಪಾಲಕ್ಕಾಡ್ ಕೇರಳ, ಶ್ರೀ ಗೋಪಾಲಕೃಷ್ಣ ಬಿ ಅಡ್ಯನಡ್ಕ
~
ಸಾಂಸ್ಕೃತಿಕ ಕಾರ್ಯಕ್ರಮಃ
ಶ್ರೀಗಾನ ಭಾರತೀ ಸಂಗೀತ ಶಾಲೆ ಉರುವಾಲು ಇಲ್ಲಿನ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ, ವಿದುಷಿ ಸ್ವರ್ಣಾ ಎನ್ ಭಟ್ ಇವರಿಂದ ಕರ್ನಾಟಕ ಸಂಗೀತ ಹಾಗೂ ರಾಷ್ಟ್ರೀಯ ರತ್ನ ಪುರಸ್ಕೃತ ನೃತ್ಯಗುರು ಶ್ರೀ ದೀಪಕ್ ಕುಮಾರ್ ರ ನಿರ್ದೇಶನದ ಶ್ರೀ ಮೂಕಾಂಬಿಕಾ ಕಲ್ಚರಲ್ ಎಕಾಡಮಿ ಪುತ್ತೂರು ಇಲ್ಲಿಯ ವಿದ್ಯಾರ್ಥಿಗಳಿಂದ ನೃತ್ಯಪ್ರದರ್ಶನ ನಡೆಯಿತು.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.
~*~
Leave a Reply