ಪೆರಾಜೆ-ಮಾಣಿ ಮಠಃ 28.7.2013, ಆದಿತ್ಯವಾರ

ಚಾತುರ್ಮಾಸ್ಯದ ಈ ಸುದಿನದಂದು ಶ್ರೀರಾಮಾದಿ ದೇವತೆಗಳ ಪೂಜೆಯ ನಂತರ ಶ್ರೀಗಳು ಶ್ರೀಮಠದ ಆವರಣದಲ್ಲಿರುವ ಆಂಜನೇಯ ಸ್ವಾಮಿಗೆ ವಡೆ ಕಣಜ ಮಾಡಿ ವಿಶೇಷ ಪೂಜೆಗೈದರು. ಅಷ್ಟಾವದನ ಸಹಿತವಾಗಿ ಭವ್ಯ ಪೂಜೆ ನೆರವೇರಿತು. ಶ್ರೀಮಠದ ಶಿಷ್ಯರು ಈ ಪುಣ್ಯಸೇವೆಯನ್ನು ಕಣ್ತುಂಬಿಕೊಂಡರು.
ಎಂದಿನಂತೆ ಮಹಿಳೆಯರು ಕುಂಕುಮಾರ್ಚನೆ ಸೇವೆ ಸಲ್ಲಿಸಿದರು.
ಇಂದಿನ ಭಿಕ್ಷಾಕರ್ತೃಗಳಾದ ಚೆನ್ನೈ ವಲಯದ ಭಕ್ತಬಂದುಗಳು ವಲಯದ ವರದಿಯನ್ನು ಶ್ರೀಸನ್ನಿದಾನಕ್ಕೊಪ್ಪಿಸಿ ಶ್ರೀಗಳಿಂದ ಅಶೀರ್ವಾದ ಪಡೆದರು. ಮಹಾಸಭೆಯಲ್ಲಿ ಶ್ರೀ ಪ್ರಕಾಶ ಸೇಠ್ ಮಂಗಳೂರು, ಶ್ರೀ ಮಾಂಕಾಳೆ ಎಸ್ ವೈದ್ಯ ಎಮ್ ಎಲ್ ಎ ಭಟ್ಕಳ, ಗಜಾನನ ಹೆಗಡೆ ಬೆಂಗಳೂರು, ಎಸ್ ಜಿ ಹೆಗಡೆ ಸಾಗರ ಮತ್ತು ಮಠದ ಶಿಷ್ಯವರ್ಗ ಹಾಜರಿದ್ದರು.

ಯಾಗಶಾಲೆಯಿಂದಃ

ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕ ನಡೆದು, ಹನುಮನಿಗೆ ವಿಶೇಷವಾಗಿ “ವಡೆಕಣಜ”  ಸೇವೆ ಸಲ್ಲಿಸಲಾಯಿತು.  ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ ನಡೆಯಿತು.

ಸೂಃ ರಾಮತಾರಕ ಜಪವನ್ನು ಮಾಡಿ ಯಜ್ಞವೇದಿಕೆಯ ಬಳಿಯ ಕಾರ್ಯಾಲಯದಲ್ಲಿ ಸಂಖ್ಯಾನೋಂದಣಿ ಮಾಡಬೇಕೆಂದು ಯಾಗಶಾಲೆಯ ಸಮಿತಿಯಿಂದ ಹೇಳಿಕೆ ಕೊಟ್ಟಿರುತ್ತಾರೆ.
(ಒಂದು ಕಡೆ ಕುಳಿತು ಮಾಡಿದ ಜಪದ ಸಂಖ್ಯೆಗಳನ್ನಷ್ಟೇ ಕೊಡಬೇಕು)

ಪಾದಪೂಜೆ:
ವೈಯಕ್ತಿಕ: ನರಸಿಂಹ ಹೆಗಡೆ, ಬೈಪದವು ಕೃಷ್ಣ ಭಟ್, ಎಮ್ ಈಶ್ವರ ಭಟ್

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಚಾತುರ್ಮಾಸದ ಎಂಟನೇ ದಿನವಾದ ಇಂದು ಮೊದಲ ಕಂತಿನ ರಾಮಕಥೆಯ ಶುಭಾರಂಭವಾಯಿತು. ಅದ್ದೂರಿ ಮೆರವಣಿಗೆಯೊಂದಿಗೆ ಶ್ರೀರಾಮದೇವರನ್ನು ಸಭೆಗೆ ಕರೆತಂದು ಪೂಜೆ-ಪುಷ್ಪಾರ್ಚನೆಗಳನ್ನು ಸಲ್ಲಿಸುವ ಮೂಲಕ ರಾಮಕಥೆ ಆರಂಭಗೊಂಡಿತು. ಆಂಜನೇಯನ ಜನ್ಮದ ಪೂರ್ವಕಥೆ, ಕೇಸರಿ – ಅಂಜನೆಯರ ವರ್ಣನೆ, ಆಂಜನೇಯನ ಜನನದ ಕಥೆ ಸೇರಿದ್ದ ಸಾವಿರಾರು ಜನರ ಹೃನ್ಮನ ಸೆಳೆಯಿತು.
ಅದೇ ಕಥೆ ಆಧಾರಿತವಾಗಿರುವ ಗೀತ ನೃತ್ಯಗಳು, ಪಕ್ಕವಾದ್ಯಗಳು , ಚಿತ್ರಗಳು ಅಧ್ಬುತವಾಗಿ ಮೂಡಿಬಂದವು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಸಮಾಪನಗೊಂಡಿತು.
ಇಂದಿನ ರಾಮಕಥೆಯನ್ನು ಚೆನ್ನೈ ವಲಯದ ವತಿಯಿಂದ ನಡೆಸಲಾಯಿತು. ಶ್ರೀ ಎ. ಗೋವಿಂದ ಭಟ್ಟ ಉಪ್ಪಿನಂಗಡಿ ಸಹಪ್ರಾಯೋಜಕತ್ವ ವಹಿಸಿದ್ದರು.

~

Facebook Comments Box