ಪೆರಾಜೆ-ಮಾಣಿ ಮಠಃ 30.7.2013, ಮಂಗಳವಾರ

ವಿಜಯ ಚಾತುರ್ಮಾಸ್ಯದ ಈ ದಿನ ಡಾ. ರಾಧಾಕೃಷ್ಣ ಡಿ ಎಸ್ ಕೆದುಂಬಾಡಿಯವರ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀರಾಮಾದಿಗಳ ಪೂಜೆಗಳ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಈ ದಿನದ ಸಭೆಯಲ್ಲಿ ಗಿರೀಶ್ ಭಾರಧ್ವಾಜ್, ರವಿಶಂಕರ್ ಭಾರಧ್ವಾಜ್ ಸುಳ್ಯ, ಕೆದುಂಬಾಡಿ ಮನೆಯವರು, ಡಾ. ಜಯಗೋವಿಂದ ಬೆಂಗಳೂರು, ಡಿ. ಹೆಚ್ ಪ್ರಕಾಶ್ ರೈ ಪಾಣೆಮಂಗಳೂರು ಹಾಗೂ ಶ್ರೀಮಠದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಾಗಶಾಲೆಯಿಂದಃ

ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕವಾಗಿ ನಂತರ ಮುಸುಂಬಿ ಕಣಜ ಸೇವೆ ನಡೆಯಿತು. ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ ನಡೆಯಿತು.
ಪಾದಪೂಜೆ:
ಪದ್ಯಾಣ ಶಂಕರನಾರಾಯಣ ಭಟ್

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ
ರಾಮಕಥೆಯ ಮೂರನೇ ದಿನವಾದ ಇಂದು ವಾಲಿ-ಸುಗ್ರೀವರ ಜನ್ಮ, ತಪಸ್ಸಿನ ಫಲವಾಗಿ ವಾಲಿಗೆ ಸೂರ್ಯನಿಂದ ಕಾಂಚನಮಾಲೆ ದೊರಕಿದ್ದು, ಸುಗ್ರೀವನಿಗೆ ಮುಂದೆ ರಾಮಕಾರ್ಯದಲ್ಲಿ  ಆಂಜನೇಯ ಸಿಗುವ ಭರವಸೆ ಹಾಗೂ ಆಂಜನೇಯನಿಗೆ ಪೂರ್ಣ ಸಹಕಾರವನ್ನು ನೀಡಬೇಕೆಂಬ ವರದಾನದ ಕಥಾನಕವನ್ನು ಆದ್ಯಂತವಾಗಿ ವಿವರಿಸಿದರು. ಜೈಜೈ ರಾಮಕಥಾದೊಂದಿಗೆ ಈ ದಿನದ ರಾಮಕಥೆ ಸಮಾಪನಗೊಂಡಿತು. ಈ ದಿನದ ರಾಮಕಥೆಯನ್ನು ಶ್ರೀ ಬಂಗಾರಡ್ಕ ಜನಾರ್ಧನ ಭಟ್, ಚಾತುರ್ಮಾಸ್ಯ ಸೇವಾ ಸಮಿತಿ ವಹಿಸಿದ್ದರು, ಕೆ. ಗೋವಿಂದ ಭಟ್ ರಾಮಕಥೆಯ ಸಹಭಾಗಿತ್ವ ವಹಿಸಿದ್ದರು.

~

Facebook Comments