ಪೆರಾಜೆ-ಮಾಣಿ ವಲಯಃ31.8.2013, ಶನಿವಾರ

ಇಂದು ಸಿದ್ಧಾಪುರ ಮಂಡಲದ ಭಾನ್ಕುಳಿ, ತಾಳಗುಪ್ಪ-ಇಡ್ವಾಣಿ, ಹರೀಶಿ ಮಂಗಳೂರು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯಸಭೆಯಲ್ಲಿ ಮೂರೂ ವಲಯಗಳ ವಿಚಾರಗಳನ್ನು ಶ್ರೀಪೀಠದ ಮುಂದಿಟ್ಟರು. ಶ್ರೀಗುರುಗಳು ನೆರೆದಿದ್ದ ಶಿಷ್ಯರಿಗೆ ಮಾರ್ಗದರ್ಶನವಿತ್ತರು. ಶ್ರೀ ಸಾಜ ರಾಧಾಕೃಷ್ಣ ಆಳ್ವ, ಶ್ರೀ ಅಪ್ಪಯ್ಯ ಮಣಿಯಾಣಿ, ಶ್ರೀ ಗೋಪಾಲಕೃಷ್ಣ ಹೇರಳೆ, ಚಂದ್ರ ರಾವ್, ನೀನಾಕ್ಷೀ ಮಂಜುನಾಥ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನಗಳು(೪), ಧಾರಣಾಸರಸ್ವತೀಹವನ, ಗಣಪತಿ ಹವನ ಸಹಿತ ನವಗ್ರಹ ಶಾಂತಿ ಪಂಚಮಾರಿಷ್ಟ ಶಾಂತಿ ಏಕನಕ್ಷತ್ರ ಜನನ ಶಾಂತಿ, ರಾಮಾಯಣ ಪಾರಾಯಣ, ಗಣಪತಿ ಹವನ ಸೀತಾ ಹವನ ರಾಮತಾರಕ ಹವನ, ಆಂಜನೇಯ ಹವನ, ಗಣಪತಿ ಹವನ ಕುಂಭಾ ವಿವಾಹ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಗೋತುಲಾಭಾರಗಳು ನಡೆದವು.

ಪಾದಪೂಜೆಃ ಶ್ರೀ ಮಂಜುನಾಥ ಮಧುಕೇಶ್ವರ ಹೆಗಡೆ ಹರೀಶಿ, ಶ್ರೀ ಗಣಪತಿ ವೆಂಕಟರಮಣ ಹೆಗಡೆ ತಾಳಗುಪ್ಪ

~

ಸಾಂಸ್ಕೃತಿಕ ಕಾರ್ಯಕ್ರಮಃ

ಕು. ನಿಶಿತಾ ಪುತ್ತೂರು, ಕು. ದೀಕ್ಷಿತಾ ಪುತ್ತೂರು, ಕು. ಸನ್ನಿಧಿಯವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಶ್ರೀ ಬಾಲಕೃಷ್ಣ ಮಂಜೇಶ್ವರ ನಿರ್ದೇಶನದ ರಾಮಾಯಣ ಕಥಾಧಾರಿತ ನಾಟ್ಯ ಬಾಲಿಕೆಯರು ಪ್ರಸ್ತುತ ಪಡಿಸಿದರು. ಶ್ರೀ ಶಿವರಾಮ ಕಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಹಾರಕರೆ ನಾರಾಯಣ ಭಟ್ ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ಕೊಟ್ಟರು.

~

Facebook Comments