ಪೆರಾಜೆ-ಮಾಣಿ ಮಠಃ 4.9.2013, ಬುಧವಾರ

ಇಂದು ಡಾ. ರಾಮಚಂದ್ರ ಭಟ್ ಮುದ್ರಜೆ ಕುಟುಂಬದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಮುದ್ರಜೆ ಕುಟುಂಬದವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಧನ್ವಂತರಿ ಪೂಜೆ, ಗಣಪತಿ ಹವನ, ಸರ್ವರೋಗಹರ ಶಾಂತಿ, ರಾಮಾಯಣ ಪಾರಾಯಣ, ಕನ್ಯಾಸಂಸ್ಕಾರ ಹವನಗಳು, ರಾತ್ರಿಗೆ ಶನಿಪೂಜೆ ನಡೆಯಿತು.

ಪಾದಪೂಜೆಃಶ್ರೀ ಸದಾಶಿವ ಭಟ್ ಕಾಂತಿಲ, ಶ್ರೀ ಅರವಿಂದ ವಳಕಟ್ಟೆ,  ಶ್ರೀ ಬಳಕ್ಕ ಪದ್ಮನಾಭ ಭಟ್

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ರಾಮನಿಗೆ ಹನುಮನಿಗೆ ಪುಷ್ಪನಮನ ಸಲ್ಲಿಸಿ ಇಂದಿನ ರಾಮಕಥೆಯನ್ನು ಶ್ರೀಗುರುಗಳು ಆರಂಭಿಸಿದರು. ಸಿಂಹಿಕೆಯನ್ನು ಕೊಂದು ಮುಂದರಿದ ಹನುಮ, ಹಾರುತ್ತ ಹಾರುತ್ತ ದ್ವೀಪವಾದ ಲಂಕೆಗೆ ಬಂದು ತಲುಪಿದ. ಲಂಕೆಗೆ ಮುಟ್ಟಿದ ಹನುಮ ಗೊತ್ತಾಗಿಯೂ ಗೊತ್ತಾಗದ ಒಂದು ರೂಪದಲ್ಲಿ ಲಂಕೆಯಲ್ಲಿ ಸಂಚರಿಸಲು ಆಲೋಚಿಸುತ್ತಾನೆ. ಅಣುರೂಪದಲ್ಲಿ ರಾತ್ರಿ ಪ್ರವೇಶಿಸುತ್ತಾನೆ. ಮಡಿಕೆಯಲ್ಲಿ ಸಾಗರ ತುಂಬಿದಂತೆ ಪುಟ್ಟ ರೂಪದಲ್ಲಿ ಸೀತಾನ್ವೇಷಣೆಗೆ ತೊಡಗುತ್ತಾನೆ. ಚಂದ್ರ ಬೆಳಕು ಚೆಲ್ಲಿದ ಜಾಗದಲ್ಲಿ ಹೊರಟ ಹನುಮನನ್ನು ಲಂಕೆ ನೋಡಿದಳು. ಘೋರರೂಪದಲ್ಲಿ ದೊಡ್ಡ ದೊಡ್ಡ ಹೆಜ್ಜೆಗಳನ್ನಿಟ್ಟು ಧಾವಿಸಿ ಹನುಮನೆಡೆಗೆ ಬಂದು ಹನುಮನ ದಾರಿ ತಡೆದಳು. ಬೊಬ್ಬಿರಿದು ಹನುಮನಿಗೆ ಒಂದೇಟು ಹೊಡೆದಳು. ಸಿಂಹಘರ್ಜನೆ ಮಾಡಿದ ಹನುಮ ವಜ್ರಮುಷ್ಠಿ ಹಿಡಿದವನೂ ಕೂಡಾ ಬಲಗೈಯ್ಯನ್ನಿಳಿಸಿ, ಎಡಗೈಯನ್ನು  ಮುಷ್ಠಿ ಮಾಡಿ ವೇಗ ಕಡಿಮೆಯಾಗಿಸಿ ಗುದ್ದಿದ. ಬಿದ್ದ ಲಂಕೆ ಕ್ಷಮೆ ಬೇಡಿದಳು. ಬ್ರಹ್ಮ ಕೊಟ್ಟ ವರ ನೆನಪಿಸಿದ ಲಂಕೆ, ಒಂದು ದಿನ ಒಬ್ಬ ವಾನರ ನಿನ್ನನ್ನು ಸೋಲಿಸಿದಾಗ ಆ ಸಮಯದಲ್ಲಿ ರಾವಣ ಸಂಹಾರದ ಸಮಯ ಬರುವುದು. ರಾಮದೂತನನ್ನು ಕಂಡ ತನ್ನ ಕಣ್ಣುಗಳು ಧನ್ಯವಾದವು. ಲಂಕೆಯೊಳಗೆ ಪ್ರವೇಶಿಸಿ ಬೇಕಾದ ಹಾಗೆ ವಿಹರಿಸು ಎಂದು ಲಂಕಾಲಕ್ಷ್ಮೀ ಹನುಮನನ್ನು ಲಂಕೆಗೆ ಆಹ್ವಾನಿಸಿದ ಕಥೆಯನ್ನು ಹೇಳಿದರು. ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಹನುಮಂತನ ಪಾತ್ರದೊಂದಿಗೆ ಪ್ರವಚನದ ಕಥಾನಕವನ್ನು ಕಲಾವಿದರು ಪ್ರಸ್ತುತ ಪಡಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಮುಕ್ತಾಯವಾಯಿತು. ಇಂದಿನ ದಿನದ ಪ್ರಾಯೋಜಕರು ಹವ್ಯಕ ವಲಯ ವಿಟ್ಲ ಇದರ ಪರವಾಗಿ ಶ್ರೀ ಸತೀಶ್ ಪಂಜಿಗದ್ದೆ, ಕುಂಬ್ಳೆ ಸೀಮೆಯ ಪರವಾಗಿ ಶ್ರೀ ಸುರೇಶ್ ಏನಂಕೂಡ್ಲು. ಸಹಪ್ರಾಯೋಜಕರಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್, ಶ್ರೀ ರಾಮ ಭಟ್ಟ ನರನ್ಸ್ ಮಂಗಳೂರು,  ಶ್ರೀ ವಸಂತಚಂದ್ರ ಬಿ ಮಂಗಳೂರು ಮಧ್ಯ, ಉರುವಾಲು ವಲಯದ ವತಿಯಿಂದ ಶ್ರೀರಾಮಾಯಣ ಗ್ರಂಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

~

Facebook Comments