ಪೆರಾಜೆ-ಮಠಃ9.9.2013, ಸೋಮವಾರ

ಇಂದು ಚೌತಿಯ ಮಂಗಲದಿನ. ಶ್ರೀಮಠದಲ್ಲಿ ವಿಘ್ನನಿವಾರಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜಿಸುವುದು ಸಂಪ್ರದಾಯ. ಈ ಬಾರಿಯೂ ಶ್ರೀಪಾದ ಹೆಗಡೆಯವರಿಂದ ರಚಿಸಿದ ಸುಂದರ ಗಜಾನನನ ಮೂರ್ತಿಯನ್ನು ಇಂದು ಬೆಳಗಿನ ಸುಮುಹೂರ್ತದಲ್ಲಿ ಪ್ರತಿಷ್ಠಾಪಿಸಿ, ಶ್ರೀಗುರುಗಳು ಪೂಜೆಗಳನ್ನು ನೆರವೇರಿಸಿದರು. ಶ್ರೀಮಠದ ಪಟ್ಟದ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಮತಿ ಸೀತಾ ಕೋಟೆ, ಶ್ರೀ ಆರ್ ಎಸ್ ಅಗರ್ವಾಲ್, ಶ್ರೀಮತಿ ಉಷಾ ಅಗರ್ವಾಲ್ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

48 ಕಾಯಿ ಗಣಪತಿ ಹವನ, ಏಕಾಕ್ಷರ ಗಣಪತಿ ಹವನ, ಪಂಚಗವ್ಯ ಹವನ, ರಾಮತಾರಕ ಹವನ, ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ಸಾಯಂಕಾಲ ಸತ್ಯವಿನಾಯಕ ವ್ರತಗಳು ನಡೆದವು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಪ್ರತಿಷ್ಠಿತ ಗಣೇಶನಿಗೆ ಪೂಜೆ ನೆರವೇರಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

 

Facebook Comments