ವಿಷಮುಕ್ತತರಕಾರೀ  ಮತ್ತು   ಆರೋಗ್ಯಜೀವನ ಶಿಬಿರ -ಎಣ್ಮಕಜೆ ವಲಯ

ನಲ್ಕ : 13. 01 .2015.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಎಣ್ಮಕಜೆ ವಲಯದ ಮಾತೃವಿಭಾಗದ ನೇತೃತ್ವದಲ್ಲಿ ನಲ್ಕ ವಾಗ್ದೆವೀ ಭಜನಾಮಂದಿರದಲ್ಲಿ “ವಿಷಮುಕ್ತತರಕಾರೀ ಮತ್ತು  ಆರೋಗ್ಯಜೀವನ” ಎಂಬ ವಿಷಯದಲ್ಲಿ ಶಿಬಿರ ಜರಗಿತು. ಮಹಾಮಂಡಲದ ದಿಗ್ಧರ್ಶಕ ಮಂಡಳಿಯ ಶ್ರೀ ಬಿ.ಜಿ.ರಾಮ ಭಟ್  ಅವರು ಚಕೋತಾ ಹಣ್ಣುಗಳನ್ನು ಮರದಿಂದ ಕೊಯ್ಯುವುದುರ ಮೂಲಕ ಉದ್ಘಾಟನೆ ಮಾಡಿದರು. ಶ್ರೀಮತಿ ಉಮಾ. ಯಸ್.  ಮಿತ್ರ ಅಧ್ಯಕ್ಷಸ್ಥಾನ ವಹಿಸಿದರು. ಕೃಷಿತಜ್ಞರಾದ ವೆಂಕಟಕೃಷ್ಣ ಶರ್ಮ ಮುಳಿಯ, ಶಿವಪ್ರಸಾದ ವರ್ಮುಡಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಾವಯವ ವಿಧಾನದಲ್ಲಿ ಯಶಸ್ವಿಯಾಗಿ ತರಕಾರೀ ಕೃಷಿ ಮಾಡುವ ಕುರಿತು ತರಗತಿಯನ್ನು ನಡೆಸಿದರು.

ವಲಯ ಪ್ರಸಾರ ಪ್ರತಿನಿಧಿ ಶಂಕರಪ್ರಸಾದ್ ಕುಂಚಿನಡ್ಕ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಶ್ರೀಮತಿ ಅಂಬಿಕಾ ಕಾನ ಸ್ವಾಗತಿಸಿ  ವಸಂತಿ ಅಬ್ಬಿಕಟ್ಟೆ ಧನ್ಯವಾದಗಳನ್ನಿತ್ತರು. ಶ್ರೀಮತಿ ಅನುಪಮಾ ಕೂಟೇಲು ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಡಲ ಪ್ರಸಾರ ಪ್ರತಿನಿಧಿ ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದರು. ಶಿಬಿರದಲ್ಲಿ ಸಾವಯವ ತರಕಾರೀ ಗಿಡಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಗಮನಾರ್ಹವಾಗಿತ್ತು.

ವರದಿ: ಶ್ರೀ ಗೋವಿಂದ ಬಳ್ಳಮೂಲೆ,
ಪ್ರಸಾರ ಪ್ರಧಾನರು,
ಮುಳ್ಳೇರಿಯಾ ಮಂಡಲ

"ವಿಷಮುಕ್ತತರಕಾರೀ ಮತ್ತು  ಆರೋಗ್ಯಜೀವನ"

“ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ”

 

Facebook Comments