ಗೋಚಾತುರ್ಮಾಸ್ಯ
ಪುರಪ್ರವೇಶ:
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ 23ನೆಯ ಚಾತುರ್ಮಾಸ್ಯವು ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆ (19.07.2016–16.09.2016) ಯವರೆಗೆ “ಗೋಚಾತುರ್ಮಾಸ್ಯ” ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಸಂಪನ್ನವಾಗಲಿದ್ದು, ತನ್ನಿಮಿತ್ತವಾಗಿ ಇಂದು ಸಂಜೆ ಪೂಜ್ಯ ಶ್ರೀಗಳವರ ಪುರಪ್ರವೇಶ ಮೆರವಣಿಗೆ ನಡೆಯಿತು.
ಗಿರಿನಗರದ ಮಹಾಗಣಪತಿದೇವಾಲಯದಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯಗಳೋಂದಿಗೆ ಮೆರವಣಿಗೆಯಲ್ಲಿ ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠಕ್ಕೆ ಕರೆತರಲಾಯಿತು. ಗೋಚಾತುರ್ಮಾಸ್ಯ ಸಮೀತಿಯವತಿಯಿಂದ ಶ್ರೀಗಳಿಗೆ ಸ್ವಾಗತಕೋರಿ, ಫಲಸಮರ್ಪಣೆ ಮಾಡಲಾಯಿತು. ಶ್ರೀಮಠವನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿದ್ದು, ನಾಡಿನ ವಿವಿಧಭಾಗಗಳ ಶಿಷ್ಯಭಕ್ತರು ಗೋಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಆಗಮಿಸುತ್ತಲಿದ್ದು, ಕಾರ್ಯಕ್ರಮದ ತಯಾರಿ ಬರದಿಂದ ಸಾಗುತ್ತಿದೆ.
ಚಾತುರ್ಮಾಸ್ಯವ್ರತ ಸಂಕಲ್ಪ:
ನಾಳೆ(19.07.2016) ಬೆಳಗ್ಗೆ 8.00ಗಂಟೆಗೆ ಶ್ರೀಕರಾರ್ಚಿತದೇವತಾಪೂಜೆ, ವ್ಯಾಸಪೂಜೆಗಳನ್ನು ನೆಡೆಸುವುದರಮೂಲಕ ಪೂಜ್ಯ ಶ್ರೀಗಳವರು ಚಾತುರ್ಮಾಸ್ಯವ್ರತದ ಶುಭಸಂಕಲ್ಪವನ್ನು ಕೈಗೊಳ್ಳಲಿದ್ದಾರೆ. ಆನಂತರದಲ್ಲಿ ಶ್ರೀಗಳಿಗೆ ಫಲಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ನಡೆಯಲಿರುವ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಲಿರುವ ಶ್ರೀಶ್ರ್ರೀಗಳವರು ಚಾತುರ್ಮಾಸ್ಯಸಂದೇಶವನ್ನು ನೀಡಲಿದ್ದು, ವ್ಯಾಸಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ.
ಗೋಚಾತುರ್ಮಾಸ್ಯದಲ್ಲಿ 60ದಿನವೂ ದಿನಕ್ಕೋಂದು ಗೋವಿನ ಕುರಿತಾದ ಪುಸ್ತಕವನ್ನು ಶ್ರೀಭಾರತೀಪ್ರಕಾಶನವು ಹೊರತರಲಿದ್ದು, ನಾಳೆ ಕೂರ್ಗಿ ಶಂಕರನಾರಾಯಣ ಉಪಾಧ್ಯಯರು ರಚಿಸಿರುವ ‘ವ್ಯೋಮಗೀತೆ’ ಎಂಬ ಹೋತ್ತಿಗೆ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆ ಪೂಜ್ಯ ಶ್ರೀಗಳಿಂದ ಲೋಕಾರ್ಪಿತವಾಗಲಿದೆ.
July 19, 2016 at 1:04 PM
Hare Raama
Gauam Madhye Vasamyahum