ಹರೇ ರಾಮ ಗುರುಬಂಧುಗಳೇ…
ಶ್ರೀ ಗುರುಗಳು ಲೋಕ ಕಲ್ಯಾಣಕ್ಕಾಗಿ ಹನುಮಾನ್ ಚಾಲೀಸ್ ಪಠಣವನ್ನು ಆದೇಶಿಸಿದ್ದಾರೆ. ಹಾಗೆಯೇ ಹತ್ತು ಲಕ್ಷ ಪಠಣವಾಗಬೇಕು ಎಂಬ ಪ್ರಾಥಮಿಕ ಗುರಿಯನ್ನು ಅನುಗ್ರಹಿಸಿದ್ದಾರೆ.
ತಾವೆಲ್ಲ ಸದ್ಭಾವನೆಯಿಂದ ಹನುಮಾನ್ ಚಾಲೀಸ್ ಪಠಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈಗಾಗಲೇ ತಮ್ಮಲ್ಲಿ ಹಲವರು ಪಠಣದ ಲೆಕ್ಕವನ್ನು ನೀಡುತ್ತಾ ಬಂದಿದ್ದೀರಿ. ಆದರೆ ಇನ್ನೂ ಹೆಚ್ಚಿನ ಸ್ಪಂದನೆಯ ಅಗತ್ಯ ಇದೆ. ನಿಮ್ಮ ಪರಿಚಯದವರಿಗೂ ಗುರುಗಳ ಆದೇಶವನ್ನು ತಲುಪಿಸಿ , ಆದಷ್ಟು ಬೇಗ ನಾವು ಗುರಿಯನ್ನು ತಲುಪೋಣ..

ಈ ಕೆಳಗಿನ ಲಿಂಕ್ ಮೂಲಕ ಸಪ್ಟೆಂಬರ್ ತಿಂಗಳ ಹನುಮಾನ್ ಚಾಲೀಸ್ ಪಠಣದ ಲೆಕ್ಕವನ್ನು ಕೊಡಬೇಕಾಗಿ ಕೋರಿಕೆ. (ಇದಕ್ಕೂ ಹಿಂದಿನ ತಿಂಗಳುಗಳ ಲೆಕ್ಕವನ್ನು ಕೊಡದಿದ್ದಲ್ಲಿ, ಪ್ರತ್ಯೇಕವಾಗಿ ಕೊಡಬೇಕಾಗಿ ವಿನಂತಿ)

Hanuman Chaleesa Count

ಎಂದಿನಂತೆ ತಮ್ಮೆಲ್ಲರ ಸಹಕಾರ ನೀರಿಕ್ಷೆಯಲ್ಲಿ…

Facebook Comments