ಭಟ್ಕಳ ತಾಲ್ಲೂಕು ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ ಆಗಮೊಕ್ತ ರೀತಿಯಿಂದ ನಡೆಯಿತು. ಶ್ರೀ ರಾಮಚಂದ್ರಾ ಪುರ ಮಠದ ಶ್ರ್ರಿ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಅಮೃತಹಸ್ತ ದಿಂದ ನೆರವೇರಿತು. ಪರಿವಾರ ದೇವತೆಗಳಾದ ಗಣಪತಿ, ವೀರಭದ್ರ ಮತ್ತು ಕ್ಷೇತ್ರ ಪಾಲ ದೇವರುಗಳ ಪ್ರತಿಷ್ಠೆಯೂ ನಡೆಯಿತು. ನಂತರ ಧಾರ್ಮಿಕ ಸಭೆ ನಡೆದು ಸೇರಿದ್ದ  ಸಮಸ್ತರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ. ಸಿ ಎಂ ಉದಾಸಿ. ಕೆ ಎಸ್ ಡಿ ಎಲ್ ಅಧ್ಯಕ್ಷ ಶಿವಾನಂದ ನಾಯಕ್ ಉಪಸ್ಥಿತರಿದ್ದರು. ರಾತ್ರಿ ಉಸ್ತಾದ್ ಫ್ಹಯಾಸ್ ಖಾನ್ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು.

Facebook Comments