ಗೋಕರ್ಣ.೦೧. ಕೇರಳದ ಕಣ್ಣೂರಿನ ಶ್ರೀ ಧರ್ಮಶಾಸ್ತ ದೇವಾಲಯದಲ್ಲಿ ಅಕ್ಟೋಬರ ೩೧ರಿಂದ ನವೆಂಬರ ೧೧ ರವರೆಗೆ ಲೋಕಕಲ್ಯಾಣಕ್ಕಾಗಿಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಅಂಗವಾಗಿ ಆಯೋಜಿತವಾಗಿರುವ “ರುದ್ರಯಾನ ರಥಯಾತ್ರೆ”ಯು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹ-ಆಶೀರ್ವಾದಗಳೊಂದಿಗೆ ಇಂದು ಗೋಕರ್ಣದ ಶ್ರೀಮಹಾಬಲೇಶ್ವರ ದೇವರ ಸನ್ನಿಧಿಯಿಂದ ತನ್ನ ಯಾತ್ರೆಯನ್ನು ಪ್ರಾರಂಭಿಸಿತು.

ಉಪಾಧಿವಂತಪುರೋಹಿತರಾದ ವೇ. ವಿಸ್ವನಾಥ ಭಟ್ಟ ಬಾಳೆಹಿತ್ಲು ಇವರು ಶ್ರೀ ಮಹಾಬಲೇಶ್ವರ ಹಾಗೂ ಸಾಲಂಕೃತ ರಥದ ಪೂಜೆಯನ್ನು ನೆರವೇರಿಸಿದರು.ಶ್ರೀದೇವಾಲಯದ ಆಡಳಿತ ಕಾರ್ಯದರ್ಶಿ ಶ್ರೀ ಜಿ.ಕೆ.ಹೆಗಡೆ ಹಾಗೂ ಅತಿರುದ್ರ ಯಾಗಸಮಿತಿಯ ಅಧ್ಯಕ್ಷ ಶ್ರೀಪಂಜಿಕಲ್ಲು ನಾರಾಯಣ ಭಟ್ ಹಾಗೂ ಇನ್ನಿತರ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Facebook Comments